ದರ್ಶನ್-ಸುದೀಪ್ ಒಂದಾಗ್ತಾರೆ ಎನ್ನುಷ್ಟರಲ್ಲಿ ಮತ್ತೆ ಫ್ಯಾನ್ಸ್ ಕಿತ್ತಾಟ; ಹಳೆ ವಿಷ್ಯ ಓಪನ್ ಮಾಡಿದ್ರಾ ದಚ್ಚು ಅಭಿಮಾನಿಗಳು
Feb 20, 2024 12:17 PM IST
ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ಮತ್ತು ಡಿ ಬಾಸ್ ದರ್ಶನ್ ಫ್ಯಾನ್ಸ್ ನಡುವೆ ಮತ್ತೆ ಕಿತ್ತಾಟ ಶುರುವಾಗಿದೆ. ಈ ಇಬ್ಬರು ಸ್ಟಾರ್ ನಟರು ಒಂದಾಗ್ತಾರೆ ಎನ್ನುವಷ್ಟರಲ್ಲಿ ಫ್ಯಾನ್ಸ್ ಜಗಳ ನಿರಾಸೆ ಮೂಡಿಸಿದೆ.
- Darshan Sudeep Fans: ಕೆಲವೇ ದಿನಗಳಲ್ಲಿ ದರ್ಶನ ಮತ್ತು ಸುದೀಪ್ ಒಂದಾಗ್ತಾರೆ ಅಂತ ಸ್ಯಾಂಡಲ್‌ವುಡ್‌ನಲ್ಲಿ ಟಾಕ್ ಶುರುವಾಗಿತ್ತು. ಆದರೆ ಆವೊಂದು ಕಾರ್ಯಕ್ರಮದಲ್ಲಿನ ವಿಚಾರವಾಗಿ ಇಬ್ಬರು ನಟರ ಫ್ಯಾನ್ಸ್ ನಡುವೆ ಕಿತ್ತಾಟ ಶುರುವಾಗಿದೆ.
Darshan Sudeep Fans: ಒಂದು ಕಡೆ ದರ್ಶನ್ ಅಭಿಮಾನಿಗಳು (Darshan Fans), ಇನ್ನೊಂದು ಕಿಚ್ಚ ಸುದೀಪ್ ಅಭಿಮಾನಿಗಳು (Sudeep Fans) ಪರಸ್ಪರ ಕಾದಾಟಕ್ಕೆ ಇಳಿದುಬಿಟ್ಟಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು ಇಬ್ಬರೂ ಆದಷ್ಟು ಬೇಗ ಒಂದಾಗಲಿ ಎಂದು ಬಯಸುತ್ತಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ, ಆ ಲಕ್ಷಣಗಳು ಕಾಣಿಸುತ್ತಿಲ್ಲ.
ದರ್ಶನ್ 25 ವರ್ಷದ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ 'ಮೆಜೆಸ್ಟಿಕ್' ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸಿದ್ಯಾರು? ಅನ್ನೋದನ್ನು ಹೇಳಿದ್ದರು. ಅದೇ ಕಿಚ್ಚನ ಅಭಿಮಾನಿಗಳ ಮುನಿಸಿಗೆ ಕಾರಣವಾಗಿದೆ. 'D25 ಬೆಳ್ಳಿ ಪರ್ವ' ಕಾರ್ಯಕ್ರಮದಲ್ಲಿ ತನಗೆ ಅವಕಾಶ ಕೊಟ್ಟವರ ಬಗ್ಗೆ ಮಾತಾಡಿದ್ದರು. "ನನ್ನನ್ನು ಬೈಯ್ಯುವ, ನಿನ್ನನ್ನು ಚಿತ್ರರಂಗಕ್ಕೆ ಕರೆತಂದಿದ್ದು ನಾನು ಎಂದು ಹೇಳುವ ಅರ್ಹತೆ ಹಾಗೂ ಯೋಗ್ಯತೆ ಇರುವುದು ಕೇವಲ ರಾಮಮೂರ್ತಿ ಅವರಿಗೆ ಮಾತ್ರ.. ರೇಸ್ಗೆ ಬಿಟ್ಟ ಕುದುರೆಯ ಮೇಲೆ ಜಾಕಿಯಾಗಿ ಪಿಎನ್ ಸತ್ಯ ಅವರನ್ನು ಕೂಡಿಸಿದರು." ಎಂದು ಹೇಳಿದ್ದರು. ಇದು ಕಿಚ್ಚನ ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ.
ಹೀಗಾಗಿ ಮೆಜೆಸ್ಟಿಕ್ ಬಗ್ಗೆ ಮಾತಾಡಿದ ನಿರ್ಮಾಪಕರ ಹಳೆಯ ತುಣುಕುಗಳನ್ನು ಇಟ್ಟುಕೊಂಡು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ 'ಮೆಜೆಸ್ಟಿಕ್'ಗೆ ನನಗೆ ಮೊದಲು ಆಫರ್ ಬಂದಿತ್ತು. ಆದರೆ, ಆ ವೇಳೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ನಾನೇ ದರ್ಶನ್ ಹೆಸರನ್ನು ನಿರ್ಮಾಪಕರಿಗೆ ಹೇಳಿದ್ದೆ ಎಂದು ಹೇಳಿದ್ದರು. ಇದು ದರ್ಶನ್‌ಗೆ ನೋವುಂಟು ಮಾಡಿತ್ತು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ದರ್ಶನ್ ಟ್ವೀಟ್ ಮಾಡಿ ಇಬ್ಬರ ಫ್ರೆಂಡ್‌ಶಿಪ್ ಅನ್ನು ಮುರಿದು ಕೊಂಡಿದ್ದರು.
2017ರಿಂದ ಇಲ್ಲಿವರೆಗೂ ಇಬ್ಬರೂ ಒಂದಾಗಲು ಮುಂದೆ ಬಂದೇ ಇಲ್ಲ. ಆದರೆ, ಕಳೆದ 7 ವರ್ಷಗಳಿಂದ ದರ್ಶನ್‌ಗೆ ಅವಕಾಶ ಕೊಟ್ಟಿದ್ದು ಯಾರು? ಅನ್ನುವ ಪ್ರಶ್ನೆ ಮೇಲೆನೇ ಚರ್ಚೆ ನಡೆಯುತ್ತಿದೆ. ಸದ್ಯ ದರ್ಶನ್ ಹೇಳಿಕೆಗೆ ಕಿಚ್ಚ ಸುದೀಪ್ ಫ್ಯಾನ್ಸ್ ಟಕ್ಕರ್ ಕೊಡುವುದಕ್ಕೆ ಶುರು ಮಾಡಿದ್ದಾರೆ. 'ಮೆಜೆಸ್ಟಿಕ್' ನಿರ್ಮಾಪಕ ಬಾ.ಮಾ ಹರೀಶ್ ಸಂದರ್ಶನದಲ್ಲಿ ಸುದೀಪ್ ಅವರೇ ದರ್ಶನ್ ಹೆಸರು ಸೂಚಿಸಿದ್ದು ಎಂದು ಸಂದರ್ಶನ ನೀಡಿದ್ದರು. ಜೊತೆಗೆ ಅಣಜಿ ನಾಗರಾಜ್ ಕೂಡ ಸುದೀಪ್‌ಗೆ 'ಮೆಜೆಸ್ಟಿಕ್' ಸಿನಿಮಾ ಮಾಡಿದ್ದು ಎಂದಿದ್ದರು.
ಹಾಗೇ ನಿರ್ಮಾಪಕರಾಗಿದ್ದ ಎಂ ಜಿ ರಾಮಮೂರ್ತಿ, ದಿವಂಗತ ನಿರ್ದೇಶಕ ಪಿ ಎನ್ ಸತ್ಯ ಮಾತ್ರ ಇದನ್ನು ಒಪ್ಪಿರಲಿಲ್ಲ. ಈ ಎಲ್ಲಾ ತುಣುಕುಗಳನ್ನು ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ, 'ಮೆಜೆಸ್ಟಿಕ್' ಸಿನಿಮಾಗೆ ದರ್ಶನ್ ಅವಕಾಶ ಕೊಟ್ಟಿದ್ದು ಯಾರು? ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವ ಹಾಗೆ ಕಾಣಿಸುತ್ತಿಲ್ಲ. ಆದರೆ, 'ಮೆಜೆಸ್ಟಿಕ್' ವಿಷಯ ಬಂದಾಗಲೆಲ್ಲಾ ಕಿಚ್ಚ ಸುದೀಪ್ ಹಾಗೂ ದರ್ಶನ್ ನಡುವಿನ ಕಿತ್ತಾಟ ತಾರಕ್ಕೇರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ..ಇದೇ ವೇಳೆ ದರ್ಶನ್ ನಾನು ಪ್ರಾಣಿಗಳ ಉದಾಹರಣೆ ಕೊಡ್ತಿನಿ ಯಾಕೆ ಅಂದ್ರೇ ಅವು ನಂಗೆ ಕೇಳೋದಿಲ್ಲ ಅಂದಿದ್ದಾರೆ.
ಕಳೆದ ಕೆಲದಿನಗಳಿಂದ ಆಗಿರೋ ಬೆಳವಣಿಗೆ ನೋಡಿ ಕಿಚ್ಚ ದಚ್ಚು ಒಂದಾಗ್ತಾರೆ ಅಂತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸುಮಲತಾ ಹುಟ್ಟು ಹಬ್ಬದಲ್ಲಿ ಇಬ್ಬರು ಒಂದೇ ಕಡೆ ಕಾಣಿಸಿಕೊಂಡಿದ್ದು ನೋಡಿ ಆಸೆಯಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ದಚ್ಚು ಮಾತಿಂದ ನಿರಾಸೆಯಾಗಿದ್ದಂತು ಸತ್ಯ.
(This copy first appeared in Hindustan Times Kannada website. To read more like this please logon to kannada.hindustantimes.com )