logo
ಕನ್ನಡ ಸುದ್ದಿ  /  ಮನರಂಜನೆ  /  ಸಿರಿ ಕನ್ನಡದಲ್ಲಿ ಕಾಮಿಡಿ ದಿಗ್ಗಜರ ಹಾಸ್ಯ ದರ್ಬಾರ್‌ ಜತೆಗೆ ಭರ್ಜರಿ ಲಿಟಲ್ ಕಿಲಾಡಿಗಳ ಮನರಂಜನೆ

ಸಿರಿ ಕನ್ನಡದಲ್ಲಿ ಕಾಮಿಡಿ ದಿಗ್ಗಜರ ಹಾಸ್ಯ ದರ್ಬಾರ್‌ ಜತೆಗೆ ಭರ್ಜರಿ ಲಿಟಲ್ ಕಿಲಾಡಿಗಳ ಮನರಂಜನೆ

Sep 17, 2023 08:26 AM IST

google News

ಸಿರಿ ಕನ್ನಡದಲ್ಲಿ ಕಾಮಿಡಿ ದಿಗ್ಗಜರ ಹಾಸ್ಯ ದರ್ಬಾರ್‌ ಜತೆಗೆ ಭರ್ಜರಿ ಲಿಟಲ್ ಕಿಲಾಡಿಗಳ ಮನರಂಜನೆ

    • ಸಿರಿ ಕನ್ನಡ ವಾಹಿನಿ ಹಲವು ವಿಶೇಷ ಕಾರ್ಯಕ್ರಮಗಳ ಜತೆಗೆ ವೀಕ್ಷಕರ ಮುಂದೆ ಬಂದು ನಿಂತಿದೆ. ಹಾಸ್ಯ ದರ್ಬಾರ್‌ ಸೀಸನ್‌ 2ರ ಜತೆಗೆ ಇನ್ನೂ ಹಲವು ಶೋಗಳನ್ನು ಹೊತ್ತು ತಂದಿದೆ. 
ಸಿರಿ ಕನ್ನಡದಲ್ಲಿ ಕಾಮಿಡಿ ದಿಗ್ಗಜರ ಹಾಸ್ಯ ದರ್ಬಾರ್‌ ಜತೆಗೆ ಭರ್ಜರಿ ಲಿಟಲ್ ಕಿಲಾಡಿಗಳ ಮನರಂಜನೆ
ಸಿರಿ ಕನ್ನಡದಲ್ಲಿ ಕಾಮಿಡಿ ದಿಗ್ಗಜರ ಹಾಸ್ಯ ದರ್ಬಾರ್‌ ಜತೆಗೆ ಭರ್ಜರಿ ಲಿಟಲ್ ಕಿಲಾಡಿಗಳ ಮನರಂಜನೆ

Siri Kannada: ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಹೊಸ ಕಾರ್ಯಕ್ರಮಗಳೊಂದಿಗೆ ಒಂದೊಂದೆ ಯಶಸ್ವಿ ಹಂತಗಳನ್ನು ಏರುತ್ತಿರುವ ಸಿರಿಕನ್ನಡ ವಾಹಿನಿ ಇದೀಗ ಭರ್ಜರಿ ಮನರಂಜನೆ ಜತೆಗೆ ಆಗಮಿಸುತ್ತಿದೆ. ಆ ಪೈಕಿ ಕರ್ನಾಟಕದ ಹೆಸರಾಂತ ಹಾಸ್ಯ ದಿಗ್ಗಜರು ನಡೆಸಿಕೊಡುವ ಹಾಸ್ಯ ದರ್ಬಾರ್ ಸೀಸನ್ 2 ಹಾಗೂ ತಾಯಿ - ಮಗು ಭಾಗವಹಿಸುವ ಲಿಟಲ್ ಕಿಲಾಡೀಸ್ ಗೇಮ್ ಶೋ ಆರಂಭವಾಗಿದೆ. ಈ ವಿಶೇಷ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

ಸಿರಿಕನ್ನಡ ವಾಹಿನಿಯ ರಾಜೇಶ್ ರಾಜಘಟ್ಟ‌, ಹಾಸ್ಯ ದರ್ಬಾರ್ ಸೀಸನ್ 2ರಲ್ಲಿ ಭಾಗಿಯಾಗಿರುವ ಎಲ್ಲಾ ಹಾಸ್ಯ ದಿಗ್ಗಜರು ಹಾಗೂ ಲಿಟಲ್ ಕಿಲಾಡೀಸ್ ಕಾರ್ಯಕ್ರಮದ ನಿರ್ದೇಶಕ ಮಂಜೇಶ್ ಮಾಹಿತಿ ನೀಡಿದರು. ನಿರೂಪಕಿ ರಶ್ಮಿತಾ ಚಂಗಪ್ಪ ಸಹ ಈ ವೇಳೆ ಇದ್ದರು. ಈ ವೇಳೆ ಮಾತನಾಡಿದ ಸಿರಿಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ, ನಾಡಿನ ಪ್ರತಿಯೊಬ್ಬ ವೀಕ್ಷಕರನ್ನು ತಲುಪುವಂತಹ ಎರಡು ಜನಪ್ರಿಯ ಕಾರ್ಯಕ್ರಮಗಳು ನಮ್ಮ ವಾಹಿನಿಯಲ್ಲಿ ಆರಂಭವಾಗಿವೆ. ಅದರಲ್ಲಿ ನಾಡಿನ ಪ್ರಮುಖ ಹಾಸ್ಯ ದಿಗ್ಗಜರು ನಡೆಸಿಕೊಡುವ ಹಾಸ್ಯ ದರ್ಬಾರ್ ಸೀಸನ್ 2 ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 8 ರಿಂದ 9 ರವರೆಗೂ ಪ್ರಸಾರವಾಗಲಿದೆ ಎಂದರು.

ಮುಂದುವರಿದು, "ಮಕ್ಕಳು ಹಾಗೂ ಅಮ್ಮಂದಿರನ್ನು ಒಂದೇ ವೇದಿಕೆಯಲ್ಲಿ ಒಟ್ಟಾಗಿಸಿ ತಾಯಿ ಮಗುವಿನ ಭಾವನೆ, ಮನರಂಜನೆ, ಆಟ, ಡ್ರಾಮಾ ಹಾಗೂ ನಾಯಕತ್ವ ನಿರ್ವಹಣೆಯನ್ನು ಒಳಗೊಂಡ ಲಿಟಲ್ ಕಿಲಾಡೀಸ್ ಎಂಬ ವಿಭಿನ್ನ ಗೇಮ್ ಶೋ ಸೋಮವಾರದಿಂದ ಶುಕ್ರವಾರ ಸಂಜೆ 6ರಿಂದ 7ಗಂಟೆಯವರೆಗೆ ಪ್ರಸಾರವಾಗಲಿದೆ. ನಟಿ ರಶ್ಮಿತಾ ಚಂಗಪ್ಪ ಈ ಶೋನ ನಿರೂಪಣೆ ಮಾಡುತ್ತಿದ್ದಾರೆ" ಎಂದರು.

ಹಾಸ್ಯ ದರ್ಬಾರ್ ಸೀಸನ್ 2ನಲ್ಲಿ ಭಾಗವಹಿಸುತ್ತಿರುವ ಹಿರೇಮಗಳೂರು ಕಣ್ಣನ್, ಮುಖ್ಯಮಂತ್ರಿ ಚಂದ್ರು, ರಿಚರ್ಡ್ ಲೂಯಿಸ್, ಪ್ರಾಣೇಶ್, ಪ್ರೊ. ಕೃಷ್ಣೇ ಗೌಡ, ಎಂ.ಎಸ್ ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ್, ಯಶವಂತ ಸರ್ ದೇಶಪಾಂಡೆ, ಗುಂಡುರಾವ್, ದುಂಡಿರಾಜ್, ನರಸಿಂಹ ಜೋಶಿ, ಮಹಾಮನೆ ಮುಂತಾದವರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಗೌರಿಗಣೇಶ ಹಬ್ಬದ ಪ್ರಯುಕ್ತ ಲಿಟಲ್ ಕಿಲಾಡೀಸ್ ಕಾರ್ಯಕ್ರಮದಲ್ಲಿ ಟಗರು ಖ್ಯಾತಿಯ ಮಾನ್ವಿತಾ ಕಾಮತ್ ಎಲ್ಲರನ್ನು ರಂಜಿಸಲಿದ್ದಾರೆ. ಇದರೊಟ್ಟಿಗೆ ಇತರ ಕಾರ್ಯಕ್ರಮಗಳನ್ನು ವೀಕ್ಷಿಸುವ ವೀಕ್ಷಕರಿಗೆ ವರಮಹಾಲಕ್ಷ್ಮೀ ಹಬ್ಬದಿಂದ ದೀಪಾವಳಿಯವರೆಗೂ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ಸಿರಿಕನ್ನಡ ವಾಹಿನಿ ನೀಡುತ್ತಿದೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ