logo
ಕನ್ನಡ ಸುದ್ದಿ  /  ಮನರಂಜನೆ  /  ರಜನಿಕಾಂತ್‌ ವೇಟ್ಟೈಯನ್‌ ಮೊದಲ ದಿನ ಬಾಕ್ಸ್‌ ಆಫೀಸಿನಲ್ಲಿ ಬೇಟೆಯಾಡಿದ್ದು ಎಷ್ಟು ಕೋಟಿ? ಜೈಲರ್‌ ಚಿತ್ರಕ್ಕಿಂತ ಹೆಚ್ಚಾ, ಕಡಿಮೇನಾ?

ರಜನಿಕಾಂತ್‌ ವೇಟ್ಟೈಯನ್‌ ಮೊದಲ ದಿನ ಬಾಕ್ಸ್‌ ಆಫೀಸಿನಲ್ಲಿ ಬೇಟೆಯಾಡಿದ್ದು ಎಷ್ಟು ಕೋಟಿ? ಜೈಲರ್‌ ಚಿತ್ರಕ್ಕಿಂತ ಹೆಚ್ಚಾ, ಕಡಿಮೇನಾ?

Rakshitha Sowmya HT Kannada

Oct 11, 2024 09:34 AM IST

google News

ರಜನಿಕಾಂತ್‌ ಅಭಿನಯದ ವೇಟ್ಟೈಯನ್‌ ಸಿನಿಮಾ ಮೊದಲ ದಿನ 30 ಕೋಟಿ ರೂ ಸಂಗ್ರಹಿಸಿದೆ. ಆದರೆ ಜೈಲರ್‌ ಚಿತ್ರಕ್ಕೆ ಹೋಲಿಸಿದರೆ ಈ ಕಲೆಕ್ಷನ್‌ ಕಡಿಮೆ. ಜೈಲರ್‌ ಸಿನಿಮಾ ಮೊದಲ ದಿನ 48 ಕೋಟಿ ರೂ. ಗಳಿಸಿತ್ತು.

  • ರಜನಿಕಾಂತ್‌ ಅಭಿನಯದ ಬಹುನಿರೀಕ್ಷಿತ ವೇಟ್ಟೈಯನ್‌, ಗುರುವಾರ ರಿಲೀಸ್‌ ಆಗಿದೆ. Sacnilk.com ವರದಿ ಪ್ರಕಾರ ಸಿನಿಮಾ, ಬಾಕ್ಸ್‌ ಆಫೀಸಿನಲ್ಲಿ ಮೊದಲ ದಿನ 30 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಆದರೆ ಜೈಲರ್‌ ಚಿತ್ರಕ್ಕೆ ಹೋಲಿಸಿದರೆ ಇದು ಕಡಿಮೆ ಎನ್ನಲಾಗುತ್ತಿದೆ. ಜೈಲರ್‌ ಸಿನಿಮಾ ಮೊದಲ ದಿನ 48 ಕೋಟಿ ರೂ ಸಂಗ್ರಹಿಸಿತ್ತು. 

ರಜನಿಕಾಂತ್‌ ಅಭಿನಯದ ವೇಟ್ಟೈಯನ್‌ ಸಿನಿಮಾ ಮೊದಲ ದಿನ 30 ಕೋಟಿ ರೂ ಸಂಗ್ರಹಿಸಿದೆ.  ಆದರೆ ಜೈಲರ್‌ ಚಿತ್ರಕ್ಕೆ ಹೋಲಿಸಿದರೆ ಈ ಕಲೆಕ್ಷನ್‌ ಕಡಿಮೆ. ಜೈಲರ್‌ ಸಿನಿಮಾ ಮೊದಲ ದಿನ 48 ಕೋಟಿ ರೂ. ಗಳಿಸಿತ್ತು.
ರಜನಿಕಾಂತ್‌ ಅಭಿನಯದ ವೇಟ್ಟೈಯನ್‌ ಸಿನಿಮಾ ಮೊದಲ ದಿನ 30 ಕೋಟಿ ರೂ ಸಂಗ್ರಹಿಸಿದೆ. ಆದರೆ ಜೈಲರ್‌ ಚಿತ್ರಕ್ಕೆ ಹೋಲಿಸಿದರೆ ಈ ಕಲೆಕ್ಷನ್‌ ಕಡಿಮೆ. ಜೈಲರ್‌ ಸಿನಿಮಾ ಮೊದಲ ದಿನ 48 ಕೋಟಿ ರೂ. ಗಳಿಸಿತ್ತು.

ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ವೇಟ್ಟೈಯನ್‌ ಸಿನಿಮಾ ಗುರುವಾರ ಬಿಡುಗಡೆಯಾಗಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದಲ್ಲಿ ಟ್ವಿಸ್ಟ್‌ , ಜ್ಞಾನವೇಲ್‌ ಸ್ಟೋರಿ, ಅನಿರುದ್ಧ್‌ ರವಿಚಂದರ್‌ ಸಂಗೀತ ನಿರ್ದೇಶನಕ್ಕೆ ನೋಡುಗರು ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ. ಚಿತ್ರದಲ್ಲಿ ರಜನಿಕಾಂತ್‌ ಐಪಿಎಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಸಿನಿಮಾ ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಬಗ್ಗೆ ಅಭಿಮಾನಿಗಳಿಗೆ ಕುತೂಹಲವಿದ್ದು ಸಿನಿಮಾ ಎಲ್ಲೆಲ್ಲಿ ಎಷ್ಟು ಲಾಭ ಮಾಡಿದೆ ಎಂಬ ಡೀಟೆಲ್ಸ್‌ ಇಲ್ಲಿದೆ.

ಮೊದಲ ದಿನ 30 ಕೋಟಿ ರೂ. ಕಲೆಕ್ಷನ್‌

ಮಾಹಿತಿಗಳ ಪ್ರಕಾರ ವೇಟ್ಟೈಯನ್‌ ಮೊದಲ ದಿನ ಭಾರತದಲ್ಲಿ 30 ಕೋಟಿ ರೂ. ಕಲೆಕ್ಷನ್‌ ಮಾಡಿದೆ. Sacnilk.com ವರದಿ ಪ್ರಕಾರ, ತಮಿಳಿನಲ್ಲಿ 26.15 ಕೋಟಿ, ತೆಲುಗಿನಲ್ಲಿ 3.2 ಕೋಟಿ ರೂ. ಹಿಂದಿಯಲ್ಲಿ 0.6 ಕೋಟಿ ಹಾಗೂ ಕನ್ನಡದಲ್ಲಿ 0.05 ಕೋಟಿ ಕಲೆಕ್ಷನ್‌ ಆಗಿದೆ. ಆದರೆ ರಜನಿಕಾಂತ್‌ ಹಿಂದಿನ ಸಿನಿಮಾ ಜೈಲರ್‌ಗೆ ಕಂಪೇರ್‌ ಮಾಡಿದರೆ ವೇಟ್ಟೈಯನ್‌, ಮೊದಲ ದಿನದ ಕಲೆಕ್ಷನ್‌ನಲ್ಲಿ ಹಿಂದೆ ಉಳಿದುಕೊಂಡಿದೆ. ಜೈಲರ್‌ ಇಸನಿಮಾ ಮೊದಲ ದಿನ ಭಾರತದಲ್ಲಿ 48 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ವಿಶ್ವಾದ್ಯಂತ 72 ಕೋಟಿ ರೂ ಬಾಚಿಕೊಂಡಿತ್ತು.

ಮೊದಲ ದಿನ ಆಕ್ಯುಪೆನ್ಸಿ ಕೂಡಾ ಕಡಿಮೆ

ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಮೊದಲ ದಿನ ಆಕ್ಯುಪೆನ್ದಿ ಕೂಡಾ ಬಹಳ ಕಡಿಮೆ ಇತ್ತು. ತಮಿಳುನಾಡಿನಲ್ಲಿ ಶೇಕಡಾ 53.96, ಆಂಧ್ರ ಹಾಗೂ ತೆಲಂಗಾಣದಲ್ಲಿ ಶೇಕಡಾ 34.15, ಉತ್ತರದಲ್ಲಿ ಶೇಕಡಾ 8.11 ಹಾಗೂ ಕನ್ನಡದಲ್ಲಿ ಶೇಡಕಾ 10.79 ಆಕ್ಯುಪೆನ್ಸಿ ಇತ್ತು. ಮುಂದಿನ ದಿನಗಳಲ್ಲಿ ಕೂಡಾ ಕಲೆಕ್ಷನ್‌ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಸಿನಿ ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 300 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಸಿನಿಮಾ, ಎಷ್ಟು ಕಲೆಕ್ಷನ್‌ ಮಾಡಲಿದೆ, ಎಷ್ಟು ಲಾಭ ಮಾಡಲಿದೆ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

ವೇಟ್ಟೈಯನ್‌ ಸಿನಿಮಾ ಕಥೆ ಏನು?

ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಹಾಗೂ ಬಾಲಿವುಡ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌ ಸುಮಾರು 33 ವರ್ಷಗಳ ನಂತರ ಮತ್ತೆ ಜೊತೆಯಾಗಿ ನಟಿಸಿದ್ದಾರೆ. 1991 ರಲ್ಲಿ ತೆರೆ ಕಂಡ ಹಮ್‌ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಇಬ್ಬರೂ ಅಣ್ಣ ತಮ್ಮಂದಿರಾಗಿ ನಟಿಸಿದ್ದರೆ, ವೇಟ್ಟೈಯನ್‌ನಲ್ಲಿ ವಿರೋಧ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಜನಿಕಾಂತ್‌, ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಅಥಿಯಾನ್‌ ಪಾತ್ರದಲ್ಲಿ, ಪೊಲೀಸರ ಎನ್‌ಕೌಂಟರ್‌ ವಿರೋಧಿಸುವ ಜಸ್ಟೀಸ್‌ ಡಾ ಸತ್ಯದೇವ್‌ ಬ್ರಹ್ಮದತ್‌ ಪಾಂಡೆ ಪಾತ್ರದಲ್ಲಿ ಬಿಗ್‌ ಬಿ ಕಾಣಿಸಿಕೊಂಡಿದ್ದಾರೆ.

ಪೊಲೀಸರು ಹಂಟರ್‌ಗಳು ಎನಿಸಿಕೊಳ್ಳುವುದನ್ನು ಬಿಟ್ಟು ಸಮಾಜಕ್ಕೆ ರಕ್ಷಕರಾಗಿ ಇರಬೇಕೆಂಬ ಸಂದೇಶವನ್ನು ಚಿತ್ರದಲ್ಲಿ ನೀಡಲಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಪೊಲೀಸರು ಆವೇಶದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜನರ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಆನ್‌ಲೈನ್‌ ಎಜುಕೇಶನ್‌ ಸಿಸ್ಟಮ್‌ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಚಿತ್ರದಲ್ಲಿ ಎತ್ತಿ ತೋರಿಸಲಾಗಿದೆ.

ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣದ ಚಿತ್ರ

ಲೈಕಾ ಪ್ರೊಡಕ್ಷನ್ಸ್‌ ವೇಟ್ಟೈಯನ್ ಚಿತ್ರವನ್ನು ನಿರ್ಮಿಸಿದ್ದು ಜೈ ಭೀಮ್‌, ಒರುವನ್‌ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್‌ ರವಿಚಂದರ್ ಸಂಗೀತ ನೀಡಿದ್ದಾರೆ. ಒಂದು ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ಕೂಡಾ ನಟಿಸಿದ್ದಾರೆ. ಚಿತ್ರದಲ್ಲಿ ಕನ್ನಡ ನಟ ಕಿಶೋರ್‌, ಮಲಯಾಳಂ ನಟ ಫಹಾದ್‌ ಫಾಸಿಲ್‌, ತೆಲುಗಿನ ರಾವ್‌ ರಮೇಶ್‌, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್‌ ಹಾಗೂ ಇನ್ನಿತರ ಕಲಾವಿದರು ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ