logo
ಕನ್ನಡ ಸುದ್ದಿ  /  ಮನರಂಜನೆ  /  Adipurush Teaser Controversy: ‘ರಾಮಾಯಣದ ಇಸ್ಲಾಮೀಕರಣ’; ‘ಆದಿಪುರುಷ್‌’ ವಿರುದ್ಧ ಬ್ರಾಹ್ಮಣ ಮಹಾಸಭಾ ಕೆಂಡ! ನಿರ್ದೇಶಕರಿಗೆ ಎಚ್ಚರಿಕೆ..

Adipurush Teaser Controversy: ‘ರಾಮಾಯಣದ ಇಸ್ಲಾಮೀಕರಣ’; ‘ಆದಿಪುರುಷ್‌’ ವಿರುದ್ಧ ಬ್ರಾಹ್ಮಣ ಮಹಾಸಭಾ ಕೆಂಡ! ನಿರ್ದೇಶಕರಿಗೆ ಎಚ್ಚರಿಕೆ..

HT Kannada Desk HT Kannada

Oct 06, 2022 07:45 PM IST

‘ರಾಮಾಯಣದ ಇಸ್ಲಾಮೀಕರಣ’; ‘ಆದಿಪುರುಷ್‌’ ವಿರುದ್ಧ ಬ್ರಾಹ್ಮಣ ಮಹಾಸಭಾ ಕೆಂಡ! ನಿರ್ದೇಶಕರಿಗೆ ಎಚ್ಚರಿಕೆ..

    • ಆದಿಪುರುಷ್‌ ಚಿತ್ರದ ನಿರ್ದೇಶಕರಿಗೆ ಸರ್ವ ಬ್ರಾಹ್ಮಣ ಮಹಾಸಭಾ ನೋಟಿಸ್‌ ನೀಡಿದ್ದು, ಏಳು ದಿನಗಳ ಒಳಗಾಗಿ ಚಿತ್ರದ ಎಲ್ಲ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದೆ.
‘ರಾಮಾಯಣದ ಇಸ್ಲಾಮೀಕರಣ’; ‘ಆದಿಪುರುಷ್‌’ ವಿರುದ್ಧ ಬ್ರಾಹ್ಮಣ ಮಹಾಸಭಾ ಕೆಂಡ! ನಿರ್ದೇಶಕರಿಗೆ ಎಚ್ಚರಿಕೆ..
‘ರಾಮಾಯಣದ ಇಸ್ಲಾಮೀಕರಣ’; ‘ಆದಿಪುರುಷ್‌’ ವಿರುದ್ಧ ಬ್ರಾಹ್ಮಣ ಮಹಾಸಭಾ ಕೆಂಡ! ನಿರ್ದೇಶಕರಿಗೆ ಎಚ್ಚರಿಕೆ..

ಓಂ ರಾವತ್ ನಿರ್ದೇಶನದ ‘ಆದಿಪುರುಷ್‌’ ಸಿನಿಮಾ ಸದ್ಯ ವಿವಾದಗಳ ಕೇಂದ್ರಬಿಂದುವಾಗಿದೆ. ಟೀಸರ್‌ನಲ್ಲಿನ ನ್ಯೂನತೆಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಸಿನಿಮಾದಲ್ಲಿ ರಾಮ, ರಾವಣ ಸೇರಿ ಬಹುತೇಕ ಎಲ್ಲ ಪಾತ್ರಧಾರಿಗಳನ್ನು ಕೆಟ್ಟ ರೀತಿಯಲ್ಲಿಯೇ ತೋರಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ದೂರುಗಳೂ ದಾಖಲಾಗುತ್ತಿವೆ. ಇದೀಗ ಸರ್ವ ಬ್ರಾಹ್ಮಣ ಮಹಾಸಭಾದಿಂದಲೂ ನಿರ್ದೇಶಕ ಓಂ ಅವರಿಗೆ ನೋಟಿಸ್ ಕಳುಹಿಸಿದೆ.

ಟ್ರೆಂಡಿಂಗ್​ ಸುದ್ದಿ

‘ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ’; ನಟ ನಿಖಿಲ್‌ ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌

Grey Games Trailer: ‘ಗ್ರೇ ಗೇಮ್ಸ್‌’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ವಿಜಯ್‌ ರಾಘವೇಂದ್ರ ಅಕ್ಕನ ಮಗ ಜೈ ಎಂಟ್ರಿ

ಜೂನಿಯರ್ ಎನ್‌ಟಿಆರ್‌ ಬರ್ತ್‌ಡೇಗೆ ಬಿಗ್‌ ಬ್ಯಾಂಗ್‌! ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಸಾಧ್ಯತೆ

‘ಗೀತಾಳ ಗಂಡನಾಗಿ ಕೇಳ್ತಿದ್ದೇನೆ, ಇಷ್ಟು ದಿನ ನೀವೇನು ಕಿಸಿದಿದ್ದೀರಿ ಹೇಳಿ?’ ಕುಮಾರ ಬಂಗಾರಪ್ಪಗೆ ಮಾತಲ್ಲೆ ಟಾಂಗ್‌ ಕೊಟ್ಟ ಶಿವರಾಜ್‌ಕುಮಾರ್

ಗುರುವಾರ ಸರ್ವ ಬ್ರಾಹ್ಮಣ ಮಹಾಸಭಾ ನೋಟಿಸ್‌ ನೀಡಿದ್ದು, ಏಳು ದಿನಗಳ ಒಳಗಾಗಿ ಚಿತ್ರದ ಎಲ್ಲ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದೆ. ಸರ್ವ ಬ್ರಾಹ್ಮಣ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸುರೇಶ್ ಮಿಶ್ರಾ ಅವರ ಪರವಾಗಿ ವಕೀಲ ಕಮಲೇಶ್ ಶರ್ಮಾ, ನಿರ್ದೇಶಕರಿಗೆ ನೋಟಿಸ್ ಕಳುಹಿಸಿದ್ದಾರೆ. ಚಿತ್ರದಲ್ಲಿ ನಿರ್ದೇಶಕರು ರಾಮಾಯಣವನ್ನು ಇಸ್ಲಾಮೀಕರಣಗೊಳಿಸಿದ್ದು, ಜನರ ಭಾವನೆಗಳಿಗೆ ಧಕ್ಕೆಯಾಗಿದೆ" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಚರ್ಮದ ಉಡುಗೆಯಲ್ಲಿ ಶ್ರೀರಾಮ

‘ಆದಿಪುರುಷ್‌’ ಚಿತ್ರದ ಟೀಸರ್‌ಗೆ ಮೆಚ್ಚುಗೆಗಿಂತ ಟೀಕೆಗಳೇ ಹೆಚ್ಚು ಸಂದಾಯವಾಗಿವೆ. ಚಿತ್ರದಲ್ಲಿ ಪ್ರಭಾಸ್, ರಾಮನಾಗಿ ಮತ್ತು ಸೈಫ್ ಅಲಿ ಖಾನ್, ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೂನ್ ಸೀತೆಯಾಗಿದ್ದಾರೆ. ಸಿನಿಮಾದಲ್ಲಿ ಪಾತ್ರಗಳ ಗೆಟಪ್‌ ಎಲ್ಲರ ಕಣ್ಣುಕೆಂಪಗಾಗುವಂತೆ ಮಾಡಿವೆ. ಅದರಲ್ಲೂ ರಾವಣನ ಲುಕ್‌ ಬಗ್ಗೆ ಟೀಕೆಗಳೇ ಹೆಚ್ಚಾಗಿವೆ. ಇದೆಲ್ಲವನ್ನು ಖಂಡಿಸಿರುವ ಸರ್ವ ಬ್ರಾಹ್ಮಣ ಮಹಾಸಭಾ, ಓಂ ರಾವತ್ ಅವರಿಗೆ ಲೀಗಲ್ ನೋಟಿಸ್ ನೀಡಿದೆ. 'ಹಿಂದೂ ದೇವತೆಗಳನ್ನು ಚಿತ್ರದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ. ರಾಮ ಚರ್ಮದ ಉಡುಗೆಯನ್ನು ಧರಿಸಿ ಕೆಟ್ಟದಾಗಿ ಮಾತನಾಡುತ್ತಾನೆ. ಚಿತ್ರದಲ್ಲಿ ಕೀಳುಮಟ್ಟದ ಭಾಷೆ ಬಳಸಲಾಗಿದೆ. ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗುತ್ತಿದೆ" ಎಂದು ನೋಟಿಸ್‌ನಲ್ಲಿ ನಮೂದಿಸಿದೆ.

ಹನುಮಂತ ಮೊಘಲನಾದ..

‘ಆದಿಪುರುಷ್‌’ ಚಿತ್ರದ ಟೀಸರ್‌ನಲ್ಲಿ ಹನುಮಂತನನ್ನು ಮೊಘಲನಂತೆ ತೋರಿಸಲಾಗಿದೆ. ಹನುಮಂತನಿಗೆ ಮೀಸೆಯಿಲ್ಲದೇ ಗಡ್ಡವನ್ನು ಅಂಟಿಸಿದ್ದಾರೆ. ಈ ಅವತಾರದಲ್ಲಿರುವ ಹಿಂದೂ ಯಾರು? ಒಟ್ಟಾರೆಯಾಗಿ ಈ ಚಿತ್ರದಲ್ಲಿ ರಾಮ, ಸೀತೆ, ಹನುಮಂತ ಸೇರಿ ಬಹುತೇಕ ಎಲ್ಲವೂ ಇಸ್ಲಾಮೀಕರಣವಾಗಿದೆ. ಚಿತ್ರದಲ್ಲಿ ರಾವಣನಾಗಿ ನಟಿಸಿರುವ ಸೈಫ್ ಅಲಿ ಖಾನ್ ಖಿಲ್ಜಿಯಂತೆ ಕಾಣುತ್ತಾರೆ. ಇದೆಲ್ಲದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ಹಾಗಾಗಿ ಏಳು ದಿನಗಳ ಒಳಗಾಗಿ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ಹೇಳಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು