Lucky Baskhar OTT: 'ಲಕ್ಕಿ ಬಾಸ್ಕರ್' ಸಿನಿಮಾ ಆನ್‌ಲೈನ್ ಸ್ಕ್ರೀಮಿಂಗ್ ದಿನಾಂಕ ಫಿಕ್ಸ್; ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ
Nov 22, 2024 08:59 PM IST
'ಲಕ್ಕಿ ಬಾಸ್ಕರ್' ಸಿನಿಮಾ ಆನ್‌ಲೈನ್ ಸ್ಕ್ರೀಮಿಂಗ್ ದಿನಾಂಕ ಫಿಕ್ಸ್
- ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಬಾಸ್ಕರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗಿನಿಂದ ತುಂಬಾ ಸದ್ದು ಮಾಡಿದೆ. ಲಕ್ಕಿ ಬಾಸ್ಕರ್ ಸಿನಿಮಾ OTT ಸ್ಟ್ರೀಮಿಂಗ್ ಯಾವಾಗ ಎಂದು ಎಲ್ಲರೂ ಉತ್ಸಾಹದಿಂದ ಕಾದಿದ್ದರು. ಈಗ ನೀವೆಲ್ಲರೂ ಒಟಿಟಿಯಲ್ಲಿ ಸಿನಿಮಾ ನೋಡಬಹುದು.
ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಬಾಸ್ಕರ್ ಸಿನಿಮಾವು ತನ್ನ ಥಿಯೇಟರ್ ಓಟ ಮುಗಿಸಿದ ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಆ ಪ್ರಕಾರ ಇದೀಗ ಲಕ್ಕಿ ಬಾಸ್ಕರ್ ಸಿನಿಮಾ ಒಟಿಟಿಗೆ ಬರಲಿದೆ. ತೆಲುಗಿನ ಕ್ರೈಮ್ ಜಾನರ್‌ನ ಲಕ್ಕಿ ಬಾಸ್ಕರ್ ಸಿನಿಮಾವು ಅಕ್ಟೋಬರ್ 31ರಂದು ಬಿಡುಗಡೆಯಾಗಿತ್ತು. . ದುಲ್ಕರ್ ಸಲ್ಮಾನ್ ನಟನೆಯ ಈ ಚಿತ್ರದ ಕುರಿತು ಎಲ್ಲೆಡೆ ಮೆಚ್ಚುಗೆಯ ಮಾತು ಕೇಳಿ ಬರುತ್ತಿದೆ. ಈ ಸಿನಿಮಾಕ್ಕೆ ವೆಂಕಿ ಅಟ್ಲೂರಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಹಲವು ವಾರಗಳ ಕಾಲ ಪ್ರೇಕ್ಷಕರನ್ನು ಸೆಳೆದಿದೆ.
ಲಕ್ಕಿ ಬಾಸ್ಕರ್ ಸಿನಿಮಾದ ಕಥೆ
ಮೂರು ವರ್ಷ ಕಷ್ಟಪಟ್ಟು ಬ್ಯಾಂಕ್‌ನಲ್ಲಿ ಕೆಲಸ ಮಾಡಿದರೂ ಬಡ್ತಿ ದೊರಕದ ವ್ಯಕ್ತಿಯ ಕಥೆ ಇದಾಗಿದೆ. ಆತ ಬಳಿಕ ಅಡ್ಡದಾರಿ ಮೂಲಕ ಹಣ ಸಂಪಾದನೆಗೆ ಮುಂದಾಗುತ್ತಾನೆ. ಬ್ಯಾಂಕ್‌ನಿಂದ ಹಣ ಕದಿಯುತ್ತಾನೆ. ದೊಡ್ಡಮಟ್ಟದಲ್ಲಿ ಲಾಭವನ್ನೂ ಗಳಿಸುತ್ತಾನೆ. ಈ ರೀತಿ ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂದು ತಿಳಿದ ಬಳಿಕ ಬಾಸ್ಕರ್‌ನ ದುರಾಸೆ ಹೆಚ್ಚುತ್ತದೆ. ಹಣದ ಮೇಲಿನ ಆಸೆಯು ಅವನನ್ನು ತೀವ್ರ ತೊಂದರೆಗೆ ಸಿಲುಕಿಸುತ್ತದೆ ಎಂದು ಅವನಿಗೆ ಗೊತ್ತಿಲ್ಲ. ಈ ಸವಾಲುಗಳನ್ನು ಆತ ಹೇಗೆ ಬಗೆಹರಿಸುತ್ತಾನೆ ಎನ್ನುವುದು ಈ ಸಿನಿಮಾದ ಕಥೆಯ ಮೂಲವಾಗಿದೆ. ಆರಂಭದಲ್ಲಿ ಇದು ನೈಜ ಕಥೆ ಆಧರಿತ ಎಂದು ಹೇಳಲಾಗಿತ್ತು. ಆದರೆ, ಚಿತ್ರತಂಡವು ಇದು ಬಯೋಪಿಕ್ ಅಲ್ಲ ಎಂದು ಖಚಿತಪಡಿಸಿದೆ.
ತೆಲುಗು ಚಿತ್ರರಂಗದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕುರಿತಾದ ಚಲನಚಿತ್ರಗಳು ಅಪರೂಪ. ನಿರ್ದೇಶಕ ವೆಂಕಿ ಅಟ್ಲೂರಿ ಈ ವಿಷಯವನ್ನು ಕೌಟುಂಬಿಕ ನಾಟಕದ ಟ್ವಿಸ್ಟ್‌ನೊಂದಿಗೆ ತೆರೆಗೆ ತಂದಿದ್ದಾರೆ. ಮೀನಾಕ್ಷಿ ಚೌಧರಿ ಅವರು ತಮ್ಮ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಸಿಬಿಐ ಅಧಿಕಾರಿಯಾಗಿ ಸಾಯಿ ಕುಮಾರ್ ಮತ್ತು ಬ್ಯಾಂಕ್ ಎಂಡಿಯಾಗಿ ಟಿನು ಆನಂದ್ ತಮ್ಮ ಪಾತ್ರಗಳಲ್ಲಿ ಪರಿಣಾಮಕಾರಿಯಾಗಿ ನಟಿಸಿದ್ದಾರೆ.
ಎಲ್ಲಿ? ಯಾವಾಗ? ನೋಡಬಹುದು
ಇದೇ ತಿಂಗಳ ಕೊನೆಯ ದಿನ ಅಂದರೆ ನವೆಂಬರ್ 30ರಂದು ನೀವು ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ವದಂತಿಗಳಿದ್ದವು. ಆದರೆ ಈಗ ಇದೇ ತಿಂಗಳ ಕೊನೆಯಲ್ಲಿ ವೀಕ್ಷಣೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಸರಿಯಾಗಿ 4 ವಾರಗಳ ಕಾಲ ಈ ಸಿನಿಮಾ ಥಿಯೇಟರ್‌ನಲ್ಲಿ ಓಡಿದೆ.
ಲಕ್ಕಿ ಭಾಸ್ಕರ್ ಸಿನಿಮಾ ರಿಲೀಸ್ ಆದ ದಿನವೇ ಅಮರನ್ ಸಿನಿಮಾ ಸಹ ಬಿಡುಗಡೆಯಾಗಿತ್ತು. ಪಾಸಿಟಿವ್ ಟಾಕ್ ನೊಂದಿಗೆ ಎರಡೂ ಸಿನಿಮಾಗಳೂ ಓಡಿದೆ. ಮಧ್ಯಮ ವರ್ಗದ ಪ್ರೇಕ್ಷಕರ ನಾಡಿಮಿಡಿತವನ್ನು ಸೆಳೆಯುವಲ್ಲಿ ಲಕ್ಕಿ ಭಾಸ್ಕರ್ ಯಶಸ್ವಿಯಾಗಿದೆ. ದುಲ್ಕರ್ ಸಲ್ಮಾನ್ ಅವರ ಕ್ರೇಜ್ ಮತ್ತು ಮೀನಾಕ್ಷಿ ಚೌಧರಿ ಅವರ ಯೂತ್ ಫಾಲೋಯಿಂಗ್ ಕೂಡ ಚಿತ್ರಕ್ಕೆ ಭಾರೀ ಲಾಭ ತಂದುಕೊಟ್ಟಿದೆ.