logo
ಕನ್ನಡ ಸುದ್ದಿ  /  ಮನರಂಜನೆ  /  Alia Bhatt Photo Leak: ಖಾಸಗಿ ಫೋಟೋ ಲೀಕ್‌ ಆಗಿದ್ದಕ್ಕೆ ಆಲಿಯಾ ಭಟ್‌ ಕೆಂಡಾಮಂಡಲ; ಪೊಲೀಸ್‌ ಮೊರೆ ಹೋದ ನಟಿ..

Alia Bhatt Photo Leak: ಖಾಸಗಿ ಫೋಟೋ ಲೀಕ್‌ ಆಗಿದ್ದಕ್ಕೆ ಆಲಿಯಾ ಭಟ್‌ ಕೆಂಡಾಮಂಡಲ; ಪೊಲೀಸ್‌ ಮೊರೆ ಹೋದ ನಟಿ..

HT Kannada Desk HT Kannada

Feb 22, 2023 03:25 PM IST

ಖಾಸಗಿ ಫೋಟೋ ಲೀಕ್‌ ಆಗಿದ್ದಕ್ಕೆ ಆಲಿಯಾ ಭಟ್‌ ಕೆಂಡಾಮಂಡಲ; ಪೊಲೀಸ್‌ ಮೊರೆ ಹೋದ ನಟಿ..

    • ಆಲಿಯಾ ಮನೆಯೊಳಗಿನ ಕೆಲವು ಖಾಸಗಿ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದು, ಕಳವಳಕ್ಕೆ ಕಾರಣವಾಗಿವೆ.
ಖಾಸಗಿ ಫೋಟೋ ಲೀಕ್‌ ಆಗಿದ್ದಕ್ಕೆ ಆಲಿಯಾ ಭಟ್‌ ಕೆಂಡಾಮಂಡಲ; ಪೊಲೀಸ್‌ ಮೊರೆ ಹೋದ ನಟಿ..
ಖಾಸಗಿ ಫೋಟೋ ಲೀಕ್‌ ಆಗಿದ್ದಕ್ಕೆ ಆಲಿಯಾ ಭಟ್‌ ಕೆಂಡಾಮಂಡಲ; ಪೊಲೀಸ್‌ ಮೊರೆ ಹೋದ ನಟಿ..

Alia Bhatt Photo Leak: ಬಾಲಿವುಡ್‌ನ ಸ್ಟಾರ್‌ಗಳು ಮನೆಯಿಂದ ಹೊರಬರುತ್ತಿದ್ದಂತೆ ಅವರಿಗಾಗಿಯೇ ಮನೆಯ ಹೊರಗೆ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ ಪಾಪರಾಜಿಗಳು. ನಟ- ನಟಿಯರಿಂದ ಕಾಡಿ ಬೇಡಿ ಫೋಟೋ ಪಡೆಯುತ್ತಾರೆ. ಕೆಲವು ಸಲ ಇದು ವಿಕೋಪಕ್ಕೆ ಹೋದ ಉದಾಹರಣೆಗಳೂ ಸಾಕಷ್ಟಿವೆ. ಅದೇ ರೀತಿ ಇದೀಗ ಬಾಲಿವುಡ್‌ ನಟಿ ಆಲಿಯಾ ಭಟ್‌ ಒಂದು ಹೆಜ್ಜೆ ಮುಂದೆ ಹೋಗಿ ಪಾಪರಾಜಿಗಳ ವಿರುದ್ಧ ಪೊಲೀಸರ ಮೊರೆ ಹೋಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಮದುವೆ ಆಮಂತ್ರಣ ಬಂತು; ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ

Casting Couch: ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ; ಅಶ್ಲೀಲ ಸಂದೇಶ ಕಳುಹಿಸಿ ಅಡಿಷನ್‌ಗೆ ಆಹ್ವಾನ

ಮೊಟ್ಟೆ ಉಡುಗೆ ತೊಟ್ಟ ನಟಿ ಉರ್ಫಿ ಜಾವೇದ್‌; ಮೊಟ್ಟೆಗಳ ಮೇಲೆ ಕಣ್ಣು ನೆಟ್ಟ ನೆಟ್ಟಿಗರು ಹೇಳಿದ್ದೇ ಬೇರೆ

Manjummel Boys: ಮಂಜುಮ್ಮೆಲ್ ಬಾಯ್ಸ್‌ನ ಈ 2 ಸೀನ್‌ಗಳ ಕುರಿತು ನಡೆಯುತ್ತಿದೆ ಬಿಸಿಬಿಸಿ ಚರ್ಚೆ, ಅದ್ಭುತ ಅಂದ್ರು ಒಟಿಟಿ ಪ್ರೇಕ್ಷಕರು

ಆಲಿಯಾ ಭಟ್ ತಾಯಿಯಾದ ಬಳಿಕ ತಮ್ಮ ಬಹುಪಾಲು ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಮಗಳೊಂದಿಗೆ ಲಾಲನೆ ಪಾಲನೆಯಲ್ಲಿಯೇ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಮನೆಯೊಳಗಿನ ಕೆಲವು ಖಾಸಗಿ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದು, ಕಳವಳಕ್ಕೆ ಕಾರಣವಾಗಿವೆ. ಅವರ ಅನುಮತಿ ಪಡೆಯದೆ, ಕೆಲವು ಛಾಯಾಗ್ರಾಹಕರು ದೂರದಿಂದಲೇ ಆಲಿಯಾ ಅವರ ಫೋಟೋ ಕ್ಲಿಕ್‌ ಮಾಡಿದ್ದಾರೆ. ಇದು ಆಲಿಯಾ ಅವರ ಕೋಪ ನೆತ್ತಿಗೇರಲು ಕಾರಣವಾಗಿದೆ.

ಆಲಿಯಾ ಗರಂ..ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌..

ಮನೆಯ ಬಾಲ್ಕನಿಯಲ್ಲಿನ ಫೋಟೋಗಳು ವೈರಲ್‌ ಆಗುತ್ತಿದ್ದಂತೆ, ಕೆಂಡಾಮಂಡಲರಾದ ಆಲಿಯಾ, ಅದೇ ಕೋಪದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಮುಂಬೈ ಪೊಲೀಸರೂ ಇದನ್ನು ಗಮನಿಸಿ ಎಂದು ಟ್ಯಾಗ್‌ ಮಾಡಿದ್ದಾರೆ.

"ನೀವು ನನ್ನನ್ನು ತಮಾಷೆ ಮಾಡುತ್ತಿದ್ದೀರಾ ... ಎಂದಿನಂತೆ ನಾನು ನನ್ನ ಮನೆಯ ಲಿವಿಂಗ್ ಏರಿಯಾದಲ್ಲಿದ್ದಾಗ ಯಾರೋ ನನ್ನ ಗಮನಿಸುತ್ತಿದ್ದಾರೆ ಎಂದು ಅನಿಸಿತು. ನಾನು ತಲೆಯೆತ್ತಿ ನೋಡಿದೆ. ನನ್ನ ಮನೆಯ ಪಕ್ಕದ ಕಟ್ಟಡದ ಮೇಲೆ ಇಬ್ಬರು ಕ್ಯಾಮರಾಗಳನ್ನು ಹಿಡಿದಿದ್ದರು. ಹೀಗೆ ಮಾಡುವುದು ಸರಿಯೇ, ಇದನ್ನು ಮಾಡಲು ಯಾರಾದರೂ ಅನುಮತಿ ಪಡೆಯಬಹುದೇ? ಇದು ಖಾಸಗಿತನದ ಉಲ್ಲಂಘನೆಯಲ್ಲವೇ? ನಿಮ್ಮ ಮತ್ತು ನಮ್ಮ ನಡುವೆ ಒಂದು ಗೆರೆ ಇತ್ತು. ಇದೀಗ ನೀವು ಆ ಲೈನ್‌ ದಾಟಿದ್ದೀರಿ" ಎಂದು ಪೋಸ್ಟ್‌ನಲ್ಲಿ ಮುಂಬೈ ಪೊಲೀಸರನ್ನೂ ಟ್ಯಾಗ್ ಮಾಡಿದ್ದಾರೆ.

ಬಾಲ್ಕನಿ ಮೇಲಿನ ಫೋಟೋಗಳು ಲೀಕ್

ಪೊಲೀಸರನ್ನು ಸಂಪರ್ಕಿಸಿದ ಆಲಿಯಾ ಟೀಮ್

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಮುಂಬೈ ಪೊಲೀಸರನ್ನು ಟ್ಯಾಗ್‌ ಮಾಡಿದ್ದ ಆಲಿಯಾಗೆ, ದೂರು ನೀಡುವಂತೆ ಮನವಿ ಬಂದಿತ್ತು. ಮುಂಬೈನ ಖಾರ್ ಪೊಲೀಸರು ಆಲಿಯಾ ಅವರನ್ನು ಸಂಪರ್ಕಿಸಿ ಲಿಖಿತ ದೂರು ನೀಡಿದರೆ, ತನಿಖೆ ಮುಂದುವರಿಸಲಾಗುವುದು ಎಂದಿದ್ದರು. ಅದರಂತೆ ಆಲಿಯಾ ಅವರಿಗೆ ಸಂಬಂಧಿಸಿದವರು ಲಿಖಿತ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ನಟಿಯ ಈ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗೆ ಬಾಲಿವುಡ್‌ನ ಅನುಷ್ಕಾ ಶರ್ಮಾ, ಕರಣ್‌ ಜೋಹರ್‌, ಅರ್ಜುನ್‌ ಕಪೂರ್ ಸೇರಿ ಹಲವು ನಟಿಯರು ಆಲಿಯಾ ಬೆನ್ನಿಗೆ ನಿಂತು ಬೆಂಬಲ ನೀಡಿದ್ದಾರೆ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಬಿಜಿ..

ಇತ್ತೀಚೆಗೆ ಮುಂಬೈನಲ್ಲಿ ನಡೆದ ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಆಲಿಯಾ ಕಾಣಿಸಿಕೊಂಡಿದ್ದರು. ಸೀರೆ ಧರಿಸಿ ಎಲ್ಲರನ್ನು ಸೆಳೆದಿದ್ದರು ಈ ಚೆಲುವೆ. ರಣಬೀರ್‌ ಕಪೂರ್‌ ಜತೆಗೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸಿದ್ದ ಆಲಿಯಾ, ಸದ್ಯ ಕರಣ್ ಜೋಹರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾಗೆ ರಣವೀರ್‌ ಸಿಂಗ್‌ ಜೋಡಿಯಾಗಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು