logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಸೀತಾ ಮೇಲೆ ಕಣ್ಣಿಟ್ಟಿರೋ ರುದ್ರಪ್ರತಾಪನಿಗೆ ಉತ್ತರ ಕೊಡೋಕೆ ರಾಮನ ಖಡಕ್‌ ಎಂಟ್ರಿ!

Seetha Rama: ಸೀತಾ ಮೇಲೆ ಕಣ್ಣಿಟ್ಟಿರೋ ರುದ್ರಪ್ರತಾಪನಿಗೆ ಉತ್ತರ ಕೊಡೋಕೆ ರಾಮನ ಖಡಕ್‌ ಎಂಟ್ರಿ!

Sep 07, 2023 05:53 AM IST

google News

Seetha Rama: ಸೀತಾ ಮೇಲೆ ಕಣ್ಣಿಟ್ಟಿರೋ ರುದ್ರಪ್ರತಾಪನಿಗೆ ಉತ್ತರ ಕೊಡೋಕೆ ಶ್ರೀರಾಮನ ಖಡಕ್‌ ಎಂಟ್ರಿ!

    • ಮನೆ ಹುಡುಕಾಟಕ್ಕಿಳಿದಿರೋ ಸೀತಾಗೆ ರಾಮ ಜತೆಯಾಗಿದ್ದಾನೆ. ಇಬ್ಬರೂ ಸೇರಿ ಬರೋಬ್ಬರಿ ನವ ಗ್ರಹಗಳನ್ನು ಸುತ್ತಿದ್ದಾರೆ. ಆದರೂ ಇಬ್ಬರಿಗೂ ಮನೆ ಇಷ್ಟವಾಗಿಲ್ಲ. ಹೀಗೀರುವಾಗಲೇ ರುದ್ರಪ್ರತಾಪನಿಂದ ಸೀತಾಗೆ ಕರೆ ಬಂದಿದೆ. ಮನೆ ಇದೆ ಬನ್ನಿ ಎಂದೂ ಹೇಳಿದ್ದಾನೆ. 
Seetha Rama: ಸೀತಾ ಮೇಲೆ ಕಣ್ಣಿಟ್ಟಿರೋ ರುದ್ರಪ್ರತಾಪನಿಗೆ ಉತ್ತರ ಕೊಡೋಕೆ ಶ್ರೀರಾಮನ ಖಡಕ್‌ ಎಂಟ್ರಿ!
Seetha Rama: ಸೀತಾ ಮೇಲೆ ಕಣ್ಣಿಟ್ಟಿರೋ ರುದ್ರಪ್ರತಾಪನಿಗೆ ಉತ್ತರ ಕೊಡೋಕೆ ಶ್ರೀರಾಮನ ಖಡಕ್‌ ಎಂಟ್ರಿ!

Seetha Rama: ರಾಮನ ಜತೆಗೆ ಮನೆ ಹುಡುಕಾಟಕ್ಕಿಳಿದಿದ್ದಾಳೆ ಸೀತಾ. ಎರಡು ಲಕ್ಷ ಅಡ್ವಾನ್ಸ್‌ 25 ಸಾವಿರ ಬಾಡಿಗೆ ಎಂದಿದ್ದೇ ತಡ. ಆ ಮನೆ ಬಿಟ್ಟು ಹೊರನಡೆದ ಸೀತಾ ಬೇರೆ ಮನೆಯ ಶೋಧ ನಡೆಸಿದ್ದಾಳೆ. ಮತ್ತೊಂದು ಮನೆ ನೋಡಿದ ಸೀತಾಗೆ, ಮನೆ ಓಕೆ ಆಗಿದೆ. ಆದರೆ, ನಾನು ಮತ್ತು ಮಗಳು ಇಬ್ಬರೇ ಇರುವ ಕಾರಣಕ್ಕೆ, ಮನೆ ನೀಡಲ್ಲ ಎಂದಿದ್ದಾರೆ ಮನೆ ಮಾಲೀಕ.‌

ಸಮಾಜ ಒಂಟಿ ಹೆಣ್ಣನ್ನು ನೋಡುವ ರೀತಿ ಕಂಡು ಸೀತಾ ಬೇಸರಗೊಂಡಿದ್ದಾಳೆ. ರಾಮನಿಗೂ ಸೀತಾ ಬಗ್ಗೆ ಮನೆ ಓನರ್‌ ಮಾತನಾಡಿದ್ದನ್ನು ನೋಡಿ, ಕೊಂಚ ಸಿಟ್ಟು ಬಂದಂತಿದೆ. ಇದು ನಾವು ಮಾಡಿದ್ದಲ್ಲ, ನಾವು ಹುಟ್ಟುವುದಕ್ಕೂ ಮುನ್ನವೇ ಸೃಷ್ಟಿಯಾಗಿದ್ದು ಎಂದು ಮಾತನಾಡಿಕೊಂಡು, ಮತ್ತೊಂದು ಮನೆಯತ್ತ ಹೆಜ್ಜೆ ಹಾಕಿದ್ದಾರೆ.

ಹೋದಲೆಲ್ಲ ಇಬ್ಬರನ್ನೂ ನೋಡಿ ನೀವು ಗಂಡ ಹೆಂಡತಿನಾ ಎಂಬ ಪ್ರಶ್ನೆಯೇ ಇಬ್ಬರಿಗೂ ಎದುರಾಗಿತ್ತು. ಅದೇ ರೀತಿ ಒಂಭತ್ತನೇ ಮನೆಗೆ ಇಬ್ಬರ ಎಂಟ್ರಿಯಾಗಿದೆ. ಅಲ್ಲೂ ಸಹ ಮನೆ ಓನರ್‌ ಕಡೆಯಿಂದ ಅದೇ ಮಾತು. ನಿಮ್ಮ ಥರ ಫ್ಯಾಮಿಲಿಗೆ ಮನೆ ಕೊಡೋದು ಎಂದಿದ್ದಾರೆ. ನೀವು ಗಂಡ ಹೆಂಡತಿನಾ ಎಂದು ಕೇಳುತ್ತಿದ್ದಂತೆ, ಹೌದು ಎಂಬ ಉತ್ತರ ರಾಮ್‌ ನೀಡಿದ್ದಾನೆ.

ರಾಮ್‌ ಹಾಗೆ ಹೇಳಿದ್ದೆ ತಡ, ರಾಮ್‌ ಮೇಲೆ ಮುನಿಸಿಕೊಂಡು, ಅಲ್ಲಿಂದ ಕಾಲ್ಕಿತ್ತಿದ್ದಾಳೆ ಸೀತಾ. ಅದ್ಹೇಗೆ ಗಂಡ ಎಂದು ಹೇಳಿಕೊಂಡ್ರಿ ಎಂದು ರಾಮ್‌ ಮೇಲೆ ಕೋಪಗೊಂಡಿದ್ದಾಳೆ. ಒಳ್ಳೆಯದನ್ನು ಬಯಸುವ ರಾಮ್‌ಗೆ ಇದೀಗ ಸೀತಾಳಿಂದ ಕೆಟ್ಟದಾಗುತ್ತಿದೆ. ನನ್ನ ಜೀವನ ನಾನು ನೋಡಿಕೊಳ್ಳುತ್ತೇನೆ ಎಂದು ಸೀತಾ ಕೋಪದಲ್ಲಿಯೇ ಮಾತನಾಡಿದ್ದಾಳೆ.

ನಡು ದಾರಿಯಲ್ಲಿಯೇ ರಾಮನನ್ನು ಬಿಟ್ಟು ನಡೆದಿದ್ದಾಳೆ ಸೀತಾ. ಇತ್ತ ಸೀತಾಗೆ ಲಾಯರ್‌ ರುದ್ರಪ್ರತಾಪ್‌ ಕಡೆಯಿಂದ ಫೋನ್‌ ಬಂದಿದೆ. ಎಷ್ಟು ಅಂತ ಮನೆ ಹುಡುಕುತ್ತೀರಾ, ನಿಮಗಾಗಿಯೇ ಮನೆ ನಾನು ರೆಡಿ ಮಾಡಿದ್ದೀನಿ ಎನ್ನುತ್ತಾನೆ. ಸೀತಾ ಬೇಡ ಎಂದರೂ ಒತ್ತಾಯ ಮಾಡುತ್ತಿದ್ದಾನೆ ರುದ್ರಪ್ರತಾಪ್.‌ ಮನೆ ಇಷ್ಟ ಆದ್ರೆ ಇರಬಹುದು, ನಿಮ್ಮಿಷ್ಟ ಎನ್ನುತ್ತಿದ್ದಂತೆ, ಬರಲು ಒಪ್ಪುತ್ತಾಳೆ ಸೀತಾ.

ಮನೆಗೆ ಬರುವ ಸೀತಾಳ ಜತೆ ಮಾತನಾಡುತ್ತಲೇ, ತನ್ನ ವಕ್ರ ಬುದ್ಧಿಯನ್ನು ತೋರಿಸುತ್ತಾನೆ ರುದ್ರಪ್ರತಾಪ್‌, ಸೀತಾಳನ್ನು ಮುಟ್ಟಲು ಪ್ರಯತ್ನಿಸುತ್ತಾನೆ. ಲಾಯರ್‌ನ ಈ ವರ್ತನೆ ಸೀತಾಗೆ ಕೊಂಚ ಭಯ ಹುಟ್ಟಿಸುತ್ತದೆ. ಮಾತನಾಡುತ್ತಲೇ ಬಾಗಿಲನ್ನು ಲಾಕ್‌ ಮಾಡಲು ಮುಂದಾಗುತ್ತಾನೆ. ಆ ಕ್ಷಣಕ್ಕೆ ಹೀರೋ ರಾಮನ ಖಡಕ್‌ ಎಂಟ್ರಿಯಾಗುತ್ತದೆ. ಲಾಯರ್‌ ಮೊಗದಲ್ಲಿ ಸಿಟ್ಟು ಕಾಣಿಸಿದರೆ, ಸೀತಾ ಮೊಗದಲ್ಲಿನ ಭಯ ಮಾಯವಾಗುತ್ತದೆ. ರಾಮ್‌ ಎಂಟ್ರಿಯ ಹಿನ್ನೆಲೆ ಏನು? ಸೀತಾಳ ಸಿಹಿ ಕರುಗುತ್ತಾ? ಅಥವಾ ರಾಮನನ್ನು ಸೀತಾಳೇ ಮೆಸೆಜ್‌ ಮೂಲಕ ಕರೆಸಿಕೊಂಡಿರಬಹುದಾ?

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ