logo
ಕನ್ನಡ ಸುದ್ದಿ  /  ಮನರಂಜನೆ  /  Actress Meena: ಮೀನಾ ಹಾಗೂ ವಿದ್ಯಾಸಾಗರ್ ಬಗ್ಗೆ ಕೇಳಿಬಂತು ಹೊಸ ವಿಚಾರ...ಏನಿದು ವದಂತಿ..?

Actress Meena: ಮೀನಾ ಹಾಗೂ ವಿದ್ಯಾಸಾಗರ್ ಬಗ್ಗೆ ಕೇಳಿಬಂತು ಹೊಸ ವಿಚಾರ...ಏನಿದು ವದಂತಿ..?

Rakshitha Sowmya HT Kannada

Jul 12, 2022 07:50 PM IST

ಪತಿ ಹಾಗೂ ಮಗಳ ಜೊತೆ ನಟಿ ಮೀನಾ

    • ವಿದ್ಯಾಸಾಗರ್​​​​​​​​​​​​​ ಸಾವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ವದಂತಿಗಳು ಹರಿದಾಡುತ್ತಿವೆ. ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಿ ಎಂದು ಮೀನಾ ಮನವಿ ಮಾಡಿದ್ದರೂ ಈ ವದಂತಿ ನಿಂತಿಲ್ಲ. ಮೀನಾ ಪತಿ 250 ಕೋಟಿ ರೂಪಾಯಿ ಆಸ್ತಿಯ ಒಡೆಯ ಆಗಿದ್ದರೂ ಮೀನಾ ಹೆಸರಿಗೆ ಕಿಂಚಿತ್ತು ಆಸ್ತಿಯನ್ನೂ ಬರೆದಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಪತಿ ಹಾಗೂ ಮಗಳ ಜೊತೆ ನಟಿ ಮೀನಾ
ಪತಿ ಹಾಗೂ ಮಗಳ ಜೊತೆ ನಟಿ ಮೀನಾ

ಪತಿಯನ್ನು ಕಳೆದುಕೊಂಡು ನೋವಿನಲ್ಲಿರುವ ಬಹುಭಾಷಾ ನಟಿ ಮೀನಾ ಹಾಗೂ ಅವರ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ನಿಂತಿಲ್ಲ. ಜನರು ವಿವಿಧ ಕಥೆಗಳನ್ನು ಕಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಇದ್ದಾರೆ. ಇದೀಗ ಮೀನಾ ಆಸ್ತಿಗೆ ಸಂಬಂಧಿಸಿದ ವಿವಾದ ಮುನ್ನೆಲೆಗೆ ಬಂದಿವೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಮೀನಾ ಪತಿ ವಿದ್ಯಾಸಾಗರ್ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಕೊರೋನಾದಿಂದ ಚೇತರಿಸಿಕೊಂಡಿದ್ದರೂ ಶ್ವಾಸಕೋಶದ ಸೋಂಕಿನಿಂದ ಅವರು ಮೃತಪಟ್ಟರು. ಮೀನಾ ಪತಿಯ ಸಾವು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ತೆಲುಗು ಮತ್ತು ತಮಿಳು ಚಿತ್ರರಂಗದ ಗಣ್ಯರು, ಸ್ನೇಹಿತರು ಇಂದಿಗೂ ಮೀನಾಗೆ ಸಾಂತ್ವನ ಹೇಳುತ್ತಲೇ ಇದ್ದಾರೆ. ವಿದ್ಯಾಸಾಗರ್​​​​​​​​​​​​​ ಸಾವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ವದಂತಿಗಳು ಹರಿದಾಡುತ್ತಿವೆ. ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಿ ಎಂದು ಮೀನಾ ಮನವಿ ಮಾಡಿದ್ದರೂ ಈ ವದಂತಿ ನಿಂತಿಲ್ಲ. ಮೀನಾ ಪತಿ 250 ಕೋಟಿ ರೂಪಾಯಿ ಆಸ್ತಿಯ ಒಡೆಯ ಆಗಿದ್ದರೂ ಮೀನಾ ಹೆಸರಿಗೆ ಕಿಂಚಿತ್ತು ಆಸ್ತಿಯನ್ನೂ ಬರೆದಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ವಿದ್ಯಾಸಾಗರ್, ತಮ್ಮ ಎಲ್ಲಾ ಆಸ್ತಿಯನ್ನು ಮಗಳು ನೈನಿಕಾ ಹೆಸರಿಗೆ ಮಾಡಿದ್ದಾರೆ. ಮೀನಾ ಹೆಸರಿಗೆ ಒಂದು ಆಸ್ತಿಯೂ ಇಲ್ಲ ಎನ್ನಲಾಗಿದ್ದು, ವಿಲ್ ಬಗ್ಗೆ ಮೀನಾ ಆಘಾತ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ನೈನಿಕಾಗೆ 18 ವರ್ಷ ತುಂಬಿದಾಗ ಅಥವಾ ಆಕೆಗೆ ಮದುವೆಯಾದಾಗ, ಆಕೆಯ ಪತಿ ಅಥವಾ ಆಕೆ ಇಷ್ಟಪಡುವವರು ಆಸ್ತಿಯ ಉತ್ತರಾಧಿಕಾರಿಯನ್ನಾಗಿ ನೇಮಿಸಬಹುದು ಎಂದು ವಿಲ್​​​ನಲ್ಲಿ ಬರೆಯಲಾಗಿದೆಯಂತೆ. ಮೀನಾ ವಿರೋಧಿಗಳು ಹೀಗೆಲ್ಲಾ ಸುದ್ದಿ ಹಬ್ಬಿಸುತ್ತಿದ್ದಾರೋ, ಅಥವಾ ಆ ಸುದ್ದಿ ನಿಜವಾ ಏನು ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಇವೆಲ್ಲದಕ್ಕೂ ಮೀನಾ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಕಾದು ನೋಡಬೇಕು.

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ವಿದ್ಯಾಸಾಗರ್

ವಿದ್ಯಾಸಾಗರ್‌ ಕೆಲವು ವರ್ಷಗಳಿಂದಲೇ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರು. ಅದಕ್ಕೆ ಸಂಬಂಧಿಸಿದಂತೆ ನಿಯಮಿತ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ, ಕೋವಿಡ್‌ ಸೋಂಕು ತಗುಲಿದ್ದರಿಂದ ಶ್ವಾಸಕೋಶ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತ್ತು. ಕೆಲವು ದಿನಗಳ ಹಿಂದೆ ಶ್ವಾಸಕೋಶ ಕಸಿ ಮಾಡುವ ಬಗ್ಗೆಯೂ ವೈದ್ಯರು ಮುಂದಾಗಿದ್ದರು. ಶ್ವಾಸಕೋಶ ಕಸಿಗೆ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ವ್ಯಕ್ತಿಯ ಶ್ವಾಸಕೋಶವೇ ಬೇಕಿತ್ತು. ಆದರೆ, ಆ ರೀತಿಯ ದಾನಿ ಸಿಗದ ಹಿನ್ನೆಲೆಯಲ್ಲಿ ಔಷಧಿ ಮೂಲಕ ಗುಣಪಡಿಸಲು ಮುಂದಾದರೂ ಚಿಕಿತ್ಸೆ ಫಲಿಸಲಿಲ್ಲ.

ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿದ್ದ ಮೀನಾ

ವಿದ್ಯಾಸಾಗರ್ ನಿಧನದ ನಂತರ ಸೋಷಿಯಲ್ ಮೀಡಿಯಾ ಗಾಸಿಪ್​​​ಗಳಿಂದ ಬೇಸರ ವ್ಯಕ್ತಪಡಿಸಿದ್ದ ಮೀನಾ ತಮ್ಮ ಇನ್​​​ಸ್ಟಾಗ್ರಾಮ್​​​​​​​ನಲ್ಲಿ ಮನವಿ ಮಾಡಿದ್ದರು. ''ಪತಿ ವಿದ್ಯಾಸಾಗರ್ ಅವರ ಅಗಲಿಕೆಯಿಂದ ನಾನು ಬಹಳ ನೊಂದಿದ್ದೇನೆ. ಈ ಸಮಯದಲ್ಲಿ ದಯವಿಟ್ಟು ನನ್ನ ಖಾಸಗಿತನಕ್ಕೆ ಧಕ್ಕೆ ಮಾಡಬೇಡಿ. ವಿದ್ಯಾಸಾಗರ್ ನಿಧನದ ಬಗ್ಗೆ ದಯವಿಟ್ಟು ಇಲ್ಲಸಲ್ಲದ ಸುದ್ದಿಗಳನ್ನು ಹರಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಕಷ್ಟದ ಪರಿಸ್ಥಿತಿಯಲ್ಲಿ ನನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಹಾಗೇ ವಿದ್ಯಾಸಾಗರ್ ಅವರಿಗೆ ಚಿಕಿತ್ಸೆ ನೀಡಿ ಅವರನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದ ವೈದ್ಯರಿಗೆ, ತಮಿಳುನಾಡು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ನಾನು ಕೃತಜ್ಞತೆ ಅರ್ಪಿಸಲು ಬಯಸುತ್ತೇನೆ'' ಎಂದು ಮೀನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ