logo
ಕನ್ನಡ ಸುದ್ದಿ  /  ಮನರಂಜನೆ  /  Leelavathi: ‘ನನ್ನ ವಿಚಾರ ಕೆದಕಿ ನೋವುಂಟು ಮಾಡಿದವ್ರು ನರಕಕ್ಕೆ ಬೀಳ್ತಾರೆ’; ಮಗ ವಿನೋದ್‌ ಗೌಪ್ಯ ಮದುವೆ ಬಗ್ಗೆಯೂ ಲೀಲಾವತಿ ಪ್ರತಿಕ್ರಿಯೆ

Leelavathi: ‘ನನ್ನ ವಿಚಾರ ಕೆದಕಿ ನೋವುಂಟು ಮಾಡಿದವ್ರು ನರಕಕ್ಕೆ ಬೀಳ್ತಾರೆ’; ಮಗ ವಿನೋದ್‌ ಗೌಪ್ಯ ಮದುವೆ ಬಗ್ಗೆಯೂ ಲೀಲಾವತಿ ಪ್ರತಿಕ್ರಿಯೆ

Apr 13, 2023 07:05 AM IST

google News

‘ನನ್ನ ವಿಚಾರ ಕೆದಕಿ ನೋವುಂಟು ಮಾಡುವವರು ನರಕಕ್ಕೆ ಬೀಳ್ತಾರೆ’; ಮಗ ವಿನೋದ್‌ ಮದುವೆ ಬಗ್ಗೆಯೂ ನಟಿ ಲೀಲಾವತಿ ಪ್ರತಿಕ್ರಿಯೆ

    • ಹಿರಿಯ ನಟಿ ಲೀಲಾವತಿ ಇದೀಗ ಮಗನ ಮದುವೆ ಏಕೆ ಗೌಪ್ಯವಾಗಿಡಬೇಕಾಯ್ತು ಎಂಬುದನ್ನು ಹೇಳಿಕೊಂಡಿದ್ದಾರೆ. 
‘ನನ್ನ ವಿಚಾರ ಕೆದಕಿ ನೋವುಂಟು ಮಾಡುವವರು ನರಕಕ್ಕೆ ಬೀಳ್ತಾರೆ’; ಮಗ ವಿನೋದ್‌ ಮದುವೆ ಬಗ್ಗೆಯೂ ನಟಿ ಲೀಲಾವತಿ ಪ್ರತಿಕ್ರಿಯೆ
‘ನನ್ನ ವಿಚಾರ ಕೆದಕಿ ನೋವುಂಟು ಮಾಡುವವರು ನರಕಕ್ಕೆ ಬೀಳ್ತಾರೆ’; ಮಗ ವಿನೋದ್‌ ಮದುವೆ ಬಗ್ಗೆಯೂ ನಟಿ ಲೀಲಾವತಿ ಪ್ರತಿಕ್ರಿಯೆ

Veteran Actress Leelavathi: ಕಳೆದ ಕೆಲ ದಿನಗಳಿಂದ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಅವರ ಹೇಳಿಕೆ. ವಿನೋದ್ ರಾಜ್‌ಗೆ ಮದುವೆಯಾಗಿದೆ. ಸೊಸೆಯೂ ಇದ್ದಾಳೆ, ಎದೆ ಎತ್ತರಕ್ಕೆ ಬೆಳೆದ ಮಗನೂ ಇದ್ದಾನೆ ಎಂದಿದ್ದರು. ಇದಕ್ಕೆ ಪೂರಕ ಎನಿಸುವ ಹಲವು ಸಾಕ್ಷಿಗಳನ್ನೂ ಬಹಿರಂಗಪಡಿಸಿದ್ದರು. ವಿವರವಾದ ಪೋಸ್ಟ್‌ವೊಂದನ್ನೂ ಶೇರ್‌ ಮಾಡಿದ್ದರು. ಇದೀಗ ಇದೆಲ್ಲ ಸುದ್ದಿಗಳಿಗೆ ಹಿರಿಯ ನಟಿ ಲೀಲಾವತಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಮಗನ ಮದುವೆ ಬಗ್ಗೆ ಲೀಲಾವತಿ ಹೇಳುವುದೇನು?

ಸಿನಿವುಡ್‌ ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿರುವ ಲೀಲಾವತಿ ಆಡಿದ ಮಾತುಗಳು ಇಲ್ಲಿವೆ. "ಎಂಥೆಂಥವರ ಮದುವೆ ಆ ಹಾಲ್‌ನಲ್ಲಿ ಆಯಿತು, ಪ್ಯಾಲೇಸ್‌ನಲ್ಲೆಲ್ಲ ಮಾಡ್ತಾರೆ. ನನಗೆ ಆ ಚೈತನ್ಯ ಇಲ್ಲ. ಹಾಗಾಗಿ ರಹಸ್ಯವಾಗಿ ಇಡುವುದೇ ಒಳಿತು ಎನಿಸಿತು. ಅವನೇನು ಹೆಣ್ಣು ಹುಡುಗಿಯಲ್ಲ, 9 ತಿಂಗಳು ಕದ್ದು ಬಸುರಿಯಾಗಿ ಅವನ ಮದುವೆ ಮಾಡಿಲ್ಲ. ಪವಿತ್ರವಾಗಿದ್ದಾನೆ. ಒಳ್ಳೆಯ ಮಗನಾಗಿದ್ದಾನೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದ್ದೇನೆ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತನ್ನು ಕೇಳುವ ಬದಲೂ, ಪರಿಶುದ್ಧವಾದ ಜಾಗದಲ್ಲಿ ಮದುವೆ ಮಾಡಿಸಿದ್ದೇನೆ. ಕೇವಲ ಏಳೇ ಜನ ಕನ್ನಡಿಗರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಯಾಕೆ ನಿಮಗೆ ಇಷ್ಟೇ ಜನ ಸಿಕ್ಕರೆ? ಎಂಬ ಮಾತು ಕೇಳಿ ಬಂದರೂ, ನಾನು ಮಾತನಾಡಿರಲಿಲ್ಲ"

ನೋವುಂಟು ಮಾಡಿದವ್ರು ನರಕಕ್ಕೆ ಬೀಳ್ತಾರೆ!

"ಮಾತನಾಡಿದರೆ ಹೋಯಿತು, ಮುತ್ತು ಒಡೆದರೆ ಹೋಯ್ತು. ಆ ವಿಚಾರದಲ್ಲಿ ನನಗೆ ತುಂಬ ಭಯ. ಸೊಸೆ ಮೊಮ್ಮಕ್ಕಳು ಚಿನ್ನದ ಹಾಗಿದ್ದಾರೆ. ನಮ್ಮ ಅಂತರಂಗ ಸುದ್ದಿಯನ್ನೆಲ್ಲ ಯಾಕೆ ಕೇಳ್ತಿದ್ದಾರೆ. ಆದರೆ, ಯಾರು ಏನೇ ಹೇಳಿದರೂ ನನ್ನ ಆತ್ಮಸಾಕ್ಷಿಗೆ ನಾನು ಸರಿಯಾಗಿಯೇ ಇದ್ದೇನೆ. ಕಡು ಬಡವಳು ನಾನು. ಜಮೀನು ತೆಗೆದುಕೊಂಡಿದ್ದು, 30 ಸಾವಿರಕ್ಕೆ.. ಸೊಸೆಗೆ ಒಳ್ಳೆಯ ಬಂಗಲೆ ಇದೆ. ನನಗೆ ನೋವುಂಟು ಮಾಡುವವರು ನರಕದಲ್ಲಿ ಬೀಳ್ತಾರೆ. ಎಲ್ಲವನ್ನೂ ಹೇಳುವುದಕ್ಕೆ ಆಗಲ್ಲ. ಸಂಕೋಚ ನನಗೂ ಆಗುತ್ತದೆ. 600 ಸಿನಿಮಾಗಳಲ್ಲಿ ನಟಿಸಿದ್ದರೂ ಸಂಕೋಚ ಇದೆ"

ಇರೋ ಒಬ್ಬ ಮಗನ ಮದುವೆ ವಿಜ್ರಂಭಣೆಯಿಂದ ಮಾಡೋಕೆ ಆಗಲಿಲ್ವೇ ಎಂದು ಅನಿಸಿದೆ. ಪರಮಾತ್ಮನ್ನ ಕೇಳೋದೆ ಆಯ್ತು. ಯಾವ ತಾಯಿಯೂ ತನ್ನ ಮಕ್ಕಳ ಭವಿಷ್ಯ ಚೆನ್ನಾಗಿ ಆಗದಿರಲಿ ಎಂದು ಬಯಸುವುದಿಲ್ಲ. ಚೆನ್ನಾಗಿ ಆಗಲಿ ಎಂದೇ ಬಯಸ್ತಾಳೆ" ಎಂದಿದ್ದಾರೆ ಲೀಲಾವತಿ.

ವಿನೋದ್‌ ರಾಜ್‌ ಪ್ರತಿಕ್ರಿಯೆ..

"ಅಮ್ಮಾವ್ರ ಇಳಿವಯಸ್ಸಿನಲ್ಲಿದ್ದಾರೆ. ನೆಮ್ಮದಿಯಾಗಿದ್ದಾರೆ. ನೆಮ್ಮದಿಯಾಗಿ ಇರೋಕೆ ಬಿಡಿ. ಅವರು ಕರ್ನಾಟಕದ ಆಸ್ತಿ. ಎಷ್ಟೋ ಜನ ಆಸ್ತಿಗಳಾಗ್ತಾರೆ. ಎಲ್ಲ ಆಸ್ತಿಗಳು ಸೇರಿದರೆ ಇವರು ದೊಡ್ಡ ಆಸ್ತಿ ಆಗ್ತಾರೆ. ಒಬ್ಬೇ ಒಬ್ಬ ಕಲಾವಿದ ಏನೂ ಆಗೋಕೆ ಸಾಧ್ಯ ಇಲ್ಲ. ನಿರ್ಮಾಪಕರು, ನಿರ್ದೇಶಕರು, ಸಾಹಿತಿಗಳು ಅಭಿಮಾನಿಗಳು ಎಲ್ಲ ಸೇರಿದರೆ ನಾವು ನಾವಾಗ್ತೇವಿ. ಅದನ್ನ ಮೈಂಡ್‌ನಲ್ಲಿ ಇಟ್ಟುಕೊಂಡು ನಾವೇ ನಾವೇ ಅಂದುಕೊಂಡರೆ ಇದು ತಪ್ಪು. ಎಲ್ಲರೂ ಸೇರಬೇಕು. ಅದರಲ್ಲಿ ನನ್ನ ತಾಯಿಯೂ ಒಬ್ಬರು. ಆಸ್ತಿನಾ ಅಸ್ಥಿ ಮಾಡಲು ಹೋಗಬೇಡಿ ಅಷ್ಟೇ" ಎಂದಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಾಶ್‌ ಮೇಹು ಪೋಸ್ಟ್‌..

ಇದುವರೆಗಿನ ವಿವಾದಕ್ಕೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಕೆಲವರು ಒಪ್ಪುತ್ತಿರಲಿಲ್ಲ ಅಂತವರಿಗೆ ಇದು ಸತ್ಯ ಸಾಕ್ಷಿ!

ಮೊದಲನೆಯ ವಿಷಯ: ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು.ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ!!

ಎರಡನೆಯ ವಿಷಯ: ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚೆನ್ನೈನಲ್ಲಿದ್ದಾರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ!!!

ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಅವರು ಖಂಡಿತ "ಅವರು ಯಾರೋ ಅಭಿಮಾನಿಗಳು" ಅಂದು ಬಿಡುತ್ತಿದ್ದರು ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚೆನ್ನೈನಿಂದ ಈ Marks Card ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು ಆದ್ದರಿಂದ ಇಂದು ಇವನ್ನು ಬಹಿರಂಗ ಪಡಿಸಿದ್ದೇನೆ...

ವಿನೋದ್ ರಾಜ್ ಅವರ ಹೆಂಡತಿ ಅನು ಮನೆ ಕೆಲಸದ ಹುಡುಗಿಯಲ್ಲ ಆಕೆಯ ಅಣ್ಣ ತಮಿಳುನಾಡಿನಲ್ಲಿ ಒಬ್ಬ ಉನ್ನತ ಅಧಿಕಾರಿ! ಮತ್ತು ಇವರಿಬ್ಬರ ಮದುವೆ ನಡೆದದ್ದು ತಿರುಪತಿಯಲ್ಲಿ ವಿಶೇಷವೆಂದರೆ ಆ ಮದುವೆಲ್ಲಿ ಫೋಟೋಗಳನ್ನೆ ತೆಗೆಸಿಲ್ಲ ಅದರ ಉದ್ದೇಶ ಏನಿರಬಹುದು???

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ