logo
ಕನ್ನಡ ಸುದ್ದಿ  /  ಮನರಂಜನೆ  /  ವಿಶ್ವದ ಪ್ರಸಿದ್ಧ ಕಾರ್ಟೂನ್ ಡೋರೆಮನ್‌ ಪಾತ್ರಕ್ಕೆ ಧ್ವನಿಯಾಗಿದ್ದ ನೊಬುಯೊ ಒಯಾಮಾ ನಿಧನ; ಕ್ಯಾನ್ಸರ್ ಗೆದ್ದು 90 ವರ್ಷ ಬದುಕಿದ್ದ ನಟಿ

ವಿಶ್ವದ ಪ್ರಸಿದ್ಧ ಕಾರ್ಟೂನ್ ಡೋರೆಮನ್‌ ಪಾತ್ರಕ್ಕೆ ಧ್ವನಿಯಾಗಿದ್ದ ನೊಬುಯೊ ಒಯಾಮಾ ನಿಧನ; ಕ್ಯಾನ್ಸರ್ ಗೆದ್ದು 90 ವರ್ಷ ಬದುಕಿದ್ದ ನಟಿ

Suma Gaonkar HT Kannada

Oct 13, 2024 02:05 PM IST

google News

ಡೋರೆಮನ್‌ ಕಾರ್ಟೂನ್ ಪಾತ್ರಕ್ಕೆ ಧ್ವನಿಯಾಗಿದ್ದ ನೊಬುಯೊ ಒಯಾಮಾ

    • ಡೋರೆಮನ್ ದಶಕಗಳಿಂದ ವೀಕ್ಷಕರ ಮನಸ್ಸನ್ನು ಗೆದ್ದ ಕಾರ್ಟೂನ್. ನೊಬುಯೊ ಒಯಾಮಾ ಎಂಬುವವರು ಈ ಕಾರ್ಟೂನ್‌ಗೆ ವಾಯ್ಸ್‌ ನೀಡುತ್ತಿದ್ದರು. ಅವರು ನಿಧನರಾಗಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಗುತ್ತಿದೆ.
ಡೋರೆಮನ್‌ ಕಾರ್ಟೂನ್ ಪಾತ್ರಕ್ಕೆ ಧ್ವನಿಯಾಗಿದ್ದ ನೊಬುಯೊ ಒಯಾಮಾ
ಡೋರೆಮನ್‌ ಕಾರ್ಟೂನ್ ಪಾತ್ರಕ್ಕೆ ಧ್ವನಿಯಾಗಿದ್ದ ನೊಬುಯೊ ಒಯಾಮಾ

ಡೋರೆಮನ್ ದಶಕಗಳಿಂದ ವೀಕ್ಷಕರ ಹೃದಯ ಮತ್ತು ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ ಒಂದು ಕಾರ್ಟೂನ್. ನೊಬುಯೊ ಒಯಾಮಾ ಎಂಬುವವರು ಈ ಕಾರ್ಟೂನ್‌ಗೆ ವಾಯ್ಸ್‌ ನೀಡುತ್ತಿದ್ದರು. ಒಯಾಮಾ ಸೆಪ್ಟೆಂಬರ್ 29 ರಂದು ನಿಧನರಾದರು. ಆಕೆಗೆ 90 ವರ್ಷ ವಯಸ್ಸಾಗಿತ್ತು. ಆಕೆಯ ಸಂಬಂಧಿಕರು ಆಕೆಯ ಅಂತ್ಯಕ್ರಿಯೆಯನ್ನು ಖಾಸಗಿಯಾಗಿ ನಡೆಸಿದ್ದಾರೆ. ನೊಬುಯೊ ಒಯಾಮಾ 1933 ರಲ್ಲಿ ಜನಿಸಿದರು ಮತ್ತು ವಾಯ್ಸ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡಿದವರು. ನೊಬುಯೊ 1979 ರಲ್ಲಿ ಡೋರೇಮನ್ ಪಾತ್ರಕ್ಕೆ ಧ್ವನಿ ನೀಡಲು ಆರಂಭಿಸಿದರು.

ದೂರದರ್ಶನ ಸರಣಿಗಳು, ವಿಡಿಯೋ ಗೇಮ್‌ಗಳು ಮತ್ತು ಚಲನಚಿತ್ರಗಳಿಗೆ ಇವರು ತಮ್ಮ ಧ್ವನಿ ನೀಡಿದ್ದಾರೆ. ಟೋಕಿಯೊದಲ್ಲಿ ಜನಿಸಿದ ನೊಬುಯೊ ಒಯಾಮಾ ಹೈಯುಜಾ ಕಂಪನಿಯಲ್ಲಿ ತರಬೇತಿ ಪಡೆದ ನಂತರ ನಟನೆ, ಹಾಡುಗಾರಿಕೆ ಮತ್ತು ವಾಯ್ಸ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡಿದ್ದಾರೆ. ಸಾಕಷ್ಟು ಜನರ ಮನದಲ್ಲಿ ಇವರು ಧ್ವನಿ ಇಂದಿಗೂ ಇದೆ. ಡೋರೆಮನ್ ಕಾರ್ಟೂನ್‌ ವೀಕ್ಷಣೆ ಮಾಡದವರೇ ಇಲ್ಲ ಎನ್ನುವ ಮಟ್ಟಿಗೆ ಜನಪ್ರಿಯತೆಗಳಿಸಿದ ಕಾರ್ಟೂನ್ ಅದು.

1979 ರಿಂದ 2005 ರವರೆಗೆ ಪ್ರಸಾರವಾದ ಎಲ್ಲಾ ಎಪಿಸೋಡ್‌ಗಳಿಗೂ ಇವರೇ ಡೊರೆಮಾನ್‌ ಧ್ವನಿ ನೀಡಿದ್ದಾರೆ. ವಿಶೇಷವಾಗಿ ಹಾಂಗ್ ಕಾಂಗ್ ಮತ್ತು ವಿಯೆಟ್ನಾಂನಂತಹ ಪ್ರದೇಶದಲ್ಲಿ ಡೋರೆಮನ್‌ಗೆ ತುಂಬಾ ಅಭಿಮಾನಿಗಳಿದ್ದಾರೆ. ಕೇವಲ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿರದೇ ಜಾಗತಿಕವಾಗಿ ಈ ಕಾರ್ಟೂನ್‌ ಜನಪ್ರಿಯತೆಯನ್ನು ಗಳಿಸಿದೆ.

ಹತ್ತಾರು ಅನಿಮೇಟೆಡ್ ಚಲನಚಿತ್ರಗಳು ಬಂದರೂ ಡೋರೆಮನ್ ಮಾತ್ರ ಎಲ್ಲರ ಮನದಲ್ಲಿ ಅಚ್ಚಳಿಯದೇ ಇರುವ ಒಂದು ಕಾರ್ಟೂನ್. ಡೋರೆಮನ್ ಎಂಬುದು ಒಂದು ರೋಬೋಟಿಕ್ ಬೆಕ್ಕಿನ ಕಥೆ. ನೊಬೆತಾ ಕೂಡ ಇದರಲ್ಲಿ ಒಂದು ಮುಖ್ಯ ಪಾತ್ರ. ಜಪಾನ್‌ನ ಸಾರ್ವಜನಿಕ ಬೊಂಬೆ ಪ್ರದರ್ಶನ "ಬೂ ಫೂ ವೂ" ನಲ್ಲಿ ಮೊದಲು ಒಯಾಮಾ ತಮ್ಮ ಧ್ವನಿ ನೀಡುತ್ತಾರೆ. ಆ ಪ್ರದರ್ಶನವು ತುಂಬಾ ಜನಪ್ರಿಯತೆ ಗಳಿಸಿತ್ತು.

ಒಯಾಮಾ ಅವರ ಸಾವಿನ ಸುದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸಾಕಷ್ಟು ಜನ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಪ್ರಪಂಚದಾದ್ಯಂತದ ಅಭಿಮಾನಿಗಳು ಸಂತಾಪವನ್ನು ವ್ಯಕ್ತಪಡಿಸುತ್ತಿದ್ದಾರೆ. "ಜೋಜೋಸ್ ಬಿಜಾರ್ ಅಡ್ವೆಂಚರ್" ಮತ್ತು "ಡೆಮನ್ ಸ್ಲೇಯರ್" ಸೇರಿದಂತೆ ಇತರ ಜನಪ್ರಿಯ ಸರಣಿಗಳಲ್ಲಿ ಸಹ ಅವರು ತಮ್ಮ ಧ್ವನಿ ನೀಡಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ