Urfi Javed: ಇದು ತುಂಬಾ ನೋವಿನ ವಿಷಯ; ಐ ಫಿಲ್ಲರ್ ಬಳಸಿ ನನ್ನ ಮುಖವೇ ಹಾಳಾಯ್ತು ಎಂದು ಅಳಲು ತೋಡಿಕೊಂಡ ಉರ್ಫಿ ಜಾವೇದ್
Jan 09, 2024 07:45 PM IST
ಉರ್ಫಿ ಜಾವೇದ್ ಹಂಚಿಕೊಂಡಿರುವ ಸೆಲ್ಫಿ
- Bollywood News: ಅಂಡರ್ ಐ ಫಿಲ್ಲರ್ಗಳನ್ನು ಆರಿಸಿಕೊಳ್ಳುವಾಗ ತುಂಬಾ ಎಚ್ಚರವಾಗಿರಿ ಎಂದು ತಮ್ಮ ಅಭಿಮಾನಿಗಳು ಹಾಗೂ ಫಾಲೋವರ್ಗಳಿಗೆ ಉರ್ಫಿ ಸಲಹೆ ನೀಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಇಲ್ಲಿ ಓದಿ.
ಸದಾ ಭಿನ್ನ ವಿಭಿನ್ನ ಉಡುಗೆ ತೊಟ್ಟು ಸುದ್ದಿಯಾಗುವ ಉರ್ಫಿ ಜಾವೇದ್, ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ ಈಗ ಇವರು ಸುದ್ದಿಯಲ್ಲಿರುವುದು ಅವರ ಹೊಸ ಅವತಾರದಿಂದಲ್ಲ. ಬದಲಾಗಿ ತಮ್ಮ ಅಭಿಮಾನಿಗಳಿಗೆ ನೀಡಿದ ಹೊಸ ಸಲಹೆಯಿಂದ. ಹೊಸ ಮೇಕಪ್ ಐಟಮ್ ಬಳಸಲು ಶುರು ಮಾಡಿ ಉರ್ಫಿ ತಮ್ಮ ಸೌಂದರ್ಯವನ್ನು ಹಾಳು ಮಾಡಿಕೊಂಡಿದ್ದಾರೆ. ಇದನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ.
ಅಂಡರ್ ಐ ಫಿಲ್ಲರ್ಗಳನ್ನು ಆರಿಸಿಕೊಳ್ಳುವಾಗ ತುಂಬಾ ಎಚ್ಚರವಾಗಿರಿ ಎಂದು ತಮ್ಮ ಅಭಿಮಾನಿಗಳು ಹಾಗೂ ಫಾಲೋವರ್ಗಳಿಗೆ ಉರ್ಫಿ ತಿಳಿಸಿದ್ದಾರೆ. ಭಾನುವಾರ ಇನ್ಸ್ಟಾಗ್ರಾಮ್ ಸ್ಟೋರಿಯೊಂದನ್ನು ಹಂಚಿಕೊಂಡಿರುವ ಉರ್ಫಿ, ಐ ಫಿಲ್ಲರ್ ಬಳಸಿದ ಕೆಲವು ದಿನಗಳ ನಂತರ ತಮ್ಮ ಮುಖದ ಮೇಲಾದ ಬದಲಾವಣೆಯ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಮೇಕಪ್ ಪ್ರಿಯ ನಾರಿಯರಿಗೆ ಅಂಡರ್ ಐ ಫಿಲ್ಲರ್ ಕುರಿತು ಖಂಡಿತಾ ತಿಳಿದಿರುತ್ತದೆ. ಕಣ್ಣಿನ ಕೆಳಭಾಗದಲ್ಲಿ ಕಪ್ಪುಕಲೆ ಅಥವಾ ಡಾರ್ಕ್ ಸರ್ಕಲ್ಗಳನ್ನು ಮೇಕಪ್ ಮೂಲಕ ಹೋಗಲಾಡಿಸಲು ಈ ಸೌಂದರ್ಯ ವರ್ಧಕ ಬಳಸಲಾಗುತ್ತದೆ.
ಉರ್ಫಿ ಸೆಲ್ಫಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಹಸಿರು ಬಣ್ಣದ ಪ್ರಿಂಟೆಡ್ ಉಡುಪು ಧರಿಸಿರುವ ಅವರು, ತಮ್ಮ ಫೋಟೋದೊಂದಿಗೆ ಹೀಗೆ ಬರೆದುಕೊಂಡಿದ್ದಾರೆ. “ಇದನ್ನು ಮತ್ತೊಮ್ಮೆ ಹೇಳುತ್ತೇನೆ. ಕಣ್ಣುಗಳ ಕೆಳಗೆ ಐ ಫೀಲ್ಲರ್ ಹಚ್ಚುವ ಮೊದಲು ಬಹಳ ಜಾಗರೂಕರಾಗಿರಿ. ನನ್ನ ಕಣ್ಣುಗಳ ಕೆಳಗೆ ಊದಿಕೊಂಡಿದೆ,” ಎಂದು ಅಳಲು ತೋಡಿಕೊಂಡಿದ್ದಾರೆ.
ಸದ್ಯ ನಾನು ನಾನು ನನ್ನ ಫಿಲ್ಲರ್ಗಳನ್ನು ಬಳಸುತ್ತಿಲ್ಲ. ಇರುವುದನ್ನು ಎಸೆದಿದ್ದೇನೆ. ಸದ್ಯ ಇದೇ ಉತ್ತಮ ಆಯ್ಕೆ. ಅತ್ಯಂತ ನೋವಿನ ವಿಷಯವೆಂದರೆ ಫಿಲ್ಲರ್ ಅನ್ನು ಬೇಕೆಂದೇ ಕರಗಿಸಿ ಮುಗಿಸುವುದು ಎಂದು ಉರ್ಫಿ ಬೇಸರದಿಂದ ಹೇಳಿಕೊಂಡಿದ್ದಾರೆ.
ಕಳೆದ ವಾರವಷ್ಟೇ ಉರ್ಫಿ ತಮ್ಮ ಫೋಟೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. "ನನ್ನ ಡಾರ್ಕ್ ಸರ್ಕಲ್ಗಳಿದಾಗಿ ನನ್ನನ್ನು ತುಂಬಾ ಜನ ಟ್ರೋಲ್ ಮಾಡಿದ್ದಾರೆ. ಹೀಗಾಗಿ ನಾನು ಐ ಫಿಲ್ಲರ್ಗಳನ್ನು ಖರೀದಿಸಿದ್ದೆ. ಈಗ ನನ್ನ ಕಣ್ಣುಗಳ ಕೆಳಭಾಗ ವಿಚಿತ್ರವಾಗಿ ಕಾಣುತ್ತಿದೆ. ಮೇಕಪ್ ಹಚ್ಚಿದರೂ ಕೂಡ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ಗಳನ್ನು ಮರೆಮಾಡಲು ಸಾಧ್ಯವಿಲ್ಲ ಎಂದು ಉರ್ಫಿ ಗೋಳಾಡಿದ್ದರು.
ಉರ್ಫಿ ಜಾವೇದ್ ನಾನಾ ಅವತಾರಗಳಲ್ಲಿ ಇದೂ ಒಂದು, ಇದೇನ ಸಭ್ಯತೆ ಇದೇನ ಸಂಸ್ಕೃತಿ ಎನ್ನುತ್ತಾ ಬೇಸರಗೊಂಡ ನೆಟಿಜನ್ಸ್
ಉರ್ಫಿ ಜಾವೇದ್ ಹೆಸರು ಕೇಳುತ್ತಿದ್ದಂತೆ ನೆನಪಿಗೆ ಬರುವುದು ಅವರ ಡ್ರೆಸ್. ಹಿಂದಿಯ ಬಿಗ್ ಬಾಸ್ ಒಟಿಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಉರ್ಪೀ ಜಾವೇದ್ ಅಲ್ಲಿಂದ ಹೊರ ಬರುತ್ತಿದ್ದಂತೆ ವಿಭಿನ್ನ ವಿಚಿತ್ರ ಡ್ರೆಸ್ಗಳ ಮೂಲಕವೇ ಗಮನ ಸೆಳೆಯಲು ಆರಂಭಿಸಿದರು. ಪ್ರತಿದಿನ ಒಂದಲ್ಲಾ ಒಂದು ವಿಚಿತ್ರ ಅವತಾರದೊಂದಿಗೆ ಉರ್ಫಿ ನೋಡುಗರ ಗಮನ ಸೆಳೆಯುತ್ತಿದ್ದಾರೆ. ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಅವಕಾಶಗಳಿಲ್ಲ. ಇಷ್ಟಾದರೂ ಉರ್ಫಿ ಜಾವೇದ್ ತಮ್ಮ ಕಾಸ್ಟ್ಯೂಮ್ಗಳಿಗಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದಾರೆ. ಉರ್ಫಿ ಪ್ರತಿ ಬಾರಿ ಹೊಸ ಹೊಸ ಕಾಸ್ಟ್ಯೂಮ್ನಲ್ಲಿ ಕಾಣಿಸಿಕೊಂಡು ಟ್ರೋಲರ್ಗಳಿಗೆ ಆಹಾರವಾಗುತ್ತಿದ್ದಾರೆ. 2 ದಿನಗಳ ಹಿಂದೆ ಉರ್ಫಿ ಮತ್ತೆ ನಯಾ ವೇಷದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಆಕೆಯ ವೇಷ ನೋಡಿ ಇನ್ನಷ್ಟು ಟ್ರೋಲ್ ಆಗಿದ್ದಾರೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ