logo
ಕನ್ನಡ ಸುದ್ದಿ  /  ಮನರಂಜನೆ  /  Chiyaan Vikram In Kgf: ತಮಿಳಿನಲ್ಲಿ 'ಕೆಜಿಎಫ್‌' ಚಿತ್ರ ಮಾಡ್ತಿದ್ದಾರಂತೆ ವಿಕ್ರಮ್‌...ಆದ್ರೆ ಇದು ರೀಮೇಕ್‌ ಅಲ್ವಂತೆ...ಮತ್ತೇನು?

Chiyaan Vikram in KGF: ತಮಿಳಿನಲ್ಲಿ 'ಕೆಜಿಎಫ್‌' ಚಿತ್ರ ಮಾಡ್ತಿದ್ದಾರಂತೆ ವಿಕ್ರಮ್‌...ಆದ್ರೆ ಇದು ರೀಮೇಕ್‌ ಅಲ್ವಂತೆ...ಮತ್ತೇನು?

HT Kannada Desk HT Kannada

Sep 01, 2022 02:31 PM IST

ಕೆಜಿಎಫ್‌ ಸಿನಿಮಾ ಮಾಡ್ತಾರಂತೆ ತಮಿಳು ನಟ ವಿಕ್ರಮ್

    • ಸಿನಿಮಾ ಹೆಸರು 'ಕೆಜಿಎಫ್‌' ಆದ್ರೂ ಕಥೆಯನ್ನು ಬಹಳ ವಿಭಿನ್ನವಾಗಿ ಹೇಳಲು ಹೊರಟಿದ್ದಾರಂತೆ. ಅಷ್ಟೇ ಅಲ್ಲ ಆ ಸಿನಿಮಾಗೆ ಆಸ್ಕರ್‌ ಅವಾರ್ಡ್‌ ಗ್ಯಾರಂಟಿ ಅಂತೆ. ಆದ್ರಿಂದಲೇ ನಾನೂ ಆ ಸಿನಿಮಾಗೆ ತಯಾರಾಗಲು ಹೀಗೆ ಗಡ್ಡ ಬಿಟ್ಟಿದ್ದೇನೆ ಎಂದು ವಿಕ್ರಮ್‌ ಹೇಳಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ.
ಕೆಜಿಎಫ್‌ ಸಿನಿಮಾ ಮಾಡ್ತಾರಂತೆ ತಮಿಳು ನಟ ವಿಕ್ರಮ್
ಕೆಜಿಎಫ್‌ ಸಿನಿಮಾ ಮಾಡ್ತಾರಂತೆ ತಮಿಳು ನಟ ವಿಕ್ರಮ್

ಕೆಜಿಎಫ್‌, ಹೆಸರು ಕೇಳಿದೊಡನೆ ಸಿನಿಪ್ರಿಯರಿಗೆ ಮೈ ರೋಮಾಂಚನವಾಗುತ್ತದೆ. ಈ ಸಿನಿಮಾ ಬರೆದ ದಾಖಲೆಗಳು ಒಂದಲ್ಲಾ ಎರಡಲ್ಲ. ಒಂದಲ್ಲಾ ಒಂದು ದಿನ ನಮ್ಮ ಕನ್ನಡ ಸಿನಿಮಾವನ್ನು ಇಡೀ ದೇಶವೇ ಹೊಗಳುವಂತೆ ಮಾಡುತ್ತೇನೆ ಎಂದು ಯಶ್‌ ಬಹಳ ಹಿಂದೆ ಹೇಳಿದ್ದ ಮಾತು ಈಗ ನಿಜವಾಗಿದೆ.

ಟ್ರೆಂಡಿಂಗ್​ ಸುದ್ದಿ

‘ಗೀತಾಳ ಗಂಡನಾಗಿ ಕೇಳ್ತಿದ್ದೇನೆ, ಇಷ್ಟು ದಿನ ನೀವೇನು ಕಿಸಿದಿದ್ದೀರಿ ಹೇಳಿ?’ ಕುಮಾರ ಬಂಗಾರಪ್ಪಗೆ ಮಾತಲ್ಲೆ ಟಾಂಗ್‌ ಕೊಟ್ಟ ಶಿವರಾಜ್‌ಕುಮಾರ್

Brundavana Serial: ಗೆದ್ದು ಬಿಟ್ಟೆ ಎಂದು ಬೀಗುತ್ತಿರುವ ಭಾರ್ಗವಿ, ಸತ್ಯ ಹೇಳಿ ಆಕಾಶ್‌ ಬಾಳನ್ನು ಸರಿ ಮಾಡಲು ಹೊರಟಿದ್ದಾನೆ ಸುನಾಮಿ

Bhagyalakshmi Serial: ತಾಂಡವ್‌ ಪರ ನಿಂತ ಸುನಂದಾ, ಸೊಸೆ ಭಾಗ್ಯಾಗಾಗಿ ಕೆಲಸಕ್ಕೆ ಸೇರಲು ನಿರ್ಧರಿಸಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

‘ನಿರ್ಮಾಪಕರಿಗೆ ನನ್ನ ಎದೆ ಸೀಳು ಕಾಣಬೇಕಿತ್ತು, ಸ್ಲಿಮ್‌ ಇದ್ದ ನನಗೆ ದಪ್ಪ ಮಾಡಲು ಸಿಕ್ಕಿದ್ದನ್ನೆಲ್ಲ ತಿನಿಸುತ್ತಿದ್ರು !’ ಸೋನಾಲಿ ಬೇಂದ್ರೆ

'ಕೆಜಿಎಫ್‌ ' ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಬಗ್ಗೆ ಭಾರತೀಯ ಚಿತ್ರರಂಗವೇ ಮಾತನಾಡುವಂತಾಯ್ತು. ಯಶ್‌ಗೆ ನ್ಯಾಷನಲ್‌ ಸ್ಟಾರ್‌ ಪಟ್ಟ ತಂದುಕೊಟ್ಟಿತು. ನಿರ್ದೇಶಕ ಪ್ರಶಾಂತ್‌ ನೀಲ್, ನಿರ್ಮಾಪಕ ವಿಜಯ್‌ ಕಿರಗಂದೂರು ಕೂಡಾ ಪರಭಾಷೆ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್‌, ಕೆಜಿಎಫ್‌ 2 ನಂತರ ಚಾಪ್ಟರ್‌ 3 ಕೂಡಾ ಬರಬಹುದು ಎಂದು ಸಿನಿಮಾಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದರ ನಡುವೆಯೇ ತಮಿಳಿನ ಖ್ಯಾತ ನಟ ಚಿಯಾನ್‌ ವಿಕ್ರಮ್‌ ಹಾಗೂ ನಿರ್ದೇಶಕ ಪಾ. ರಂಜಿತ್‌ ಕೆಜಿಎಫ್‌ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ಕೇಳಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

'ಕೆಜಿಎಫ್‌' ಪ್ಯಾನ್‌ ಇಂಡಿಯಾ ಸಿನಿಮಾ, ತಮಿಳಿನಲ್ಲಿ ಕೂಡಾ ಈ ಸಿನಿಮಾ ತೆರೆ ಕಂಡಿದೆ. ಅಂತದ್ದರಲ್ಲಿ ಮತ್ತೆ ಇದು ತಮಿಳಿಗೆ ರಿಮೇಕ್‌ ಆಗ್ತಿದ್ಯಾ ಎಂದು ನೀವು ಪ್ರಶ್ನಿಸಿದರೆ, ಆ ಊಹೆ ಕೂಡಾ ತಪ್ಪು. ಇದು ಕನ್ನಡದ ಕೆಜಿಎಫ್‌ ಅಲ್ಲವಂತೆ. ಸಿನಿಮಾ ಹೆಸರು 'ಕೆಜಿಎಫ್‌' ಆದ್ರೂ ಕಥೆಯನ್ನು ಬಹಳ ವಿಭಿನ್ನವಾಗಿ ಹೇಳಲು ಹೊರಟಿದ್ದಾರಂತೆ. ಅಷ್ಟೇ ಅಲ್ಲ ಆ ಸಿನಿಮಾಗೆ ಆಸ್ಕರ್‌ ಅವಾರ್ಡ್‌ ಗ್ಯಾರಂಟಿ ಅಂತೆ. ಆದ್ರಿಂದಲೇ ನಾನೂ ಆ ಸಿನಿಮಾಗೆ ತಯಾರಾಗಲು ಹೀಗೆ ಗಡ್ಡ ಬಿಟ್ಟಿದ್ದೇನೆ ಎಂದು ವಿಕ್ರಮ್‌ ಹೇಳಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ.

ಈ ವಿಚಾರ ಕೇಳಿ ನೆಟಿಜನ್ಸ್‌ ನಾನಾ ರೀತಿ ಕಮೆಂಟ್‌ ಮಾಡುತ್ತಿದ್ದಾರೆ. ಕೆಲವರು 'ಕೆಜಿಎಫ್‌' ಚಿತ್ರವನ್ನು ಯಾರೂ ಬೀಟ್‌ ಮಾಡಲು ಸಾಧ್ಯವಿಲ್ಲ ಎಂದರೆ ಇನ್ನೂ ಕೆಲವರು ಜೋಕ್‌ ಚೆನ್ನಾಗಿದೆ ಎನ್ನುತ್ತಿದ್ದಾರೆ. ಕಾದು ನೋಡೋಣ ಎಂದೂ ಕೂಡಾ ಹಲವರು ಕಮೆಂಟ್‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಟಾಪಿಕ್‌ ಆಗಿರುವುದಂತೂ ನಿಜ.

ಇತ್ತೀಚೆಗೆ ತೆರೆ ಕಂಡಿದ್ದ ಕೋಬ್ರಾ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಚಿಯಾನ್‌ ವಿಕ್ರಮ್‌ ಸುಮಾರು 3 ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಂಡ 'ಕೋಬ್ರಾ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಸಿನಿಮಾ ನೋಡಿದ ಪ್ರೇಕ್ಷಕರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಸಿನಿಮಾದ ಕಥೆ, ಹಾಡುಗಳು, ವಿಕ್ರಮ್‌ ಆಕ್ಟಿಂಗ್‌ ಬಹಳ ಚೆನ್ನಾಗಿದೆ ಎಂದರೆ ಕೆಲವರು ಚಿತ್ರದಲ್ಲಿ ಶ್ರೀನಿಧಿ ಹಾಗೂ ವಿಕ್ರಮ್‌ ಲವ್‌ ಸೀನ್‌ಗಳು ಬೋರ್‌ ಎನಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ವಿಕ್ರಮ್‌ಗಾಗಿ ಈ ಸಿನಿಮಾ ನೋಡಿದೆವು. ಅವರ ನಟನೆ ಬಿಟ್ಟು ಬೇರೇನೂ ಚೆನ್ನಾಗಿಲ್ಲ. 'ಕೆಜಿಎಫ್‌' ಖ್ಯಾತಿಯ ಶ್ರೀನಿಧಿ ಶೆಟ್ಟಿಗೆ ಚಿತ್ರದಲ್ಲಿ ಏನೂ ಕೆಲಸ ಇಲ್ಲ ಎಂದರೆ, ಸಿನಿಮಾ ಖಂಡಿತ್‌ ಹಿಟ್‌ ಆಗುತ್ತದೆ. ಒಂದೊಂದು ಸೀನ್‌ ಕೂಡಾ ಬಹ್ ಅದ್ಭುತವಾಗಿದೆ ಎಂದು ಕೆಲವರು ಕಮೆಂಟ್‌ ಮಾಡುತ್ತಿದ್ದಾರೆ. ಕೆಲವರು ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ನೋಡಿ ಖುಷಿ ಪಟ್ಟಿದ್ದಾರೆ. ಒಟ್ಟಿನಲ್ಲಿ ಚಿತ್ರಕ್ಕೆ ಪಾಸಿಟಿವ್‌ಗಿಂತ ನೆಗೆಟಿವ್‌ ಕಮೆಂಟ್‌ಗಳೇ ಹೆಚ್ಚು ಕೇಳಿಬಂದಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು