logo
ಕನ್ನಡ ಸುದ್ದಿ  /  ಮನರಂಜನೆ  /  Shrirasthu Shubhamasthu Serial: ಮಾಗಿದ ಜೀವಗಳ ಭಾವಪಯಣ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೆ 300 ಸಂಚಿಕೆಗಳ ಸಂಭ್ರಮ

Shrirasthu Shubhamasthu Serial: ಮಾಗಿದ ಜೀವಗಳ ಭಾವಪಯಣ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೆ 300 ಸಂಚಿಕೆಗಳ ಸಂಭ್ರಮ

Dec 21, 2023 12:32 PM IST

google News

Shrirasthu Shubhamasthu Serial: ಮಾಗಿದ ಜೀವಗಳ ಭಾವಪಯಣ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೆ 300 ಸಂಚಿಕೆಗಳ ಸಂಭ್ರಮ

    • Shrirasthu Shubhamasthu Serial: ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಧಾರಾವಾಹಿ 300 ಸಂಚಿಕೆ ಪೂರೈಸಿ ಭಾವುಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ದೀಪಿಕಾ- ಅಭಿಗೆ ಮದುವೆ ಮಾಡಿಸಲು ತುಳಸಿ ಮುಂದಾಗಿದ್ದಾಳೆ. ಆದರೆ, ಆಕೆಯ ವಿರುದ್ಧವೇ ಅಭಿ ಮಾತನಾಡಿದ್ದಾನೆ. ಇತ್ತ ತುಳಸಿಯ ಪರವಾಗಿ ಫೈರ್‌ ಬ್ರಾಂಡ್‌ ಮಾವ ದತ್ತನ ಆಗಮನವಾಗಿದೆ.
Shrirasthu Shubhamasthu Serial: ಮಾಗಿದ ಜೀವಗಳ ಭಾವಪಯಣ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೆ 300 ಸಂಚಿಕೆಗಳ ಸಂಭ್ರಮ
Shrirasthu Shubhamasthu Serial: ಮಾಗಿದ ಜೀವಗಳ ಭಾವಪಯಣ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೆ 300 ಸಂಚಿಕೆಗಳ ಸಂಭ್ರಮ

Shrirasthu Shubhamasthu Serial: ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8:30ಕ್ಕೆ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್‌ ದಿನದಿಂದ ದಿನಕ್ಕೆ ಹೆಚ್ಚೆಚ್ಚು ವೀಕ್ಷರನ್ನು ಸಂಪಾದಿಸಿಕೊಳ್ಳುತ್ತಿದೆ. ಕೌತುಕದ ಕಥೆಯ ಜತೆಗೆ ಜೋಡಿ ಜೀವಗಳ ಭಾವುಕ ಪಯಣದ ಹಾದಿಯನ್ನೂ ಅಷ್ಟೇ ಚೆನ್ನಾಗಿ ಕಟ್ಟಿಕೊಡುತ್ತಿದ್ದಾರೆ ನಿರ್ದೇಶಕರು. ಇದೀಗ ಇದೇ ಸೀರಿಯಲ್‌ ಒಂದು ವಿಶೇಷ ಮೈಲಿಗಲ್ಲನ್ನು ತಲುಪಿದೆ. ಅಂದರೆ, ಮಾಗಿದ ಜೀವಗಳ ಭಾವ ಪಯಣ ಶ್ರೀರಸ್ತು ಶುಭಮಸ್ತು ಧಾರಾವಾಹಿ 300 ಸಂಚಿಕೆಗಳನ್ನು ಪೂರೈಸಿದೆ.

ಹೀಗೆ 300 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮತ್ತಷ್ಟು ಕೂತೂಹಲಗಳನ್ನು ಪ್ರೇಕ್ಷಕರ ಮುಂದಿಡುತ್ತಿದೆ. ಸಮರ್ಥನ ಆಫೀಸ್‌ಗೆ ದಿಢೀರ್‌ ಭೇಟಿ ನೀಡಿದ್ದಾಳೆ ಸಿರಿ. ಸಿರಿಯ ಆಗಮನವಾಗುತ್ತಿದ್ದಂತೆ, ಅಭಿಯ ಆಟ ಮುಂದುವರಿದಿದೆ. ಬೇಕು ಅಂತಲೇ ಸಮರ್ಥನ ಕಡೆಯಿಂದ ಕಾಫಿ ತರಿಸಿ, ಅದನ್ನು ಬೀಳಿಸಿ, ಕ್ಲಿನ್‌ ಮಾಡುವಂತೆ ಅಭಿ ಆದೇಶಿಸಿದ್ದಾನೆ. ಇದೆಲ್ಲವನ್ನು ಅಲ್ಲಿಯೇ ನೋಡುತ್ತ ನಿಂತ ಸಿರಿ ಕೊಂಚ ಕಸಿವಿಸಿಗೊಂಡಿದ್ದಾಳೆ. ಕೂಡಲೇ ಸಮರ್ಥ್‌ನನ್ನು ನಡೆಸಿಕೊಳ್ಳುವ ರೀತಿ ಕಂಡು ಅಭಿಯ ಮೇಲೆ ಕಿಡಿ ಕಾರಿದ್ದಾಳೆ ಸಿರಿ.

ಇಷ್ಟಕ್ಕೆ ಮುಗಿಯಲಿಲ್ಲ. ನಿನ್ನಂಥವರ ಜತೆಗೆ ಸಮರ್ಥ್‌ ಕೆಲಸ ಮಾಡುವುದು ಬೇಡ. ಅಪ್ಪ ಮಾಡಿದ ಆಸ್ತಿಯಲ್ಲಿ ಮೆರೆಯುವ ನೀನು, ಮುಂದೊಂದು ದಿನ ನಮ್ಮ ಜಾಗದಲ್ಲಿರುತ್ತೀಯಾ, ನಾವು ನಿಮ್ಮ ಜಾಗದಲ್ಲಿ ಇರುತ್ತೇವೆ ನೋಡ್ತಿರು ಎಂದಿದ್ದಾಳೆ. ಇದೆಲ್ಲ ನೀನು ಮಾಡುವುದು ಬೇಕಿಲ್ಲ ಎಂದು ರಾಜಿನಾಮೆ ಪತ್ರ ನೀಡಿ ಸಮರ್ಥನ ಕೆಲಸ ಬಿಡಿಸಿ ಕರೆದೊಯ್ದಿದ್ದಾಳೆ ಸಿರಿ. ಮತ್ತೊಂದು ಕಡೆ ಜನಾರ್ಧನ್ ಮನೆಗೆ ತುಳಸಿ ತೆರಳಿದ್ದಾಳೆ. ದೀಪಿಕಾ ಅಭಿ ಜೋಡಿಯ ಮದುವೆ ಬಗ್ಗೆ ಜನಾರ್ಧನ್ ಜತೆ ಮಾತಿಗಿಳಿದಿದ್ದಾಳೆ.

ಅಭಿಗೆ ಫೋನ್‌ ಮಾಡುವ ಜನಾರ್ಧನ್‌, ಈ ಹೆಂಗಸನ್ನು ಇಲ್ಲಿಗ್ಯಾಕೆ ಕಳಿಸಿದೆ ಎಂದು ರೇಗುತ್ತಾನೆ. ನಾನು ನಿನಗೆ ಯಾವುದೇ ಕಾರಣಕ್ಕೂ ದೀಪಿಕಾಳನ್ನು ಕೊಡಲ್ಲ ಎನ್ನುತ್ತಾನೆ. ಜನಾರ್ಧನ್‌ ಮಾತಿನಿಂದ ಬೇಸರಗೊಂಡ ಅಭಿ, ನಿನ್ನಿಂದ ನನ್ನ ಬದುಕೇ ಹಾಳಾಯ್ತು ಎಂದು ತುಳಸಿಗೆ ಹೇಳುತ್ತಾನೆ. ಆಗ ತುಳಸಿ ಪರವಾಗಿ ನಿಲ್ಲುವ ಅವಿ, ಜನಾರ್ಧನ್‌ ಮನೆಯಲ್ಲಿ ನಡೆದ ಘಟನೆಯನ್ನು ವಿವರಿಸುತ್ತಾನೆ. ಮೊದಲು ದೀಪಿಕಾ ದುಬೈನಿಂದ ಇಲ್ಲಿಗೆ ಬರಲಿ. ಆಗ ನಿಮ್ಮ ಮದುವೆ ಮಾಡಿಸೋದು ಇನ್ನೂ ಸುಲಭ ಎನ್ನುತ್ತಾನೆ.

ಇತ್ತ ಅಭಿ ಜತೆ ದೀಪಿಕಾ ಮದುವೆ ಅಸಾಧ್ಯ ಎನ್ನುತ್ತಲೇ, ಬೇರೆ ಸಂಬಂಧ ನೋಡಿ ಅವರನ್ನೂ ಮನೆಗೆ ಕರೆಸಿದ್ದಾನೆ ಜನಾರ್ಧನ್‌. ದೀಪಿಕಾಗೆ ಮದುವೆ ಇಷ್ಟವಿಲ್ಲದಿದ್ದರೂ ಬೇರೊಬ್ಬರ ಜತೆಗೆ ಮದುವೆಗೆ ಮುಂದಾಗಿದ್ದಾನೆ ಜನಾರ್ಧನ್.‌ ಮತ್ತೊಂದು ಕಡೆ, ಜನಾರ್ಧನ್‌ ಮನೆಯಲ್ಲಿ ತುಳಿಸಿಗೆ ಅವಮಾನವಾಗಿದೆ. ಈ ವಿಚಾರವನ್ನು ಮಾವ ದತ್ತನ ಬಳಿ ಕೇಳಿಕೊಂಡಿದ್ದಾಳೆ ತುಳಸಿ. ಇದರಿಂದ ಕೊಂಚ ಗರಂ ಆದ ತಾತ, ನೇರವಾಗಿ ಜನಾರ್ಧನನ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮದುವೆ ಅದ್ಹ್ಯಾಗೆ ನಿಶ್ಚಯ ಮಾಡ್ತಿಯೋ ನಾನೂ ನೋಡಿಯೇ ಬಿಡ್ತಿನಿ ಎಂದು ಜನಾರ್ಧನನ ಮನೆಗೆ ದತ್ತನ ಆಗಮನವಾಗಿದೆ. ದತ್ತನ ಸಮ್ಮುದಲ್ಲಿಯೇ ದೀಪಿಕಾ, ಅಭಿ ಮದುವೆ ನಡೆಯುತ್ತಾ?

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ