logo
ಕನ್ನಡ ಸುದ್ದಿ  /  ಮನರಂಜನೆ  /  Kiara Advani: ರ‍್ಯಾಂಪ್ ಮೇಲೆ ಬಾರ್ಬಿ ಗೊಂಬೆಯಾದ್ರು ಕಿಯಾರಾ ಅಡ್ವಾಣಿ; ಹಾಟ್‌ ಲುಕ್‌ ಕಣ್ತುಂಬಿಕೊಂಡವರೆಲ್ಲ ಹಾರ್ಟ್‌ ಕೊಟ್ಟು ವಾವ್ ಅಂದ್ರು

Kiara Advani: ರ‍್ಯಾಂಪ್ ಮೇಲೆ ಬಾರ್ಬಿ ಗೊಂಬೆಯಾದ್ರು ಕಿಯಾರಾ ಅಡ್ವಾಣಿ; ಹಾಟ್‌ ಲುಕ್‌ ಕಣ್ತುಂಬಿಕೊಂಡವರೆಲ್ಲ ಹಾರ್ಟ್‌ ಕೊಟ್ಟು ವಾವ್ ಅಂದ್ರು

Reshma HT Kannada

Jul 26, 2023 03:07 PM IST

ಬಾರ್ಬಿ ಲುಕ್‌ನಲ್ಲಿ ಮಿಂಚಿದ ನಟಿ ಕಿಯಾರ ಅಡ್ವಾಣಿ

    • ʼಬಾರ್ಬಿʼ ಸಿನಿಮಾ ಬಿಡುಗಡೆಯಾದಾಗಿನಿಂದ ಬಾರ್ಬಿ ಹವಾ ಜೋರಾಗಿದೆ. ನಟಿ ಮಣಿಯರು ಬಾರ್ಬಿ ಅವತಾರದಲ್ಲಿ ಮಿಂಚುವ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಈಗ ಈ ಸಾಲಿಗೆ ಬಾಲಿವುಡ್‌ ಬೆಡಗಿ ಕಿಯಾರಾ ಅಡ್ವಾಣಿ ಕೂಡ ಸೇರಿದ್ದಾರೆ. ರ‍್ಯಾಂಪ್ ಮೇಲೆ ಬಾರ್ಬಿ ಅವತಾರದಲ್ಲಿ ಹೆಜ್ಜೆ ಹಾಕಿದ ಕಿಯಾರಾಗೆ ಸಿಕ್ಕಿದೆ ಅತ್ತೆಯ ಚಿಯರ್ಸ್‌. 
ಬಾರ್ಬಿ ಲುಕ್‌ನಲ್ಲಿ ಮಿಂಚಿದ ನಟಿ ಕಿಯಾರ ಅಡ್ವಾಣಿ
ಬಾರ್ಬಿ ಲುಕ್‌ನಲ್ಲಿ ಮಿಂಚಿದ ನಟಿ ಕಿಯಾರ ಅಡ್ವಾಣಿ (twitter.com/Kiara_Fan_Club)

ಬಾಲಿವುಡ್‌ ಬೆಡಗಿ ಕಿಯಾರಾ ಅಡ್ವಾಣಿ ಬಹಳ ದಿನಗಳ ನಂತರ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಕಿಯಾರ. ಖ್ಯಾತ ಡಿಸೈನರ್‌ಗಳಾದ ಫಲ್ಗುಣಿ ಮತ್ತು ಶೇನ್‌ ಪೀಕಾಕ್‌ ಅವರು ಆಯೋಜಿಸಿದ್ದ ಇಂಡಿಯಾ ಕೌಚರ್‌ ವೀಕ್‌ 2023 ಫ್ಯಾಷನ್‌ ಶೋನಲ್ಲಿ ಕಿಯಾರಾ ಬಾರ್ಬಿ ಅವತಾರದಲ್ಲಿ ರ‍್ಯಾಂಪ್ ಮೇಲೆ ಕಾಣಿಸಿದ್ದಾರೆ. ಈ ಕಾರ್ಯಕ್ರಮ ಕಿಯಾರ ಪತಿ ಸಿದ್ಧಾರ್ಥ ಮಲ್ಹೋತ್ರ ಭಾಗವಹಿಸಿರಲಿಲ್ಲ. ಆದರೆ ಆಕೆಯ ಅತ್ತೆ ರಿಮ್ಮಾ ಮಲ್ಹೋತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮಾತ್ರವಲ್ಲ ಸೊಸೆಯ ಬೆಕ್ಕಿನ ನಡಿಗೆಗೆ ಚಿಯರ್ಸ್‌ ಕೂಡ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಿಯಾರ ಗುಲಾಬಿ ಬಣ್ಣದ ಬಾರ್ಬಿ ಡ್ರೆಸ್‌ ಧರಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಬಾರ್ಬಿ ಉಡುಪಿನ ಡ್ರೆಸ್‌ನಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿರುವ ಕಿಯಾರಾ ವಿಡಿಯೊವನ್ನು ಹಂಚಿಕೊಂಡಿದ್ದಾರೆ ವಸ್ತ್ರವಿನ್ಯಾಸಕರು. ಇದರಲ್ಲಿ ನಗುಮೊಗದೊಂದಿಗೆ ಬರುವ ಕಿಯಾರ ಅಭಿಮಾನಿಗಳತ್ತ ಹೂಮುತ್ತಗಳನ್ನು ಎಸೆದಿದ್ದಾರೆ. ವೇದಿಕೆಯ ಮೇಲೆ ಒಂದೆಡೆ ನಿಲ್ಲುವ ಈ ಬೆಡಗಿ ತಮ್ಮ ಅತ್ತೆ ರಿಮ್ಮಾ ಮಲ್ಹೋತ್ರಾ ಕಡೆಗೆ ಮುತ್ತುಗಳ ಸುರಿಮಳೆ ಸುರಿಸುತ್ತಾರೆ. ರಿಮ್ಮಾ ವೇದಿಕೆಯ ಮುಂಭಾಗದ ಮೊದಲ ಸಾಲಿನಲ್ಲಿ ಕುಳಿತಿರುತ್ತಾರೆ. ರಿಮ್ಮಾ ಕೂಡ ಸೊಸೆಯ ಕಡೆಗೆ ಮುತ್ತಿಗಳನ್ನು ಎಸೆಯುತ್ತಾರೆ. ಇದಕ್ಕೆ ಕಿಯಾರಾ ಕೈಯಿಂದ ಹೃದಯದ ಚಿಹ್ನೆ ಮೂಡಿಸಿ ಅತ್ತೆಯೆಡೆಗೆ ತೋರುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಈ ಬೆಡಗಿ ಕುಟುಂಬದ ಇತರರು ಹಾಗೂ ಸ್ನೇಹಿತರ ಜೊತೆ ಇರುವುದನ್ನು ಕಾಣಬಹುದಾಗಿದೆ.

ರ‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿದ ಕಿಯಾರಾ ಅವರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಒಂದಿಷ್ಟು ಮಂದಿ ಇದನ್ನು ಪೋಸ್ಟ್‌, ಶೇರ್‌ ಮಾಡಿದ್ದಾರೆ.

ಅಭಿಮಾನಿಗಳು ಹಾಗೂ ಪಾಪರಾಜಿಗಳ ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ ಕಿಯಾರ ಬಾರ್ಬಿ ಲುಕ್‌ನ ವಿಡಿಯೊ, ಫೋಟೊಗಳು ಹರಿದಾಡುತ್ತಿವೆ, ಅಲ್ಲದೆ ಇವು ಸಾಕಷ್ಟು ವೈರಲ್‌ ಆಗಿದೆ.

ಇದನ್ನೂ ಓದಿ

Popular Female Star: ದೀಪಿಕಾ, ಅಲಿಯಾ, ರಶ್ಮಿಕಾ ಇವರ್ಯಾರು ಅಲ್ಲ; ಇವರೇ ನೋಡಿ ಜನಪ್ರಿಯ ನಟಿಯರಲ್ಲಿ ನಂಬರ್‌ 1 ಸ್ಥಾನ ಗಳಿಸಿದ ಬೆಡಗಿ

Most Popular Female Star: ಜೂನ್‌ ತಿಂಗಳ ಜನಪ್ರಿಯ ನಟಿಯರ ಪಟ್ಟಿ ಬಿಡುಗಡೆಯಾಗಿದೆ. ಟಾಪ್‌ ಹತ್ತರಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಹೆಸರಿದೆ. ಕೀರ್ತಿ ಸುರೇಶ್‌, ಕತ್ರಿಕಾ ಕೈಫ್‌, ತ್ರಿಷಾ ಕೃಷ್ಣನ್‌ ನಂತರ ಸ್ಥಾನ ಗಳಿಸಿದ್ದಾರೆ. ಹಾಗಾದ್ರೆ ನಂಬರ್‌ ಒನ್‌ ಸ್ಥಾನ ಯಾರಿಗೆ? ತಿಳಿಯಬೇಕು ಅಂದ್ರೆ ಈ ಸ್ಟೋರಿ ಓದಿ

ಸಿನಿಮಾ ನಟ, ನಟಿಯರ ಬಗ್ಗೆ ಜನರಲ್ಲಿ ಕುತೂಹಲ ಇರುವುದು ಸಹಜ. ತಮ್ಮ ನೆಚ್ಚಿನ ನಟ, ನಟಿಯರ ಬಗ್ಗೆ ತಿಳಿದುಕೊಳ್ಳುವ ಹಪಹಪಿ ಎಂದಿಗೂ ಜೀವಂತವಾಗಿರುತ್ತದೆ, ಮಾತ್ರವಲ್ಲ ಅವರ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಷಯಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ಪ್ರತಿ ವರ್ಷ ಜನರ ಆಯ್ಕೆಯ ಮೂಲಕ ಜನಪ್ರಿಯ ನಟ, ನಟಿಯರನ್ನು ಆಯ್ಕೆ ಮಾಡುವುದು ಸಾಮಾನ್ಯ. ವಿವಿಧ ಸಂಸ್ಥೆಗಳು ಜನರ ಆಯ್ಕೆಯನ್ನು ಆಧರಿಸಿ ಜನಪ್ರಿಯ ನಟ, ನಟಿ ಎಂದು ಆಯ್ಕೆ ಮಾಡುತ್ತವೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ