BBK 10: ಕೆಟ್ಟ ಮೇಲೂ ಬಾರದ ಬುದ್ಧಿ, ನಮ್ರತಾ ಪರ ನಿಂತ ಉಸ್ತುವಾರಿ ಸ್ನೇಹಿತ್! ಚೇಲಾ, ಬಕೆಟ್, ಚಮಚ ಎಂದು ಟೀಕಿಸಿ ತಿವಿದ ವೀಕ್ಷಕ
Dec 06, 2023 01:38 PM IST
BBK 10: ಕೆಟ್ಟ ಮೇಲೂ ಬಾರದ ಬುದ್ಧಿ, ನಮ್ರತಾ ಪರ ನಿಂತ ಉಸ್ತುವಾರಿ ಸ್ನೇಹಿತ್! ಚೇಲಾ, ಬಕೆಟ್ ಗಿರಾಕಿ, ಚಮಚ ಎಂದು ಟೀಕಿಸಿದ ವೀಕ್ಷಕ
- ಬಿಗ್‌ಬಾಸ್‌ನಲ್ಲಿ ನಮ್ರತಾ ವಿಚಾರಕ್ಕೆ ಸ್ನೇಹಿತ್ ಟ್ರೋಲ್ ಆಗುತ್ತಿದ್ದಾರೆ. ಬಂದ ಉದ್ದೇಶ ಮರೆತು, ನಮ್ರತಾ ಹಿಂದೆಯೇ ಸುತ್ತುತ್ತಿದ್ದಾರೆ. ಈ ನಡುವೆ ಟಾಸ್ಕ್‌ನಲ್ಲಿ ಉಸ್ತುವಾರಿ ಆದರೂ, ನಮ್ರತಾ ಹೇಳಿದಂತೆಯೇ ನಡೆದುಕೊಂಡು ಟೀಕೆಗೂ ಗುರಿಯಾಗುತ್ತಿದ್ದಾರೆ.
BBK 10: ಕೆಟ್ಟಮೇಲಾದರೂ ಬುದ್ದಿ ಬರಬೇಕು ಎಂಬ ಮಾತಿದೆ. ಆದರೆ, ಕನ್ನಡ ಬಿಗ್‌ಬಾಸ್ ಸೀಸನ್ 10ರಲ್ಲಿ ಅದ್ಯಾಕೋ ಕಾಣಿಸುತ್ತಿಲ್ಲ. ಮಾಡಿದ ತಪ್ಪನ್ನೇ ಪದೇಪದೆ ಮಾಡಿ, ವೀಕ್ಷಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ ಬಿಗ್ ಮನೆಯ ಸ್ಪರ್ಧಿಗಳು. ನಮ್ರತಾ ವಿಚಾರದಲ್ಲಿ ತಮ್ಮ ಮನದ ಬಯಕೆಯನ್ನು ಹೇಳಿಕೊಂಡಿದ್ದ ಸ್ನೇಹಿತ್‌ಗೆ, ಕೇವಲ ನಮ್ರತಾ ಮಾತ್ರವಲ್ಲ ಕಿಚ್ಚ ಸುದೀಪ್ ಸಹ ತಿದ್ದಿಕೊಳ್ಳುವಂತೆ ಪರೋಕ್ಷವಾಗಿ ಕಿವಿ ಹಿಂಡಿದ್ದರು. ಆದರೆ, ಸ್ನೇಹಿತ್ ಮಾತ್ರ ಬದಲಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಈಗ ಇದೇ ವಿಚಾರ ಟಾಸ್ಕ್‌ನಲ್ಲೂ ಮುಂದುವರಿದಿದೆ.
ಮಂಗಳವಾರದಿಂದ ಬಿಗ್‌ಬಾಸ್ ಮನೆಯಲ್ಲಿ ಗಂಧರ್ವರು ಮತ್ತು ರಕ್ಕಸರ ಮೇಲಾಟಗಳು ನಡೆಯುತ್ತಿವೆ. ರಕ್ಕಸರ ಗುಂಪಿನ ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್ ಎಲ್ಲರೂ ಬಗೆಬಗೆಯ ಚೇಷ್ಟೆಗಳಿಂದ ಕೆಣಕುತ್ತಿದ್ದರೆ, ಗಂಧರ್ವರ ಗುಂಪಿನ ವಿನಯ್, ನಮ್ರತಾ, ತುಕಾಲಿ, ಮೈಕಲ್, ಪವಿ ಎಲ್ಲರೂ ಸಿಟ್ಟಿಗೆಳದೇ ಇರಲು ಹರಸಾಹಸ ಪಡುತ್ತಿದ್ದಾರೆ. ಈ ಆಟದ ಮುಂದುವರಿದ ಭಾಗದ ಝಲಕ್ ಇಂದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸಿಕ್ಕಿದೆ.
ಗಂಧರ್ವರ ಗುಂಪಿನ ಇಬ್ಬರು ಸದಸ್ಯರು ಕುರ್ಚಿಯಲ್ಲಿ ಕೂತಿದ್ದಾರೆ. ಅವರನ್ನು ಹೇಗಾದರೂ ಕುರ್ಚಿಯಿಂದ ಮೇಲೆಳುವಂತೆ ಮಾಡುವ ಸವಾಲನ್ನು ರಕ್ಕಸರ ಗುಂಪಿಗೆ ನೀಡಲಾಗಿತ್ತು. ರಕ್ಕಸರ ಗುಂಪಿನ ಸದಸ್ಯರು ಗಂಧರ್ವರ ಮೇಲೆ ನೀರು ಸೋಕಲಾರಂಭಿಸಿದರು. ಈ ಹಂತದಲ್ಲಿ ವರ್ತೂರು ಸಂತೋಷ್ ಸೀಟಿನಿಂದ ಎದ್ದರು ಎಂದು ರಕ್ಕಸರ ಗುಂಪಿನ ಸದಸ್ಯರು ಕೂಗಲಾರಂಭಿಸಿದರು. ಆದರೆ ಎದ್ದಿಲ್ಲ ಬರೀ ಸರಿದಿದ್ದಾರೆ ಎಂಬುದು ಗಂಧರ್ವರ ಗುಂಪಿನ ನಮ್ರತಾ ವಾದ.
ನಮ್ರತಾ ವಾದಕ್ಕೆ ಅನುಗುಣವಾಗಿಯೇ ಉಸ್ತುವಾರಿ ಸ್ನೇಹಿತ್ ತಮ್ಮ ನಿರ್ಧಾರವನ್ನು ತಿಳಿಸಿದಾಗ ರಕ್ಕಸರ ಗುಂಪಿನ ಸದಸ್ಯರು ಅಕ್ಷರಶಃ ರಕ್ಕಸರಾಗಿ ಬದಲಾಗಿದ್ದಾರೆ. ತನಿಷಾ, ‘ನಮ್ರತಾ ಹೇಳಿದ ಮೇಲೆ ಉಸ್ತುವಾರಿಯ ನಿರ್ಧಾರ ಬದಲಾಗುತ್ತದೆ’ ಎಂದು ಹೇಳಿದ್ದರೆ, ನಮ್ರತಾ, ‘ಹೌದು. ಯಾಕಂದ್ರೆ ನಮ್ರತಾ ಇಂಪಾರ್ಟೆಂಟ್ ಇದ್ದಾಳೆ’ ಎಂದು ಇನ್ನಷ್ಟು ಕೆಣಕಿದ್ದಾರೆ. ತನಿಷಾ ಮತ್ತು ನಮ್ರತಾ ನಡುವಿನ ಜಗಳ ಜಟಾಪಟಿಯ ಹಂತಕ್ಕೂ ಹೋಗಿದೆ.
ಕಾರ್ತಿಕ್, ‘ನ್ಯಾಯವಾಗಿ ಉಸ್ತುವಾರಿ ಮಾಡಲಿಕ್ಕೆ ಬರದಿದ್ದರೆ ಬಿಟ್ಟು ಹೋಗ್ತಿರ್ಬೇಕು’ ಎಂದು ಗುಡುಗಿದ್ದಾರೆ. ಎರಡೂ ತಂಡವನ್ನು ಸಮನಾಗಿ ಕಾಣಬೇಕಿದ್ದ ಉಸ್ತುವಾರಿ ಸ್ನೇಹಿತ್ ಒಂದು ಕಡೆ ವಾಲಿಕೊಂಡರಾ? ಅಥವಾ ಅವರು ತೆಗೆದುಕೊಂಡ ನಿರ್ಧಾರ ನ್ಯಾಯಯುತವಾಗಿಯೇ ಇತ್ತಾ? ಇದನ್ನು ಇಂದಿನ ಸಂಚಿಕೆಯಲ್ಲಿಯೇ ನೋಡಬೇಕು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜೀಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಸ್ನೇಹಿತ್ ಉಸ್ತುವಾರಿಗೆ ವೀಕ್ಷಕ ಉರಿ ಉರಿ
ಸ್ನೇಹಿತ್ ಅವರ ಈ ನಡೆಗೆ ಬಿಗ್ ಬಾಸ್ ವೀಕ್ಷಕ ವಲಯದಿಂದಲೂ ಟೀಕೆಗಳು ಕಾಮೆಂಟ್ ರೂಪದಲ್ಲಿ ಹರಿದು ಬರುತ್ತಿವೆ. ಹೀಗಿವೆ ವೀಕ್ಷಕರ ಕೆಲವು ಪ್ರತಿಕ್ರಿಯೆಗಳು.
- ಸ್ನೇಹಿತ್ ವರ್ಸ್ಟ್.. ಬರಿ ಬಕೆಟ್ ಹಿಡಿಯೋ ಕೆಲಸನೇ ಮಾಡತಾನೆ..
- ಮೊದಲ ದಿನದಿಂದ ಚಮಚ ಆಗಿಯೇ ಉಳಿದ ಏಕೈಕ ಸ್ಪರ್ಧಿ ಸ್ನೇಹಿತ್. ಈ ವಾರ ಕೂಡ ಕ್ಯಾಪ್ಟನ್ ಆಗಿಯೂ ಸಹ ಅದನ್ನೇ ಮಾಡ್ತಿದ್ದಾನೆ. ಈ ಕರ್ಮಕ್ಕೆ ಸುದೀಪ್ ಸರ್ ಸ್ಪೆಷಲ್ ಪವರ್ ಬಳಸಬೇಕಿತ್ತಾ? ನಿನ್ನೆ ಸಂಗೀತಾ ಮತ್ತೆ ತನಿಷಾ ಉಗಿದಿದ್ದು ಸರಿಯಿತ್ತು.
- ಉಸ್ತುವಾರಿ ಮಾಡುವ ಬದಲು ನಮೃತಾ ಮನೆಗೆ ಹೋಗಿ ಪಾತ್ರೆ ತೊಳಿ ಅದುಕ್ಕೆ ಲಾಯಕ್ ನೀನು ತೂ
- ಫೇಕ್ ಕ್ಯಾಪ್ಟನ್ ಸ್ನೇಹಿತ್
- ಏನ್ ಗುರು ಈ ಸ್ನೇಹಿತ್ Worst and Waste ಕ್ಯಾಪ್ಟನ್ ಇನ್ ಬಿಗ್ ಬಾಸ್ ಹಿಸ್ಟರಿ.....ನಿಜ ಅಲ್ವಾ
- ಸುದೀಪ್ ಸರ್ ಸ್ನೇಹಿತ್‌ಗೆ ಪ್ರತಿವಾರ ಬುದ್ಧಿ ಹೇಳಿದ್ರು ಅವ್ನ್ ಬುದ್ಧಿ ಬಿಡ್ತಾ ಇಲ್ಲ ನಮೃತಾಗೆ ಬಕೆಟ್ ಹಿಡಿತಿದ್ದಾನೆ