logo
ಕನ್ನಡ ಸುದ್ದಿ  /  ಮನರಂಜನೆ  /  Kiccha Sudeep Birthday: ತೆರೆಹಿಂದಿನ ಸುದೀಪ್‌ ಹೇಗೆ? ಸ್ಯಾಂಡಲ್‌ವುಡ್‌ ಮಂದಿಯ ಬಾಯಿಂದ ಮರುಕಳಿಸಿದ ಭಾವುಕ ನೆನಪುಗಳು ಇಲ್ಲಿವೆ...

Kiccha Sudeep Birthday: ತೆರೆಹಿಂದಿನ ಸುದೀಪ್‌ ಹೇಗೆ? ಸ್ಯಾಂಡಲ್‌ವುಡ್‌ ಮಂದಿಯ ಬಾಯಿಂದ ಮರುಕಳಿಸಿದ ಭಾವುಕ ನೆನಪುಗಳು ಇಲ್ಲಿವೆ...

Sep 02, 2022 10:52 AM IST

google News

ತೆರೆಹಿಂದಿನ ಸುದೀಪ್‌ ಹೇಗೆ? ಸ್ಯಾಂಡಲ್‌ವುಡ್‌ ಮಂದಿಯ ಬಾಯಿಂದ ಮರುಕಳಿಸಿದ ಭಾವುಕ ನೆನೆಪುಗಳು ಇಲ್ಲಿವೆ...

    • ತೆರೆ ಮೇಲಷ್ಟೇ ಸುದೀಪ್‌ ಅವರು ಹೀರೋ ಅಲ್ಲ, ತೆರೆ ಹಿಂದೆಯೂ ಅವರು ರಿಯಲ್‌ ಲೈಫ್‌ ಹೀರೋ ಎಂದು ಸಾಕಷ್ಟು ಮಂದಿ ಹೇಳಿಕೊಂಡಿದ್ದಾರೆ. ಹಾಗೇ ಹೇಳಿಕೊಂಡ ವಿಡಿಯೋವೊಂದು ಇದೀಗ ಕಿಚ್ಚನ ಬರ್ತ್‌ಡೇ ಪ್ರಯುಕ್ತ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ತೆರೆಹಿಂದಿನ ಸುದೀಪ್‌ ಹೇಗೆ? ಸ್ಯಾಂಡಲ್‌ವುಡ್‌ ಮಂದಿಯ ಬಾಯಿಂದ ಮರುಕಳಿಸಿದ ಭಾವುಕ ನೆನೆಪುಗಳು ಇಲ್ಲಿವೆ...
ತೆರೆಹಿಂದಿನ ಸುದೀಪ್‌ ಹೇಗೆ? ಸ್ಯಾಂಡಲ್‌ವುಡ್‌ ಮಂದಿಯ ಬಾಯಿಂದ ಮರುಕಳಿಸಿದ ಭಾವುಕ ನೆನೆಪುಗಳು ಇಲ್ಲಿವೆ...

ಬೆಂಗಳೂರು: ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಕಿಚ್ಚ ಸುದೀಪ್‌ ಇಂದು (ಸೆ. 02) 49ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಮಯದಲ್ಲಿ ಇದೇ ನಟನ ಬಗ್ಗೆ ಸ್ಯಾಂಡಲ್‌ವುಡ್‌ನ ಕೆಲವರು ಮಾತನಾಡಿದ್ದಾರೆ. ತೆರೆ ಮೇಲಷ್ಟೇ ಸುದೀಪ್‌ ಅವರು ಹೀರೋ ಅಲ್ಲ, ತೆರೆ ಹಿಂದೆಯೂ ಅವರು ರಿಯಲ್‌ ಲೈಫ್‌ ಹೀರೋ ಎಂದು ಸಾಕಷ್ಟು ಮಂದಿ ಹೇಳಿಕೊಂಡಿದ್ದಾರೆ. ಹಾಗೇ ಹೇಳಿಕೊಂಡ ವಿಡಿಯೋವೊಂದು ಇದೀಗ ಕಿಚ್ಚನ ಬರ್ತ್‌ಡೇ ಪ್ರಯುಕ್ತ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನಟನೆ, ನಿರ್ದೇಶನ, ನಿರ್ಮಾಣ, ಕ್ರಿಕೆಟ್‌ ಹೀಗೆ ಎಲ್ಲದರಲ್ಲಿಯೂ ತೊಡಗಿಸಿಕೊಂಡಿರುವ ಸುದೀಪ್‌, ಸಮಾಜ ಸೇವೆಯಲ್ಲಿಯೂ ಮುಂದು. ಅದು ಈಗಾಗಲೇ ಸಾಬೀತಾಗಿದೆ. ಸಾಕಷ್ಟು ಕುಟುಂಬಗಳಿಗೆ ಅವರಿಂದ ನೆರವಾದ ಉದಾಹರಣೆಗಳಿವೆ. ಅಷ್ಟೇ ಅಲ್ಲ ಅವರ ಇನ್ನೊಂದು ಮನೆ ಚಿತ್ರರಂಗದಲ್ಲಿಯೂ ಅವರ ಆಸರೆಯನ್ನು ಹಿಡಿದೇ ಮೇಲೇರಿದವರಿದ್ದಾರೆ. ಹಾಗೇ ಮೇಲೆ ಬಂದು ಇದೀಗ ಕನ್ನಡದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಕೆಲ ಸೆಲೆಬ್ರಿಟಿಗಳು ಸುದೀಪ್‌ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

"ಸುದೀಪ್‌ ಸರ್‌ ಅವ್ರು ನನ್ನ ಲೈಫ್‌ನಲ್ಲಿ ಇರಲಿಲ್ಲ ಅಂದಿದ್ರೆ, ಇವತ್ತು ನಾನಿಲ್ಲಿ ನಿಂತುಕೊಳ್ಳಲು ಸಾಧ್ಯವೇಇಲ್ಲ. ಅವರ ಸಿನಿಮಾ ಅಂದ್ರೆ ನಾನಲ್ಲಿ ವೈಯಕ್ತಿಕ ಇಂಟ್ರೆಸ್ಟ್‌ ತಗೊಂಡು ಕಂಪೋಸ್‌ ಮಾಡ್ತೀನಿ. ಅವ್ರು ನನ್ನ ಗಾಡ್‌ಫಾದರ್"‌ ಎಂದು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಹೇಳಿದರೆ, ನಟ ರವಿಶಂಕರ್‌ ಸಹ ಕಿಚ್ಚನ ಬಗ್ಗೆ ಮಾತನಾಡಿದ್ದಾರೆ. "ರವಿಶಂಕರ್‌ ಆಗಿದ್ದ ನಾನು ಇಂದು ಆರ್ಮುಗ ಮಾಡಿದ್ದು, ಕೆಂಪೇಗೌಡ ಸಿನಿಮಾ ಮೂಲಕ ಇಲ್ಲಿಯವರೆಗೂ ಬಂದಿದ್ದೇ ಎಂದರೆ ಅದಕ್ಕೆ ಸುದೀಪ್‌ ಅವರೇ ಕಾರಣ" ಎಂದಿದ್ದಾರೆ ರವಿಶಂಕರ್.

"ಅಲ್ಲಿ ಇಲ್ಲಿ ಹಾಡು ಹಾಡಿಕೊಂಡಿದ್ದೆ. ಆ ನನ್ನ ಹಾಡನ್ನು ಗುರುತಿಸಿ, ಕನ್ನಡ ಚಿತ್ರರಂಗದಲ್ಲಿ, ನಾನು ಒಂದು ಪಯಣಕ್ಕೆ ಮಾಡಿದ್ದೇನೆ, ಅದಕ್ಕೆ ದೃಢವಾದ ಸ್ಥಿರವಾದ ಮಾರ್ಗ ಕೊಟ್ಟಿದ್ದು ಸುದೀಪ್‌ ಅದ್ರು" ಎಂದು ಗಾಯಕ ವಿಜಯ್‌ ಪ್ರಕಾಶ್‌ ಹೇಳಿಕೊಂಡಿದ್ದಾರೆ. ನಾನು ಇಲ್ಲಿ ಕೂತಿದ್ದೇನೆ ಎಂದರೆ ಅದಕ್ಕೆ ಅವರೇ ಕಾರಣ. ಒಂದಲ್ಲ, ನೂರು ಸಂದರ್ಶನಗಳಲ್ಲಿ ಅದನ್ನೇ ಹೇಳಿದ್ದೇನೆ. ನಾನು ಇರೋವರೆಗೂ ಅದನ್ನೇ ಹೇಳುತ್ತೇನೆ" ಎಂದಿದ್ದಾರೆ ಎ. ಹರ್ಷ.

"ನಾನು ನಿರ್ದೇಶನ ವಿಭಾಗಕ್ಕೆ ಬಂದಿದ್ದೇ ಸುದೀಪ್‌ ಅವರಿಂದ. ಅಪ್ಪ ತೀರಿ ಹೋದ ಮೇಲೆ, ಆ ಸ್ಥಾನದಲ್ಲಿ ನಿಂತು ನಡೆಸುತ್ತಿದ್ದಾರೆ" ಎಂದು ನಿರ್ದೇಶಕ ನಂದಕಿಶೋರ್‌ ಹೇಳಿದರೆ, ಅವರ ಸಹೋದರ ತರುಣ್‌ ಕಿಶೋರ್‌ ಸುಧೀರ್‌ ಸಹ ಅದೇ ಮಾತುಗಳನ್ನಾಡಿದ್ದಾರೆ. ಅದೇ ರೀತಿ ಡಾರ್ಲಿಂಗ್‌ ಕೃಷ್ಣ, ರಕ್ಷಿತಾ ಪ್ರೇಮ್‌, ಪ್ರದೀಪ್‌ ಬೋಗಾಡಿ ಸೇರಿ ಇನ್ನೂ ಸಾಕಷ್ಟು ಮಂದಿ ಕಿಚ್ಚನನ್ನು ಕೊಂಡಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ