logo
ಕನ್ನಡ ಸುದ್ದಿ  /  ಮನರಂಜನೆ  /  ಗ್ಲಾಡಿಯೇಟರ್ Ii ವಿಮರ್ಶೆ: ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತರು, ಮನರಂಜಿಸುವಲ್ಲಿ ಸೋತಿಲ್ಲ ರಿಡ್ಲಿ ಸ್ಕಾಟ್ ನಿರ್ದೇಶನದ ಸಿನಿಮಾ

ಗ್ಲಾಡಿಯೇಟರ್ II ವಿಮರ್ಶೆ: ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತರು, ಮನರಂಜಿಸುವಲ್ಲಿ ಸೋತಿಲ್ಲ ರಿಡ್ಲಿ ಸ್ಕಾಟ್ ನಿರ್ದೇಶನದ ಸಿನಿಮಾ

Reshma HT Kannada

Nov 15, 2024 01:27 PM IST

google News

ಗ್ಲಾಡಿಯೇಟರ್ II ವಿಮರ್ಶೆ

    • ರಿಡ್ಲಿ ಸ್ಕಾಟ್ ನಿರ್ದೇಶನದ 'ಗ್ಲಾಡಿಯೇಟರ್' ಸಿನಿಮಾ 2000ರಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿತ್ತು. ಇದೀಗ 24 ವರ್ಷಗಳ ಬಳಿಕ ಗ್ಲಾಡಿಯೇಟರ್ ಭಾಗ 2 ಬಿಡುಗಡೆಯಾಗಿದೆ. ಆದರೆ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತಿದೆ. ಆದರೆ ಸಿನಿಮಾ ನೋಡಿದವರು ಮನರಂಜನೆಗೆ ಕೊರತೆಯಿಲ್ಲ, ಒಮ್ಮೆ ನೋಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಗ್ಲಾಡಿಯೇಟರ್ II ವಿಮರ್ಶೆ
ಗ್ಲಾಡಿಯೇಟರ್ II ವಿಮರ್ಶೆ

ಸುಮಾರು 2 ದಶಕಗಳ ಹಿಂದೆ ಅಂದರೆ 2000ನೇ ಇಸವಿಯಲ್ಲಿ ತೆರೆ ಕಂಡಿದ್ದ ಸಿನಿಮಾ ಹಾಲಿವುಡ್‌ ‘ಗ್ಲಾಡಿಯೇಟರ್‘. ಆ ಕಾಲಕ್ಕೆ ಅದ್ಭುತ ದೃಶ್ಯ ವೈಭವ, ನಿರ್ದೇಶನ, ಯುದ್ಧದ ಅಭೂತಪೂರ್ವ ದೃಶ್ಯ ಸಂಕೋಲೆಗಳ ಮೂಲಕ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿದ್ದ ಸಿನಿಮಾ ಇದಾಗಿತ್ತು.  ಈಗ ಅದರ ಮುಂದುವರಿದ ಭಾಗವಾಗಿ ‘ಗ್ಲಾಡಿಯೇಟರ್ 2‘ ತೆರೆ ಕಂಡಿದೆ. ಈ ಚಿತ್ರದಲ್ಲಿ ನಾವು ರೋಮ್‌ನ ಮಾಜಿ ಚಕ್ರವರ್ತಿ ಮಾರ್ಕಸ್ ಆರೆಲಿಯಸ್ ಅವರ ಮೊಮ್ಮಗ ಮತ್ತು ಲುಸಿಲ್ಲಾ (ಕಾನ್ನಿ ನೀಲ್ಸನ್) ಮತ್ತು ಮ್ಯಾಕ್ಸಿಮಸ್ (ರಸ್ಸೆಲ್ ಕ್ರೋವ್) ಹಾಗೂ ಅವರ ಮಗ ಲೂಸಿಯಸ್ (ಪಾಲ್ ಮೆಸ್ಕಲ್) ಅವರನ್ನು ನಾವು ಕಾಣಬಹುದಾಗಿದೆ.

ಲೂಸಿಯಸ್ ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ನುಮಿಡಿಯಾದಲ್ಲಿ ವಾಸಿಸುತ್ತಿರುತ್ತಾನೆ. ರೋಮ್‌ ಸಾಮ್ರಾಜ್ಯದ ಪಟ್ಟ ಲೂಸಿಯಸ್‌ಗೆ ಸಿಗುವುದನ್ನು ಸಹಿಸಿದ ವ್ಯಕ್ತಿಗಳು ಅವನನ್ನು, ಅವನ ಕುಟುಂಬವನ್ನು ನಾಶ ಮಾಡಲು ಯೋಚಿಸುತ್ತಿರುತ್ತಾರೆ. ಅವನನ್ನು ಸುರಕ್ಷಿತವಾಗಿ ಇರಿಸಿಬೇಕು ಎನ್ನುವ ಉದ್ದೇಶದಿಂದ ತಂದೆ ಲುಸಿಲ್ಲಾ ಅವನನ್ನ ತನ್ನ ರಾಜ್ಯದಿಂದ ಕಳುಹಿಸಿ ಇರುತ್ತಾನೆ. ಆದರೆ ವಿಧಿ ಅವರನ್ನು ಪುನಃ ತಂದೆ ಇರುವ ರೋಮ್‌ಗೆ ಕರೆ ತರುತ್ತದೆ. ಅವರು ಯುದ್ಧ ಖೈದಿಯಾಗಿ ರೋಮ್‌ನ ಅಖಾಡಕ್ಕೆ ಇಳಿಯುತ್ತಾನೆ. ಅವನು ಕ್ರೂರಿಗಳನ್ನು ಕೊಲ್ಲಲು ಮಾತ್ರವಲ್ಲ, ತಾಯಿ ನೆಲವನ್ನು ಉಳಿಸಲು ಹಾಗೂ ನ್ಯಾಯ ಸಮ್ಮತವಾಗಿ ಹೋರಾಟ ನಡೆಸುತ್ತಾನೆ. 

ಈ ಸಿನಿಮಾ ಗ್ಲಾಡಿಯೇಟರ್ ಭಾಗ– 1 ರಷ್ಟು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಆದರೆ ನ್ಯೂನತೆಗಳನ್ನು ಮರೆ ಮಾಚುವಲ್ಲಿ ಸಾಕಷ್ಟು ಬಲವಾದ ಅಂಶಗಳನ್ನ ಈ ಚಿತ್ರ ಹೊಂದಿದೆ ಎಂಬದನ್ನು ನಾವು ಇಲ್ಲಿ ಗಮನಿಸಬೇಕು. ರಿಡ್ಲಿ ಸ್ಕಾಟ್ ಈ ಚಿತ್ರವನ್ನು ಅತ್ಯುತ್ತಮವಾಗಿ ನಿರ್ದೇಶನ ಮಾಡಿದ್ದಾರೆ. ಪಾಲ್ ಮೆಸ್ಕಲ್ ಗ್ಲಾಡಿಯೇಟರ್ ಭಾಗ– 1ರ ರಸ್ಸೆಲ್ ಕ್ರೋವ್ ಅವರ ನಟನೆಗೆ ತಕ್ಕಂತೆ ನಟಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಈ ಚಿತ್ರವು ಗ್ಲಾಡಿಯೇಟರ್ ಭಾಗ– 1ಕ್ಕೆ ಹೋಲಿಸಿದಾಗ ಕೆಲವು ಲೂಪ್‌ಹೋಲ್‌ಗಳು ಕಾಣಿಸುತ್ತದೆ. ಕೆಲವರು ಮೊದಲ ಭಾಗಕ್ಕೆ ಹೋಲಿಸಿದರೆ ಹಲವಾರು ಅಂಶಗಳು ಸೇರ್ಪಡೆಯಾಗಿವೆ ಎಂದು ಪ್ರಶಂಸಿಸುತ್ತಿದ್ದಾರೆ.

ಈ ಸಿನಿಮಾವು ಯುದ್ಧದ ಹಿನ್ನೆಲೆಯಲ್ಲೇ ಆರಂಭವಾಗುತ್ತದೆ. ನಿರೂಪಣೆ ನಿಧಾನವಾಗಿದ್ದರೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ನಿರ್ದೇಶಕರು ಸೋತಿಲ್ಲ. ಕೆಲವು ಅದ್ಭುತ ಯುದ್ಧ ದೃಶ್ಯಗಳು, ಅಚ್ಚರಿಗೊಳಿಸುವ ಸೆಟ್‌, ದೃಶ್ಯ ವೈಭವಗಳು ಗಮನ ಸೆಳೆಯುವಂತೆ ಇದ್ದರೂ ಕೂಡ ಗ್ಲಾಡಿಯೇಟರ್ ಭಾಗ 1ರ ಅಂಶ ಇದರಲ್ಲಿ ಇಲ್ಲ ಎನ್ನುವುದು ಪ್ರೇಕ್ಷಕರ ಅಳಲು. ಗ್ಲಾಡಿಯೇಟರ್ ಭಾಗ 1ರ ದೃಶ್ಯಕಾವ್ಯಗಳು ಪ್ರೇಕ್ಷಕರ ಮನದಲ್ಲಿ ಈಗಲೂ ಅಚ್ಚೊತ್ತಿದಂತಿದ್ದು, ಭಾಗ 2ರಲ್ಲಿ ಆ ವೈಭೋಗವನ್ನು ಮರುಕಳಿಸಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ.

ಗ್ಲಾಡಿಯೇಟರ್ II ಕಥೆ

ತಂದೆ ತಾಯಿಯಿಂದ ದೂರವಾಗಿದ್ದು ಲೂಸಿಯಸ್ ತಾನು ರೋಮ್ ಸಾಮ್ರಾಜ್ಯದವನು ಎಂದು ತಿಳಿಯದೇ ದ್ವೇಷಿಸುವ ನುಮಿಡಿಯನ್ ಸೈನಿಕನಾಗಿರುತ್ತಾರೆ. ಅವನಿಗೆ ಹ್ಯಾನೋ ಎನ್ನುವ ಹೆಸರಿರುತ್ತದೆ. ಅವನ ಮಡದಿಯ ಸಾವಿನ ನಂತರ ಹ್ಯಾನೋ ಜನರಲ್ ಅಕೇಶಿಯಸ್ (ಪೆಡ್ರೊ ಪ್ಯಾಸ್ಕಲ್) ನೊಂದಿಗೆ ಯುದ್ಧದಲ್ಲಿ ಸೆರೆಹಿಡಿಯುತ್ತಾನೆ. ಅಲ್ಲಿಂದ ಅವನ ದ್ವೇಷದ ಕಥೆ ತೆರೆದುಕೊಳ್ಳುತ್ತದೆ. ನುಮಿಡಿಯನ್ ಸಮುದಾಯದ ನೆಚ್ಚಿನ ನಾಯಕನಾಗುವ ಹ್ಯಾನೋಗೆ ಕೆಲವೇ ದಿನಗಳಲ್ಲಿ ತಾನು ಮ್ಯಾಕ್ಸಿಮಸ್ ಮತ್ತು ಲುಸಿಲ್ಲಾ (ಕಾನ್ನಿ ನೀಲ್ಸನ್) ಅವರ ಮಗ ಎಂಬುದು ತಿಳಿಯುತ್ತದೆ. ಅಲ್ಲದೇ ಅವನು ರೋಮ್ ಸಾಮ್ರಾಜ್ಯದ ಉತ್ತರಾಧಿಕಾರಿಯಾಗುತ್ತಾನೆ. ನಂತರ ಅವನು ವಿರುದ್ಧ ಯಾರೆಲ್ಲಾ ದ್ವೇಷ ಸಾಧಿಸುತ್ತಾರೆ, ಅವನು ತನ್ನ ಸಾಮ್ರಾಜ್ಯವನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎಂಬುದು ಈ ಕಥೆಯ ಭಾಗವಾಗಿದೆ. 

ಡೇವಿಡ್ ಸ್ಕಾರ್ಪಾ ಮತ್ತು ಪೀಟರ್ ಕ್ರೇಗ್ ಈ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದಾರೆ. ಗ್ಲಾಡಿಯೇಟರ್ II ಹೊಸ ಪ್ಯಾಕೇಜಿಂಗ್ ಹೊಂದಿರುವ ಹಳೆಯ ಬಾಟಲಿಯ ವೈನ್ ಆಗಿದೆ ಎಂಬುದು ಪ್ರೇಕ್ಷಕರ ಅಭಿಮತ. 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ