logo
ಕನ್ನಡ ಸುದ್ದಿ  /  ಮನರಂಜನೆ  /  Darshan Cricket: ಸಿಸಿಎಲ್‌, ಕೆಸಿಸಿ ಆಡದಿದ್ರೇನಂತೆ , ಮಡಿಕೇರಿಯಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್‌ ಆಡಿದ ದರ್ಶನ್‌.. ವಿಡಿಯೋ ವೈರಲ್‌

Darshan Cricket: ಸಿಸಿಎಲ್‌, ಕೆಸಿಸಿ ಆಡದಿದ್ರೇನಂತೆ , ಮಡಿಕೇರಿಯಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್‌ ಆಡಿದ ದರ್ಶನ್‌.. ವಿಡಿಯೋ ವೈರಲ್‌

HT Kannada Desk HT Kannada

Feb 26, 2023 12:15 PM IST

google News

ಮಡಿಕೇರಿ ಟ್ರಿಪ್‌ನಲ್ಲಿ ದರ್ಶನ್‌ ಕ್ರಿಕೆಟ್‌ ಆಟ

    • ಇಷ್ಟು ದಿನಗಳ ಕಾಲ ಕ್ರಾಂತಿ ಚಿತ್ರೀಕರಣ, ಆಡಿಯೋ ರಿಲೀಸ್‌, ಪ್ರಮೋಷನ್‌, ಸಕ್ಸಸ್‌ ಮೀಟ್‌ನಲ್ಲಿ ಬ್ಯುಸಿ ಇದ್ದ ದರ್ಶನ್‌, ಈಗ ಮಡಿಕೇರಿಗೆ ತೆರಳಿ ಸ್ನೇಹಿತರೊಂದಿಗೆ ಕಾಲ ಕಳೆದಿದ್ದಾರೆ. ಅಲ್ಲಿ ತಾವು ಉಳಿದುಕೊಂಡಿದ್ದ ಸ್ಥಳದ ಸಮೀಪ ಆತ್ಮೀಯರೊಂದಿಗೆ ಕ್ರಿಕೆಟ್‌ ಆಡಿದ್ದಾರೆ. ಪುಟ್ಟ ಮಕ್ಕಳಂತೆ ಆಟದಲ್ಲಿ ಸ್ನೇಹಿತರೊಂದಿಗೆ ಪ್ರೀತಿಯ ಜಗಳ ಮಾಡಿದ್ದಾರೆ.
ಮಡಿಕೇರಿ ಟ್ರಿಪ್‌ನಲ್ಲಿ ದರ್ಶನ್‌ ಕ್ರಿಕೆಟ್‌ ಆಟ
ಮಡಿಕೇರಿ ಟ್ರಿಪ್‌ನಲ್ಲಿ ದರ್ಶನ್‌ ಕ್ರಿಕೆಟ್‌ ಆಟ (PC: Darshan Thoogudeepa Fans - CSDSK)

ಒಂದೆಡೆ ಸಿನಿಮಾ ಶೂಟಿಂಗ್‌ ಜೊತೆ ಜೊತೆಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಕ್ರಿಕೆಟ್‌ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಫೆಬ್ರವರಿ 18 ರಿಂದ ಸಿಸಿಎಲ್‌ ಮ್ಯಾಚ್‌ ಆರಂಭವಾಗಿದ್ದರೆ , ಇದೇ ತಿಂಗಳು 25, 26 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಮೂರನೇ ಸೀಸನ್‌ ಮುಗಿದಿದೆ. ಈ ಮ್ಯಾಚ್‌ನಲ್ಲಿ ಡಾಲಿ ಧನಂಜಯ್‌ ನಾಯಕತ್ವದ ಗಂಗಾ ವಾರಿಯರ್ಸ್‌ ಗೆಲುವು ಸಾಧಿಸಿದೆ.

ಇನ್ನು ಈ ಬಾರಿ ಕೆಸಿಸಿ ಮ್ಯಾಚ್‌ನಲ್ಲಿ ಶಿವರಾಜ್‌ಕುಮಾರ್‌, ಸುದೀಪ್‌, ಉಪೇಂದ್ರ, ಗೋಲ್ಡನ್‌ ಸ್ಟಾರ್‌ ಗಣೇಶ್‌, ಡಾರ್ಲಿಂಗ್‌ ಕೃಷ್ಣ ಸೇರಿ ಅನೇಕ ತಾರೆಯರು ಭಾಗವಹಿಸಿದ್ದಾರೆ. ಆದರೆ ದರ್ಶನ್‌ ಮಾತ್ರ ಈ ಬಾರಿ ಕೂಡಾ ಕೆಸಿಸಿ ಹಾಗೂ ಸಿಸಿಎಲ್‌ನಿಂದ ದೂರ ಉಳಿದಿದ್ದಾರೆ. ಇನ್ನು ಶುಕ್ರವಾರ ಹಾಗೂ ಶನಿವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದರ್ಶನ್‌ ಕೂಡಾ ಕ್ರಿಕೆಟ್‌ ಆಡುತ್ತಿರಬಹುದು ಎಂದು ನೋಡಲು ಬಂದ ಅಭಿಮಾನಿಗಳಿಗೆ ನಿರಾಶೆ ಉಂಟಾಗಿತ್ತು. ಆದರೂ ಡಿ ಬಾಸ್‌ ಅಭಿಮಾನಿಗಳು ಸ್ಟೇಡಿಯಂನಲ್ಲಿ ಡಿ ಬಾಸ್‌, ಎಂದು ಘೋಷಣೆ ಕೂಗಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮತ್ತೊಂದೆಡೆ ಚಾಲೆಂಜಿಂಗ್‌ ಸ್ಟಾರ್‌, ಮಡಿಕೇರಿಯಲ್ಲಿ ಕ್ರಿಕೆಟ್‌ ಆಡುತ್ತಿದ್ದಾರೆ.

ಇಷ್ಟು ದಿನಗಳ ಕಾಲ ಕ್ರಾಂತಿ ಚಿತ್ರೀಕರಣ, ಆಡಿಯೋ ರಿಲೀಸ್‌, ಪ್ರಮೋಷನ್‌, ಸಕ್ಸಸ್‌ ಮೀಟ್‌ನಲ್ಲಿ ಬ್ಯುಸಿ ಇದ್ದ ದರ್ಶನ್‌, ಈಗ ಮಡಿಕೇರಿಗೆ ತೆರಳಿ ಸ್ನೇಹಿತರೊಂದಿಗೆ ಕಾಲ ಕಳೆದಿದ್ದಾರೆ. ಅಲ್ಲಿ ತಾವು ಉಳಿದುಕೊಂಡಿದ್ದ ಸ್ಥಳದ ಸಮೀಪ ಆತ್ಮೀಯರೊಂದಿಗೆ ಕ್ರಿಕೆಟ್‌ ಆಡಿದ್ದಾರೆ. ಪುಟ್ಟ ಮಕ್ಕಳಂತೆ ಆಟದಲ್ಲಿ ಸ್ನೇಹಿತರೊಂದಿಗೆ ಪ್ರೀತಿಯ ಜಗಳ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸ್ಟೇಡಿಯಂನಲ್ಲಿ ದರ್ಶನ್‌ ಆಟವನ್ನು ನೋಡದೆ ಬೇಸರ ವ್ಯಕ್ತಪಡಿಸಿದ್ದ ಅಭಿಮಾನಿಗಳು ಈಗ ಅವರ ಕ್ರಿಕೆಟ್‌ ಆಟ ನೋಡಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಹುಟ್ಟುಹಬ್ಬದಂದು ಘೋಷಣೆಯಾದ 'ಕಾಟೇರ'

ಫೆಬ್ರವರಿ 16 ರಂದು ದರ್ಶನ್‌ ಹುಟ್ಟುಹಬ್ಬದ ವಿಶೇಷವಾಗಿ 'ಕಾಟೇರ' ಸಿನಿಮಾ ಘೋಷಣೆ ಆಗಿದೆ. 'ರಾಬರ್ಟ್‌' ಚಿತ್ರದ ನಂತರ ಮತ್ತೆ ತರುಣ್‌ ಸುಧೀರ್‌ ಹಾಗೂ ದರ್ಶನ್‌ ಒಂದಾಗುತ್ತಿದ್ದಾರೆ. ಕಳೆದ ವರ್ಷ ಈ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ರವಿಶಂಕರ್‌ ಗುರೂಜಿ, ಈ ಚಿತ್ರಕ್ಕೆ ಶುಭ ಹಾರೈಸಿದ್ದರು. ಮಾಲಾಶ್ರೀ ಪುತ್ರಿ ರಾಧನಾ ರಾಮ್‌ ಈ ಚಿತ್ರದಲ್ಲಿ ದರ್ಶನ್‌ ಜೊತೆಯಾಗಿ ನಟಿಸುತ್ತಿರುವುದು ವಿಶೇಷ. ಈ ಚಿತ್ರದ ಶೀರ್ಷಿಕೆಗೆ ಅನೇಕ ಹೆಸರು ಕೇಳಿಬಂದಿತ್ತು. ಆದರೆ ಕೊನೆಗೆ 'ಕಾಟೇರ' ಹೆಸರನ್ನು ಫೈನಲ್‌ ಮಾಡಲಾಗಿದೆ. ಇದು ದರ್ಶನ್‌ ಅಭಿನಯದ 56ನೇ ಸಿನಿಮಾ ಆಗಿದೆ.

ಆದರೆ ಇದೀಗ ಅವರು ಮುಂದಿನ ನಾಲ್ಕು ಸಿನಿಮಾಗಳು ಕೂಡಾ ಬಹುತೇಕ ಓಕೆ ಆಗಿದೆ ಎನ್ನಲಾಗುತ್ತಿದೆ. ಅಂದರೆ 57 , 58, 59 ಹಾಗೂ 60ನೇ ಸಿನಿಮಾ ಮಾತುಕತೆ ಕೂಡಾ ಆಗಿದ್ದು ನಿರ್ಮಾಪಕರು, ನಿರ್ದೇಶಕರು ಕೂಡಾ ಫೈನಲ್‌ ಆಗಿದ್ದಾರಂತೆ. ಇದಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ದರ್ಶನ್‌ ಅಭಿನಯದ 57ನೇ ಸಿನಿಮಾವನ್ನು ಮಿಲನ ಪ್ರಕಾಶ್‌ ನಿರ್ದೇಶಿಸುತ್ತಿದ್ದಾರಂತೆ. ಈ ಚಿತ್ರದ ನಿರ್ಮಾಪಕರ ಬಗ್ಗೆ ಮಾಹಿತಿ ಇಲ್ಲ. ಅಷ್ಟೇ ಅಲ್ಲ 58ನೇ ಸಿನಿಮಾವನ್ನು ಕೂಡಾ ತರುಣ್‌ ಸುಧೀರ್‌ ಅವರೇ ಡೈರೆಕ್ಷನ್‌ ಮಾಡ್ತಾರಂತೆ. ಈ ಚಿತ್ರಕ್ಕೆ ದರ್ಶನ್‌ ಆಪ್ತ ಗೆಳೆಯ ಸಚ್ಚಿದಾನಂದ ಇಂಡಿವಾಳು ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ.

ಹಾಗೇ 59ನೇ ಸಿನಿಮಾವನ್ನು ಧ್ರುವ ದಾಸ್‌ ನಿರ್ಮಾಣ ಮಾಡಲಿದ್ದಾರಂತೆ. ಆದರೆ ಈ ಚಿತ್ರದ ನಿರ್ದೇಶಕ ಯಾರು ಅನ್ನೋದು ಗೊತ್ತಿಲ್ಲ. ಇನ್ನು 60ನೇ ಸಿನಿಮಾ ಸೌಂದರ್ಯ ಜಗದೀಶ್‌ ನಿರ್ಮಾಣದಲ್ಲಿ ಮೂಡಿಬರಲಿದೆಯಂತೆ. ಒಟ್ಟಿನಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾಗಳಿಗೆ ಸಂಬಂಧಿಸಿದಂತೆ ಪೋಸ್ಟ್‌ ಹರಿದಾಡುತ್ತಿದ್ದು ದರ್ಶನ್‌ ಅಥವಾ ಸಿನಿಮಾ ತಂಡ ಅಧಿಕೃತವಾಗಿ ಅನೌನ್ಸ್‌ ಮಾಡಿದಾಗಲೇ ಕನ್ಫರ್ಮ್‌ ಆಗೋದು. ಈಗ ಹರಿದಾಡುತ್ತಿರುವ ಪೋಸ್ಟರ್‌ಗಳ ಪ್ರಕಾರ ದರ್ಶನ್‌ ಮುಂದಿನ 5 ಸಿನಿಮಾಗಳಿಗೆ ಓಕೆ ಹೇಳಿದ್ದಲ್ಲಿ ಇನ್ನೂ 3-4 ವರ್ಷಗಳು ಅವರು ಯಾರ ಕೈಗೂ ಸಿಗದೆ ಇರುವುದಂತೂ ನಿಜ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ