logo
ಕನ್ನಡ ಸುದ್ದಿ  /  ಮನರಂಜನೆ  /  Rajinikanth: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕಾಲಿಗೆ ಬಿದ್ದು ಟೀಕೆಗೊಳಗಾದ ಸೂಪರ್‌ಸ್ಟಾರ್‌ ರಜಿನಿಕಾಂತ್‌

Rajinikanth: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕಾಲಿಗೆ ಬಿದ್ದು ಟೀಕೆಗೊಳಗಾದ ಸೂಪರ್‌ಸ್ಟಾರ್‌ ರಜಿನಿಕಾಂತ್‌

Aug 20, 2023 08:00 PM IST

google News

Rajinikanth: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕಾಲಿಗೆ ಬಿದ್ದು ಟ್ರೋಲ್‌ ಆದ ಸೂಪರ್‌ಸ್ಟಾರ್‌ ರಜಿನಿಕಾಂತ್‌

    • ದೇವರು, ತಂದೆ- ತಾಯಿ.. ಇವುಗಳನ್ನು ಮಾತ್ರ ಪೂಜಿಸು ಎಂದು 2017ರ ಕಾರ್ಯಕ್ರಮವೊಂದರಲ್ಲಿ ರಜಿನಿಕಾಂತ್‌ ಹೇಳಿದ್ದರು. ಇದೀಗ ಯುಪಿ ಸಿಎಂ ಕಾಲಿಗೆ ಬಿದ್ದ ರಜಿನಿಕಾಂತ್‌ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ ನೆಟ್ಟಿಗರು. 
Rajinikanth: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕಾಲಿಗೆ ಬಿದ್ದು ಟ್ರೋಲ್‌ ಆದ ಸೂಪರ್‌ಸ್ಟಾರ್‌ ರಜಿನಿಕಾಂತ್‌
Rajinikanth: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕಾಲಿಗೆ ಬಿದ್ದು ಟ್ರೋಲ್‌ ಆದ ಸೂಪರ್‌ಸ್ಟಾರ್‌ ರಜಿನಿಕಾಂತ್‌

Rajinikanth: ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಜೈಲರ್ ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ. ಕೇವಲ 10 ದಿನಗಳಲ್ಲಿ ಈ ಸಿನಿಮಾ ಬರೋಬ್ಬರಿ 500 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ನಿರ್ದೇಶಕ ನೆಲ್ಸನ್‌ ಅವರ ಈ ಮಾಸ್ಟರ್‌ಪೀಸ್‌ಗೆ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ. ಹೀಗೆ ಸಿನಿಮಾಕ್ಕೆ ಒಳ್ಳೆಯ ಮಾತುಗಳು ಕೇಳಿಬರುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ನಟ ರಜಿನಿಕಾಂತ್‌ ಇನ್ನೊಂದು ವಿಚಾರಕ್ಕೆ ಟ್ರೋಲ್‌ ಆಗುತ್ತಿದ್ದಾರೆ.

ಹಿಮಾಲಯ ಪ್ರವಾಸದಲ್ಲಿರುವ ರಜಿನಿಕಾಂತ್‌, ಅಲ್ಲಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಹಲವು ದೇವಸ್ಥಾನಗಳ ದರ್ಶನ ಪಡೆದು ಮರಳಿದ್ದಾರೆ. ಈ ನಡುವೆ ಉತ್ತರ ಪ್ರದೇಶದ ಲಖನೌಗೂ ಭೇಟಿ ನೀಡಿ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ವೇಳೆ ಸಿಎಂ ಯೋಗಿ ಆದಿತ್ಯನಾಥ ಅವರ ಕಾಲಿಗೂ ಬಿದ್ದು, ಆಶೀರ್ವಾದ ಪಡೆದುಕೊಂಡಿದ್ದಾರೆ. ಹೀಗೆ ಕಾಲಿಗೆ ಬಿದ್ದದ್ದೇ ಇದೀಗ ನೆಟ್ಟಿಗರ ವಲಯದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಜೈಲರ್ ಬಿಡುಗಡೆಗೂ ಮುನ್ನ ರಜಿನಿಕಾಂತ್ ಆಧ್ಯಾತ್ಮಿಕ ಪ್ರವಾಸದಲ್ಲಿದ್ದರು. ಆ ಪ್ರವಾಸ ಬಳಿಕ ನೇರವಾಗಿ ಲಖನೌಗೆ ಬಂದು, ಸಿಎಂ ಯೋಗಿ ಆದಿತ್ಯನಾಥ್‌ ಅವರ ಜತೆಗೆ ಜೈಲರ್‌ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಭೇಟಿಯ ವೇಳೆ ರಜಿನಿಕಾಂತ್‌ ಕಾರಿಂದ ಕೆಳಗಿಳಿಯುತ್ತಿದ್ದಂತೆ, ನೇರವಾಗಿ ಯೋಗಿಯ ಕಾಲಿಗೆ ಎರಗಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಕೆಲ ನೆಟಿಜನ್‌ಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಲ್‌ ಮಾಡುತ್ತಿದ್ದಾರೆ.

ರಜಿನಿ ಕಾರ್ಯಕ್ಕೆ ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್

"ಯೋಗಿ ಆದಿತ್ಯನಾಥ್ ಅವರ ಪಾದಕ್ಕೆ ನಮಸ್ಕರಿಸುವ ಮೂಲಕ ರಜಿನಿ ಅವರು ತಮ್ಮ ಇಮೇಜ್ ಹಾಳು ಮಾಡಿಕೊಂಡಿದ್ದಾರೆ" ಎಂದು ನೆಟಿಜನ್ ಕಮೆಂಟ್ ಮಾಡಿದ್ದಾರೆ. "ನೀವು ಯಾಕೆ ಹಾಗೆ ಮಾಡಿದ್ದೀರಿ.." ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್‌ ಮಾಡಿದ್ದಾನೆ. "ನಿಮಗಿಂತ ಕಿರಿಯ ಯೋಗಿಯ ಪಾದಗಳಿಗೆ ನಮಸ್ಕರಿಸಲು ಕಾರಣವಿದೆಯೇ" ಎಂಬಂಥ ಕಾಮೆಂಟ್‌ಗಳು ಬರಲಾರಂಭಿಸಿವೆ. ಹೀಗೆ ಮಾಡಿದ್ದಕ್ಕೆ ಜೈಲರ್ ಚಿತ್ರಕ್ಕೆ ತಮಿಳುನಾಡಿನಲ್ಲಿ ನೆಗೆಟಿವಿಟಿ ಹರಡುವ ಸಾಧ್ಯತೆ ಇದೆ ಎಂದು ಮತ್ತೊಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ರಜನಿಕಾಂತ್ ಈ ಹಿಂದೆ ಆಡಿದ ಮಾತನ್ನೂ ನೆನಪಿಸಿದ್ದಾರೆ.

ರಜಿನಿ ಹಳೇ ಮಾತು ನೆನಪಿಸಿದ ನೆಟ್ಟಿಗರು..

“ದೇವರು, ತಂದೆ- ತಾಯಿ.. ಇವುಗಳನ್ನು ಮಾತ್ರ ಪೂಜಿಸು ಎಂದು 2017ರ ಕಾರ್ಯಕ್ರಮವೊಂದರಲ್ಲಿ ರಜಿನಿಕಾಂತ್‌ ಹೇಳಿದ್ದರು. ಆ ಕಾರ್ಯಕ್ರಮದಲ್ಲಿ ಅಲ್ಲಿನ ಅಭಿಮಾನಿಗಳು ರಜಿನಿ ಕಾಲಿಗೆ ಬೀಳುತ್ತಿದ್ದಿದ್ದನ್ನು ಕಂಡು, ಹಣ, ಕೀರ್ತಿ, ಅಧಿಕಾರದ ಕಾರಣಕ್ಕೆ ಯಾರ ಕಾಲಿಗೂ ಬೀಳಬೇಡಿ ಎಂದಿದ್ದರು. ಇದೀಗ ಅಂದು ರಜಿನಿ ಹೇಳಿದ ಮಾತನ್ನೇ ಅವರ ಅಭಿಮಾನಿಗಳು ಯೋಗಿ ಆದಿತ್ಯನಾಥ್‌ ಅವರ ಕಾಲಿಗೆ ಬಿದ್ದದ್ದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಜಿನಿ ಕಾರ್ಯಕ್ಕೆ ಕೆಲವರ ಮೆಚ್ಚುಗೆ

ಈ ವಿರೋಧದ ನಡುವೆಯೇ ಕೆಲವರು ರಜಿನಿ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮದ ಪ್ರಕಾರ ಸನ್ಯಾಸಿಗೆ ಗೌರವ ನೀಡುವುದರಲ್ಲಿ ತಪ್ಪೇನಿದೆ. ಯೋಗಿ ಅವರೊಬ್ಬ ಸಿಎಂ ಎಂಬ ಕಾರಣಕ್ಕೆ ರಜಿನಿ ಅವರು ಯೋಗಿಯ ಕಾಲಿಗೆ ನಮಸ್ಕರಿಸಿಲ್ಲ. ಅವರೊಬ್ಬ ಗೋರಖ್ ಪುರದ ಸನ್ಯಾಸಿ ಎಂಬ ಕಾರಣಕ್ಕೆ ಹಾಗೆ ಮಾಡಿದ್ದಾರೆ ಎಂದೂ ಕೆಲವರು ಸಮರ್ಥಿಸಿಕೊಂಡಿದ್ದಾರೆ. ತಲೈವಾ ಮಾಡಿದ್ದು ಸರಿಯಾಗಿದೆ ಎಂದು ಹೇಳುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ