Kiara Advani: ಸತ್ಯಪ್ರೇಮ್ ಕಿ ಕಥಾ ಪ್ರಮೋಷನ್‌ನಲ್ಲಿ ಮಾನ್ಸೂನ್ ಫ್ಯಾಷನ್ ಮೂಲಕ ಗಮನ ಸೆಳೆದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ
Jun 29, 2023 04:00 PM IST
ಕಿಯಾರಾ ಅಡ್ವಾಣಿ
ಇತ್ತೀಚೆಗೆ ತೆಗೆಸಿದ ಫೋಟೋಗಳನ್ನು ಕಿಯಾರ ಅಡ್ವಾಣಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಕಿಯಾರ Cult Gaia ಬ್ರಾಂಡ್‌ನ ಕಡು ಹಸಿರು ಬಣ್ಣದ ಮಿಡಿ ಧರಿಸಿದ್ದು ಅದಕ್ಕೆ ಒಪ್ಪುವ ಹೇರ್‌ಸ್ಟೈಲ್ ಮಾಡಿದ್ದಾರೆ.
ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕಿಯಾರ ಅಡ್ವಾಣಿ ಮೊದಲಿನಂತೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಬಾಲಿವುಡ್‌ನಲ್ಲಿ ಕಿಯಾರ ಲಕ್ ಖುಲಾಯಿಸಿದ್ದು ಇತ್ತೀಚೆಗಿನ ಅವರ ಸಿನಿಮಾಗಳು ಸಕ್ಸಸ್ ಕಾಣುತ್ತಿವೆ. ಕಿಯಾರ ನಟನೆಯಿಂದ ಮಾತ್ರವಲ್ಲದೆ ಫ್ಯಾಷನ್‌ನಿಂದಲೂ ಅಭಿಮಾನಿಗಳ ಗಮನ ಸೆಳೆಯುತ್ತಾ ಬಂದಿದ್ದಾರೆ.
ಕಿಯಾರ ಅಭಿನಯದ 'ಸತ್ಯಪ್ರೇಮ್ ಕಿ ಕಥಾ' ಸಿನಿಮಾ ಇಂದು ( ಜೂನ್ 29) ರಿಲೀಸ್ ಆಗಿದೆ. ಚಿತ್ರದಲ್ಲಿ ಕಿಯಾರ ಜೊತೆಗೆ ಕಾರ್ತಿಕ್ ಆರ್ಯನ್ ನಟಿಸಿದ್ದಾರೆ. ಕೆಲವು ದಿನಗಳಿಂದ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿ ಇರುವ ಕಿಯಾರ, ತಮ್ಮ ಕಾಸ್ಟ್ಯೂಮ್‌ನಿಂದ ಕೂಡಾ ಗಮನ ಸೆಳೆದಿದ್ದಾರೆ. ಸಮ್ಮರ್ ಹಾಗೂ ಮಾನ್ಸೂನ್‌ಗೆ ಹೇಳಿ ಮಾಡಿಸಿದಂತ ಔಟ್‌ಫಿಟ್‌ನೊಂದಿಗೆ ಕಿಯಾರಾ ತಮ್ಮ ಹೊಸ ಸಿನಿಮಾ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದಾರೆ.
ಇತ್ತೀಚೆಗೆ ತೆಗೆಸಿದ ಫೋಟೋಗಳನ್ನು ಕಿಯಾರ ಅಡ್ವಾಣಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಕಿಯಾರ Cult Gaia ಬ್ರಾಂಡ್‌ನ ಕಡು ಹಸಿರು ಬಣ್ಣದ ಮಿಡಿ ಧರಿಸಿದ್ದು ಅದಕ್ಕೆ ಒಪ್ಪುವ ಹೇರ್‌ಸ್ಟೈಲ್ ಮಾಡಿದ್ದಾರೆ. ವಿ ನೆಕ್‌ಲೈನ್, ವೇಸ್ಟ್ ಕಟ್‌ಔಟ್ ಫ್ಯಾಬ್ರಿಕ್ ಡ್ರೆಸ್ ಕಿಯಾರಾಗೆ ಚೆನ್ನಾಗಿ ಮ್ಯಾಚ್ ಆಗುತ್ತಿದೆ.
ಮತ್ತೊಂದು ಫೋಟೋದಲ್ಲಿ ಅರ್ಧ ಸ್ಲೀವ್‌ನ ಬಿಳಿ ರಿಬ್ ಟಾಪ್ ಧರಿಸಿದ್ದಾರೆ. ಇದೂ ಕೂಡಾ ವಿ ನೆಕ್‌ಲೈನ್ ಹಾಗೂ ಕಾಲರ್ ಹೊಂದಿದೆ. ಫ್ರೀ ಹೇರ್ ಬಿಟ್ಟು ಕಿಯಾರ ಆಕರ್ಷಕವಾಗಿ ಕಾಣುತ್ತಿದ್ದಾರೆ. ಜೊತೆಗೆ ಹೈ ಹೀಲ್ಸ್ ಧರಿಸಿ ಪೋಸ್ ನೀಡಿದ್ದಾರೆ.
ಹಾಗೇ ಕಿಯಾರಾ ವೆಸ್ಟರ್ನ್ ಮಾತ್ರವಲ್ಲ ಸೀರೆಯಲ್ಲಿ ಕೂಡಾ ಸುಂದರವಾಗಿ ಕಾಣುತ್ತಾರೆ. ಕಡು ಗುಲಾಬಿ ಬಣ್ಣದ ಸೀರೆ ಧರಿಸಿರುವ ಫೋಟೋಗಳನ್ನು ಜೂನ್ 10 ರಂದು ಕಿಯಾರಾ ಹಂಚಿಕೊಂಡಿದ್ದಾರೆ. ಅದಕ್ಕೆ ಐವರಿ ಬಣ್ಣದ ಪಿಟ್ಟನ್ ವರ್ಕ್ ಇರುವ ದೇವನಾಗ್ರಿ ಕುಪ್ಪಸ ಧರಿಸಿದ್ದಾರೆ. ಪೋನಿಟೈಲ್ ಹಾಕಿದ್ದಾರೆ. ಕೈಗೆ ಸರಳವಾದ ಒಂದು ಉಂಗುರ, ಕಿವಿಗೆ ದೊಡ್ಡ ಜುಮುಕಿ ಹಾಕಿ, ನೋಡುಗರನ್ನು ಸೆಳೆಯುತ್ತಿದ್ದಾರೆ.
'ಸತ್ಯಪ್ರೇಮ್ ಕಿ ಕಥಾ' ಒಂದೊಳ್ಳೆ ಲವ್ ಸ್ಟೋರಿ ಇರುವ ಕಥೆ ಆಗಿದ್ದು ಇಂದು ಸಿನಿಮಾ ನೋಡಿ ಹೊರಬಂದವರು ಚಿತ್ರದ ಬಗ್ಗೆ ಒಳ್ಳೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಚಿತ್ರವನ್ನು ಸಮೀರ್ ವಿದ್ವಾಂಸ್ ನಿರ್ದೇಶಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳು
ಶ್ರೀದೇವಿ ರೇಖಾ ಕಾಸ್ಮೆಟಿಕ್ ಸುಂದರಿಯರು ಎಂದ ಮಮತಾ ಕುಲಕರ್ಣಿ; ನೀವೂ ಬೆತ್ತಲೆ ಫೋಟೋಶೂಟ್ ಮಾಡಿಸಿದ್ರಲ್ಲ ಎಂದ ನೆಟಿಜನ್ಸ್
ಮಮತಾ ಕುಲಕರ್ಣಿ ಈಗ ಸಿನಿಮಾಗಳಿಂದ ದೂರ ಉಳಿದಿದ್ದರೂ ಆಕೆಯನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಜೊತೆಗೆ ಕೆಲವು ದಿನಗಳಿಂದ ಅವರ ಹಳೆ ವಿಡಿಯೋವೊಂದು ವೈರಲ್ ಕೂಡಾ ಆಗುತ್ತಿದೆ. ಈ ವಿಡಿಯೋದಲ್ಲಿ ಮಮತಾ ಶ್ರೀದೇವಿ ಹಾಗೂ ರೇಖಾ ಕಾಸ್ಮೆಟಿಕ್ ಬ್ಯೂಟಿಗಳು ಎಂದು ಹೇಳಿರುವುದು ಈಗ ಭಾರೀ ಚರ್ಚೆಗೆ ಒಳಗಾಗುತ್ತಿದೆ. ಪೂರ್ತಿ ಸ್ಟೋರಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಯಜಮಾನ ಸಿನಿಮಾ ನಟಿ ಅರ್ಚನಾ ಚಿತ್ರರಂಗದಿಂದ ದೂರಾಗಿದ್ದೇಕೆ; ಸಾಲು ಸಾಲು ಅವಕಾಶಗಳಿದ್ರೂ ನಟನೆ ಬಿಟ್ಟದ್ದು ಆ ಕಾರಣಕ್ಕೇನಾ?
ಡಾ. ವಿಷ್ಣುವರ್ಧನ್ ಅವರೊಂದಿಗೆ 'ಯಜಮಾನ' ಚಿತ್ರದಲ್ಲಿ ಓ ಮೈನಾ ಓ ಮೈನಾ.. ಎಂದು ಹಾಡಿದ ಅರ್ಚನಾ ಈಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅನೇಕ ನಟಿಯರು ಮದುವೆ ಆದ ಕಾರಣದಿಂದಲೋ, ಅವಕಾಶ ಇಲ್ಲ ಎಂಬ ಕಾರಣದಿಂದಲೋ ತೆರೆಮರೆಗೆ ಸರಿದಿದ್ದಾರೆ. ಆದರೆ ಅರ್ಚನಾ ವಿಚಾರದಲ್ಲಿ ಆಗಿದ್ದೇ ಬೇರೆ. ಪೂರ್ತಿ ಸ್ಟೋರಿಗೆ ಇಲ್ಲಿ ಒತ್ತಿ.