logo
ಕನ್ನಡ ಸುದ್ದಿ  /  ಮನರಂಜನೆ  /  Samantha: ಪ್ರೀತಿಯ ಮೌಲ್ಯ ಅರ್ಥವಾಗದವರಿಗೆ ಕೊನೆಗೆ ಉಳಿಯುವುದು ಕಣ್ಣೀರು.. ನಾಗಚೈತನ್ಯ-ಶೋಭಿತಾ ಡೇಟಿಂಗ್‌ ಬಗ್ಗೆ ಸ್ಯಾಮ್‌ ಕಾಮೆಂಟ್‌?

Samantha: ಪ್ರೀತಿಯ ಮೌಲ್ಯ ಅರ್ಥವಾಗದವರಿಗೆ ಕೊನೆಗೆ ಉಳಿಯುವುದು ಕಣ್ಣೀರು.. ನಾಗಚೈತನ್ಯ-ಶೋಭಿತಾ ಡೇಟಿಂಗ್‌ ಬಗ್ಗೆ ಸ್ಯಾಮ್‌ ಕಾಮೆಂಟ್‌?

HT Kannada Desk HT Kannada

Apr 04, 2023 05:27 PM IST

google News

ನಾಗಚೈತನ್ಯ-ಶೋಭಿತಾ ಡೇಟಿಂಗ್‌ ಬಗ್ಗೆ ಸಮಂತಾ ಕಾಮೆಂಟ್‌ ಮಾಡಿದ್ದಾಗಿ ಪ್ರಕಟಿಸಿದ ವೆಬ್‌ಸೈಟ್‌

    • ಪ್ರೀತಿಯ ಮೌಲ್ಯ ಏನೆಂದು ಅರ್ಥವಾಗದವರಿಗೆ ಕೊನೆಗೆ ಉಳಿಯುವುದು ಕಣ್ಣೀರು. ಅಂತವರು ಯಾರನ್ನು ಪ್ರೀತಿಸಿದರೂ ಪ್ರಯೋಜನ ಇಲ್ಲ ಎಂದು ಸಮಂತಾ ಕಾಮೆಂಟ್‌ ಮಾಡಿದ್ದಾಗಿ ವೆಬ್‌ ಸೈಟ್‌ ಪ್ರಕಟಿಸಿದೆ.
ನಾಗಚೈತನ್ಯ-ಶೋಭಿತಾ ಡೇಟಿಂಗ್‌ ಬಗ್ಗೆ ಸಮಂತಾ ಕಾಮೆಂಟ್‌ ಮಾಡಿದ್ದಾಗಿ ಪ್ರಕಟಿಸಿದ ವೆಬ್‌ಸೈಟ್‌
ನಾಗಚೈತನ್ಯ-ಶೋಭಿತಾ ಡೇಟಿಂಗ್‌ ಬಗ್ಗೆ ಸಮಂತಾ ಕಾಮೆಂಟ್‌ ಮಾಡಿದ್ದಾಗಿ ಪ್ರಕಟಿಸಿದ ವೆಬ್‌ಸೈಟ್‌ (PC: Facebook)

ಸಮಂತಾ ಜೊತೆಗಿನ ಡಿವೋರ್ಸ್‌ ನಂತರ ನಾಗಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಡೇಟಿಂಗ್‌ ಮಾಡುತ್ತಿದ್ದಾರೆ, ಆದಷ್ಟು ಬೇಗ ಇಬ್ಬರೂ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇವರಿಬ್ಬರೂ ಜೊತೆಗೆ ಇರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು.

ಡೇಟಿಂಗ್‌ ವಿಚಾರವಾಗಿ ನಾಗಚೈತನ್ಯ ಆಗಲೀ, ಶೋಭಿತಾ ಆಗಲೀ ಸ್ಪಷ್ಟನೆ ನೀಡಿಲ್ಲ, ನಾವಿಬ್ಬರೂ ಫ್ರೆಂಡ್ಸ್‌ ಅಷ್ಟೇ ಎಂದು ಒಮ್ಮೆ ಹೇಳಿ ಸುಮ್ಮನಾಗಿದ್ದರು. ಆದರೆ ಇವರಿಬ್ಬರ ಡೇಟಿಂಗ್‌ ವಿಚಾರವಾಗಿ ಸಮಂತಾ ಮಾತನಾಡಿದ್ದಾರೆ ಎಂದು ವೆಬ್‌ಸೈಟ್‌ವೊಂದರಲ್ಲಿ ವರದಿ ಆಗಿದೆ. ಸಮಂತಾ 'ಶಾಕುಂತಲಂ' ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿ ಇದ್ದಾಗ ನಾಗಚೈತನ್ಯ-ಶೋಭಿತಾ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ''ಪ್ರೀತಿಯ ಮೌಲ್ಯ ಏನೆಂದು ಅರ್ಥವಾಗದವರಿಗೆ ಕೊನೆಗೆ ಉಳಿಯುವುದು ಕಣ್ಣೀರು. ಅಂತವರು ಯಾರನ್ನು ಪ್ರೀತಿಸಿದರೂ ಪ್ರಯೋಜನ ಇಲ್ಲ'' ಎಂದು ಸಮಂತಾ ಕಾಮೆಂಟ್‌ ಮಾಡಿದ್ದಾಗಿ ವೆಬ್‌ ಸೈಟ್‌ ಪ್ರಕಟಿಸಿದೆ.

ಅಷ್ಟೇ ಅಲ್ಲ ''ಯಾರು ಯಾರ ಜೊತೆ ಡೇಟಿಂಗ್‌ ಮಾಡಿದರೂ ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ'' ಎಂದು ಸಮಂತಾ ಪ್ರತಿಕ್ರಿಯಿಸಿದ್ದಾಗಿ ವೆಬ್‌ಸೈಟ್‌ ವರದಿ ಮಾಡಿದೆ. ಆದರೆ ಈ ವಿಚಾರ ಇದೀಗ ಸಮಂತಾ ಕಿವಿಗೆ ಬಿದ್ದಿದೆ. ಈ ಸುದ್ದಿಯನ್ನು ಸ್ಯಾಮ್‌ ನಿರಾಕರಿಸಿದ್ದಾರೆ. ವೆಬ್‌ಸೈಟ್‌ ಪ್ರಕಟಿಸಿರುವ ಸುದ್ದಿಯನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಸಮಂತಾ, ''ನಾನು ಎಂದಿಗೂ ಈ ರೀತಿ ಹೇಳಿಲ್ಲ'' ಎಂದು ಮೆನ್ಷನ್‌ ಮಾಡಿದ್ದಾರೆ. ಸಮಂತಾ ಟ್ವೀಟ್‌ ಈಗ ವೈರಲ್‌ ಆಗಿದ್ದು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವರು ಸಮಂತಾ ಅವರನ್ನು ಬೆಂಬಲಿಸಿ ಧೈರ್ಯ ತುಂಬಿದರೆ, ಇನ್ನೂ ಕೆಲವರು ನಾಗಚೈತನ್ಯ ಪರ ಮಾತನಾಡಿದ್ದಾರೆ.

ಬಹಳ ದಿನಗಳ ಬಳಿಕ ಮೌನ ಮುರಿದಿದ್ದ ಸ್ಯಾಮ್‌

ಇತ್ತೀಚೆಗೆ ಶಾಕುಂತಲಂ ಸಿನಿಮಾ ಪ್ರಚಾರದ ಸಮಯದಲ್ಲಿ ಸಮಂತಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದರು. "ವಿಚ್ಛೇದನದ ಸಮಯದಲ್ಲಿ ಮನಸ್ತಾಪಗಳಿಂದ ಮನೆಯಲ್ಲಿ ಕುಳಿತುಕೊಳ್ಳುವುದಕ್ಕೂ ಆಗದ ಸಂದರ್ಭ ಅದು. ಕೊನೆಗೂ ನಾನು ಡಿವೋರ್ಸ್‌ ಘೋಷಿಸಿದೆ. ಆ ಸಮಯದಲ್ಲಿ 'ಪುಷ್ಪ' ಚಿತ್ರದ ಹೂಂ ಅಂಟಾವಾ.. ಐಟಂ ಹಾಡಿನ ಆಫರ್‌ ಬಂತು. ಆಗ ನನ್ನ ಆಪ್ತರು, ಸ್ನೇಹಿತರು, ಕುಟುಂಬದವರೆಲ್ಲ ಈ ಸಮಯದಲ್ಲಿ ಐಟಂ ಸಾಂಗ್‌ ಮಾಡುವುದು ಬೇಡ ಎಂದು ಒತ್ತಡ ಹೇರುತ್ತಿದ್ದರು. ಮನೆಯಲ್ಲೇ ಇರುವಂತೆ ಸಲಹೆ ನೀಡಿದ್ದರು. ಅವರ ಉದ್ದೇಶ ಒಳ್ಳೆಯದೇ ಇತ್ತು. ಆದರೆ, ನಾನು ಅದ್ಯಾವುದಕ್ಕೂ ಒಪ್ಪಿರಲಿಲ್ಲ. ನಾನು ಆ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ನಿರ್ಧರಿಸಿದೆ'' ಎಂದು ಸಮಂತಾ ಹಳೆಯ ಘಟನೆಯನ್ನು ನೆನೆದು ಭಾವುಕರಾಗಿದ್ದರು.

ಏಪ್ರಿಲ್‌ 14ಕ್ಕೆ 'ಶಾಕುಂತಲಂ' ರಿಲೀಸ್‌

ಸಮಂತಾ ಬಹುನಿರೀಕ್ಷಿತ ಸಿನಿಮಾ 'ಶಾಕುಂತಲಂ' ಏಪ್ರಿಲ್ 14 ರಂದು ತೆರೆ ಕಾಣಲಿದೆ. ಪೌರಾಣಿಕ ಕಥೆಯನ್ನು ಆಧರಿಸಿ ಗುಣಶೇಖರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 'ಶಾಕುಂತಲಂ' ಜೊತೆಗೆ ವಿಜಯ್ ದೇವರಕೊಂಡ ಜೊತೆ ಸಮಂತಾ 'ಖುಷಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗುಣ ಟೀಮ್‌ ವರ್ಕ್ಸ್‌ ಹಾಗೂ ಶ್ರೀ ವೆಂಕಟೇಶ್ವರ ಸಿನಿ ಕ್ರಿಯೇಷನ್ಸ್‌ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದ ಹಾಡುಗಳಿಗೆ ಮಣಿಶರ್ಮ ಸಂಗೀತ ನೀಡಿದ್ದಾರೆ. ಸಮಂತಾಗೆ ನಾಯಕನಾಗಿ ದೇವ್‌ ಮೋಹನ್‌ ಅಭಿನಯಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ