logo
ಕನ್ನಡ ಸುದ್ದಿ  /  ಮನರಂಜನೆ  /  Anoop Revanna Kabzaa: 'ಕಬ್ಜ' ಚಿತ್ರದಲ್ಲಿ ಉಪ್ಪಿಗೆ ಬಲಗೈ ಬಂಟನಾದ ಅನೂಪ್​ ರೇವಣ್ಣ; 'ಲಕ್ಷ್ಮಣ' ಬಳಿಕ ಮತ್ತೆ ಆರ್‌. ಚಂದ್ರು ಜತೆ ಕೆಲಸ

Anoop Revanna Kabzaa: 'ಕಬ್ಜ' ಚಿತ್ರದಲ್ಲಿ ಉಪ್ಪಿಗೆ ಬಲಗೈ ಬಂಟನಾದ ಅನೂಪ್​ ರೇವಣ್ಣ; 'ಲಕ್ಷ್ಮಣ' ಬಳಿಕ ಮತ್ತೆ ಆರ್‌. ಚಂದ್ರು ಜತೆ ಕೆಲಸ

HT Kannada Desk HT Kannada

Mar 15, 2023 07:13 AM IST

'ಕಬ್ಜ' ಚಿತ್ರದಲ್ಲಿಉಪ್ಪಿಗೆ ಬಲಗೈ ಬಂಟನಾದ ಅನೂಪ್​ ರೇವಣ್ಣ; 'ಲಕ್ಷ್ಮಣ' ಬಳಿಕ ಮತ್ತೆ ಆರ್‌. ಚಂದ್ರು ಜತೆ ಕೆಲಸ

    • 'ಕಬ್ಜ' ಚಿತ್ರದಲ್ಲಿ ಅನೂಪ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಉಪೇಂದ್ರ ಅವರ ಸ್ನೇಹಿತನ ಪಾತ್ರದಲ್ಲಿ ಅನೂಪ್​ ನಟಿಸಿದ್ದು, ಇಡೀ ಚಿತ್ರದಲ್ಲಿ ಅವರ ಪಾತ್ರ ಸಾಗುತ್ತದಂತೆ.
'ಕಬ್ಜ' ಚಿತ್ರದಲ್ಲಿಉಪ್ಪಿಗೆ ಬಲಗೈ ಬಂಟನಾದ ಅನೂಪ್​ ರೇವಣ್ಣ; 'ಲಕ್ಷ್ಮಣ' ಬಳಿಕ ಮತ್ತೆ ಆರ್‌. ಚಂದ್ರು ಜತೆ ಕೆಲಸ
'ಕಬ್ಜ' ಚಿತ್ರದಲ್ಲಿಉಪ್ಪಿಗೆ ಬಲಗೈ ಬಂಟನಾದ ಅನೂಪ್​ ರೇವಣ್ಣ; 'ಲಕ್ಷ್ಮಣ' ಬಳಿಕ ಮತ್ತೆ ಆರ್‌. ಚಂದ್ರು ಜತೆ ಕೆಲಸ

Anoop Revanna Kabzaa: ಈ ಹಿಂದೆ 'ಲಕ್ಷ್ಮಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಜಿ ಸಚಿವ ಎಚ್​.ಎಂ. ರೇವಣ್ಣ ಅವರ ಮಗ ಅನೂಪ್​, ಆ ನಂತರ 2017ರಲ್ಲಿ ಬಿಡುಗಡೆಯಾದ 'ಪಂಟ' ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದರು. ಈಗ ಸುಮಾರು ಏಳು ವರ್ಷಗಳ ಗ್ಯಾಪ್​ನ ಬಳಿಕ ಪುನಃ ಆರ್​. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಮೂಲಕ ಅನೂಪ್​ ರೀಎಂಟ್ರಿ ಕೊಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗೌತಮ್‌ಗೆ ಜೀವನ್‌ ಕಥೆ ಗೊತ್ತಿತ್ತಂತೆ, ಮಲ್ಲಿ ವಿಷಯದಲ್ಲಿ ಒಳ್ಳೆಯವನಾದ ಜೈದೇವ್‌, ಸ್ಟಾರ್ಟಪ್‌ ಆರಂಭಿಸ್ತಾನಂತೆ ಪಾರ್ಥ, ಅಮೃತಧಾರೆ ಕಥೆ

ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ

ಹೀರಾಮಂಡಿ ವೆಬ್‌ಸರಣಿಯಲ್ಲಿ ಸಲಿಂಗರತಿ ದೃಶ್ಯ; ಡೈಮಂಡ್‌ ಬಜಾರ್‌ನ ಆಕೆಗೆ ಪುರುಷರೆಂದರೆ ಆಗೋದೇ ಇಲ್ಲ ಅಂದ್ರು ಸೋನಾಕ್ಷಿ ಸಿನ್ಹಾ

ಜಾರಾಂದಾಯ, ಪರಿವಾರ ದೈವಗಳ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಭಾಗಿ; ಕಿಚ್ಚ ಸುದೀಪ್‌ ಜತೆ ಕೆಜಿಎಫ್‌ ನಟಿಯ ಮುಂದಿನ ಸಿನಿಮಾ

'ಕಬ್ಜ' ಚಿತ್ರದಲ್ಲಿ ಅನೂಪ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಉಪೇಂದ್ರ ಅವರ ಸ್ನೇಹಿತನ ಪಾತ್ರದಲ್ಲಿ ಅನೂಪ್​ ನಟಿಸಿದ್ದು, ಇಡೀ ಚಿತ್ರದಲ್ಲಿ ಅವರ ಪಾತ್ರ ಸಾಗುತ್ತದಂತೆ.

ಪಾತ್ರದ ಬಗ್ಗೆ ಅನೂಪ್‌ ಹೇಳಿದ್ದಿಷ್ಟು..

'ಕಬ್ಜ' ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಚಿತ್ರದಲ್ಲಿ ನಟಿಸಿದ ಅನುಭವ ಕುರಿತು ಮಾತನಾಡುವ ಅನೂಪ್, 'ಉಪ್ಪಿ ಸಾರ್​ ಬಲಗೈಬಂಟನಾಗಿ ನಟಿಸಿದ್ದೇನೆ. ಅವರ ಜತೆಗೆ ನಾನು ಸಹ ಭೂಗತಲೋಕದಲ್ಲಿ ಬೆಳೆಯುತ್ತೇನೆ. ಉಪೇಂದ್ರ ನಿರ್ದೇಶಕರಾಗಿ, ನಟರಾಗಿ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು. ಅವರ ಜೊತೆಗೆ ನಾಲ್ಕು ವರ್ಷ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರಿಂದ ತುಂಬಾ ಕಲಿತಿದ್ದೇನೆ. ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದೇನೆ. ನಾಲ್ಕು ವರ್ಷ ಹೋಗಿದ್ದೇ ಗೊತ್ತಾಗಲಿಲ್ಲ. ಏಕೆಂದರೆ, ಚಿತ್ರದ ಕೆಲಸ ಅಷ್ಟಿತ್ತು. ಬರೀ ನಟನಾಗಿಯಷ್ಟೇ ಅಲ್ಲ, ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಚಿತ್ರದಿಂದ ತುಂಬಾ ಕಲಿತಿದ್ದೇನೆ. ಇಡೀ ತಂಡ ಬಹಳ ಕಷ್ಟಪಟ್ಟು ಕೆಲಸ ಮಾಡಿದೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಎಲ್ಲರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇದೆ' ಎನ್ನುತ್ತಾರೆ.

ಹೈಡ್‌ ಅಂಡ್ ಸೀಕ್‌ನಲ್ಲಿ‌ ಕಿಡ್ನಾಪರ್

'ಕಬ್ಜ' ಅಲ್ಲದೆ, 'ಹೈಡ್​ ಅಂಡ್​ ಸೀಕ್​' ಎಂಬ ಇನ್ನೊಂದು ಚಿತ್ರದಲ್ಲೂ ಅನೂಪ್​ ನಟಿಸಿದ್ದು, ಅದು ಸಹ ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆಯಂತೆ. ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರವಾಗಿದ್ದು, ನೆಗೆಟಿವ್​ ಶೇಡ್​ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. 'ಒಬ್ಬ ನಟನಾಗಿ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಿರಬೇಕು, ಪ್ರಯೋಗಗಳನ್ನು ಮಾಡುತ್ತಿರಬೇಕು ಎಂದು ನಂಬಿದವನು ನಾನು. ಅದಕ್ಕೆ ಸರಿಯಾಗಿ 'ಹೈಡ್​ ಅಂಡ್​ ಸೀಕ್​' ಚಿತ್ರದಲ್ಲೊಂದು ವಿಭಿನ್ನ ಪಾತ್ರ ಸಿಕ್ಕಿದೆ. ಇದರಲ್ಲಿ ಕಿಡ್ನಾಪರ್​ ಆಗಿ ಕಾಣಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಬೇರೆಬೇರೆ ತರಹದ ಪ್ರಯೋಗಗಳನ್ನು ಮಾಡುವ ಆಸೆ ಇದೆ' ಎನ್ನುತ್ತಾರೆ.

ಚುನಾವಣೆ ಪ್ರಚಾರದಲ್ಲಿ ಬಿಜಿ

ಈ ಎರಡು ಚಿತ್ರಗಳಲ್ಲದೆ ಒಂದಿಷ್ಟು ಕಥೆಗಳನ್ನು ಕೇಳಿದ್ದಾರಂತೆ ಅನೂಪ್​. ಆದರೆ, ತಂದೆ ಎಚ್​.ಎಂ. ರೇವಣ್ಣ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಮತ್ತು ಅವರ ಪರ ಪ್ರಚಾರ ಮಾಡಬೇಕಿರುವುದರಿಂದ, ಈ ಎರಡೂ ಚಿತ್ರಗಳ ಬಿಡುಗಡೆಯ ನಂತರ ಒಂದು ಸಣ್ಣ ಗ್ಯಾಪ್​ ಪಡೆಯಲಿದ್ದಾರಂತೆ. ಆಮೇಲೆ ಪುನಃ ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಇನ್ನಷ್ಟು ಸಕ್ರಿಯವಾಗುವುದಾಗಿ ಹೇಳುತ್ತಾರೆ.

ಸಿನಿಮಾ ಸಂಬಂಧಿ ಈ ಸುದ್ದಿಯನ್ನೂ ಓದಿ

Dasara trailer:ʼದಸರಾʼ ಟ್ರೇಲರ್‌ನಲ್ಲಿದೆ ನಾನಿಯ ಮಾಸ್‌ ಲುಕ್‌; ಮುಖ್ಯಪಾತ್ರದಲ್ಲಿದ್ದಾರೆ ʼದಿಯಾʼ ಖ್ಯಾತಿಯ ದೀಕ್ಷಿತ್‌ ಶೆಟ್ಟಿ

ನ್ಯಾಚುರಲ್‌ ಸ್ಟಾರ್‌ ನಾನಿ ಅಭಿನಯದ ಬಹುನಿರೀಕ್ಷಿತ ʼದಸರಾʼ ಚಿತ್ರದ ಟ್ರೇಲರ್‌ ಇಂದು (ಮಾರ್ಚ್‌ 14) ಬಿಡುಗಡೆಯಾಗಿದೆ. ಟ್ರೇಲರ್‌ ನೋಡಿದರೆ ಇದೊಂದು ಪಕ್ಕಾ ಮಾಸ್‌ ಸಿನಿಮಾ ಎನ್ನಿಸುವುದರಲ್ಲಿ ಅನುಮಾನವಿಲ್ಲ. ಕಲ್ಲಿದ್ದಲ್ಲಿನ ರಾಶಿಯಿಂದ ತುಂಬಿರುವ ವೀರ್ಲಪಲ್ಲಿ ಎಂಬ ಸಣ್ಣ ಹಳ್ಳಿಯ ಯುವಕರ ರಕ್ತ-ಸಿಕ್ತ ದಂಗೆಯ ಕತೆಯ ಇದಾಗಿರಬಹುದು ಎಂಬ ಹಿಂಟ್‌ ಟ್ರೇಲರ್‌ನಲ್ಲಿ ನೀಡಲಾಗಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು