logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss 9 New Promo Out: ಪ್ರವೀಣರ ಜೊತೆ ನವೀನರು...ಸೀಸನ್‌ 9 ರಲ್ಲಿ ಮತ್ತೆ ಹಳೆ ಸ್ಪರ್ಧಿಗಳು...?

Bigg Boss 9 New promo out: ಪ್ರವೀಣರ ಜೊತೆ ನವೀನರು...ಸೀಸನ್‌ 9 ರಲ್ಲಿ ಮತ್ತೆ ಹಳೆ ಸ್ಪರ್ಧಿಗಳು...?

HT Kannada Desk HT Kannada

Sep 15, 2022 04:20 PM IST

ಬಿಗ್‌ ಬಾಸ್‌ ಸೀಸನ್‌ 9 ರಲ್ಲಿ ಹಳೆಯ ಸ್ಪರ್ಧಿಗಳು

    • ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ಗೆ ಜಿಮ್‌ ಮಾಡುತ್ತಿದ್ದಾರೆ. ವೈಷ್ಣವಿ ಗೌಡ, ಅನುಪಮಾ ಗೌಡ, ಪ್ರಶಾಂತ್‌ ಸಂಬರ್ಗಿ ಮೂವರೂ ಮನೆಯವರಿಗೆ ತಿಳಿಯದಂತೆ ತಮ್ಮ ಲಗ್ಗೇಜ್‌ ಪ್ಯಾಕ್‌ ಮಾಡಿಕೊಂಡು ಮನೆಯಿಂದ ಹೊರ ಬರುವ ದೃಶ್ಯಗಳನ್ನು ನೋಡಬಹುದು. ಜೊತೆಗೆ, ಹಿನ್ನೆಲೆಯಲ್ಲಿ ಒಂಭತ್ತು ಒಂಭತ್ತು ತೋಳ ಹಳ್ಳಕ್ಕೆ ಬಿತ್ತು... ಹಾಡು ಕೇಳಿಬರುತ್ತಿದೆ.
ಬಿಗ್‌ ಬಾಸ್‌ ಸೀಸನ್‌ 9 ರಲ್ಲಿ ಹಳೆಯ ಸ್ಪರ್ಧಿಗಳು
ಬಿಗ್‌ ಬಾಸ್‌ ಸೀಸನ್‌ 9 ರಲ್ಲಿ ಹಳೆಯ ಸ್ಪರ್ಧಿಗಳು (PC: Colors Kannada Twitter)

ಕನ್ನಡದ ಮೊದಲ ಒಟಿಟಿ ಬಿಗ್‌ ಬಾಸ್‌ ಶೋ ಅಂತಿಮ ಹಂತಕ್ಕೆ ಬಂದಿದೆ. ಇದರ ಬೆನ್ನಲ್ಲೇ ಬಿಗ್‌ ಬಾಸ್‌ ಸೀಸನ್-9ಕ್ಕೆ ದಿನಗಣನೆ ಆರಂಭವಾಗಿದೆ. ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿರುವ ಸೀಸನ್‌ 9 ಇದೇ ಸೆಪ್ಟೆಂಬರ್‌ 24ರಿಂದ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆರಂಭಿಸಲಿದೆ.

ಟ್ರೆಂಡಿಂಗ್​ ಸುದ್ದಿ

‘ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ’; ನಟ ನಿಖಿಲ್‌ ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌

Grey Games Trailer: ‘ಗ್ರೇ ಗೇಮ್ಸ್‌’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ವಿಜಯ್‌ ರಾಘವೇಂದ್ರ ಅಕ್ಕನ ಮಗ ಜೈ ಎಂಟ್ರಿ

ಜೂನಿಯರ್ ಎನ್‌ಟಿಆರ್‌ ಬರ್ತ್‌ಡೇಗೆ ಬಿಗ್‌ ಬ್ಯಾಂಗ್‌! ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಸಾಧ್ಯತೆ

‘ನಮ್ಮಿಬ್ಬರ ನಡುವಿನ ಸಿನಿ ಕಾಂಪಿಟೇಷನ್‌ ಆರೋಗ್ಯಕರವಾಗಿರಲಿಲ್ಲ!’ ರಮ್ಯಾ ಜತೆಗಿನ ದುಷ್ಮನಿ ಬಗ್ಗೆ ರಕ್ಷಿತಾ ಪ್ರೇಮ್‌ ಏನಂದ್ರು?

ಇನ್ನು ಎಂದಿನಂತೆ ಈ ಬಾರಿ ಯಾವ ಯಾವ ಸ್ಪರ್ಧಿಗಳು ಬಿಗ್‌ ಬಾಸ್‌ಗೆ ಬರಬಹುದು ಎಂಬ ಕುತೂಹಲ ಕಾಡುತ್ತಿದೆ. ಆದರೆ ಈ ಬಾರಿ ಶೋನಲ್ಲಿ ಒಂದು ಟ್ವಿಸ್ಟ್‌ ಇದ್ದು ಹಳೆದ ಸ್ಪರ್ಧಿಗಳು ಕೂಡಾ ಈ ಶೋನಲ್ಲಿ ಇರಲಿದ್ದಾರಾ ಎಂಬ ಕುತೂಹಲ ಕಾಡುತ್ತಿದೆ. ಕಲರ್ಸ್‌ ಕನ್ನಡ ವಾಹಿನಿಯು ಹೊಸ ಪ್ರೋಮೋ ಹಂಚಿಕೊಂಡಿದ್ದು ಈ ಪ್ರೋಮೋದಲ್ಲಿ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ಅನುಪಮಾ ಗೌಡ, ಪ್ರಶಾಂತ್‌ ಸಂಬರ್ಗಿ, ವೈಷ್ಣವಿ ಗೌಡ ಹಾಗೂ ದೀಪಿಕಾ ದಾಸ್‌ ಕಾಣಿಸಿಕೊಂಡಿದ್ದಾರೆ. ಈ ಪ್ರೋಮೋ ನೋಡಿದವರು, ಇದು ಕೇವಲ ಪ್ರೋಮೋಗಾಗಿ ಮಾತ್ರಾನಾ ಅಥವಾ ಹಳಬರು ಕೂಡಾ ಈ ಬಾರಿ ಬಿಗ್‌ ಬಾಸ್‌ಗೆ ಹೋಗಲಿದ್ದಾರಾ..? ಎಂಬ ಕುತೂಹಲ ವ್ಯಕ್ತಪಡಿಸಿದ್ದಾರೆ.

ವಾಹಿನಿಯು ಈ ಪ್ರೋಮೋ ಜೊತೆ ''ಶುರುವಾಗ್ತಿದೆ ಟೀವಿ ಸೀಸನ್; ಪ್ರವೀಣರ ಜೊತೆ ನವೀನರು!'' ಎಂಬ ಕ್ಯಾಪ್ಷನ್‌ ಹಂಚಿಕೊಂಡಿದೆ. ಜೊತೆಗೆ ಸೆಪ್ಟೆಂಬರ್‌ 24 ಸಂಜೆ 6 ಗಂಟೆಗೆ ಪ್ರತಿ ರಾತ್ರಿ 9.30ಕ್ಕೆ ಈ ಸೀಸನ್‌ ಪ್ರಸಾರವಾಗಲಿದೆ ಎಂದು ಮಾಹಿತಿ ನೀಡಿದೆ. ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ಗೆ ಜಿಮ್‌ ಮಾಡುತ್ತಿದ್ದಾರೆ. ವೈಷ್ಣವಿ ಗೌಡ, ಅನುಪಮಾ ಗೌಡ, ಪ್ರಶಾಂತ್‌ ಸಂಬರ್ಗಿ ಮೂವರೂ ಮನೆಯವರಿಗೆ ತಿಳಿಯದಂತೆ ತಮ್ಮ ಲಗ್ಗೇಜ್‌ ಪ್ಯಾಕ್‌ ಮಾಡಿಕೊಂಡು ಮನೆಯಿಂದ ಹೊರ ಬರುವ ದೃಶ್ಯಗಳನ್ನು ನೋಡಬಹುದು. ಜೊತೆಗೆ, ಹಿನ್ನೆಲೆಯಲ್ಲಿ ಒಂಭತ್ತು ಒಂಭತ್ತು ತೋಳ ಹಳ್ಳಕ್ಕೆ ಬಿತ್ತು... ಹಾಡು ಕೇಳಿಬರುತ್ತಿದೆ.

ಕಾಫಿನಾಡು ಚಂದುಗ ಬೇಡಿಕೆ ಇಟ್ಟ ವೀಕ್ಷಕರು

ಕಲರ್ಸ್‌ ಕನ್ನಡ ವಾಹಿನಿ ಕಳೆದ ವಾರ ಮೊದಲ ಬಾರಿಗೆ ಒಂದು ಪ್ರೋಮೋ ಹಂಚಿಕೊಂಡಿತ್ತು. ಪ್ರೋಮೋ ನೋಡಿ, 'ಈ ಸೀಸನ್‌ಗಾಗಿ ಕಾಯುತ್ತಿದ್ದೇವೆ ' ಎಂದು ಕೆಲವರು ಕಮೆಂಟ್‌ ಮಾಡಿದರೆ ಇನ್ನೂ ಕೆಲವರು ಕಾಫಿನಾಡು ಚಂದು ಕುರಿತು ಕಮೆಂಟ್‌ ಮಾಡುತ್ತಿದ್ದಾರೆ. 'ಈ ಬಾರಿಯಾದರೂ ಕಾಫಿನಾಡು ಚಂದುಗೆ ಅವಕಾಶ ನೀಡಿ ' ಎಂದು ಮನವಿ ಮಾಡುತ್ತಿದ್ದಾರೆ. ತಮ್ಮ ವಿಭಿನ್ನ‌ ಹಾಡಿನ ಶೈಲಿಯ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಹೆಸರಾಗಿರುವ ಚಂದುಗೆ ಒಟಿಟಿ ಸೀಸನ್‌ನಲ್ಲಿ ಅವಕಾಶ ದೊರೆಯಬಹುದು ಎನ್ನಲಾಗಿತ್ತು. ಅದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕವಾದರೂ ಅವರನ್ನು ಕರೆಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದೂ ಕೂಡಾ ಆಗಲಿಲ್ಲ. ಇದೀಗ ಸೀಸನ್‌ 9ರಲ್ಲಾದರೂ ಅವರಿಗೆ ಅವಕಾಶ ನೀಡಿ ಎಂದು ಅನೇಕರು ಬೇಡಿಕೆ ಇಡುತ್ತಿದ್ದಾರೆ. ವೀಕ್ಷಕರ ಮನವಿಯನ್ನು ವಾಹಿನಿ ಪರಿಗಣಿಸಲಿದೆಯಾ ಎಂಬುದನ್ನು ಕಾದು ನೋಡಬೇಕು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು