logo
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ತಾಂಡವ್‌ಗೆ ಮಗನನ್ನೂ ನೋಡಲು ಬಿಡದ ಶ್ರೇಷ್ಠಾ; ಇತ್ತ ಬೀಗತಿ ಮೇಲೆ ಒಡವೆ ಕಳ್ಳತನದ ಆಪಾದನೆ ಹೊರಿಸಿದ ಕುಸುಮಾ

Bhagyalakshmi Serial: ತಾಂಡವ್‌ಗೆ ಮಗನನ್ನೂ ನೋಡಲು ಬಿಡದ ಶ್ರೇಷ್ಠಾ; ಇತ್ತ ಬೀಗತಿ ಮೇಲೆ ಒಡವೆ ಕಳ್ಳತನದ ಆಪಾದನೆ ಹೊರಿಸಿದ ಕುಸುಮಾ

HT Kannada Desk HT Kannada

Dec 24, 2023 08:00 AM IST

google News

'ಭಾಗ್ಯಲಕ್ಷ್ಮೀ' ಧಾರಾವಾಹಿ ಡಿಸೆಂಬರ್‌ 23ರ ಸಂಚಿಕೆ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಡಿಸೆಂಬರ್‌ 23ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.  

'ಭಾಗ್ಯಲಕ್ಷ್ಮೀ' ಧಾರಾವಾಹಿ ಡಿಸೆಂಬರ್‌ 23ರ ಸಂಚಿಕೆ
'ಭಾಗ್ಯಲಕ್ಷ್ಮೀ' ಧಾರಾವಾಹಿ ಡಿಸೆಂಬರ್‌ 23ರ ಸಂಚಿಕೆ (PC: Colors Kannada)

Bhagyalakshmi Kannada Serial: ಭಾಗ್ಯಾ, ಒಡವೆಗಳನ್ನು ಅಡ ಇಟ್ಟು ಬ್ಯಾಂಕ್‌ ಲೋನ್‌ ಕಟ್ಟುತ್ತಾಳೆ. ಅಷ್ಟರಲ್ಲಿ ಅವಳಿಗೆ ತನ್ಮಯ್‌ ಸ್ಕೂಲ್‌ನಿಂದ ಕರೆ ಬರುತ್ತದೆ. ಗುಂಡಣ್ಣ ಮತ್ತೊಬ್ಬ ಹುಡುಗನ ಜೊತೆ ಜಗಳ ಮಾಡಿಕೊಂಡು ಹೊಡೆದಾಡಿದ ಕಾರಣ ಸ್ಕೂಲ್‌ನವರು ಭಾಗ್ಯಾ ಹಾಗೂ ತಾಂಡವ್‌ ಇಬ್ಬರಿಗೂ ಕರೆ ಮಾಡಿ ಬರ ಹೇಳುತ್ತಾರೆ.

ತಂದೆ ತಾಯಿ ವಿಚಾರಕ್ಕೆ ಕ್ಲಾಸ್‌ಮೇಟ್‌ ಜೊತೆ ಗುಂಡಣ್ಣ ಫೈಟಿಂಗ್‌

ತನ್ಮಯ್‌ ವಿಚಾರ ಕೇಳಿ ಭಾಗ್ಯಾ ಶಾಲೆಗೆ ಓಡಿ ಹೋಗುತ್ತಾಳೆ. ಅಲ್ಲಿ ಗುಂಡಣ್ಣ ಮತ್ತೊಬ್ಬ ಹುಡುಗನಿಗೆ ಹೊಡೆದಿದ್ದಲ್ಲದೆ ತಾನೂ ಪೆಟ್ಟು ಮಾಡಿಕೊಂಡಿರುವುದನ್ನು ನೋಡಿ ಭಾಗ್ಯಾ ಗಾಬರಿ ಆಗುತ್ತಾಳೆ. ವಿಚಾರ ಏನೆಂದು ತಿಳಿದಾಗ ಭಾಗ್ಯಾಗೆ ಬೇಸರವಾಗುತ್ತದೆ. ಗುಂಡಣ್ಣನ ಕ್ಲಾಸ್‌ಮೆಟ್‌ ಹುಡುಗ, ನಿನ್ನ ತಂದೆ ತಾಯಿ ಡಿವೋರ್ಸ್‌ ಪಡೆಯುತ್ತಾರೆ, ಡಿವೋರ್ಸ್‌ ಆದ ನಂತರ ತನ್ವಿಯನ್ನು ತಾಯಿ ಬಳಿ, ನಿನ್ನನ್ನು ತಂದೆ ಜೊತೆ ಕಳಿಸುತ್ತಾರೆ. ನಿಮ್ಮ ತಂದೆ ತಾಯಿ ಎಂದಿಗೂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳಿದ ಕಾರಣ ಆ ಮಾತು ನೋವಾಗಿ ತನ್ಮಯ್‌ ಅವನಿಗೆ ಹೊಡೆದಿರುತ್ತಾನೆ. ಈ ವಿಚಾರ ತಿಳಿದ ಗುಂಡಣ್ಣನ ಕ್ಲಾಸ್‌ ಟೀಚರ್‌ ಇದು ಮಕ್ಕಳ ಸಮಸ್ಯೆ ಅಲ್ಲ , ಕೌಟುಂಬಿಕ ಸಮಸ್ಯೆ. ನಿಮ್ಮ ಪತಿಯನ್ನು ಕರೆಸಿ ಇಲ್ಲದಿದ್ದರೆ ಅದು ಮಕ್ಕಳ ಮೇಲೆ ಬಹಳ ಪ್ರಭಾವ ಬೀರುತ್ತದೆ ಎನ್ನುತ್ತಾರೆ.

ಕ್ಲಾಸ್‌ ಟೀಚರ್‌, ಗುಂಡಣ್ಣನಿಗೆ ಕ್ಲಾಸ್‌ಗೆ ಹೋಗಲು ಹೇಳಿದಾಗ ಆತ ಒಪ್ಪುವುದಿಲ್ಲ. ಅಪ್ಪ ಇಲ್ಲಿಗೆ ಬರಲಿ ,ಅಮ್ಮನಿಗೆ ಡಿವೋರ್ಸ್‌ ಕೊಡುವುದಿಲ್ಲ . ಅಕ್ಕ ಹಾಗೂ ನನ್ನನ್ನು ಶೇರ್‌ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರೆ ಮಾತ್ರ ನಾನು ಕ್ಲಾಸ್‌ಗೆ ಹೋಗುತ್ತೇನೆ ಎನ್ನುತ್ತಾನೆ. ಅದಕ್ಕೂ ಮುನ್ನ ತಾಂಡವ್‌ಗೆ ಮಗನ ವಿಚಾರ ತಿಳಿದು ಸ್ಕೂಲ್‌ಗೆ ಹೊರಡುವಾಗ ಅವನನ್ನು ಶ್ರೇಷ್ಠಾ ತಡೆಯುತ್ತಾಳೆ. ಇದೆಲ್ಲಾ ಭಾಗ್ಯಾ ಆಡುತ್ತಿರುವ ನಾಟಕ, ನೀನು ಮನೆಗೆ ಬರಬೇಕು ಎಂದು ಮಗನಿಗೆ ಹೇಳಿಸಿ ಈ ನಾಟಕ ಮಾಡುತ್ತಿದ್ದಾಳೆ. ತನ್ಮಯ್‌ ಎಷ್ಟು ಸೈಲೆಂಟ್‌ ಹುಡುಗ ಅಂತದ್ದರಲ್ಲಿ ಆ ಹುಡುಗ ಸ್ಕೂಲ್‌ನಲ್ಲಿ ಗಲಾಟೆ ಮಾಡುತ್ತಾನೆ ಎಂದರೆ ಹೇಗೆ ನಂಬುತ್ತೀಯ? ನೀನು ಮನೆಗೆ ಬರಲಿ ಎಂದು ಭಾಗ್ಯಾ, ಮಗನಿಗೆ ಹೀಗೆಲ್ಲಾ ಹೇಳಿಕೊಟ್ಟು ನಾಟಕ ಮಾಡಿಸುತ್ತಿರುವುದಾಗಿ ಶ್ರೇಷ್ಠಾ, ತಾಂಡವ್‌ ತಲೆಗೆ ತುಂಬುತ್ತಾಳೆ.

ಶ್ರೇಷ್ಠಾ ಚಾಡಿ ಮಾತೇ ತಾಂಡವ್‌ಗೆ ಮುತ್ತಿನ ನುಡಿಗಳು

ಅಷ್ಟರಲ್ಲಿ ಭಾಗ್ಯಾ ಮತ್ತೊಮ್ಮೆ ತಾಂಡವ್‌ಗೆ ಕರೆ ಮಾಡುತ್ತಾಳೆ. ಆದರೆ ತಾಂಡವ್‌ ಇದೆಲ್ಲಾ ನೀನೇ ಬೇಕಂತ ಮಾಡುತ್ತಿರುವ ನಾಟಕ ಎನ್ನುತ್ತಾನೆ. ಗಂಡನ ಮಾತುಗಳನ್ನು ಕೇಳಿ ಭಾಗ್ಯಾಗೆ ನೋವಾಗುತ್ತದೆ. ಎಷ್ಟು ನಂಬಿಸಲು ಯತ್ನಿಸಿದರೂ ತಾಂಡವ್‌ ಮಾತ್ರ ಭಾಗ್ಯಾಳನ್ನು ನಂಬುವುದಿಲ್ಲ. ಇದನ್ನೆಲ್ಲಾ ನೋಡಿ ಶ್ರೇಷ್ಠಾಗೆ ಒಳಗೊಳಗೇ ಖುಷಿ. ಹೇಗಾದರೂ ಮಾಡಿ ತಾಂಡವ್‌ನನ್ನು ನನ್ನ ಬಳಿ ಉಳಿಸಿಕೊಳ್ಳಬೇಕು. ಅವನನ್ನು ಮನೆಯಿಂದ ದೂರ ಮಾಡಬೇಕು ಅನ್ನೋದು ಶ್ರೇಷ್ಠಾ ಉದ್ದೇಶ. ಆದರೆ ಇದ್ಯಾವುದೂ ಗೊತ್ತಿಲ್ಲದ ತಾಂಡವ್‌ ಆಕೆ ತಾಳಕ್ಕೆ ಕುಣಿಯುತ್ತಿದ್ದಾನೆ.

ಮನೆಯಲ್ಲಿ ಕುಸುಮಾ ಒಡವೆ ಹುಡುಕುವಾಗ ಅಲ್ಲಿ ನೆರೆಮನೆಯವರ ಒಡವೆ ಸಿಗುವುದಿಲ್ಲ. ಜೊತೆಗೆ ಆಕೆಯ ಒಡವೆಯೂ ಕಾಣಿಸುವುದಿಲ್ಲ. ಇಷ್ಟು ಜೋಪಾನವಾಗಿಟ್ಟಿದ್ದ ಒಡವೆ ಏನಾಯ್ತು ಎಂದು ಯೋಚಿಸುವಾಗ ಕುಸುಮಾಗೆ ಬೀಗತ್ತಿ ಮೇಲೆ ಅನುಮಾನ ಉಂಟಾಗುತ್ತದೆ. ನಿಜ ಹೇಳಿ ಸುನಂದಾ, ನೀವು ಮೊದಲೆಲ್ಲಾ ಒಡವೆ ವಿಚಾರವಾಗಿ ಬಹಳ ಸುಳ್ಳು, ಕಳ್ಳತನ ಮಾಡಿದ್ದೀರ, ಈ ಒಡವೆಯನ್ನೂ ನೀವೇ ಕದ್ದಿರಬೇಕು, ನಿಜ ಹೇಳಿ ನನಗೆ ಬಹಳ ಟೆನ್ಷನ್‌ ಆಗುತ್ತಿದೆ ಎಂದಾಗ ಸುನಂದಾಗೆ ಬೇಸರವಾಗುತ್ತದೆ. ನಿಮಗೆ ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕೆ ನಾವು ಈ ಮನೆಯಲ್ಲಿ ಇದ್ದೇವೆ. ಬೇಡ ಎಂದರೆ ಹೋಗುತ್ತೇವೆ ಆದರೆ ನೀವು ದಯವಿಟ್ಟು ಕಳ್ಳತನದ ಆರೋಪ ಹೊರಿಸಬೇಡಿ ಎನ್ನುತ್ತಾಳೆ. ಆದರೆ ಕುಸುಮಾಗೆ ಹಾಗೂ ಸುನಂದಾಗೆ ಪೂಜಾ ಬಗ್ಗೆಯೂ ಅನುಮಾನ, ಇವಳು ಕದ್ದಿದ್ರೂ ಕದ್ದಿರಬಹುದು ಯಾವುದಕ್ಕೂ ಫೋನ್‌ ಮಾಡಿ ವಿಚಾರಿಸಬೇಕು ಎಂದು ಸುನಂದಾ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.

ಶ್ರೇಷ್ಠಾ ಮಾತು ಕೇಳಿ ತಾಂಡವ್‌ ಮಗನನ್ನು ನೋಡಲು ಹೋಗದೆ ಅವಳ ಬಳಿಯೇ ಉಳಿಯುತ್ತಾನಾ? ಒಡವೆ ವಿಚಾರ ಕುಸುಮಾಗೆ ತಿಳಿಯಲಿದೆಯಾ ಅನ್ನೋದು ಸೋಮವಾರದ ಎಪಿಸೋಡ್‌ನಲ್ಲಿ ತಿಳಿಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ