logo
ಕನ್ನಡ ಸುದ್ದಿ  /  ಮನರಂಜನೆ  /  Sara Ali Khan: ಮಹಾಕಾಲನಿಗೆ ತೋರುವ ಭಕ್ತಿ ಅಜ್ಮೀರ್‌ ದರ್ಗಾದಲ್ಲೂ ಇರಲಿದೆ; ಟ್ರೋಲ್ ಮಾಡಿದವರಿಗೆ ಸಾರಾ ಅಲಿ ಖಾನ್ ತಿರುಗೇಟು

Sara Ali Khan: ಮಹಾಕಾಲನಿಗೆ ತೋರುವ ಭಕ್ತಿ ಅಜ್ಮೀರ್‌ ದರ್ಗಾದಲ್ಲೂ ಇರಲಿದೆ; ಟ್ರೋಲ್ ಮಾಡಿದವರಿಗೆ ಸಾರಾ ಅಲಿ ಖಾನ್ ತಿರುಗೇಟು

Jun 02, 2023 06:34 AM IST

ಮಹಾಕಾಲನಿಗೆ ತೋರುವ ಭಕ್ತಿ ಅಜ್ಮೀರ್‌ ದರ್ಗಾದಲ್ಲೂ ಇರಲಿದೆ; ದೇಗುಲಕ್ಕೆ ತೆರಳಿ ಟ್ರೋಲ್ ಮಾಡಿದವರಿಗೆ ಸಾರಾ ಅಲಿ ಖಾನ್ ತಿರುಗೇಟು

    • ಬಾಲಿವುಡ್‌ ನಟಿ ಸಾರಾ ಅಲಿಖಾನ್‌, ಉಜ್ಜೈನಿಯ ಮಹಾಕಾಲ ದೇಗುಲಕ್ಕೆ ತೆರಳಿದ್ದಕ್ಕೆ ಟ್ರೋಲ್‌ ಆಗಿದ್ದಾರೆ. ಆ ಟೀಕೆಗಳಿಗೂ ಖಡಕ್‌ ಉತ್ತರವನ್ನೂ ನೀಡಿದ್ದಾರೆ.
ಮಹಾಕಾಲನಿಗೆ ತೋರುವ ಭಕ್ತಿ ಅಜ್ಮೀರ್‌ ದರ್ಗಾದಲ್ಲೂ ಇರಲಿದೆ; ದೇಗುಲಕ್ಕೆ ತೆರಳಿ ಟ್ರೋಲ್ ಮಾಡಿದವರಿಗೆ ಸಾರಾ ಅಲಿ ಖಾನ್ ತಿರುಗೇಟು
ಮಹಾಕಾಲನಿಗೆ ತೋರುವ ಭಕ್ತಿ ಅಜ್ಮೀರ್‌ ದರ್ಗಾದಲ್ಲೂ ಇರಲಿದೆ; ದೇಗುಲಕ್ಕೆ ತೆರಳಿ ಟ್ರೋಲ್ ಮಾಡಿದವರಿಗೆ ಸಾರಾ ಅಲಿ ಖಾನ್ ತಿರುಗೇಟು

Sara Ali Khan: ಹಿಂದೂ ತಾಯಿ ಅಮೃತಾ ಮತ್ತು ಮುಸ್ಲಿಂ ತಂದೆ ಸೈಫ್‌ ಅಲಿಖಾನ್‌ಗೆ ಜನಿಸಿರುವ ಬಾಲಿವುಡ್‌ನ ಸ್ಟಾರ್‌ ಕುಟುಂಬದ ಕುಡಿ ಸಾರಾ ಅಲಿಖಾನ್‌ ಎರಡೂ ಧಾರ್ಮಿಕ ಭಕ್ತಿಗೆ ತಲೆಬಾಗುತ್ತಾರೆ. ಆಗಾಗ ಹಿಂದೂ ದೇವಸ್ಥಾನಗಳಿಗೆ ತೆರಳಿ ಪೂಜೆಯನ್ನು ಸಲ್ಲಿಸುವ ಸಾರಾ, ಮುಸ್ಲಿಂ ಸಂಪ್ರದಾಯ, ಆಚರಣೆಯನ್ನೂ ಪಾಲಿಸುತ್ತಾರೆ. ಇತ್ತೀಚೆಗಷ್ಟೇ ಸಾರಾ, ಜಾನ್ವಿ ಕಪೂರ್‌ ಜತೆಗೆ ಕೇದಾರನಾಥನ ದರ್ಶನಕ್ಕೂ ತೆರಳಿ, ಶಿವನ ದರ್ಶನ ಪಡೆದು ಬಂದಿದ್ದರು.

ಟ್ರೆಂಡಿಂಗ್​ ಸುದ್ದಿ

Deepfake: ತಲೆ ಆಲಿಯಾ ಭಟ್‌ರದ್ದು, ದೇಹ ಯಾರದ್ದು? ಆಲಿಯಾ ಭಟ್‌ರ ಮತ್ತೊಂದು ಡೀಫ್‌ಫೇಕ್‌ ವಿಡಿಯೋ ವೈರಲ್‌, ಅಸಲಿ- ನಕಲಿ ವಿಡಿಯೋ ನೋಡಿ

ದ ಸೂಟ್‌ ಕನ್ನಡ ಸಿನಿಮಾ ಮೇ 17ರಂದು ಬಿಡುಗಡೆ; ಟ್ರೇಲರ್‌ ನೋಡಿ ಖುಷಿಪಟ್ಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Choo Mantar: ಶರಣ್‌ ಲಕ್‌ ಬದಲಾಯಿಸಬಹುದೇ ಛೂ ಮಂತರ್‌? ಬಹುನಿರೀಕ್ಷಿತ ಸಿನಿಮಾ ರಿಲೀಸ್‌ ಮುಂದೂಡಿಕೆ

Tejasswi Prakash: ಉರ್ಫಿ ಹಾಕುವ ಬಟ್ಟೆಗಳು ಇದಕ್ಕಿಂತಲೂ ಚೆನ್ನಾಗಿರುತ್ವೆ: ತೇಜಸ್ವಿ ಪ್ರಕಾಶ್‌ ಎದೆಗಾರಿಕೆಗೆ ನೆಟ್ಟಿಗರಿಂದ ಕ್ಲಾಸ್‌

ಇದೆಲ್ಲದರ ನಡುವೆ ಕ್ರಿಕೆಟರ್‌ ಶುಭ್ಮನ್‌ ಗಿಲ್‌ ವಿಚಾರದಲ್ಲಿಯೂ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದ ಈ ನಟಿ, ಇದೀಗ ಉಜ್ಜೈನಿಯ ಮಹಾಕಾಲ ದೇವಸ್ಥಾನಕ್ಕೆ ತೆರಳಿದ ವಿಚಾರಕ್ಕೂ ಟ್ರೋಲ್‌ ಆಗಿದ್ದಾರೆ. ಮೇ 31ರಂದು ಉಜ್ಜೈನಿಯ ಮಹಾಕಾಲ ದೇಗುಲಕ್ಕೆ ಹೋದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗರು ಬಗೆಬಗೆ ರೀತಿಯಲ್ಲಿ ನಟಿಯ ಬಗ್ಗೆ ಪರ ವಿರೋಧ ಚರ್ಚೆ ಮಾಡಿದ್ದಾರೆ.

ಇದೇ ಭಕ್ತಿಯಿಂದ ನಾನು ಅಜ್ಮೀರ್‌ಗೂ ಹೋಗುತ್ತೇನೆ..

ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗುತ್ತಿದ್ದಂತೆ, ಇಂದೋರ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಾ ಅಲಿಖಾನ್‌, ಮಹಾಕಾಳದಲ್ಲಿರುವ ಭಕ್ತಿಯನ್ನು ನಾನು ಅಜ್ಮೀರ್‌ ಷರೀಫ್ ‌ದರ್ಗಾದಲ್ಲಿಯೂ ತೋರಿಸುತ್ತೇನೆ ಎಂದಿದ್ದಾರೆ. "ನಾನು ಇದನ್ನು ಮೊದಲೇ ಹೇಳಿದ್ದೇನೆ. ಇದೀಗ ಮತ್ತೊಮ್ಮೆ ಹೇಳುತ್ತೇನೆ. ನಾನು ಕೆಲಸ ಮಾಡುವುದೇ ಸಾರ್ವಜನಿಕರಿಗಾಗಿ. ಅವರೇ ನನ್ನ ಕೆಲಸ ಮೆಚ್ಚದಿದ್ದರೆ ನನಗೂ ಬೇಸರ ಆಗುತ್ತದೆ" ಎಂದಿದ್ದಾರೆ.

"ನನ್ನ ವೈಯಕ್ತಿಕ ನಂಬಿಕೆಗಳು ನನ್ನದೇ ಆಗಿರುತ್ತವೆ. ನಾನು ಬಾಂಗ್ಲಾ ಸಾಹಿಬ್ ಅಥವಾ ಮಹಾಕಾಲ್‌ಗೆ ಹೋಗುವ ಅದೇ ಭಕ್ತಿಯಿಂದ ಅಜ್ಮೀರ್ ಷರೀಫ್‌ಗೂ ಹೋಗುತ್ತೇನೆ. ನಾನು ಭೇಟಿ ನೀಡುವುದನ್ನು ಮುಂದುವರಿಸುತ್ತೇನೆ. ಜನರು ಏನು ಬೇಕಾದರೂ ಹೇಳಬಹುದು, ನನಗೆ ಯಾವುದೇ ತೊಂದರೆ ಇಲ್ಲ. ನನಗೆ, ಒಂದು ಸ್ಥಳದ ಶಕ್ತಿ ಮುಖ್ಯವಾಗಿದೆ. ನಾನು ಆ ಶಕ್ತಿಯನ್ನು ನಂಬುತ್ತೇನೆ" ಎಂದಿದ್ದಾರೆ.

'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರ ಬಿಡುಗಡೆ

ಸಾರಾ ಮತ್ತು ವಿಕ್ಕಿ ಅಭಿನಯದ 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರ ಇಂದು (ಜೂನ್ 2) ಬಿಡುಗಡೆಯಾಗಲಿದೆ. ಈ ಫ್ಯಾಮಿಲಿ ಡ್ರಾಮಾ ಚಿತ್ರದಲ್ಲಿ ದಂಪತಿಗಳ ಪ್ರೇಮ ಸಂಬಂಧ ಮತ್ತು ವಿಚ್ಛೇದನದ ಸುತ್ತ ಕಥೆ ಹೆಣೆಯಲಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು