logo
ಕನ್ನಡ ಸುದ್ದಿ  /  Entertainment  /  Actress, Minister Roja Fire On Nandamuri Balakrishan

Roja fire on Balakrishna: ವಿವಿ ಹೆಸರು ಬದಲಾವಣೆ ವಿವಾದ...ಬಾಲಕೃಷ್ಣ ವಿರುದ್ಧ ಗುಡುಗಿದ ರೋಜಾ

HT Kannada Desk HT Kannada

Sep 25, 2022 10:10 PM IST

ಬಾಲಕೃಷ್ಣ ವಿರುದ್ಧ ನಿಂತ ರೋಜಾ

    • ಬಾಲಕೃಷ್ಣ, ಬೇಕಿದ್ದರೆ ಚಂದ್ರಬಾಬು ನಾಯ್ಡು ವಿರುದ್ದ ಸೇಡು ತೀರಿಸಿಕೊಳ್ಳಲಿ, ಜಗನ್‌ ಮೋಹನ್‌ ರೆಡ್ಡಿ ವಿರುದ್ಧ ಅಲ್ಲ ಎಂದು ಅಬ್ಬರಿಸಿದ್ದಾರೆ. ರೋಜಾ ವರ್ತನೆ ಕಂಡು ಇದೀಗ ಬಾಲಯ್ಯ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳು ಆಕೆ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.
ಬಾಲಕೃಷ್ಣ ವಿರುದ್ಧ ನಿಂತ ರೋಜಾ
ಬಾಲಕೃಷ್ಣ ವಿರುದ್ಧ ನಿಂತ ರೋಜಾ

ಆಂಧ್ರಪ್ರದೇಶದ ಹೆಲ್ತ್‌ ಯೂನಿವರ್ಸಿಟಿಯೊಂದಕ್ಕೆ ಈ ಮೊದಲೇ ಇರುವ ಎನ್‌ಟಿಆರ್‌ ಹೆಸರನ್ನು ತೆಗೆದು ವೈಎಸ್‌ಆರ್‌ ಹೆಸರನ್ನು ಇಡಲು ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಮಾಡಿರುವ ನಿರ್ಧಾರಕ್ಕೆ ಪರ ವಿರೋಧ ಚರ್ಚೆ ಎದುರಾಗಿದೆ. ಇದೇ ವಿಚಾರಕ್ಕೆ ಕೆಲವೆಡೆ ಪ್ರತಿಭಟನೆ ಕೂಡಾ ನಡೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

ರಿಷಿಯ ‘ರುದ್ರ ಗರುಡ ಪುರಾಣ’ ಚಿತ್ರಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸಾಥ್‌; ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ ದೊಡ್ಮನೆ ಸೊಸೆ

ಮದುವೆಗೆ ಒಪ್ಪಿಗೆ ಸಿಕ್ಕರೂ, ರಾಮ್‌ ಜತೆ ಮಕ್ಕಳು ಮಾಡಿಕೊಳ್ಳಲ್ವಂತೆ ಸ್ವಾರ್ಥಿ ಸೀತಾ! ಸೀತಮ್ಮ ನಿಂದ್ಯಾಕೋ ಓವರ್‌ ಆಯ್ತಮ್ಮ ಎಂದ ವೀಕ್ಷಕ

‘ಆಕೆ ಹಸಿದಾಗ ಅವಳ ಬಾಯಿಗೆ ಅನ್ನ ಹಾಕಿ, ಅದನ್ನಲ್ಲ!’ ಪ್ರಜ್ವಲ್‌ ರೇವಣ್ಣ ಕೇಸ್‌ ಬೆನ್ನಲ್ಲೇ ನಟಿಯ ಶಾಕಿಂಗ್‌ ಪೋಸ್ಟ್‌

Kantara Chapter 1: ಕುಂದಾಪುರದಲ್ಲಿ ಕಾಂತಾರ ಸಡಗರ; 600 ಕಾರ್ಪೆಂಟರ್‌ಗಳಿಂದ 40 ಸಾವಿರ ಚದರಡಿಯ ಶೂಟಿಂಗ್‌ ಸೆಟ್‌ ನಿರ್ಮಾಣ

ಜಗನ್‌ ಮೋಹನ್‌ ರೆಡ್ಡಿ ಸರ್ಕಾರದ ಈ ನಿರ್ಧಾರದ ಬಗ್ಗೆ ಎನ್‌ಟಿಆರ್‌ ಕುಟುಂಬಸ್ಥರಾದ ಜ್ಯೂನಿಯರ್‌ ಎನ್‌ಟಿಆರ್‌, ಕಲ್ಯಾನ್‌ ರಾಮ್‌ ಹಾಗೂ ನಂದಮೂರಿ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಎನ್‌ಟಿಆರ್‌ ಹೆಸರನ್ನು ಬೇಕಾಗಾದ ಬದಲಿಸಲು ಅದು ಕೇವಲ ಹೆಸರಲ್ಲ, ಅದೊಂದು ತೆಲುಗು ರಾಷ್ಟ್ರದ ಬೆನ್ನುಲುಬು. ಆ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸುವಂತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ, ತಂದೆ ವಿಮಾನ ನಿಲ್ದಾಣದ ಹೆಸರನ್ನು ಬದಲಿಸಿದ್ದರು, ಮಗ ಈಗ ವಿವಿ ಹೆಸರು ಬದಲಿಸಲು ಹೊರಟಿದ್ದಾರೆ, ಇದು ಹೀಗೇ ಮುಂದುವರೆದರೆ ಜನರು ನಿಮ್ಮನ್ನು ಬದಲಿಸುವ ಕಾಲ ಬರುತ್ತದೆ ಎಂದಿದ್ದರು.

ಜಗನ್‌ ಮೋಹನ್‌ ರೆಡ್ಡಿಯನ್ನು ವಿರುದ್ಧ ಎಲ್ಲರೂ ಹೀಗೆ ಕಿಡಿ ಕಾರುವಾಗ, ಹಿರಿಯ ನಟಿ, ಸಚಿವೆ ರೋಜಾ ಮಾತ್ರ ಬಾಲಕೃಷ್ಣ ಹಾಗೂ ಜಗನ್‌ ಮೋಹನ್‌ ರೆಡ್ಡಿಯನ್ನು ವಿರೋಧಿಸುತ್ತಿರುವವರ ಬಗ್ಗೆ ಕಿಡಿ ಕಾರಿದ್ದಾರೆ. ಬಾಲಕೃಷ್ಣ, ಬೇಕಿದ್ದರೆ ಚಂದ್ರಬಾಬು ನಾಯ್ಡು ವಿರುದ್ದ ಸೇಡು ತೀರಿಸಿಕೊಳ್ಳಲಿ, ಜಗನ್‌ ಮೋಹನ್‌ ರೆಡ್ಡಿ ವಿರುದ್ಧ ಅಲ್ಲ ಎಂದು ಅಬ್ಬರಿಸಿದ್ದಾರೆ. ರೋಜಾ ವರ್ತನೆ ಕಂಡು ಇದೀಗ ಬಾಲಯ್ಯ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳು ಆಕೆ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.

ರೋಜಾಗೆ ಮಂತ್ರಿ ಸ್ಥಾನ ನೀಡಿದ್ದ ಜಗನ್‌

ಸಿನಿಮಾಳಿಂದ ದೂರ ಇದ್ದು ರಾಜಕೀಯದ ಜೊತೆಗೆ ಕಿರುತೆರೆಯಲ್ಲಿ ಕೂಡಾ ಬ್ಯುಸಿ ಇದ್ದ ರೋಜಾ, ಕೆಲವು ವರ್ಷಗಳಿಂದ ತೆಲುಗಿನ ಖ್ಯಾತ ಕಾರ್ಯಕ್ರಮ ಜಬರ್ದಸ್ತ್‌ನಲ್ಲಿ ಜಡ್ಜ್‌ ಆಗಿದ್ದರು. ಆದರೆ ದೀರ್ಘ ಕಾಲದ ಜಬರ್ದಸ್ತ್‌ ಪ್ರಯಾಣಕ್ಕೆ ಅವರು ಇತ್ತೀಚೆಗೆ ಗುಡ್‌ ಬೈ ಹೇಳಿದ್ದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​​​ಮೋಹನ್ ರೆಡ್ಡಿ ಸಚಿವ ಸಂಪುಟ ಪುನಾರಚನೆ ಮಾಡಿದ್ದು ರೋಜಾಗೆ ಪ್ರವಾಸೋದ್ಯಮ, ಸಂಸ್ಕೃತಿ ಹಾಗೂ ಯುವಜನ ಅಭಿವೃದ್ಧಿ ಸಚಿವೆ ಸ್ಥಾನ ನೀಡಿದ್ದರು. ಮಿನಿಸ್ಟರ್ ಪೋಸ್ಟ್ ಪಡೆಯುವುದು ರೋಜಾ ಬಹಳ ದಿನಗಳ ಕನಸಾಗಿತ್ತಂತೆ. ಸಚಿವೆಯಾಗಿ ದೊಡ್ಡ ಜವಾಬ್ದಾರಿ ಇರುವುದರಿಂದ ಇನ್ಮುಂದೆ ಸಂಪೂರ್ಣ ರಾಜಕೀಯದಲ್ಲಿ ಬ್ಯುಸಿಯಾಗುವುದಾಗಿ ರೋಜಾ ಹೇಳಿದ್ದರು.

ಮೊದಲಿನಿಂದಲೂ ರೋಜಾ ಕುಟುಂಬ ಹಾಗೂ ಜಗನ್​​​ಮೋಹನ್ ರೆಡ್ಡಿ ಕುಟುಂಬ ಆತ್ಮೀಯರು. ಆದ್ದರಿಂದ ಜಗನ್‌ ವಿರುದ್ಧ ಯಾರು ಮಾತನಾಡಿದರೂ ರೋಜಾ ಅವರ ಪರ ನಿಲ್ಲುತ್ತಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು