logo
ಕನ್ನಡ ಸುದ್ದಿ  /  ಮನರಂಜನೆ  /  Shilpa Shetty: ಮತ್ತೆ ಕೋರ್ಟ್ ಮೆಟ್ಟಿಲೇರಿದ ಒಂದು ಮುತ್ತಿನ ಕಥೆ...ಈ ಬಾರಿ ಶಿಲ್ಪಾ ಶೆಟ್ಟಿ ಹೇಳಿದ್ದೇನು..?

Shilpa Shetty: ಮತ್ತೆ ಕೋರ್ಟ್ ಮೆಟ್ಟಿಲೇರಿದ ಒಂದು ಮುತ್ತಿನ ಕಥೆ...ಈ ಬಾರಿ ಶಿಲ್ಪಾ ಶೆಟ್ಟಿ ಹೇಳಿದ್ದೇನು..?

HT Kannada Desk HT Kannada

Jul 27, 2022 08:57 PM IST

google News

ಏಡ್ಸ್ ಜಾಗೃತಿ ಕಾರ್ಯಕ್ರಮದ ವೇದಿಕೆಯಲ್ಲಿ ಶಿಲ್ಪಾ ಶೆಟ್ಟಿಗೆ ಮುತ್ತಿಟ್ಟಿದ್ದ ರಿಚರ್ಡ್ ಗೇರ್

    • ಮುಂಬೈ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ದ ಈಗ ದೂರುದಾರರು ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ನಟಿ ಶಿಲ್ಪಾ ಶೆಟ್ಟಿ ನಾನು ಈ ಪ್ರಕರಣದಲ್ಲಿ ಬಲಿಪಶು, ನಾನು ಸ್ಟಾರ್ ನಟಿ ಎಂಬ ಒಂದೇ ಕಾರಣಕ್ಕೆ ಈ ವಿಷಯವನ್ನು ದೊಡ್ಡದಾಗಿ ಮಾಡಲಾಗುತ್ತಿದೆ. ನನ್ನ ವಿರುದ್ಧ ದೂರು ನೀಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಶಿಲ್ಪಾ ಶೆಟ್ಟಿ ಮನವಿ ಮಾಡಿದ್ದಾರೆ.
ಏಡ್ಸ್ ಜಾಗೃತಿ ಕಾರ್ಯಕ್ರಮದ ವೇದಿಕೆಯಲ್ಲಿ ಶಿಲ್ಪಾ ಶೆಟ್ಟಿಗೆ ಮುತ್ತಿಟ್ಟಿದ್ದ ರಿಚರ್ಡ್ ಗೇರ್
ಏಡ್ಸ್ ಜಾಗೃತಿ ಕಾರ್ಯಕ್ರಮದ ವೇದಿಕೆಯಲ್ಲಿ ಶಿಲ್ಪಾ ಶೆಟ್ಟಿಗೆ ಮುತ್ತಿಟ್ಟಿದ್ದ ರಿಚರ್ಡ್ ಗೇರ್

14 ವರ್ಷಗಳ ಹಿಂದೆ ಹಾಲಿವುಡ್​ ನಟ ರಿಚರ್ಡ್ ಗೇರ್, ಸಾರ್ವಜನಿಕವಾಗಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿಗೆ ಮುತ್ತು ಕೊಟ್ಟಿದ್ದ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇದೇ ವರ್ಷ ಜನವರಿಯಲ್ಲಿ ಮುಂಬೈ ನ್ಯಾಯಾಲಯವು, ಘಟನೆಯಲ್ಲಿ ಶಿಲ್ಪಾ ಶೆಟ್ಟಿ ಬಲಿಪಶು ಅಷ್ಟೇ ಎಂದು ಹೇಳಿ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಆದರೆ ಇದೀಗ ಈ ತೀರ್ಪಿನ ವಿರುದ್ಧ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ.

14 ವರ್ಷಗಳ ಹಿಂದೆ ನಡೆದ ಘಟನೆ ಸಂಬಂಧ ಶಿಲ್ಪಾ ಶೆಟ್ಟಿ ಹಾಗೂ ರಿಚರ್ಡ್ ಗೇರ್ ವಿರುದ್ಧ ರಾಜಸ್ಥಾನದಲ್ಲಿ ದೂರು ಅದಾಖಲಾಗಿತ್ತು. ಇವರಿಬ್ಬರ ವಿರುದ್ಧ ಬಂಧನದ ವಾರೆಂಟ್ ಕೂಡಾ ಹೊರಡಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ ಈ ಅರೆಸ್ಟ್ ವಾರೆಂಟನ್ನು ರದ್ದುಪಡಿಸಿತ್ತು. ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಮುಂಬೈ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ವಾದ ಪ್ರತಿವಾದ ಆಲಿಸಿದ್ದ ಮುಂಬೈ ನ್ಯಾಯಾಲಯ, 14 ವರ್ಷಗಳ ನಂತರ ಶಿಲ್ಪಾ ಶೆಟ್ಟಿ ಪರ ತೀರ್ಪು ನೀಡಿತ್ತು. ಇಲ್ಲಿ ಶಿಲ್ಪಾ ಶೆಟ್ಟಿ ಸಂತ್ರಸ್ತೆ ಅಷ್ಟೇ. ಅವರ ವಿರುದ್ಧ ದಾಖಲಾಗಿರುವ ದೂರು ಆಧಾರ ರಹಿತವಾಗಿದೆ. ಮುತ್ತು ಕೊಟ್ಟಾಗ ನಿರಾಕರಿಸಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಅಪರಾದಿ ಎಂದು ಹೇಳಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.

ಮುಂಬೈ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ದ ಈಗ ದೂರುದಾರರು ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ನಟಿ ಶಿಲ್ಪಾ ಶೆಟ್ಟಿ ನಾನು ಈ ಪ್ರಕರಣದಲ್ಲಿ ಬಲಿಪಶು, ನಾನು ಸ್ಟಾರ್ ನಟಿ ಎಂಬ ಒಂದೇ ಕಾರಣಕ್ಕೆ ಈ ವಿಷಯವನ್ನು ದೊಡ್ಡದಾಗಿ ಮಾಡಲಾಗುತ್ತಿದೆ. ಈ ವಿಚಾರದಿಂದ ನಾನು ಮಾನಸಿಕವಾಗಿ ಬಹಳ ನೊಂದಿದ್ದೇನೆ. ದಯವಿಟ್ಟು ಈ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ, ನನ್ನ ವಿರುದ್ಧ ದೂರು ನೀಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಶಿಲ್ಪಾ ಶೆಟ್ಟಿ ಮನವಿ ಮಾಡಿದ್ದಾರೆ.

ಏಡ್ಸ್ ಜಾಗೃತಿ ಕಾರ್ಯಕ್ರಮದ ವೇದಿಕೆಯಲ್ಲಿ ಶಿಲ್ಪಾ ಶೆಟ್ಟಿಗೆ ಮುತ್ತಿಟ್ಟಿದ್ದ ರಿಚರ್ಡ್ ಗೇರ್

2007 ಏಪ್ರಿಲ್ 15 ರಂದು ರಾಜಸ್ಥಾನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ರಿಚರ್ಡ್ ಗೇರ್, ಶಿಲ್ಪಾ ಶೆಟ್ಟಿ ಹಾಗೂ ಇನ್ನಿತರರು ಭಾಗವಹಿಸಿದ್ದರು. ಈ ಸಮಯದಲ್ಲಿ ಶಿಲ್ಪಾ ಶೆಟ್ಟಿ ರಿಚರ್ಡ್ ಬಗ್ಗೆ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ರಿಚರ್ಡ್ ಗೇರ್ ಶಿಲ್ಪಾ ಶೆಟ್ಟಿಯನ್ನು ಅಪ್ಪಿ ಮುತ್ತಿಟ್ಟಿದ್ದರು. ಈ ವೇಳೆ ಶಿಲ್ಪಾಗೆ ಇರುಸುಮುರುಸಾದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ. ನಂತರ ಈ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಸುದ್ದಿಯಾಗಿತ್ತು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ರೀತಿ ಮಾಡಿದ್ದು ತಪ್ಪು. ಇಬ್ಬರೂ ಸೆಲಬ್ರಿಟಿಗಳಾಗಿ ಜನರಿಗೆ ಅರಿವು ಮೂಡಿಸುವ ಬದಲು ವೇದಿಕೆಯಲ್ಲಿ ಈ ರೀತಿಯಾಗಿ ನಡೆದುಕೊಂಡಿದ್ದು ಸರಿಯಲ್ಲ, ಶಿಲ್ಪಾ ಶೆಟ್ಟಿ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದರು.

ಶಿಲ್ಪಾ ಶೆಟ್ಟಿ ಸಿನಿಮಾಗಳ ಬಗ್ಗೆ ಹೇಳುವುದಾದರೆ ನಿಕಮ್ಮಾ ಚಿತ್ರದ ನಂತರ ಅವರ ಹೊಸ ಸಿನಿಮಾಗಳು ತೆರೆ ಕಂಡಿಲ್ಲ. ಸದ್ಯಕ್ಕೆ ಅವರು ರೋಹಿತ್ ಶೆಟ್ಟಿ ಜೊತೆ ಇಂಡಿಯನ್ ಪೊಲೀಸ್ ಫೋರ್ಸ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಓಟಿಟಿಯಲ್ಲಿ ತೆರೆ ಕಾಣಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ