logo
ಕನ್ನಡ ಸುದ್ದಿ  /  ಮನರಂಜನೆ  /  Bhairathi Ranagal: ಶಿವಣ್ಣ ಸಿನಿಮಾ ಮಾಡಲು ವಿಪರೀತ ಸಮಯ ತೆಗೆದುಕೊಳ್ಳುವ ನಟರಲ್ಲ; ಕಾರಣ ಹೇಳಿದ ಭೈರತಿ ರಣಗಲ್

Bhairathi Ranagal: ಶಿವಣ್ಣ ಸಿನಿಮಾ ಮಾಡಲು ವಿಪರೀತ ಸಮಯ ತೆಗೆದುಕೊಳ್ಳುವ ನಟರಲ್ಲ; ಕಾರಣ ಹೇಳಿದ ಭೈರತಿ ರಣಗಲ್

Raghavendra M Y HT Kannada

Nov 15, 2024 03:52 PM IST

google News

ಸ್ಯಾಂಡಲ್ ವುಡ್ ನ ಹಿರಿಯ ನಟ ಡಾ ಶಿವರಾಜ್ ಕುಮಾರ್ ಅವರು ಸಿನಿಮಾ ನಿರ್ಮಾಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಕಾರಣವನ್ನು ತಿಳಿಸಿದ್ದಾರೆ.

    • ಚಂದನವನದ ಹಿರಿಯ ನಟ ಶಿವರಾಜ್ ಕುಮಾರ್ ಸಿನಿಮಾ ಮಾಡಲು ವಿಪರೀತ ಸಮಯವನ್ನು ತೆಗೆದುಕೊಳ್ಳುವ ನಟರಲ್ಲ. ಹಾಗಿದ್ದರೆ ಶಿವಣ್ಣ ಅವರ ಶೂಟಿಂಗ್ ಸಮಯದ ಪಟ್ಟಿ ಹೇಗಿರುತ್ತೆ? ಕಲಾವಿದರ ಬಗ್ಗೆ ಅವರಿಗೆ ಇರುವ ಕಾಳಜಿ ಎಂತಹದು ಎಂಬುದನ್ನು ಅವರೇ ವಿವರಿಸಿದ್ದಾರೆ.
ಸ್ಯಾಂಡಲ್ ವುಡ್ ನ ಹಿರಿಯ ನಟ ಡಾ ಶಿವರಾಜ್ ಕುಮಾರ್ ಅವರು ಸಿನಿಮಾ ನಿರ್ಮಾಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಕಾರಣವನ್ನು ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ನ ಹಿರಿಯ ನಟ ಡಾ ಶಿವರಾಜ್ ಕುಮಾರ್ ಅವರು ಸಿನಿಮಾ ನಿರ್ಮಾಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಕಾರಣವನ್ನು ತಿಳಿಸಿದ್ದಾರೆ.

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಡಾ ಶಿವಕುಮಾರ್ ಕುಮಾರ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಭೈರತಿ ರಣಗಲ್ ಇವತ್ತು (ನವೆಂಬರ್ 15, ಶುಕ್ರವಾರ) ಬಿಡುಗಡೆಯಾಗಿದ್ದು, ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಫ್ಯಾನ್ಸ್ ಶಿವಣ್ಣ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಶಿವಣ್ಣ ಸಿನಿಮಾವೊಂದನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಯಾಕೆ ಅನ್ನೋದನ್ನು ಅವರೇ ಬಹಿರಂಗ ಪಡಿಸಿದ್ದಾರೆ. ಇದು ಚಂದನವನದ ಹಿರಿಯ ನಟನಿಗೆ ಕಲಾವಿದರ ಬಗ್ಗೆ ಕಾಳಜಿಯನ್ನು ತೋರಿಸುತ್ತದೆ.

ಕನ್ನಡ ಚಿತ್ರರಂಗದಲ್ಲಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡುವ ಮತ್ತು ತಮ್ಮ ಪ್ರಾಜೆಕ್ಟ್ ಗಳನ್ನು ತ್ವರಿತವಾಗಿ ಮುಗಿಸಿ ಮುಂದಿನ ಚಿತ್ರಕ್ಕೆ ತೆರಳುವ ಏಕೈಕ ನಟರೆಂದರೆ ಅದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ವಿಶೇಷವಾಗಿ ಸಿನಿ ಕ್ಷೇತ್ರದಲ್ಲಿ ಎ ಲಿಸ್ಟ್ ನಟರು ಮತ್ತು ನಿರ್ದೇಶಕರು ಪ್ರವೃತ್ತಿ ಇತ್ತೀಚೆಗೆ ಪ್ರತಿ ಎರಡ್ಮೂರು ವರ್ಷಕ್ಕೊಮೆ ಒಂದು ಸಿನಿಮಾ ಮಾಡುತ್ತಾರೆ. ಆದರೆ ಈ ರೀತಿಯ ಟ್ರೆಂಡಿಂಗ್ ನಟರ ಪಟ್ಟಿಯಲ್ಲಿ ಶಿವಣ್ಣ ಇಲ್ಲ ಅನ್ನೋದು ವಿಶೇಷ.

ಭೈರತಿ ರಣಗಲ್ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಆರ್ ಜೆ ನೇತ್ರ ಅವರೊಂದಿಗೆ ಮಾತನಾಡಿದ್ದ ಶಿವಣ್ಣ, ಕಥೆ ಮತ್ತು ಎಲ್ಲಾ ಪ್ರಿ ಪ್ರೊಡಕ್ಷನ್ ಗಳನ್ನು ವೇಗವಾಗಿ ಮುಗಿಸಲಾಗುತ್ತೆ. ಮೇಕಿಂಗ್ ಸಮಯದಲ್ಲಿ ಏಕೆ ವಿಳಂಬ ಮಾಡುತ್ತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ನನ್ನ ಸಲಹೆಯೆಂದರೆ ಚಿತ್ರೀಕರಣ ಪ್ರತಿಯೊಂದು ಅಂಶವನ್ನು ಯೋಜಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವುದು ಮತ್ತು ಎಲ್ಲವೂ ಸಿದ್ಧವಾದಾಗ ಮಾತ್ರ ಸೆಟ್ ಗೆ ಹೋಗುತ್ತಾರೆ. ಹೀಗೆ ಮಾಡುವುದರಿಂದ ವಿಳಂಬದ ಸಾಧ್ಯತೆ ಕಡಿಮೆಯಾಗುತ್ತದೆ. ಇದರಿಂದ ನಿರ್ಮಾಪಕರಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಒಂದು ಸಿನಿಮಾವನ್ನು ಪೂರ್ಣಗೊಳಿಸಲು ತಿಂಗಳುಗಳು, ವರ್ಷಗಳು ತೆಗೆದುಕೊಂಡಾಗ ವ್ಯಾಪಾಕವಾದ ದೃಶ್ಯ ಪರಿಣಾಮಗಳೊಂದಿಗೆ ಸಿನಿಮಾ ನಿರ್ಮಿಸಿದರೆ, ಸಿನಿಮಾ ತಂಡ ಇಡೀ ಸಿನಿಮಾವನ್ನು ಕಂಪ್ಯೂಟರ್ ಗ್ರಾಫಿಕ್ಸ್ ನೊಂದಿಗೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಸಿನಿಮಾ ಪ್ರಾರಂಭವಾಗುತ್ತೆ, ನಂತರ ಅದರ ಕೆಲಸವು ಪುನಾರಂಭಗೊಳ್ಳಲು ಸುಮಾರು ತಿಂಗಳುಗಳು ವಿಳಂಬವಾಗುತ್ತದೆ. ಇದು ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದವರಿಗೆ ವಿಶೇಷವಾಗಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ದೈನಂದಿನ ವೇತನದಾರರಿಗೆ ಅನಿಶ್ಚತೆತೆಯನ್ನು ಉಂಟು ಮಾಡುತ್ತದೆ. ಸಿನಿಮಾ ಚಿತ್ರೀಕರಣವನ್ನು ಮುಂಚಿತವಾಗಿ ಪ್ಲಾನ್ ಮಾಡಿದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ. ಕಾರ್ಮಿಕರಿಗೆ ನಿಯಮಿತವಾಗಿ ಆದಾಯವನ್ನು ಖಾತ್ರಿಪಡಿಸಬಹುದು ಎಂದಿದ್ದಾರೆ.

ಕಥೆ ಹೇಳುವ ಗುಣಮಟ್ಟದಿಂದಾಗಿ ಸಿನಿಮಾಗಳು ತಯಾರಿಕೆಯಲ್ಲಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತವೆ. ಸಿಂಪಲ್ ಆಗಿ ನಿರ್ಮಿಸುವ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಕಂಡಿರುವ ಉದಾಹರಣೆಗಳಿವೆ. ಇತರೆ ಉದ್ಯಮಗಳಲ್ಲಿ ಸಣ್ಣ ಸಿನಿಮಾಗಳು ದೊಡ್ಡ ಹೆಸರು ಮಾಡುತ್ತವೆ. ಆದರೆ ಇಲ್ಲಿ ಯಾಕೆ ಆಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ