ಕ್ರಿಕೆಟಿಗರ ಜತೆ ಬಾಲಿವುಡ್ ನಟಿಯರ ಪ್ರೇಮಪುರಾಣ; ಕೆಲವರ ಪಾಲಿಗೆ ಶುಭವಿವಾಹ, ಉಳಿದವರಿಗೆ ವಿರಹ, ಓದಿ 15 ಸೆಲೆಬ್ರಿಟಿಗಳ ಲವ್ ಸ್ಟೋರಿ
Nov 08, 2023 06:01 PM IST
ಕ್ರಿಕೆಟ್ ಆಟಗಾರರ ಪ್ರೀತಿಗೆ ಬಿದ್ದ ಬಾಲಿವುಡ್ ನಟಿಯರು
- Bollywood Actresses and Cricketers Love: ಶುಭ್ಮನ್ ಸಿಂಗ್ ಗಿಲ್ ಸಾರಾ ಆಲಿ ಖಾನ್, ಕೆಎಲ್ ರಾಹುಲ್ ಆಥಿಯಾ ಶೆಟ್ಟಿ, ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟ್ ಆಟಗಾರರು ಮತ್ತು ಸಿನಿಮಾ ನಟಿಯರ ನಡುವೆ ಪ್ರೀತಿ, ಮದುವೆ, ಡೇಟಿಂಗ್ ಇತ್ಯಾದಿಗಳು ನಡೆದಿವೆ.
ಸಿನಿಮಾ ಮತ್ತು ಕ್ರಿಕೆಟ್ ಭಾರತದ ಅತ್ಯಾಕರ್ಷಕ ಕರಿಯರ್. ಸಿನಿಮಾ ನಟಿಯರಿಗೆ ಕ್ರಿಕೆಟ್ ಆಟಗಾರರ ಮೇಲೆ ಲವ್ ಆಗೋದು, ಕ್ರಿಕೆಟ್ ಆಟಗಾರರಿಗೆ ಸಿನಿಮಾ ನಟಿಯರ ಮೇಲೆ ಕಣ್ಣು ಬೀಳೋದು ಮಾಮೂಲು ಎಂಬಂತಾಗಿದೆ. ಇದೇ ಕಾರಣಕ್ಕೆ ಕ್ರಿಕೆಟ್ ಆಟಗಾರರು ಮತ್ತು ಸಿನಿಮಾ ನಟಿಯರ ನಡುವೆ ಡೇಟಿಂಗ್ ನಡೆಯುತ್ತಿದೆ. ಈ ರೀತಿ ಡೇಟಿಂಗ್ ಮಾಡಿರುವವರಲ್ಲಿ ಕೆಲವರ ನಡುವೆ ವಿವಾಹವಾಗಿದೆ, ಇನ್ನು ಕೆಲವರು ಮದುವೆ ತನಕ ಹೋಗಿಲ್ಲ. ಇನ್ನು ಕೆಲವರು ಬ್ರೇಕಪ್ ಕೂಡ ಮಾಡಿಕೊಂಡಿದ್ದಾರೆ.
ಶುಭ್ಮನ್ ಸಿಂಗ್ ಗಿಲ್ ಮತ್ತು ಸಾರಾ ಆಲಿ ಖಾನ್
ಸಾರಾ ಆಲಿ ಖಾನ್ ಮತ್ತು ಶುಭ್ಮನ್ ಗಿಲ್ ನಡುವೆ ಸಮ್‌ಥಿಂಗ್ ಇದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಮೊದಲ ಬಾರಿಗೆ ದುಬೈನಲ್ಲಿ ಆಗಸ್ಟ್ 2022ರಲ್ಲಿ ಜತೆಯಾಗಿ ಕಾಣಿಸಿದ್ದರು. ಶುಭ್ಮನ್ ಸಿಂಗ್ ಗಿಲ್ ಮತ್ತು ಸಾರಾ ಆಲಿ ಖಾನ್ ತಮ್ಮ ಪ್ರೀತಿಯ ಕುರಿತು ಬಹಿರಂಗವಾಗಿ ಹೇಳಿಕೊಂಡಿಲ್ಲ, ನಿರಾಕರಿಸಿಯೂ ಇಲ್ಲ.
ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ
ಕರ್ನಾಟಕದ ಕೆಎಲ್ ರಾಹುಲ್ ಮತ್ತು ಕರಾವಳಿಯ ಬೆಡಗಿ ಆಥಿಯಾ ಶೆಟ್ಟಿ ನಡುವೆ ಪ್ರೀತಿ ಮೊಳಕೆಯೊಡೆದು ಮದುವೆಯೂ ಆಗಿದ್ದಾರೆ. ಆಥಿಯಾ ಶೆಟ್ಟಿ ಬಾಲಿವುಡ್‌ನ ಸುನಿಲ್ ಶೆಟ್ಟಿಯ ಸುಪುತ್ರಿ. ಈ ವರ್ಷದ ಜನವರಿಯಲ್ಲಿ ಇವರ ವಿವಾಹ ನಡೆದಿತ್ತು.
ಎಲ್ಲಿ ಅವ್ರಾಮ್ ಮತ್ತು ಹಾರ್ದಿಕ್ ಪಾಂಡ್ಯ
ಇವರಿಬ್ಬರ ನಡುವೆಯೂ ಸಂಬಂಧ ಇದೆ ಎಂದು ಗುಲ್ಲಾಗಿತ್ತು. ಆದರೆ, ಇವರಿಬ್ಬರು ಇದನ್ನು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ, ಹಾರ್ದಿಕ್ ಪಾಂಡ್ಯ ನಟಿ ನಟಾಸಾರನ್ನು ವಿವಾಹವಾಗಿದ್ದರು. ಇದೀಗ ಇವರಿಗೆ ಮುದ್ದಾದ ಮಗುವೂ ಇದೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ
ಜನಪ್ರಿಯ ನಟಿ, ನಿರ್ಮಾಪಕಿ, ಉದ್ಯಮಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಡೇಟಿಂಗ್ ಗುಟ್ಟಾಗಿ ಉಳಿದಿರಲಿಲ್ಲ. ಸುಮಾರು ನಾಲ್ಕು ವರ್ಷ ಡೇಟಿಂಗ್ ಮಾಡಿದ ಬಳಿಕ ಇವರಿಬ್ಬರು ವಿವಾಹವಾಗಿದ್ದರು. ಇವರಿಗೆ ಮುದ್ದಾದ ಹೆಣ್ಣು ಮಗುವಿದೆ.
ಗೀತಾ ಬಸ್ರಾ ಮತ್ತು ಹರ್ಭಜನ್ ಸಿಂಗ್
ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಬುಜ್ಜಿಗೂ ಬಾಲಿವುಡ್ ನಟಿ ಗೀತಾ ಬಸ್ರಾ ಜತೆ ಲವ್ ಇತ್ತು. ಇವರಿಬ್ಬರೂ ಇದನ್ನು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. 2016ರ ಜುಲೈ ತಿಂಗಳಿನಲ್ಲಿ ಇವರು ವಿವಾಹವಾದರು. ಇವರಿಬ್ಬರಿಗೆ ಈಗ ಇಬ್ಬರು ಮಕ್ಕಳು.
ಯುವರಾಜ್ ಸಿಂಗ್ ಮತ್ತು ಹಝೀಲ್ ಕೀಚ್
ಇವರಿಬ್ಬರದ್ದು ಫೇಸ್‌ಬುಕ್ ಲವ್ ಅಂತೆ. ಮ್ಯೂಚುಯಲ್ ಫ್ರೆಂಡ್ ಮೂಲಕ ಪರಿಚಯವಾದ ನಟಿ ಹಝೀಲ್‌ರನ್ನು 2016ರಲ್ಲಿ ಯುವರಾಜ್ ಸಿಂಗ್ ವಿವಾಹವಾದರು. ಯುವರಾಜ್ ಸಿಂಗ್ ಅವರು ಹಝೀಲ್‌ಗೆ ಮುನ್ನ ದೀಪಿಕಾ ಪಡುಕೋಣೆ ಮತ್ತು ಕಿಮ್ ಶರ್ಮಾರ ಜತೆಯೂ ಡೇಟಿಂಗ್ ಮಾಡಿದ ಅನುಭವ ಹೊಂದಿದ್ದಾರೆ.
ಝಹೀರ್ ಖಾನ್ ಮತ್ತು ಸಾಗರಿಕ ಘಟ್ಗೆ
ಶಾರೂಖ್ ಖಾನ್ ಸಿನಿಮಾದಲ್ಲಿ ನಟಿಸಿರುವ ಸಾಗರಿಕಾಗೂ ಝಹೀರ್ ಖಾನ್‌ಗೂ ಲವ್ ಇತ್ತು. ಈ ಪ್ರೀತಿ ಡೀಪ್ ಆಗಿ 2017ರಲ್ಲಿ ವಿವಾಹವಾದರು.
ನಗ್ಮಾ ಮತ್ತು ಸೌರವ್ ಗಂಗೂಲಿ
ನಟಿ ನಂದಿತಾ ಅರವಿಂದ್ ಮೊರಾರ್ಜಿ (ನಗ್ಮಾ) ಈಗ ಸಿನಿಮಾ ಬಿಟ್ಟು ರಾಜಕೀಯದಲ್ಲಿದ್ದಾರೆ. ಈ ಮಾಜಿ ನಟಿ ಸೌರವ್ ಗಂಗೂಲಿ ಜತೆ ಪ್ರೀತಿಗೆ ಬಿದ್ದು ವಿವಾಹವಾದರು.
ಕಿಮ್ ಶರ್ಮಾ ಮತ್ತು ಯುವರಾಜ್ ಸಿಂಗ್
ಬಾಲಿವುಡ್ ನಟಿ ಕಿಮ್ ಶರ್ಮಾಗೂ ಯುವರಾಜ್ ಸಿಂಗ್‌ಗೂ ಲವ್ ಇತ್ತು. ಹಲವು ವರ್ಷಗಳ ಕಾಲ ಇವರು ಪ್ರೀತಿಸಿದ್ದರು. ಯುವರಾಜ್ ಸಿಂಗ್ ಹೃದಯ ಕದ್ದ ಮೊದಲ ಬಾಲಿವುಡ್ ನಟಿ ಇವರೇ. ಆದರೆ, ಯುವರಾಜ್ ಸಿಂಗ್ ಅವರು ಬಳಿಕ ದೀಪಿಕಾ ಪಡುಕೋಣೆಯನ್ನು ವಿವಾಹವಾದರು. ಈಗಲೂ ಇವರಿಬ್ಬರು ಒಳ್ಳೆಯ ಫ್ರೆಂಡ್ಸ್ ಅಂತೆ.
ಇಶಾ ಶ್ರಾವಣಿ ಮತ್ತು ಝಹೀರ್ ಖಾನ್
ಸಾಗರಿಕಾರನ್ನು ವಿವಾಹವಾಗುವ ಮುನ್ನ ಝಹೀರ್ ಖಾನ್‌ಗೆ ಇಶಾ ಶ್ರಾವಣಿ ಜತೆ ಲವ್ ಇತ್ತು ಎಂದು ವರದಿಗಳು ತಿಳಿಸಿವೆ. ಇವರಿಬ್ಬರು ಎಂಟು ವರ್ಷಗಳ ಕಾಲ ಡೇಟಿಂಗ್ ಮಾಡಿದ್ರು ಅಂತೆ.
ಇವರಷ್ಟೇ ಅಲ್ಲ, ನೀನಾ ಗುಪ್‌ತಾ ಮತ್ತು ವಿವಿಯನ್ ರಿಚರ್ಡ್ಸ್, ಸಂಗೀತಾ ಬಿಜಲಾನಿ ಮತ್ತು ಅಝರುದ್ದೀನ್, ಶರ್ಮಿಲಾ ಠಾಗೋರ್ ಮತ್ತು ಮನ್ಸೂರ್ ಆಲಿ ಖಾನ್, ಝೀನತ್ ಅಮಾನ್ ಮತ್ತು ಇಮ್ರಾನ್ ಖಾನ್ ಸೇರಿದಂತೆ ಹಲವು ಬಾಲಿವುಡ್ ನಟಿಯರು ಮತ್ತು ಕ್ರಿಕೆಟಿಗರು ಲವ್‌ಗೆ ಬಿದ್ದಿದ್ದರು. ಕೆಲವರು ತಮ್ಮ ಪ್ರೀತಿಯನ್ನು ಡೇಟಿಂಗ್‌ಗೆ ಸೀಮಿತಗೊಳಿಸಿದರೆ, ಇನ್ನು ಕೆಲವರು ತಮ್ಮ ಪ್ರೀತಿಯನ್ನು ಮದುವೆಯವರೆಗೂ ಕೊಂಡೊಯ್ದಿದ್ದಾರೆ.