ಮೊಲ ಎಲ್ಲಿರಬೇಕೋ ಅಲ್ಲಿದೆ ಎಂದ ಜಯಂತ್, ಗಂಡನ ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ
Nov 05, 2024 10:30 AM IST
ಲಕ್ಷ್ಮೀ ನಿವಾಸ ಧಾರಾವಾಹಿ ಸೋಮವಾರದ ಎಪಿಸೋಡ್‌ನಲ್ಲಿ ಮೊಲ ಕಾಣೆಯಾಗಿರುವುದಕ್ಕೆ ಗಾಬರಿ ಅದ ಜಾಹ್ನವಿ, ಕುಕ್ಕರ್ ತೆಗೆಯುತ್ತಿರುವ ಹೆಂಡತಿಯನ್ನು ತಡೆಯುತ್ತಿರುವ ಜಯಂತ್
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್ 4ರ ಎಪಿಸೋಡ್‌ನಲ್ಲಿ ಅಪ್ಪನ ಬಳಿ ದುಡ್ಡು ಲಪಟಾಯಿಸಲು ಸಂತೋಷ್ ಮಾಸ್ಟರ್ ಪ್ಲ್ಯಾನ್ ಮಾಡುತ್ತಾನೆ. ಇತ್ತ ಜಯಂತ್ ಮೊಲವನ್ನು ಪೆಟ್ ಕೇರ್ ಸೆಂಟ್‌ಗೆ ಬಿಟ್ಟು ಬಂದ ವಿಚಾರ ಜಾಹ್ನವಿಗೆ ತಿಳಿದು ಬೇಸರಗೊಳ್ಳುತ್ತಾಳೆ.
Lakshmi Nivasa Serial: ಹೆಂಡತಿ ಬೇಸರ ನೀಗಿಸಲು ಜಯಂತ್, ಅವಳಿಗೆ ಮುದ್ದಾದ ಮೊದಲ ಮರಿಯನ್ನು ತಂದುಕೊಡುತ್ತಾನೆ. ಆದರೆ ಮೊಲ ಬಂದಾಗಿನಿಂದ ಜಾಹ್ನವಿ ಅದರ ಜೊತೆ ಹೆಚ್ಚು ಸಮಯ ಕಳೆಯುವುದನ್ನು ನೋಡಿ ಜಯಂತನಿಗೆ ಸಹಿಸಿಕೊಳ್ಳಲಾಗುವುದಿಲ್ಲ. ಅದನ್ನು ಪೆಟ್ ಕೇರ್‌ಗೆ ಬಿಟ್ಟು ಬರುತ್ತಾನೆ. ಆ ವಿಚಾರ ತಿಳಿಯದೆ ಜಾಹ್ನವಿ ಮೊಲವನ್ನು ಎಲ್ಲಾ ಕಡೆ ಹುಡುಕುತ್ತಾಳೆ.
ಮೊಲವನ್ನು ಪೆಟ್ ಕೇರ್ ಸೆಂಟರ್‌ಗೆ ಬಿಟ್ಟ ಜಯಂತ್
ಜಾಹ್ನವಿ ಮೊಲ ಹುಡುಕುವಾಗ ಕುಕ್ಕರ್ ಸೀಟಿ ಕೂಗುತ್ತದೆ. ಅದನ್ನು ಕೇಳಿ ಜಾಹ್ನವಿ ಭಯದಿಂದ ಅಡುಗೆ ಮನೆಗೆ ಹೋಗಿ ಕುಕ್ಕರ್ ಮುಚ್ಚಳ ತೆಗೆಯುತ್ತಾಳೆ. ಅದರಲ್ಲಿ ಅನ್ನ ಇದ್ದಿದ್ದನ್ನು ನೋಡಿ ನಿಟ್ಟುಸಿರು ಬಿಡುತ್ತಾಳೆ. ನೀವು ಮೊಲದ ಬಗ್ಗೆ ಹೆದರುವ ಅಗತ್ಯವಿಲ್ಲ. ಅದು ಎಲ್ಲಿರಬೇಕೋ ಅಲ್ಲಿದೆ ಎನ್ನುತ್ತಾನೆ. ಅದರರ್ಥ ಏನು ಎನ್ನುತ್ತಾಳೆ. ನಮ್ಮಿಬ್ಬರ ನಡುವೆ ಯಾರು ಬಂದರೂ ಇಷ್ಟವಾಗುವುದಿಲ್ಲ ಎಂದು ನನಗೆ ಗೊತ್ತು. ಅದಕ್ಕಾಗಿ ನಾನು ಅದನ್ನು ಪೆಟ್ ಕೇರ್‌ಗೆ ಬಿಟ್ಟು ಬಂದಿದ್ದೇನೆ ಎನ್ನುತ್ತಾನೆ. ನನಗೆ ಬಹಳ ಕಷ್ಟವಾಗುತ್ತಿದೆ. ಮೊಲ ಬಂದಾಗಿನಿಂದ ನೀವು ನನ್ನ ಕಡೆ ಗಮನ ಕೊಡುತ್ತಿಲ್ಲ ನನಗೆ ಬಹಳ ಹಿಂಸೆ ಆಗುತ್ತಿದೆ ಎಂದು ಜಯಂತ್ ಹೇಳಿದಾಗ ಜಾಹ್ನವಿ ಹಾಗೆಲ್ಲಾ ಆಗುವುದಿಲ್ಲ, ದಯವಿಟ್ಟು ಮೊಲವನ್ನು ವಾಪಸ್ ತಂದುಕೊಡಿ ಎಂದು ಕೇಳುತ್ತಾಳೆ. ಅದರು ಎಂದಿಗೂ ಸಾಧ್ಯವಿಲ್ಲ ಎಂದು ಜಯಂತ್ ಹೇಳುತ್ತಾನೆ. ರಾತ್ರಿ ನಿದ್ರೆ ಬಾರದೆ ಜಾಹ್ನವಿ ಮೊಲದ ಬಗ್ಗೆ, ಗಂಡನ ಬಗ್ಗೆ ಯೋಚಿಸುತ್ತಾಳೆ. ಒಂಟಿಯಾಗಿದ್ದ ನನ್ನ ಬದುಕಲ್ಲಿ ಆ ಮೊಲ ಬಂತು ಅದರ ಬಳಿ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದೆ, ಈಗ ಅದೂ ದೂರವಾಯ್ತು ಎಂದು ಬಿಕ್ಕಿ ಬಿಕ್ಕಿ ಅಳುತ್ತಾಳೆ.
ಅಪ್ಪನ ಬಳಿ ಹಣ ಪಡೆಯಲು ಸಂತೋಷ್ ಮಾಸ್ಟರ್ ಪ್ಲ್ಯಾನ್
ಮತ್ತೊಂದೆಡೆ, ಅಪ್ಪನ ಪಾಸ್‌ಬುಕ್‌ನಲ್ಲಿ 25 ಲಕ್ಷ ರೂ. ಹಣ ನೋಡುವ ಸಂತೋಷ್ ಹೇಗಾದರೂ ಮಾಡಿ ಆ ಹಣವನ್ನು ಲಪಟಾಯಿಸಲು ಪ್ಲ್ಯಾನ್ ಮಾಡುತ್ತಾನೆ. ಇದೇ ಯೋಚನೆಯಲ್ಲಿರುವ ಸಂತೋಷನ್‌ನನ್ನು ಹೆಂಡತಿ ವೀಣಾ ಮಾತನಾಡಿಸುತ್ತಾಳೆ. ಕೆಲಸದಲ್ಲಿ ಏನಾದರೂ ಸಮಸ್ಯೆ ಆಯ್ತಾ ಎಂದು ಕೇಳುತ್ತಾಳೆ. ಇದೇ ಸರಿಯಾದ ಸಮಯ ಎಂದುಕೊಳ್ಳುವ ಸಂತೋಷ್, ನಮ್ಮದು ಚಿಟ್ ಫಂಡ್ ಅಲ್ವಾ, ನಾನು ಹಣ ಕಟ್ಟಲು ಹೋಗುವಾಗ ಯಾರೋ ಕಳ್ಳರು ಅದನ್ನು ಲಪಟಾಯಿಸಿಕೊಂಡು ಹೋಗಿಬಿಟ್ರು ಒಂದಲ್ಲಾ ಎರಡಲ್ಲ 5 ಲಕ್ಷ ಹಣ. ನಾನು ಕಟ್ಟದಿದ್ದರೆ ಪೊಲೀಸರಿಗೆ ಕಂಪ್ಲೇಂಟ್ ಕೊಡುತ್ತಾರೆ ಎಂದು ನಾಟಕವಾಡುತ್ತಾನೆ. ಇದನ್ನು ಕೇಳಿದ ವೀಣಾ ಅಳುತ್ತಲೇ ಅತ್ತೆ ಮಾವನಿಗೆ ವಿಚಾರ ತಿಳಿಸುತ್ತಾಳೆ. ಮನೆಯವರನೆಲ್ಲಾ ಕರೆಯುವ ಲಕ್ಷ್ಮೀ, ಎಲ್ಲರೂ ಸ್ವಲ್ಪ ಹಣ ನೀಡಿದರೆ ಸಂತೋಷ್‌ಗೆ ಸಹಾಯವಾಗುತ್ತದೆ ಎನ್ನುತ್ತಾಳೆ. ಆದರೆ ಯಾರೂ ಮುಂದೆ ಬರುವುದಿಲ್ಲ. ರಾತ್ರಿ ಶ್ರೀನಿವಾಸ್, ಲಕ್ಷ್ಮೀ ಜೊತೆ ಮಾತನಾಡುವಾಗ ಯಾರೂ ಹಣ ಕೊಡದಿದ್ದರೆ ನನ್ನ ಪಿಎಫ್ ಹಣವನ್ನೇ ಸಂತೋಷ್‌ಗೆ ಕೊಡುತ್ತೇನೆ ಎನ್ನುತ್ತಾನೆ.
ಭಾವನಾಗೆ ದೇವಸ್ಥಾನದ ಪ್ರಸಾದ ತಂದುಕೊಡುವ ಸಿದ್ದೇಗೌಡ
ಮತ್ತೊಂದೆಡೆ ಸಿದ್ದೇಗೌಡ್ರು , ಭಾವನಾಗೆ ದೇವಸ್ಥಾನದ ಪ್ರಸಾರ ತಂದುಕೊಡುತ್ತಾನೆ. ಅದು ಪ್ರಸಾದ ಆಗಿದ್ದಕ್ಕೆ ಭಾವನಾ ತೆಗೆದುಕೊಂಡು ತಿನ್ನುತ್ತಾಳೆ. ಇನ್ನೂ ಇಲ್ಲೇ ಏಕೆ ನಿಂತಿದ್ದೀರಿ? ನನಗೆ ಲಾಲಿ ಹಾಡಿ ಮಲಗಿಸುವಂತೆ ನಿಮ್ಮ ಅಮ್ಮ ಹೇಳಿದ್ರಾ ಎಂದು ಕೇಳುತ್ತಾಳೆ. ಆ ಭಾಗ್ಯಾ ನನಗೆಲ್ಲ ಬರಬೇಕು ಎಂದು ಸಿದ್ದೇಗೌಡ ಹೇಳುತ್ತಾನೆ. ಇವರು ದೇವಸ್ಥಾನದ ಪ್ರಸಾದ ಆಗಿದ್ದಕ್ಕೆ ತಿನ್ನುತ್ತಿದ್ದಾರೆ, ಮನೆಯಲ್ಲಿ ಪ್ರತಿದಿನ ಊಟ ಮಾಡುವಂತೆ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾನೆ.
ಲಕ್ಷ್ಮೀ ನಿವಾಸ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ