logo
ಕನ್ನಡ ಸುದ್ದಿ  /  ಮನರಂಜನೆ  /  Kushi On Ott: ಖುಷಿ ಚಿತ್ರದ ಒಟಿಟಿ ದಿನಾಂಕ ರಿವೀಲ್;‌ ವಾಟ್ಸಾಪ್‌ ವಿಚಾರವಾಗಿಯೂ ವಿಜಯ್‌ ದೇವರಕೊಂಡ ಟ್ರೆಂಡ್‌; ಹೀಗಿದೆ ಅಸಲಿ ಕಾರಣ

Kushi on OTT: ಖುಷಿ ಚಿತ್ರದ ಒಟಿಟಿ ದಿನಾಂಕ ರಿವೀಲ್;‌ ವಾಟ್ಸಾಪ್‌ ವಿಚಾರವಾಗಿಯೂ ವಿಜಯ್‌ ದೇವರಕೊಂಡ ಟ್ರೆಂಡ್‌; ಹೀಗಿದೆ ಅಸಲಿ ಕಾರಣ

Sep 24, 2023 12:01 PM IST

google News

Kushi on OTT: ಖುಷಿ ಚಿತ್ರದ ಒಟಿಟಿ ದಿನಾಂಕ ರಿವೀಲ್;‌ ವಾಟ್ಸಾಪ್‌ ವಿಚಾರವಾಗಿಯೂ ವಿಜಯ್‌ ದೇವರಕೊಂಡ ಟ್ರೆಂಡ್‌; ಹೀಗಿದೆ ಅಸಲಿ ಕಾರಣ

    • ವಿಜಯ್‌ ದೇವರಕೊಂಡ ಮತ್ತು ಸಮಂತಾ ನಟನೆಯ ಖುಷಿ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ರಿವೀಲ್‌ ಆಗಿದೆ. ಇದರ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿ ವಾಟ್ಸಾಪ್‌ ವಿಚಾರವಾಗಿಯೂ ವಿಜಯ್‌ ಟ್ರೆಂಡಿಂಗ್‌ನಲ್ಲಿದ್ದಾರೆ. 
Kushi on OTT: ಖುಷಿ ಚಿತ್ರದ ಒಟಿಟಿ ದಿನಾಂಕ ರಿವೀಲ್;‌ ವಾಟ್ಸಾಪ್‌ ವಿಚಾರವಾಗಿಯೂ ವಿಜಯ್‌ ದೇವರಕೊಂಡ ಟ್ರೆಂಡ್‌; ಹೀಗಿದೆ ಅಸಲಿ ಕಾರಣ
Kushi on OTT: ಖುಷಿ ಚಿತ್ರದ ಒಟಿಟಿ ದಿನಾಂಕ ರಿವೀಲ್;‌ ವಾಟ್ಸಾಪ್‌ ವಿಚಾರವಾಗಿಯೂ ವಿಜಯ್‌ ದೇವರಕೊಂಡ ಟ್ರೆಂಡ್‌; ಹೀಗಿದೆ ಅಸಲಿ ಕಾರಣ

Vijay Deverakonda: ವಿಜಯ್‌ ದೇವರಕೊಂಡ ಮತ್ತು ಸಮಂತಾ ನಟನೆಯ ಖುಷಿ ಸಿನಿಮಾ ಸೆ. 1ರಂದು ಬಿಡುಗಡೆ ಆಗಿತ್ತು. ಲೈಗರ್‌ ಸಿನಿಮಾ ಮೂಲಕ ಸೋಲಿನ ಸುಳಿಗೆ ಸಿಲುಕಿದ್ದ ವಿಜಯ್‌ಗೆ ಖುಷಿ ಸಿನಿಮಾ ಕೈ ಹಿಡಿದಿತ್ತು. ಮೆಚ್ಚುಗೆಯ ಜತೆಗೆ ಬಾಕ್ಸ್ ಆಫೀಸ್‌ನಲ್ಲಿಯೂ ಈ ಸಿನಿಮಾ ಒಳ್ಳೆಯ ಕಲೆಕ್ಷನ್‌ ಮಾಡಿತ್ತು. ಸಿನಿಮಾ ಹಿಟ್‌ ಆಗುತ್ತಿದ್ದಂತೆ, ನೂರು ಕುಟುಂಬಗಳಿಗೆ ಹಣಕಾಸಿನ ಸಹಾಯವನ್ನೂ ಮಾಡಿ ಸುದ್ದಿಯಾಗಿದ್ದರು ವಿಜಯ್ ದೇವರಕೊಂಡ.

ಹೀಗೆ ಖುಷಿ ಸಿನಿಮಾ ರಿಲೀಸ್‌ ಆಗಿ ಬರೋಬ್ಬರಿ 25 ದಿನಗಳಾದವು. ಈ ಸಿನಿಮಾ ಒಟಿಟಿಯಲ್ಲಿ ಯಾವಾಗ ರಿಲೀಸ್‌ ಎಂದೇ ಅಭಿಮಾನಿಗಳು ಕೇಳುತ್ತಲೇ ಬಂದಿದ್ದರು. ಆದರೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಇದೀಗ ಕೊನೆಗೂ ಆ ಕ್ಷಣ ಬಂದೇ ಬಿಟ್ಟಿದೆ. ಒಟಿಟಿ ದೈತ್ಯ ಸಂಸ್ಥೆ, ಖುಷಿ ಚಿತ್ರದ ಡಿಜಿಟಲ್‌ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ. ಇನ್ನೇನು ಶೀಘ್ರದಲ್ಲಿಯೇ ನೆಟ್‌ಫ್ಲಿಕ್ಸ್‌ನಲ್ಲಿ ಖುಷಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ಶಿವ ನಿರ್ವಾಣ ನಿರ್ದೇಶನದಲ್ಲಿ ಮೂಡಿ ಬಂದ ಖುಷಿ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಿ ಎಲ್ಲರ ಹೃದಯ ಗೆದ್ದಿತ್ತು. ಮೈತ್ರಿ ಮೋವಿ ಮೇಕರ್ಸ್‌ ಸಂಸ್ಥೆ ನಿರ್ಮಿಸಿದ್ದ ಈ ಸಿನಿಮಾದಲ್ಲಿ ಜಯರಾಮ್, ಸಚಿನ್‌ ಖೇಡೆಕರ್‌, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ರೋಹಿಣಿ, ವೆನ್ನೆಲೆ ಕಿಶೋರ್‌, ರಾಹುಲ್‌ ರಾಮಕೃಷ್ಣ, ಶ್ರೀಕಾಂತ್‌ ಅಯ್ಯಂಗಾರ್‌, ಸರಣ್ಯ ಪ್ರದೀಪ್‌ ಹೀಗೆ ಹಲವು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಈ ದಿನಾಂಕದಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌

ಅಂದಹಾಗೆ, ಅಕ್ಟೋಬರ್‌ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಖುಷಿ ಸಿನಿಮಾ ರಿಲೀಸ್‌ ಆಗಲಿದೆ. ತೆಲುಗು ಜತೆಗೆ ಕನ್ನಡ, ತಮಿಳು, ಮಲಯಾಳಂ, ಹಿಂದಿ ಆಡಿಯೋ ಕೂಡ ನೋಡುಗರಿಗೆ ಲಭ್ಯವಾಗಲಿದೆ. ಈ ಕುರಿತು ನೆಟ್‌ಪ್ಲಿಕ್ಸ್‌ ಸಹ ಅಧಿಕೃತವಾಗಿ ಹೇಳಿಕೊಂಡಿದೆ. ಚಿತ್ರಮಂದಿರದಲ್ಲಿ ಯಾರೆಲ್ಲ ಈ ಸಿನಿಮಾ ಮಿಸ್‌ ಮಾಡಿಕೊಂಡಿದ್ದೀರೋ ಅವರೆಲ್ಲ ಇದೀಗ ಒಟಿಟಿಯಲ್ಲಿ ವೀಕ್ಷಿಸಬಹುದು.

ವಾಟ್ಸಾಪ್‌ನಲ್ಲಿ ದೇವರಕೊಂಡ ಟ್ರೆಂಡ್‌..

ಇತ್ತೀಚೆಗಷ್ಟೇ ವಾಟ್ಸಾಪ್‌, ಚಾನೆಲ್‌ ಆರಂಭಿಸಿದ್ದು, ಸಿನಿಮಾ, ಕ್ರೀಡಾ ಕ್ಷೇತ್ರದ ತಾರೆಯರನ್ನು ಅಲ್ಲಿ ಫಾಲೋ ಮಾಡಬಹುದು. ಅವರ ಹೊಸ ಹೊಸ ಅಪ್‌ಡೇಟ್‌ಗಳನ್ನೂ ವೀಕ್ಷಿಸಬಹುದು. ಅದೇ ರೀತಿ ವಿಜಯ್‌ ದೇವರಕೊಂಡ ಸಹ ವಾಟ್ಸಾಪ್‌ ಚಾನೆಲ್‌ನಲ್ಲಿದ್ದಾರೆ. ಇದೇ ನಟನನ್ನು ಇದೀಗ ಕೆಲವೇ ದಿನಗಳ ಅವಧಿಯಲ್ಲಿಬರೋಬ್ಬರಿ 10 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಟಾಲಿವುಡ್‌ನಲ್ಲಿ ಅತ್ಯಂತ ವೇಗವಾಗಿ 1 ಮಿಲಿಯನ್‌ ವಾಟ್ಸಾಪ್‌ ಫಾಲೋವರ್ಸ್‌ ಹೊಂದಿದ್ದಾರೆ. ಈ ವಿಚಾರ X ನಲ್ಲಿ ಟ್ರೆಂಡ್‌ ಆಗುತ್ತಿದೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ