logo
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ಟಿಆರ್‌ಪಿಯಲ್ಲಿ ಜೀ ಕನ್ನಡ ಸೀರಿಯಲ್‌ಗಳದ್ದೇ ಪಾರುಪತ್ಯ; ಪುಟ್ಟಕ್ಕನಿಗೆ ಮೊದಲ ಸ್ಥಾನ, ಸ್ಪರ್ಧಾ ಕಣದಲ್ಲಿ ಸೀತಾ ರಾಮ

Kannada Serial TRP: ಟಿಆರ್‌ಪಿಯಲ್ಲಿ ಜೀ ಕನ್ನಡ ಸೀರಿಯಲ್‌ಗಳದ್ದೇ ಪಾರುಪತ್ಯ; ಪುಟ್ಟಕ್ಕನಿಗೆ ಮೊದಲ ಸ್ಥಾನ, ಸ್ಪರ್ಧಾ ಕಣದಲ್ಲಿ ಸೀತಾ ರಾಮ

Aug 03, 2023 03:53 PM IST

google News

ಟಿಆರ್‌ಪಿಯಲ್ಲಿ ಜೀ ಕನ್ನಡ ಸೀರಿಯಲ್‌ಗಳದ್ದೇ ಪಾರುಪತ್ಯ; ಪುಟ್ಟಕ್ಕನಿಗೆ ಮೊದಲ ಸ್ಥಾನ, ಸ್ಪರ್ಧಾ ಕಣದಲ್ಲಿ ಸೀತಾ ರಾಮ

    • ಈ ವಾರದ ಟಿಆರ್‌ಪಿ ಲೆಕ್ಕಾಚಾರದ ಪ್ರಕಾರ ಎಂದಿನಂತೆ ಪುಟ್ಟಕ್ಕ ಟಾಪ್‌ನಲ್ಲಿದ್ದಾಳೆ. ಗಟ್ಟಿಮೇಳ ಎರಡನೇ ಸ್ಥಾನದಲ್ಲಿ ಗಟ್ಟಿಯಾಗಿ ಕುಳಿತಿದೆ. ಅಚ್ಚರಿ ರೀತಿಯಲ್ಲಿ ಸೀತಾ ರಾಮ ಮೂರನೇ ಸ್ಥಾನಕ್ಕೆ ಜಿಗಿದಿದೆ. ಹೀಗಿದೆ ವಾರದ ಟಾಪ್‌ ಸೀರಿಯಲ್‌ಗಳ ಬಗೆಗಿನ ಮಾಹಿತಿ.
ಟಿಆರ್‌ಪಿಯಲ್ಲಿ ಜೀ ಕನ್ನಡ ಸೀರಿಯಲ್‌ಗಳದ್ದೇ ಪಾರುಪತ್ಯ; ಪುಟ್ಟಕ್ಕನಿಗೆ ಮೊದಲ ಸ್ಥಾನ, ಸ್ಪರ್ಧಾ ಕಣದಲ್ಲಿ ಸೀತಾ ರಾಮ
ಟಿಆರ್‌ಪಿಯಲ್ಲಿ ಜೀ ಕನ್ನಡ ಸೀರಿಯಲ್‌ಗಳದ್ದೇ ಪಾರುಪತ್ಯ; ಪುಟ್ಟಕ್ಕನಿಗೆ ಮೊದಲ ಸ್ಥಾನ, ಸ್ಪರ್ಧಾ ಕಣದಲ್ಲಿ ಸೀತಾ ರಾಮ

Kannada Serial TRP: ಕನ್ನಡ ಕಿರುತೆರೆಯಲ್ಲೀಗ ಸಾಕಷ್ಟು ಪ್ರಯೋಗಗಳಾಗುತ್ತಿವೆ. ಅದ್ದೂರಿತನ ಎಂಬುದು ಅದರ ಒಂದು ಭಾಗವಾದರೆ, ವೀಕ್ಷಕರನ್ನು ಹೇಗೆ ಸೆಳೆಯಬೇಕು ಎಂದು ಎಲ್ಲ ಮನರಂಜನಾ ವಾಹಿನಿಗಳು ನಿತ್ಯ ಒಂದಲ್ಲ ಒಂದು ತಂತ್ರ ರೂಪಿಸುತ್ತಲೇ ಇರುತ್ತವೆ. ಆದರೆ, ಅಲ್ಟಿಮೇಟ್‌ ಆಗಿ ವೀಕ್ಷಕನೇ ಅಂತಿಮ. ವಾರಕ್ಕೊಮ್ಮೆ ನಿರ್ಧಾರವಾಗುವ ಅಂಕಿ ಅಂಶಗಳೇ ಫಲಿತಾಂಶ. ಈ ವಿಚಾರದಲ್ಲಿ ಜೀ ಕನ್ನಡ ವಾಹಿನಿ ವಿಭಿನ್ನ ಮತ್ತು ವಿಶೇಷ ಪ್ರಯೋಗಗಳ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆಯುವುದರಲ್ಲಿ ಮುಂದಡಿಯಿಡುತ್ತಿದೆ.

ಸದ್ಯ ಕನ್ನಡ ಮನರಂಜನಾ ಲೋಕದಲ್ಲಿ ಜೀ ಕನ್ನಡ ಮೊದಲ ಸ್ಥಾನದಲ್ಲಿದೆ. ಆ ನಿಟ್ಟಿನಲ್ಲಿ ಹಲವು ವಿಶೇಷತೆಗಳನ್ನು ನೋಡುಗನಿಗೆ ನೀಡುತ್ತಲೇ ಬರುತ್ತಿದೆ. ಸೀರಿಯಲ್‌ಗಳಷ್ಟೇ ಅಲ್ಲದೆ, ವೀಕೆಂಡ್‌ ಸ್ಲಾಟ್‌ನಲ್ಲಿಯೂ ಜೀ ಕನ್ನಡವೇ ಮೊದಲ ಅಗ್ರಗಣ್ಯ ಸ್ಥಾನದಲ್ಲಿದೆ. ಅದೇ ರೀತಿ ಟಿಆರ್‌ಪಿ ಲೆಕ್ಕಾಚಾರದಲ್ಲಿಯೂ ಇನ್ನುಳಿದ ಬೇರೆ ಚಾನೆಲ್‌ಗಳನ್ನೂ ಮೀರಿ ಮುಂದುವರಿದಿದೆ. ಅತಿ ಹೆಚ್ಚು ಟಿಆರ್‌ಪಿ ಪಡೆದ ಟಾಪ್‌ ಸೀರಿಯಲ್‌ಗಳಲ್ಲಿ ಪಟ್ಟಿಯಲ್ಲಿ ಜೀ ಕನ್ನಡ ವಾಹಿನಿಯ ಧಾರಾವಾಹಿಗಳೇ ಕಾಣಿಸುತ್ತವೆ.

ಈ ಸಲವೂ ಪುಟ್ಟಕ್ಕ ನಂ. 1

ಕಳೆದ ಕೆಲ ತಿಂಗಳಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್‌ಪಿ ವಾರದ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿಯೇ ಮುಂದುವರಿಯುತ್ತಿದೆ. ಕಂಠಿ ಮದುವೆ ಬಳಿಕ ಕಥೆಯಲ್ಲಿ ರೋಚಕ ತಿರುವುಗಳು ಎದುರಾಗಿದ್ದು, ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಉಮಾಶ್ರೀಯ ಮುಗ್ಧತೆ, ಮಂಜು ಭಾಷಿಣಿ ಖದರ್‌ಗೆ ನೋಡುಗ ಸೈ ಎಂದಿದ್ದಾನೆ.

ಗಟ್ಟಿಮೇಳ

ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿದ್ದು ತುಂಬ ದಿನಗಳೇ ಕಳೆದವು. ಅದೇ ಹಾದಿಯಲ್ಲಿ ಎರಡನೇ ಸ್ಥಾನದಲ್ಲಿ ಭದ್ರವಾಗಿರುವುದು ಇದೇ ಜೀ ಕನ್ನಡದ ಮತ್ತೊಂದು ಧಾರಾವಾಹಿ ಗಟ್ಟಿಮೇಳ. ವೇದಾಂತ್‌ ಅಮೂಲ್ಯ ಜೋಡಿಯ ಈ ಸೀರಿಯಲ್‌ ಟಾಪ್‌ 10ರಲ್ಲಿ ಎರಡನೇ ಸ್ಥಾನವನ್ನೇ ಕಾಯ್ದುಕೊಂಡು ಮುಂದುವರಿದಿದೆ.

ಮೂರಕ್ಕೆ ಜಿಗಿದ ಸೀತಾ ರಾಮ

ಪ್ರೋಮೋ ಮೂಲಕ ಎಲ್ಲರ ಗಮನ ಸೆಳೆದು, ಇದೀಗ ಪ್ರಸಾರ ಆದಾಗಿನಿಂದಲೂ ಕುತೂಲವನ್ನು ಮೂಡಿಸುತ್ತಲೇ ಸಾಗಿರುವ ಸೀತಾ ರಾಮ, ಈ ಸಲದ ಟಿಆರ್‌ಪಿ ಪಟ್ಟಿಯಲ್ಲಿ ಮೂರಕ್ಕೆ ಜಿಗಿದಿದೆ. ಇನ್ನೇನು ಶೀಘ್ರದಲ್ಲಿ ಎರಡನೇ ಸ್ಥಾನಕ್ಕೂ ಬರುವ ಮುನ್ಸೂಚನೆ ನೀಡಿದೆ. ಮೇಕಿಂಗ್‌ ವಿಚಾರದಲ್ಲಿ ಶ್ರೀಮಂತಿಕೆಯನ್ನು ಕಾಯ್ದುಕೊಂಡಿರುವ ಈ ಸೀರಿಯಲ್‌ ತಾರಾಗಣದ ವಿಚಾರದಲ್ಲೂ ಶ್ರೀಮಂತವಾಗಿದೆ.

ಅಮೃತಧಾರೆ ಕುಸಿತ

ಸೀತಾ ರಾಮ ಸೀರಿಯಲ್‌ ಮೇಲಕ್ಕೆ ಜಿಗಿದರೆ, ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಅಮೃತಧಾರೆ ಇದೀಗ ನಾಲ್ಕನೇ ಸ್ಥಾನದಲ್ಲಿದೆ. ವಿಶೇಷ ಏನೆಂದರೆ, ಇತ್ತೀಚೆಗಷ್ಟೇ ಈ ಧಾರಾವಾಹಿ ತನ್ನ 9 ಹಾಡುಗಳ ಜ್ಯೂಕ್‌ ಬಾಕ್ಸ್‌ ಬಿಡುಗಡೆ ಮಾಡುವ ಮೂಲಕ ನೋಡುಗರಿಗೆ ಉಡುಗೊರೆ ನೀಡಿತ್ತು.

ಸತ್ಯ, ಶ್ರೀರಸ್ತು ಶುಭಮಸ್ತು ಫೈಟ್‌

ಟಾಪ್‌ ಐದರಲ್ಲಿ ಈ ಸಲ ಸೀತಾ ರಾಮ ಎಂಟ್ರಿಯಾಗಿದ್ದಕ್ಕೆ ಹಲವು ಧಾರಾವಾಹಿಗಳಿಗೆ ಹಿನ್ನಡೆಯಾಗಿವೆ. ಆ ಪೈಕಿ ಸತ್ಯ ಮತ್ತು ಶ್ರೀರಸ್ತು ಶುಭ ಮಸ್ತು ಧಾರಾವಾಹಿಗಳು ಟಾಪ್‌ ಐದರಲ್ಲಿ ಮೇಲಿನ ಸ್ಥಾನದಲ್ಲಿರುತ್ತಿದ್ದವು. ಆದರೆ, ಇವೆರಡೂ ಸೀರಿಯಲ್‌ಗಳನ್ನು ಸೀತಾ ರಾಮ ಹಿಂದಿಕ್ಕಿದೆ. ಸತ್ಯ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ, ಶ್ರೀರಸ್ತು ಶುಭಮಸ್ತು ಆರರಲ್ಲಿದೆ. ಹಿಟ್ಲರ್‌ ಕಲ್ಯಾಣ ಏಳರಲ್ಲಿದೆ.

ಜೀ ಕನ್ನಡ ಪಾರುಪತ್ಯ

ಹೀಗೆ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ ಜೀ ಕನ್ನಡ ವಾಹಿನಿಯೇ ಪಾರುಪತ್ಯ ಮೆರೆದಿದೆ. ಟಾಪ್‌ ಏಳು ಧಾರಾವಾಹಿಗಳು ಜೀ ಕನ್ನಡ ವಾಹಿನಿಯದ್ದೇ ಆಗಿವೆ. ಇವುಗಳ ನಡುವೆಯೇ ಇದೀಗ ಏರಿಳಿತದ ಪೈಪೋಟಿ ನಡೆಯುತ್ತಿದೆ. ಆ ಪೈಕಿ ಸೀತಾ ರಾಮ ತುಂಬ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನರನ್ನು ಸೆಳೆಯುತ್ತಿದೆ. ದಿನದಿಂದ ದಿನಕ್ಕೆ ನೋಡುಗರನ್ನು ಹೆಚ್ಚಿಸಿಕೊಳ್ಳುತ್ತಿದೆ.

ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ