logo
ಕನ್ನಡ ಸುದ್ದಿ  /  ಮನರಂಜನೆ  /  ಐಟಿ ರೈಡ್‌ನಿಂದ ಜವರೇಗೌಡನನ್ನು ತಪ್ಪಿಸಿ ಪ್ರೀತಿ ಗಳಿಸುತ್ತಾರಾ ಸಿದ್ದೇಗೌಡ ಭಾವನಾ ದಂಪತಿ? ಲಕ್ಷ್ಮೀ ನಿವಾಸ ಧಾರಾವಾಹಿ

ಐಟಿ ರೈಡ್‌ನಿಂದ ಜವರೇಗೌಡನನ್ನು ತಪ್ಪಿಸಿ ಪ್ರೀತಿ ಗಳಿಸುತ್ತಾರಾ ಸಿದ್ದೇಗೌಡ ಭಾವನಾ ದಂಪತಿ? ಲಕ್ಷ್ಮೀ ನಿವಾಸ ಧಾರಾವಾಹಿ

Rakshitha Sowmya HT Kannada

Nov 20, 2024 02:30 PM IST

google News

ಮನೆಯಲ್ಲಿ ಇಟ್ಟಿದ್ದ ಹಣವನ್ನು ಹೊರ ಎಸೆದು ತಂದೆ ಜವರೇಗೌಡನನ್ನು ಐಟಿ ರೈಡ್‌ನಿಂದ ಕಾಪಾಡಿದ ಸಿದ್ದೇಗೌಡ

  • ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 19ರ ಎಪಿಸೋಡ್‌ನಲ್ಲಿ ಚುನಾವಣಾ ಪ್ರಚಾರದಲ್ಲಿರುವ ಜವರೇಗೌಡ ಮನೆಗೆ ಐಟಿ ಅಧಿಕಾರಿಗಳು ದಾಳಿ ಮಾಡುತ್ತಾರೆ. ಮನೆಯಲ್ಲಿ ಏನೂ ಸಿಗದೆ ವಾಪಸ್‌ ಹೊರಡುತ್ತಾರೆ. ಸಿದ್ದೇಗೌಡ , ದುಡ್ಡನ್ನು ತೆಗೆದಿಟ್ಟು ತಂದೆಯನ್ನು ಪಾರು ಮಾಡುತ್ತಾನೆ.

ಮನೆಯಲ್ಲಿ ಇಟ್ಟಿದ್ದ ಹಣವನ್ನು ಹೊರ ಎಸೆದು ತಂದೆ ಜವರೇಗೌಡನನ್ನು ಐಟಿ ರೈಡ್‌ನಿಂದ ಕಾಪಾಡಿದ ಸಿದ್ದೇಗೌಡ
ಮನೆಯಲ್ಲಿ ಇಟ್ಟಿದ್ದ ಹಣವನ್ನು ಹೊರ ಎಸೆದು ತಂದೆ ಜವರೇಗೌಡನನ್ನು ಐಟಿ ರೈಡ್‌ನಿಂದ ಕಾಪಾಡಿದ ಸಿದ್ದೇಗೌಡ (PC: Zee Kannada Facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿ ಇತ್ತೀಚಿನ ಎಪಿಸೋಡ್‌ ಬಹಳ ಇಂಟ್ರೆಸ್ಟಿಂಗ್‌ ಆಗಿದೆ. ಜಯಂತ್‌ ತನ್ನ ತಾತನಿಂದ ಅನುಭವಿಸಿದ ಎಲ್ಲಾ ನೋವನ್ನೂ ಹೆಂಡತಿ ಜಾಹ್ನವಿ ಮುಂದೆ ಹೇಳಿಕೊಂಡಿದ್ದಾನೆ. ಗಂಡ ಇಷ್ಟೆಲ್ಲಾ ನೋವು ಅನುಭವಿಸಿದ್ದಾನೆ ಎಂದು ತಿಳಿದ ಜಾಹ್ನವಿ, ಗಂಡನ ಮೇಲೆ ಕನಿಕರ ವ್ಯಕ್ತಪಡಿಸಿದ್ದಾಳೆ. ತಾನು ಗರ್ಭಿಣಿಯಾಗಿರುವ ಸಿಹಿ ಸುದ್ದಿಯನ್ನು ಗಂಡನೊಂದಿಗೆ ಹೇಳಿಕೊಂಡಿದ್ದಾಳೆ.

ಗರ್ಭಿಣಿ ಆದ ಹೆಂಡತಿಯನ್ನು ಕೇರ್‌ ಮಾಡುತ್ತಿರುವ ಜಯಂತ್‌

ತಾನು ತಂದೆ ಆಗುತ್ತಿರುವ ಸುದ್ದಿ ತಿಳಿದು ಜಯಂತ್‌ ಖುಷಿಯಾಗಿದ್ದಾನೆ. ಮನೆಗೆ ಹೊಸ ಅತಿಥಿ ಆಗಮನ ಇಬ್ಬರಿಗೂ ಖುಷಿ ನೀಡಿದೆ. ಹೆಂಡತಿಯನ್ನು ಮೊದಲಿಗಿಂತ ಇನ್ನಷ್ಟು ಕೇರ್‌ ಮಾಡುತ್ತಿದ್ದಾನೆ. ತಾನೇ ಕೈಯಾರೆ ಹಣ್ಣುಗಳನ್ನು ಕತ್ತರಿಸಿ ಜಾಹ್ನವಿಗೆ ತಿನ್ನಿಸುತ್ತಾನೆ. ನಿನ್ನಂಥ ಕ್ಯೂಟ್‌ ಆಗಿರುವ ಹೆಣ್ಣು ಮಗು ಬೇಕು ಎಂದು ಜಯಂತ್‌ ಹಂಬಲಿಸಿದರೆ, ಇಲ್ಲ ನಿಮ್ಮಂಥ ಹ್ಯಾಂಡ್‌ಸಮ್‌ ಗಂಡು ಮಗು ಬೇಕು ಎಂದು ಜಾಹ್ನವಿ ಆಸೆ ವ್ಯಕ್ತಪಡಿಸುತ್ತಾಳೆ. ಒಟ್ಟಿನಲ್ಲಿ ಮಗುವಿನ ಆಗಮನದಿಂದ ಜಯಂತ್‌ ಖುಷಿಯಾಗಿದ್ದಾನೆ.

ಅಪ್ಪನ ಮರ್ಯಾದೆ ಉಳಿಸಿ ಹತ್ತಿರವಾಗ್ತಾನಾ ಸಿದ್ದೇಗೌಡ?

ಮತ್ತೊಂದೆಡೆ ಜವರೇಗೌಡ ಚುನಾವಣೆ ಪ್ರಚಾರ ಜೋರಾಗಿದೆ. ಮತದಾರರಿಗೆ ಹಂಚಲು ಜವರೇಗೌಡ ಮನೆಯಲ್ಲಿ ಕೋಟ್ಯಂತರ ರೂ. ದುಡ್ಡು ತಂದಿಟ್ಟಿದ್ದಾರೆ ಎಂದು ಅನಾಮಿಕ ವ್ಯಕ್ತಿ, ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಅಧಿಕಾರಿಗಳು ಜವರೇಗೌಡ ಮನೆಯನ್ನು ರೈಡ್‌ ಮಾಡಲು ಬಂದಿದ್ದಾರೆ. ಈ ವಿಚಾರ ತಿಳಿದ ಜವರೇಗೌಡ ಗಾಬರಿಯಿಂದ ಮನೆಗೆ ವಾಪಸಾಗಿದ್ದಾನೆ. ಅಧಿಕಾರಿಗಳು ಜವರೇಗೌಡ ಮನೆ ಜಾಲಾಡಿದರೂ ಅವರಿಗೆ ದುಡ್ಡು ಸಿಗದೆ ಅಲ್ಲಿಂದ ತೆರಳಿದ್ದಾರೆ. ಮನೆಯಲ್ಲಿ ಎಲ್ಲೂ ಹಣ ಸಿಗದಿದ್ದದ್ದು ಜವರೇಗೌಡನಿಗೂ ಗಾಬರಿ ಆಗಿದೆ. ರೈಡ್‌ ಮಾಡಲು ಬಂದ ಅಧಿಕಾರಿಗಳು ಅಲ್ಲಿಂದ ಹೊರಡುತ್ತಿದ್ದಂತೆ ಜವರೇಗೌಡ, ತಾನು ಇಟ್ಟಿದ್ದ ದುಡ್ಡು ಎಲ್ಲಿ ಎಂದು ಹೆಂಡತಿ ರೇಣುಕಾಳನ್ನು ಕೇಳುತ್ತಾನೆ. ಆದರೆ ದುಡ್ಡು ಇಟ್ಟಿದ್ದ ಜಾಗದಲ್ಲಿ ಇಲ್ಲ ಎಂದು ರೇಣುಕಾ ಹೇಳುತ್ತಾಳೆ. ಆ ದುಡ್ಡನ್ನು ನಾನು ತೆಗೆದಿಟ್ಟಿದ್ದ ಅಪ್ಪಾಜಿ ಎಂದು ಸಿದ್ದೇಗೌಡ, ಅದರನ್ನು ತರಲು ಹೋಗುತ್ತಾನೆ.

ಮತ್ತೊಂದೆಡೆ ಅಪ್ಪನ ಬಳಿ ದುಡ್ಡು ಇರುವುದನ್ನು ಅರಿತ ಮಂಗಳ ಕೂಡಾ ದುಡ್ಡು ಕೇಳಲು ಮನೆಗೆ ಬರುತ್ತಾಳೆ. ಶ್ರೀನಿವಾಸ್‌ ಬ್ಯಾಂಕ್‌ ಅಕೌಂಟ್‌ನಲ್ಲಿ 25 ಲಕ್ಷ ಇರುವುದು ಗೊತ್ತಾದ ಬಳಿಕ ಸಂತೋಷ್‌ ಅಪ್ಪನಿಂದ 5 ಲಕ್ಷ ಲಪಟಾಯಿಸುತ್ತಾನೆ. ತಮ್ಮನಿಗೂ ಇಲ್ಲಸಲ್ಲದ್ದನ್ನು ಹೇಳಿಕೊಡುತ್ತಾನೆ. ಅಣ್ಣನಂತೆ ಹರೀಶ ಕೂಡಾ ಸಾಲದ ನಾಟಕ ಮಾಡಿ ತಂದೆಯಿಂದ ದುಡ್ಡು ಪಡೆಯುತ್ತಾನೆ. ಈಗ ಮಂಗಳ ಕೂಡಾ ತಂದೆಯ ದುಡ್ಡು ಕಸಿದುಕೊಳ್ಳಲು ಸ್ಕೆಚ್‌ ಹಾಕಿ, ಮನೆಗೆ ಬಂದಿದ್ದಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ