logo
ಕನ್ನಡ ಸುದ್ದಿ  /  ಮನರಂಜನೆ  /  Chetan Ahimsa: ಪ್ರಸಾರಕ್ಕೆ ಸೆನ್ಸಾರ್‌ ಮಂಡಳಿಯೇ ಅಸ್ತು ಎಂದಿರುವಾಗ ನಿಷೇಧದ ಮಾತೇಕೆ; ದಿ ಕೇರಳ ಸ್ಟೋರಿ ಬಗ್ಗೆ ಚೇತನ್‌ ಅಹಿಂಸಾ ಮಾತು

Chetan Ahimsa: ಪ್ರಸಾರಕ್ಕೆ ಸೆನ್ಸಾರ್‌ ಮಂಡಳಿಯೇ ಅಸ್ತು ಎಂದಿರುವಾಗ ನಿಷೇಧದ ಮಾತೇಕೆ; ದಿ ಕೇರಳ ಸ್ಟೋರಿ ಬಗ್ಗೆ ಚೇತನ್‌ ಅಹಿಂಸಾ ಮಾತು

Apr 30, 2023 12:15 PM IST

ಪ್ರಸಾರಕ್ಕೆ ಸೆನ್ಸಾರ್‌ ಮಂಡಳಿಯೇ ಅಸ್ತು ಎಂದಿರುವಾಗ ನಿಷೇಧದ ಮಾತೇಕೆ; ದಿ ಕೇರಳ ಸ್ಟೋರಿ ಬಗ್ಗೆ ಚೇತನ್‌ ಅಹಿಂಸಾ ಮಾತು

    • ಪ್ರಸ್ತುತ ಆಗುಹೋಗುಗಳ ಬಗ್ಗೆ ಪ್ರತಿಕ್ರಿಯೆ ನೀಡುವ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಇದೀಗ ದಿ ಕೇರಳ ಸ್ಟೋರಿ ಸಿನಿಮಾ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ
ಪ್ರಸಾರಕ್ಕೆ ಸೆನ್ಸಾರ್‌ ಮಂಡಳಿಯೇ ಅಸ್ತು ಎಂದಿರುವಾಗ ನಿಷೇಧದ ಮಾತೇಕೆ; ದಿ ಕೇರಳ ಸ್ಟೋರಿ ಬಗ್ಗೆ ಚೇತನ್‌ ಅಹಿಂಸಾ ಮಾತು
ಪ್ರಸಾರಕ್ಕೆ ಸೆನ್ಸಾರ್‌ ಮಂಡಳಿಯೇ ಅಸ್ತು ಎಂದಿರುವಾಗ ನಿಷೇಧದ ಮಾತೇಕೆ; ದಿ ಕೇರಳ ಸ್ಟೋರಿ ಬಗ್ಗೆ ಚೇತನ್‌ ಅಹಿಂಸಾ ಮಾತು

Chetan Ahimsa: ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ (Chetan Ahimsa) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಈ ನಟ, ನಿತ್ಯದ ಬೆಳವಣಿಗೆಗಳ ಬಗ್ಗೆ ಒಂದಿಲ್ಲೊಂದು ಕಮೆಂಟ್‌ ಮಾಡುತ್ತಲೇ ಇರುತ್ತಾರೆ. ಆ ಹೇಳಿಕೆಗಳ ಮೂಲಕವೇ ಪರ ವಿರೋಧ ಚರ್ಚೆಗೂ ಒಗ್ಗರಣೆ ಹಾಕುತ್ತಿರುತ್ತಾರೆ. ಇತ್ತೀಚೆಗಷ್ಟೇ ರಾಜ್ಯದಲ್ಲಿ ಗಾಂಜಾ ಕೃಷಿಗೆ ಉತ್ತೇಜನ ನೀಡಬೇಕು ಎಂದಿದ್ದರು. ಅದಾದ ಬಳಿಕ ತಿರುಪತಿಯ ವೆಂಕಟೇಶ್ವರ ದೇವಸ್ಥಾನ ಬೌದ್ಧ ಧರ್ಮದ್ದು ಎಂದೂ ಹೇಳಿಕೆ ನೀಡಿದ್ದರು. ಈಗ ಮಲಯಾಳಂನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ; ಚಿಕ್ಕಮಗಳೂರಿನಲ್ಲಿ ಹನಿಮೂನ್‌ ನಡುವೆಯೇ ಅಲರ್ಟ್‌ ಆದ ಭೂಮಿ

ನಾನಿನ್ನೂ ಅವನ ನೆನಪಿನಲ್ಲಿಯೇ ಇದ್ದೇನೆ! ವಯಸ್ಸು 50 ದಾಟಿದರೂ ಮದುವೆ ಆಗದಿರುವುದಕ್ಕೆ ಕಾರಣ ತಿಳಿಸಿದ ‘ಹಾಲುಂಡ ತವರು​’ ನಟಿ ಸಿತಾರಾ

ನಟಿ ಪವಿತ್ರಾ ಜಯರಾಮ್‌ ಅಪಘಾತದಲ್ಲಿ ಸಾವನ್ನಪ್ಪಿದಾಗ ಅದೇ ಕಾರ್‌ನಲ್ಲಿದ್ದ ನಟ ಚಂದ್ರಕಾಂತ್‌ ಆತ್ಮಹತ್ಯೆ!

ಒಂದು ವೇಳೆ ಕನ್ನಡದ ಬ್ಲಿಂಕ್ ಮಲಯಾಳಿ ಸಿನಿಮಾ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW

'ದಿ ಕೇರಳ ಸ್ಟೋರಿ' ಚಿತ್ರತಂಡ ಬುಧವಾರವಷ್ಟೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದೆ. ಒಂದು ದಿನದಲ್ಲಿ ಕೋಟ್ಯಂತರ ಮಂದಿ ಈ ಟ್ರೇಲರ್‌ ವೀಕ್ಷಿಸಿದ್ದಾರೆ. ಟ್ರೇಲರ್‌ನಲ್ಲಿರುವ ಅಂಶಗಳು ಕೆಲವರನ್ನು ಕೆರಳಿಸಿದೆ. ಈ ಸಿನಿಮಾವನ್ನು ಬ್ಯಾನ್‌ ಮಾಡಲೇಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದು ಬಹುತೇಕ ಕೇರಳ ಹಿನ್ನೆಲೆಯಲ್ಲಿ ತೆಗೆದ ಸಿನಿಮಾವಾಗಿದ್ದು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ ಸೇರುವ ಶಾಲಿನಿ ಉನ್ನಿಕೃಷ್ಣನ್‌ ಎಂಬ ಹಿಂದೂ ಯವತಿಯೊಂದಿಗೆ ಅದೇ ಹಾಸ್ಟೆಲ್‌ನ ಮುಸ್ಲಿಂ ಯುವತಿ ಆಡುವ ಮಾತಿನ ಡೈಲಾಗ್‌ಗಳು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಈಗ ಈ ಸಿನಿಮಾದ ಟ್ರೇಲರ್‌ ನೋಡಿರುವ ಚೇತನ್‌ ಅಹಿಂಸಾ, ಅದಕ್ಕೆ ತಮ್ಮದೆ ಆದ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ಸೆನ್ಸಾರ್‌ ಮಂಡಳಿಯಿಂದ ಅನುಮತಿ ಪಡೆದ ಚಿತ್ರವನ್ನು ನಿಷೇಧಿಸಬೇಕು ಎಂಬ ಮಾತನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ.

"ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ' ಮೇ 5 ರಂದು ತೆರೆಗೆ ಬರಲಿದೆ ನಾನು ಈ ಹಿಂದೆ ಸಮುದಾಯದ/ ಲಿಂಗದ ವಿರುದ್ಧ ದ್ವೇಷ ಮತ್ತು ಅವಹೇಳನ ಮಾಡುವ ಚಲನಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ, ಸೈದ್ಧಾಂತಿಕ ಆಧಾರದ ಮೇಲೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಲನಚಿತ್ರವನ್ನು ರಾಜ್ಯವು ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಗತ್ಯ" ಎಂದಿದ್ದಾರೆ.

ಟ್ರೇಲರ್‌ನಲ್ಲಿ ಅಂಥದ್ದೇನಿದೆ?

ಶಾಲಿನಿ ಎಂಬ ಯುವತಿಯನ್ನು ಹೆತ್ತವರು ಹಾಸ್ಟೆಲ್‌ ಸೇರಿಸುತ್ತಾರೆ. ಅಲ್ಲಿ ಆ ಯುವತಿಗೆ ಮುಸ್ಲಿಂ ಯುವತಿಯ ಪರಿಚಯವಾಗುತ್ತದೆ. ನಿಮ್ಮ ಮೆಚ್ಚಿನ ದೇವರು ಯಾರು ಎಂದು ಮುಸ್ಲಿಂ ಯವತಿ ಕೇಳಿದಾಗ ಶಿವಭಕ್ತೆಯಾದ ಶಾಲಿನಿ, ಶಿವನ ಹೆಸರು ಹೇಳುತ್ತಾಳೆ. ''ಸಾವನ್ನಪ್ಪಿದ ಪತ್ನಿಗಾಗಿ ಸಾಮಾನ್ಯ ಮನುಷ್ಯನಂತೆ ಅಳುವ ಶಿವ ಹೇಗೆ ದೇವರಾಗುತ್ತಾನೆ?'' ಎಂದು ಮುಸ್ಲಿಂ ಯುವತಿ ಕೇಳುತ್ತಾಳೆ. ಹಾಗೇ ಶಾಲಿನಿಗೆ ಮಾಲ್‌ವೊಂದರಲ್ಲಿ ಅವಮಾನವಾದಾಗ ಅದೇ ಮುಸ್ಲಿಂ ಯುವತಿ, ''ಹಿಜಾಬ್‌ ಧರಿಸಿದ ಯಾವುದೇ ಮಹಿಳೆಯನ್ನು ಯಾರೂ ಅತ್ಯಾಚಾರ ಮಾಡಲಾಗುವುದಿಲ್ಲ, ಯಾರೂ ರೇಗಿಸುವುದೂ ಇಲ್ಲ, ಏಕೆಂದರೆ ಅಲ್ಲಾಹ್‌ ಅವರನ್ನು ಯಾವಾಗಲೂ ರಕ್ಷಿಸುತ್ತಾರೆ'' ಎಂಬ ಮಾತುಗಳನ್ನು ಆಡಿ, ಶಾಲಿನಿ ಮುಸ್ಲಿಂ ಧರ್ಮಕ್ಕೆ ಸೇರುವಂತೆ ಪ್ರೇರೇಪಿಸುತ್ತಾಳೆ. ಮುಸ್ಲಿಂ ಯುವತಿಯ ಪಾತ್ರದ ಈ ಡೈಲಾಗ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಸಿನಿಮಾ ನಿಷೇಧಕ್ಕೆ ಕೇರಳ ಸಿಎಂ ಪಿಣರಾಯಿಗೆ ಪತ್ರ

ಈ ಚಿತ್ರದ ಮೂಲಕ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ? ಈ ಸಿನಿಮಾದಿಂದ ಕೇರಳ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಇಂತಹ ಸಿನಿಮಾಗಳು ಬಿಡುಗಡೆ ಆದರೆ ದೇಶಕ್ಕೆ ಕೂಡಾ ಬಹಳ ಸಮಸ್ಯೆ ಇದೆ. ಆದ್ದರಿಂದ ಇಂತಹ ಚಿತ್ರಗಳನ್ನು ಬ್ಯಾನ್‌ ಮಾಡಬೇಕೆಂದು ಕೆಲವು ರಾಜಕೀಯ ಮುಖಂಡರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದಾರೆ.

'ದಿ ಕೇರಳ ಸ್ಟೋರಿ' ಚಿತ್ರವನ್ನು ಸನ್‌ಶೈನ್‌ ಪಿಕ್ಚರ್ಸ್‌ ಪ್ರೈವೇಟ್‌ ಲಿಮಿಟೆಡ್‌, ವಿಪುಲ್‌ ಅಮೃತ್‌ಲಾಲ್‌ ಶಾ ಪ್ರೊಡಕ್ಷನ್ಸ್‌ ಬ್ಯಾನರ್‌ ಜೊತೆ ಸೇರಿ ನಿರ್ಮಿಸಿದ್ದು ಸುದಿಪ್ತೋ ಸೇನ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾಲಿನಿ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಜೊತೆಗೆ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ದಿ ಇದ್ನಾನಿ, ವಿಜಯ್‌ ಕೃಷ್ಣ, ಪ್ರಣಯ್‌ ಪಚೊರಿ, ಪ್ರಣವ್‌ ಮಿಶ್ರಾ ಹಾಗೂ ಇನ್ನಿತರರು ನಟಿಸಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತಯಾರಾಗಿರುವ ಸಿನಿಮಾ ಮೇ 5 ರಂದು ತೆರೆ ಕಾಣುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ