logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಕೊನೇ ಕ್ಷಣದಲ್ಲಿ ಘಟಿಸಿತು ಪವಾಡ! ನಿಲ್ಲುವ ಹಂತಕ್ಕೆ ಬಂದ ಸೀತಾ- ರುದ್ರಪ್ರತಾಪ್‌ ಕಲ್ಯಾಣ

Seetha Rama Serial: ಕೊನೇ ಕ್ಷಣದಲ್ಲಿ ಘಟಿಸಿತು ಪವಾಡ! ನಿಲ್ಲುವ ಹಂತಕ್ಕೆ ಬಂದ ಸೀತಾ- ರುದ್ರಪ್ರತಾಪ್‌ ಕಲ್ಯಾಣ

Dec 27, 2023 11:11 AM IST

google News

Seetha Rama Serial: ಕೊನೇ ಕ್ಷಣದಲ್ಲಿ ಘಟಿಸಿತು ಪವಾಡ! ನಿಲ್ಲುವ ಹಂತಕ್ಕೆ ಬಂದ ಸೀತಾ- ರುದ್ರಪ್ರತಾಪ್‌ ಕಲ್ಯಾಣ

    • Seetha Rama Serial Episode: ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್‌ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಹಿಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಯಿತು, ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಗಲಿದೆ ಎಂಬ ವಿವರ ಇಲ್ಲಿದೆ. ಸೀತಾಳ ಮದುವೆ ನಡುವೆ, ರುದ್ರಪ್ರತಾಪ್‌ನ ಅಸಲಿ ಮುಖ ಸಿಹಿಗೆ ಗೊತ್ತಾಗಿದೆ.
Seetha Rama Serial: ಕೊನೇ ಕ್ಷಣದಲ್ಲಿ ಘಟಿಸಿತು ಪವಾಡ! ನಿಲ್ಲುವ ಹಂತಕ್ಕೆ ಬಂದ ಸೀತಾ- ರುದ್ರಪ್ರತಾಪ್‌ ಕಲ್ಯಾಣ
Seetha Rama Serial: ಕೊನೇ ಕ್ಷಣದಲ್ಲಿ ಘಟಿಸಿತು ಪವಾಡ! ನಿಲ್ಲುವ ಹಂತಕ್ಕೆ ಬಂದ ಸೀತಾ- ರುದ್ರಪ್ರತಾಪ್‌ ಕಲ್ಯಾಣ

Seetha Rama Serial: ಸೀತಾಳ ಬಳಿ ಬಂದು ನಾನು ಮಲೇಷ್ಯಾಕ್ಕೆ ಹೊರಟಿರುವ ವಿಚಾರವನ್ನು ಈಗಾಗಲೇ ಹೇಳಿಕೊಂಡಿದ್ದಾನೆ ರಾಮ. ನಡೀತಿರೋ ಮದುವೆಗೆ ನೀವೇ ಕಾರಣ, ನೀವೇ ಇರದಿದ್ದರೆ ಹೇಗೆ ಎಂದಿದ್ದಾಳೆ ಸೀತಾ. ಬಾಸ್‌ ಕರೆದಾಗ ಹೋಗಲೇಬೇಕು ಎಂದಿದ್ದಾನೆ ರಾಮ. ನಾನು ನಿನ್ನನ್ನು ಹೋಗೋಕೆ ಬಿಡಲ್ಲ, ನನಗೆ ನೀನು ಬೇಕು ಎಂದಿದ್ದಾಳೆ ಸಿಹಿ. ನಾನು ಬದುಕಿರೋವರೆಗೂ ನೀನು ನನ್ನ ಎದೆಯಲ್ಲಿಯೇ ಇರುತ್ತಿಯಾ ಎಂದು ಸಿಹಿಯನ್ನು ಸಂಭಾಳಿಸಿದ್ದಾನೆ ರಾಮ. ಸಿಹಿ ಮಾತ್ರ ರಾಮನನ್ನು ಬಿಗಿದಪ್ಪಿ ಕಣ್ಣೀರಿಟ್ಟಿದ್ದಾಳೆ. ಇಬ್ಬರಿಗೂ ಕೊನೆಯದಾಗಿ ಬೈ ಹೇಳಿ ಹೊರಟೇ ಬಿಟ್ಟಿದ್ದಾನೆ ರಾಮ.

ರಾಮ್‌ ಮತ್ತೆ ಮಲೇಷ್ಯಾಕ್ಕೆ ತೆರಳುತ್ತಿದ್ದಿದ್ದಕ್ಕೆ ಮನೆ ಮಂದಿ ಬೇಸರಲ್ಲಿದ್ದರೆ, ಭಾರ್ಗವಿ ಮಾತ್ರ ಗೆದ್ದು ಬೀಗುತ್ತಿದ್ದಾಳೆ. ತನ್ನ ಹಳೇ ಛಾಳಿ ಮುಂದುವರಿಸುವ ಪ್ಲಾನ್‌ನಲ್ಲಿದ್ದಾಳೆ. ತಾತನ ಮುಂದೆ ಮತ್ತೆ ಮಲೇಷ್ಯಾಕ್ಕೆ ಹೊರಡುವ ಬಗ್ಗೆ ತಿಳಿಸಿದ್ದಾನೆ ರಾಮ. ಆದರೆ, ತಾತ ಸೂರ್ಯಪ್ರಕಾಶ್‌ ಮಾತ್ರ, ಮೊಮ್ಮಗನ ನಿರ್ಧಾರವನ್ನು ಒಪ್ಪುತ್ತಿಲ್ಲ. ಇದೇ ವೇಳೆ ಮತ್ತೆ ಅಡ್ಡ ಬಂದ ಭಾರ್ಗವಿ, ಹೋಗುವವರನ್ನು ಕಟ್ಟಿ ಹಾಕೋಕೆ ಆಗಲ್ಲ ಮಾವಯ್ಯ ಎಂದು ಪರೋಕ್ಷವಾಗಿ, ರಾಮ ಇಲ್ಲಿಂದ ತೊಲಗಲಿ ಎಂದು ಹರಸಿದ್ದಾಳೆ.

ಇತ್ತ ಕಾರ್‌ನಲ್ಲಿ ಅಶೋಕ ಮತ್ತು ರಾಮನ ನಡುವೆ ಮಾತುಕತೆ ಮುಂದುವರಿದಿದೆ. ಸೀತಾಗಿನ್ನು ಮದುವೆ ಆಗಿಲ್ಲ. ನಿನಗಿನ್ನು ಟೈಮಿದೆ ಎಂದು ಮನವೊಲಿಸಲು ಪ್ರಯತ್ಜಿಸಿದ್ದಾನೆ. ಆದರೆ ರಾಮ ಮಾತ್ರ ತನ್ನ ನಿರ್ಧಾರ ಬದಲಿಸುತ್ತಿಲ್ಲ. ಸೀತಾಳ ಫೋನ್‌ ಬಂದರೂ ಪಿಕ್‌ ಮಾಡದೇ, ನೇರವಾಗಿ ಫೋನ್‌ ಸ್ವಿಚ್‌ ಆಫ್‌ ಮಾಡಿದ್ದಾನೆ. ಮಲೇಷ್ಯಾಕ್ಕೆ ಹೋದಮೇಲಷ್ಟೇ ಕಾಲ್‌ ಮಾಡುವುದಾಗಿ ಹೇಳಿದ್ದಾನೆ.

ರಾಮ ಮನೆಯಿಂದ ಹೆಜ್ಜೆ ಹೊರಗಿಡುತ್ತಿದ್ದಂತೆ, ಒಳಗೊಳಗೆ ಗೆದ್ದ ಖುಷಿಯಲ್ಲಿದ್ದಾಳೆ. ನಿಟ್ಟುಸಿರು ಬಿಟ್ಟು, ಮೊಸಳೆ ಕಣ್ಣೀರು ಒರೆಸಿಕೊಂಡಿದ್ದಾಳೆ. ನೇರವಾಗಿ ಚರಂಡಿಗೆ ಫೋನ್‌ ಮಾಡಿ, ನಿಮ್ಮ ಬಾಸ್‌ ಆಫೀಸ್‌ ಬಿಟ್ಟು ಹೋಗಾಯ್ತು. ಇನ್ಮೇಲೆ ನಿಮ್ಮ ಮೇಲೆ ಜವಾಬ್ದಾರಿ ಜಾಸ್ತಿ ಇರುತ್ತೆ. ಆಫೀಸ್‌ನಲ್ಲಿ ಏನೆಲ್ಲ ನಡಿಯುತ್ತೆ ಎಂಬುದನ್ನು ಪಿನ್‌ ಟು ಪಿನ್‌ ನನಗೆ ಮಾಹಿತಿ ಕೊಡಬೇಕು ಎಂದಿದ್ದಾಳೆ. ಥ್ಯಾಂಕ್ಯು ಸೀತಾ, ಹ್ಯಾಪಿ ಮ್ಯಾರೀಡ್‌ ಲೈಫ್ ಎಂದು ಕುಹಕ‌ ನಗೆ ಬೀರಿದ್ದಾಳೆ.

ಇತ್ತ ಸೀತಾ ಮನೆಗೆ ಇಬ್ಬರು ವ್ಯಕ್ತಿಗಳ ಆಗಮನವಾಗಿದೆ. ಇಲ್ಲಿ 204 ಮನೆ ಮಾರುವುದು ಇದೆಯಂತಲ್ಲ. ಆ ಮನೆ ಎಲ್ಲಿದೆ ಎಂದು ತಾತನ ಬಳಿ ಪ್ರಶ್ನಿಸಿದ್ದಾರೆ. ಆ ಥರ ಸೇಲ್‌ಗೆ ಯಾವ ಮನೆಯೂ ಇಲ್ಲವಲ್ಲ ಎಂದಿದ್ದಾರೆ. ಮಧ್ಯ ಪ್ರವೇಶಿಸಿದ ಸುಲೋಚನಾ, ಇಲ್ಲಿ ಮನೆ ನೋಡಲು ಬಂದಿರೋ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಮನೆ ಬಳಿ ಕಳುಹಿಸಿದ್ದಾಳೆ. ಈ ವಿಚಾರವನ್ನು ರುದ್ರಪ್ರತಾಪ್‌ ಗಮನಕ್ಕೂ ತಂದಿದ್ದಾಳೆ.

ಆ ಇಬ್ಬರು ವ್ಯಕ್ತಿಗಳನ್ನು ಭೇಟಿಯಾದ ರುದ್ರಪ್ರತಾಪ್‌, ಮದುವೆ ಆದ ಬಳಿಕ ಈ ಪ್ರಾಪರ್ಟಿಯನ್ನು ನಿಮ್ಮ ಹೆಸರಿಗೆ ಮಾಡಿಕೊಡುವ ಬಗ್ಗೆ ಗದರಿದ್ದಾನೆ. ಇವತ್ತೇ ನನ್ನ ಮದುವೆ. ತಾಳಿ ಕಟ್ಟುವ ವರೆಗೂ ಸ್ವಲ್ಪ ಸಮಾಧಾನವಾಗಿರಿ ಎಂದು ಹೇಳಿ ಕಳುಹಿಸಿದ್ದಾನೆ. ಶಾಸ್ತ್ರ ಬೇಗ ಮುಗಿಬೇಕು. ಮದುವೆ ಮುಗೀತಿದ್ದಂತೆ, ಸಿಹಿ ಅನಾಥಾಶ್ರಮ ಸೇರ್ಕೋಬೇಕು. ಅವಳು ಯಾವುದೇ ಕಾರಣಕ್ಕೂ ನನ್ನ ಕಣ್ಣಮುಂದಿರಬಾರದು ಎಂದು ಸುಲೋಚನಾಗೆ ಆಗ್ರಹಿಸಿದ್ದಾನೆ.

ಇತ್ತ ಕಣ್ಣಾಮುಚ್ಚಾಲೆ ಆಟ ಆಡುತ್ತ, ಮನೆಯಲ್ಲಿಯೇ ಅಡಗಿ ಕೂತಿದ್ದ ಸಿಹಿ, ಅತ್ತಿಗೆ ಮತ್ತು ರುದ್ರಪ್ರತಾಪನ ಮಾತುಗಳನ್ನು ಕೇಳಿಸಿಕೊಂಡು ಕಣ್ಣೀರಿಟ್ಟಿದ್ದಾಳೆ. ಹಾಗಾದರೆ, ಸಿಹಿ ಈ ವಿಚಾರವನ್ನು ಸೀತಾಳ ಗಮನಕ್ಕೆ ತರ್ತಾಳಾ? ಅಥವಾ ತನ್ನ ಫ್ರೆಂಡ್‌ ರಾಮನಿಗೆ ಹೇಳಿ ಮದುವೆ ನಿಲ್ಲಿಸುತ್ತಾಳಾ? ಮಲೇಷ್ಯಾಕ್ಕೆ ಹೊರಟು ನಿಂತ ರಾಮ ಮದುವೆ ನಿಲ್ಲಿಸಲು ಓಡೋಡಿ ಬರ್ತಾನಾ? ಈ ಕುತೂಹಲ ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ