logo
ಕನ್ನಡ ಸುದ್ದಿ  /  ಮನರಂಜನೆ  /  Anna Rajan: ಸಿಮ್‌ ಖರೀದಿಸಲು ಹೋದ ನಟಿಯನ್ನು ಅಂಗಡಿಯಲ್ಲಿಯೇ ಕೂಡಿ ಹಾಕಿದ ಸಿಬ್ಬಂದಿ..

Anna Rajan: ಸಿಮ್‌ ಖರೀದಿಸಲು ಹೋದ ನಟಿಯನ್ನು ಅಂಗಡಿಯಲ್ಲಿಯೇ ಕೂಡಿ ಹಾಕಿದ ಸಿಬ್ಬಂದಿ..

HT Kannada Desk HT Kannada

Oct 08, 2022 01:17 PM IST

google News

ಸಿಮ್‌ ಖರೀದಿಸಲು ಹೋದ ನಟಿಯನ್ನು ಅಂಗಡಿಯಲ್ಲಿಯೇ ಕೂಡಿ ಹಾಕಿದ ಸಿಬ್ಬಂದಿ..

    • ಡುಪ್ಲಿಕೇಟ್‌ ಸಿಮ್‌ ಖರೀದಿ ಮಾಡಲು ಮೊಬೈಲ್‌ ಶೋರೂಮ್‌ಗೆ ಹೋದ ನಟಿಯನ್ನು ಅಲ್ಲಿನ ಸಿಬ್ಬಂದಿಯೇ ಅಂಗಡಿಯಲ್ಲಿ ಕೂಡಿ ಹಾಕಿದ ಘಟನೆ, ಕೇರಳದ ಅಲುವಾದಲ್ಲಿ ನಡೆದಿದೆ.
ಸಿಮ್‌ ಖರೀದಿಸಲು ಹೋದ ನಟಿಯನ್ನು ಅಂಗಡಿಯಲ್ಲಿಯೇ ಕೂಡಿ ಹಾಕಿದ ಸಿಬ್ಬಂದಿ..
ಸಿಮ್‌ ಖರೀದಿಸಲು ಹೋದ ನಟಿಯನ್ನು ಅಂಗಡಿಯಲ್ಲಿಯೇ ಕೂಡಿ ಹಾಕಿದ ಸಿಬ್ಬಂದಿ.. (Instagŗm/ Anna Rajan)

ಡುಪ್ಲಿಕೇಟ್‌ ಸಿಮ್‌ ಖರೀದಿ ಮಾಡಲು ಮೊಬೈಲ್‌ ಶೋರೂಮ್‌ಗೆ ಹೋದ ನಟಿಯನ್ನು ಅಲ್ಲಿನ ಸಿಬ್ಬಂದಿಯೇ ಅಂಗಡಿಯಲ್ಲಿ ಕೂಡಿ ಹಾಕಿದ ಘಟನೆ, ಕೇರಳದ ಅಲುವಾದಲ್ಲಿ ನಡೆದಿದೆ. ಇಲ್ಲಿನ ಅಲುವಾ ಮುನ್ಸಿಪಲ್‌ ರಸ್ತೆಯಲ್ಲಿನ ಮೊಬೈಲ್‌ ಶೋರೂಮ್‌ನಲ್ಲಿ ಗುರುವಾರ ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಬ್ಬಂದಿಯ ಈ ವರ್ತನೆ ಖಂಡಿಸಿ ನಟಿ ಅನ್ನಾ ರಾಜನ್‌ (Anna Rajan) ದೂರು ಸಹ ನೀಡಿದ್ದಾರೆ.

ಡೂಪ್ಲಿಕೇಟ್‌ ಸಿಮ್‌ ಪಡೆದುಕೊಳ್ಳಲು ಗುರುತಿನ ಚೀಟಿ ಬೇಕು ಎಂದು ಅಂಗಡಿಯವರು ನಟಿಗೆ ತಿಳಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದವೂ ನಡೆದು ರಂಪಾಟ ಸೃಷ್ಟಿಯಾಗಿದೆ. ಈ ವೇಳೆ ಅನ್ನಾ ಕೈಗೆ ಗಾಯವಾಗಿದೆ.

ಇದು ವಿಕೋಪಕ್ಕೆ ಹೋಗುತ್ತಿದ್ದಂತೆ, ನಟಿ ಅನ್ನಾ ಆ ಸಿಬ್ಬಂದಿಯ ಫೋಟೋ ತೆಗೆಯಲು ಹೋಗಿದ್ದಾರೆ. ಈ ವೇಳೆ ಆ ಸಿಬ್ಬಂದಿ ನೇರವಾಗಿ ಹೊರಬಂದು, ಶೋ ರೂಮ್‌ನ ಹೊರಗಿನ ಶೆಟರ್‌ ಎಳೆದು ನಟಿಯನ್ನು ಅಂಗಡಿಯಲ್ಲಿಯೇ ಲಾಕ್‌ ಮಾಡಿದ್ದಾನೆ.

ಇತ್ತ ನಟಿ ಸ್ಥಳೀಯ ರಾಜಕಾರಣಿಗೆಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಶೆಟರ್‌ ಎಳೆದ ಐದು ನಿಮಿಷಕ್ಕೆ ಸಿಬ್ಬಂದಿ ಶೆಟರ್‌ ತೆರೆದಿದ್ದಾನೆ. ನಟಿಯ ದೂರಿನ ಮೇರೆಗೆ ಅನುಚಿತವಾಗಿ ವರ್ತಿಸಿದ ಸಿಬ್ಬಂದಿಯನ್ನು ಅಲುವಾ ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯ್ತು. ಈ ವೇಳೆ ಆತ ನಟಿಯ ಬಳಿ ಕ್ಷಮೆ ಕೇಳುವ ಮೂಲಕ ಪ್ರಕರಣವನ್ನು ತಿಳಿಗೊಳಿಸಿದ್ದಾರೆ. ಈ ಸಂಬಂಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ.

"ಅಂಗಮಾಲಿ ಡೈರೀಸ್" ಚಿತ್ರದ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟಿ ಅನ್ನಾ ರಾಜನ್, ಅದಾದ ಬಳಿಕ ಮೋಹನ್ ಲಾಲ್ ನಟಿಸಿದ್ದ "ವೆಲ್ಲಿಪಡತ್ತಿಂಡೆ ಪುಸ್ತಕಂ" ಚಿತ್ರದಲ್ಲಿ ಕಾಣಿಸಿಕೊಂಡರು. ಮಮ್ಮುಟಿಯ ನಟಿಸಿದ "ಮಧುರ ರಾಜ", ಪೃಥ್ವಿರಾಜ್‌ ಜತೆಗೆ "ಅಯ್ಯಪ್ಪನುಂ ಕೊಶಿಯುಂ" ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ