logo
ಕನ್ನಡ ಸುದ್ದಿ  /  Entertainment  /  Bollywood News Actor Sooraj Pancholi Acquitted In Jiah Khan Suicide Case Nishabd Movie Actress Jiah Khan Rsm

Jiah Khan case: ಜಿಯಾ ಖಾನ್‌ ಆತ್ಮಹತ್ಯೆ ಪ್ರಕರಣ; ಸಾಕ್ಷ್ಯಗಳ ಕೊರತೆಯಿಂದ ಸೂರಜ್‌ ಪಾಂಚೊಲಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

Rakshitha Sowmya HT Kannada

Apr 28, 2023 03:40 PM IST

ಜಿಯಾ ಖಾನ್‌ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್‌ ಪಾಂಚೋಲಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

    • ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಜಿಯಾ ಖಾನ್‌ ತಾಯಿ ರಬಿಯಾ ಖಾನ್‌ ಕೂಡಾ ಆರೋಪಿಸಿದ್ದರು. ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಸಾಕ್ಷ್ಯಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿ ಅವರನ್ನು ಖುಲಾಸೆಗೊಳಿಸಿರುವುದಾಗಿ ಹೇಳಿದೆ.
ಜಿಯಾ ಖಾನ್‌ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್‌ ಪಾಂಚೋಲಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ
ಜಿಯಾ ಖಾನ್‌ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್‌ ಪಾಂಚೋಲಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಬಾಲಿವುಡ್‌ ನಟಿ ಜಿಯಾ ಖಾನ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಸುಮಾರು 10 ವರ್ಷಗಳ ನಂತರ ಮುಂಬೈ ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದ ಜಿಯಾ ಖಾನ್‌ ಬಾಯ್‌ ಫ್ರೆಂಡ್‌, ನಟ ಸೂರಜ್‌ ಪಾಂಚೋಲಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಟ್ರೆಂಡಿಂಗ್​ ಸುದ್ದಿ

OTT News: ತಿಂಗಳಿಗೆ 29 ರೂಗೆ ಪ್ರೀಮಿಯಂ ಪ್ಲಾನ್‌ ಪರಿಚಯಿಸಿದ ಜಿಯೋಸಿನಿಮಾ; ಒಟಿಟಿಯಲ್ಲಿ ಆರಂಭವಾಗಲಿದೆಯೇ ಹೊಸ ದರ ಸಮರ

Cannes Film Festival: ಕಾನ್‌ ಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾಗಳ ಬಗ್ಗೆ, ತೀರ್ಪುಗಾರರ ಕುರಿತು ನಿರ್ಲಕ್ಷ್ಯ ಏಕೆ? ವಿಶೇಷ ವಿಶ್ಲೇಷಣೆ

1000 ಸಂಚಿಕೆ ಪೂರೈಸಿದ ಖುಷಿಯಲ್ಲಿ ಗೌರಿಪುರದ ಗಯ್ಯಾಳಿಗಳು: ಕೇಕ್‌ ಕತ್ತರಿಸಿ ಸಂಭ್ರಮಿಸಿದ ಸೀರಿಯಲ್‌ ತಂಡ

Seetha Rama Serial: ನಡು ರಾತ್ರಿಯಲ್ಲಿಯೇ ಶ್ರೀರಾಮನ ತಾಯಿ ವಾಣಿಯ ಎಂಟ್ರಿ; ಕೆಟ್ಟ ಕನಸಿಗೆ ಬೆಚ್ಚಿ ಬೆವರಿದ ಭಾರ್ಗವಿ!

3 ಜೂನ್‌ 2013 ರಂದು ಯುವನಟಿ , 25 ವರ್ಷದ ಜಿಯಾ ಖಾನ್‌ ಮುಂಬೈನ ಜುಹುವಿನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಯಾ ಖಾನ್‌ ಬರೆದ 6 ಪುಟಗಳ ಪತ್ರದ ಆಧಾರದ ಮೇಲೆ ಪೊಲೀಸರು ಆಕೆಯ ಬಾಯ್‌ ಫ್ರೆಂಡ್‌ ಸೂರಜ್‌ ಪಾಂಚೋಲಿಯನ್ನು ಬಂಧಿಸಿದ್ದರು. ''ಸೂರಜ್‌ ಪಾಂಚೋಲಿಯಿಂದ ನಾನು ಮಾನಸಿಕ ಹಾಗೂ ದೈಹಿಕವಾಗಿ ನೊಂದಿದ್ಧೆನೆ. ನಾನು ಗರ್ಭಿಣಿ ಆಗಿದ್ದು ಗರ್ಭಪಾತ ಕೂಡಾ ಮಾಡಿಸಿಕೊಂಡಿದ್ದಾಗಿ'' ಜಿಯಾ ಖಾನ್‌ ಪತ್ರದಲ್ಲಿ ಉಲ್ಲೇಖಿಸಿದ್ದರು.

ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಜಿಯಾ ಖಾನ್‌ ತಾಯಿ ರಬಿಯಾ ಖಾನ್‌ ಕೂಡಾ ಆರೋಪಿಸಿದ್ದರು. ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಸಾಕ್ಷ್ಯಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿ ಅವರನ್ನು ಖುಲಾಸೆಗೊಳಿಸಿರುವುದಾಗಿ ಹೇಳಿದೆ. ಜಿಯಾ ಖಾನ್ ಆತ್ಮಹತ್ಯೆಗೆ ಸೂರಜ್ ಪ್ರಚೋದನೆ ನೀಡಿದ್ದರು ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳು ಸಿಕ್ಕಿಲ್ಲ ಎಂದು ಕೋರ್ಟ್ ಹೇಳಿದೆ.

ಜಿಯಾ ಖಾನ್‌ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಅರೆಸ್ಟ್‌ ಆಗಿದ್ದ ಸೂರಜ್‌ ಪಾಂಚೋಲಿ, ನಂತರ 2013 ಜುಲೈನಲ್ಲಿ ಬೇಲ್‌ ಪಡೆದು ರಿಲೀಸ್‌ ಆಗಿದ್ದರು. ಸೂರಜ್‌ ಖ್ಯಾತ ನಟ ಆದಿತ್ಯ ಪಾಂಚೋಲಿ ಹಾಗೂ ಝರೀನಾ ವಹಾಬ್‌ ದಂಪತಿಯ ಪುತ್ರ. ಒಂದು ವೇಳೆ ಅಪರಾಧ ಸಾಬೀತಾಗಿದ್ದರೆ ಸೂರಜ್‌ ಪಾಂಚೋಲಿ 10 ವರ್ಷಗಳ ಜೈಲು ಶಿಕ್ಷೆ ಅನುಭಿಸಬೇಕಾಗಿತ್ತು. ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಕೋರಿ ಜಿಯಾ ಖಾನ್‌ ಕುಟುಂಬ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಕಳೆದ ವರ್ಷ ವಜಾಗೊಳಿಸಿತ್ತು. ನ್ಯಾಯಾಧೀಶರಾದ ಎಎಸ್ ಸಯ್ಯದ್ ಅವರು ಕಳೆದ ವಾರ ಎರಡೂ ಕಡೆಯ ಅಂತಿಮ ವಾದವನ್ನು ಆಲಿಸಿ ಪ್ರಕರಣದ ತೀರ್ಪನ್ನು ಏಪ್ರಿಲ್‌ 28ಕ್ಕೆ ಕಾಯ್ದಿರಿಸಿದ್ದರು.

ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಜಿಯಾ ಖಾನ್‌ ತಾಯಿ ರಬಿಯಾ ಖಾನ್‌ , ''ನನ್ನ ಮಗಳನ್ನು ಕೊಲ್ಲಲಾಗಿದೆ. ಇಲ್ಲಿ ನ್ಯಾಯ ಸಿಗದಿದ್ದರೆ ಏನಂತೆ ನಾನು ಹೈಕೋರ್ಟ್‌ ಮೊರೆ ಹೋಗುತ್ತೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಸಿಬಿಐ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಫಲವಾಗಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಯಾ ಖಾನ್‌ ನಟಿಸಿದ ಮೊದಲ ಸಿನಿಮಾ ನಿಶ್ಯಬ್ಧ್‌. ಈ ಸಿನಿಮಾ 2007ರಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಜಿಯಾ ಖಾನ್‌, ಅಮಿತಾಬ್‌ ಜೊತೆ ರೊಮಾನ್ಸ್ಯ ಮಾಡಿದ್ದರು. ಈ ದುರಂತ ನಾಯಕಿ ನಟಿಸಿದ ಮೊದಲ ಸಿನಿಮಾದಲ್ಲಿ ಸಿನಿಪ್ರಿಯರ ಮನಗೆದ್ದಿದ್ದರು. ಇದಾದ ನಂತರ ಘಸ್ನಿ, ಹೌಸ್‌ಫುಲ್‌ ಚಿತ್ರದಲ್ಲಿ ಜಿಯಾ ನಟಿಸಿದ್ದರು. ಈ ಸಿನಿಮಾ 2010ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾ ನಂತರ ಆಕೆ ಬೇರೆ ಸಿನಿಮಾಗಳಲ್ಲಿ ನಟಿಸಲಿಲ್ಲ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು