logo
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ ಸ್ಟ್ರೀಮ್‌ ಆಗ್ತಿದೆ ಡೆಡ್‌ಪೂಲ್‌ ಮತ್ತು ವೋಲ್ವರಿನ್‌; 11 ಸಾವಿರ ಕೋಟಿ ಕಲೆಕ್ಷನ್‌ ಮಾಡಿರುವ ಹಾಲಿವುಡ್‌ ಸಿನಿಮಾ ಇದು

ಒಟಿಟಿಯಲ್ಲಿ ಸ್ಟ್ರೀಮ್‌ ಆಗ್ತಿದೆ ಡೆಡ್‌ಪೂಲ್‌ ಮತ್ತು ವೋಲ್ವರಿನ್‌; 11 ಸಾವಿರ ಕೋಟಿ ಕಲೆಕ್ಷನ್‌ ಮಾಡಿರುವ ಹಾಲಿವುಡ್‌ ಸಿನಿಮಾ ಇದು

Rakshitha Sowmya HT Kannada

Nov 13, 2024 06:55 AM IST

google News

ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗ್ತಿದೆ ಡೆಡ್‌ಪೂಲ್‌ ಮತ್ತು ವೋಲ್ವರಿನ್‌ ಹಾಲಿವುಡ್‌ ಸಿನಿಮಾ

  • ಜುಲೈ 26 ರಂದು ಥಿಯೇಟರ್‌ನಲ್ಲಿ ಬಿಡುಗಡೆ ಆದ ಡೆಡ್‌ಪೂಲ್‌ ಮತ್ತು ವೋಲ್ವರಿನ್‌ ಹಾಲಿವುಡ್‌ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ. 11 ಸಾವಿರ ಕೋಟಿ ಕಲೆಕ್ಷನ್‌ ಮಾಡಿರುವ ಈ ಸಿನಿಮಾ ಇಂಗ್ಲೀಷ್‌ ಜೊತೆಗೆ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗ್ತಿದೆ ಡೆಡ್‌ಪೂಲ್‌ ಮತ್ತು ವೋಲ್ವರಿನ್‌ ಹಾಲಿವುಡ್‌ ಸಿನಿಮಾ
ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗ್ತಿದೆ ಡೆಡ್‌ಪೂಲ್‌ ಮತ್ತು ವೋಲ್ವರಿನ್‌ ಹಾಲಿವುಡ್‌ ಸಿನಿಮಾ

ಒಟಿಟಿಯಲ್ಲಿ ಪ್ರತಿ ವಾರ ವಿಭಿನ್ನ ಕಂಟೆಂಟ್‌ ಇರುವ ಸಿನಿಮಾ , ವೆಬ್‌ ಸಿರೀಸ್‌ಗಳು ಸ್ಟ್ರಿಮಿಂಗ್‌ ಆಗುತ್ತಿವೆ. ಕೆಲವು ಸಿನಿಮಾಗಳು ನೇರವಾಗಿ ಇಲ್ಲೇ ರಿಲೀಸ್‌ ಆದರೆ, ಇನ್ನೂ ಕೆಲವು ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಕೆಲವು ದಿನಗಳ ನಂತರ ಒಟಿಟಿಗೆ ಎಂಟ್ರಿ ಕೊಡುತ್ತಿವೆ. ಇದೀಗ ವಿಶ್ವಾದ್ಯಂತ 11 ಸಾವಿರ ಕೋಟಿ ರೂಗಿಂತ ಹೆಚ್ಚು ಕಲೆಕ್ಷನ್‌ ಮಾಡಿರುವ ಸೈನ್ಸ್‌ ಫಿಕ್ಷನ್‌ ಆಕ್ಷನ್‌ ಕಾಮಿಡಿ ಸಿನಿಮಾವೊಂದು ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ.

11 ಸಾವಿರ ಕೋಟಿ ದೋಚಿರುವ ಸಿನಿಮಾ

ಮಾರ್ವೆಲ್‌ ಸಿನಿಮಾಟಿಕ್‌ ಯೂನಿವರ್ಸ್‌ನಿಂದ ತಯಾರಾದ ಡೆಡ್‌ಪೂಲ್‌ ಅಂಡ್‌ ವೋಲ್ವರಿನ್‌. ಇದು ಡೆಡ್‌ಪೂಲ್‌ ಸಿನಿಮಾ ಸಿರೀಸ್‌ನಿಂದ ಬಂದ ನಾಲ್ಕನೇ ಸಿನಿಮಾ. ಡೆಡ್‌ಪೂಲ್‌ ಹಾಗೂ ವೋಲ್ವರಿನ್‌ ಜೊತೆ ಸೇರಿ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಾಗಿನಿಂದ ವಿಶ್ವಾದ್ಯಂತ ಬಜ್‌ ಕ್ರಿಯೇಟ್‌ ಆಗಿತ್ತು. ಈ ಪಾತ್ರಗಳಿಗಿರುವ ಜನಪ್ರಿಯತೆಯೇ ಅಷ್ಟು. ಡೆಡ್‌ಪೂಲ್ 4 ಜುಲೈ 26 ರಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದಿತ್ತು. ಇದರಿಂದ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಕೂಡಾ ದೊಡ್ಡ ಮಟ್ಟದ ಲಾಭ ಗಳಿಸಿತ್ತು. ಒಟ್ಟಾರೆ ಡೆಡ್‌ಪೂಲ್ ಮತ್ತು ವೊಲ್ವೆರಿನ್ ಸಿನಿಮಾ 1.338 ಬಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಿದೆ. ಭಾರತೀಯ ಕರೆನ್ಸಿ ರೂಪಾಯಿಗೆ ಹೋಲಿಸಿದರೆ 11,290,72,95,376 ಎನ್ನಬಹುದು. ಅಂದರೆ ಡೆಡ್‌ಪೂಲ್ 4, ಬಾಕ್ಸ್‌ ಆಫೀಸಿನಲ್ಲಿ 11 ಸಾವಿರ ಕೋಟಿಗೂ ಹೆಚ್ಚು ಗಳಿಸಿವೆ. 200 ಮಿಲಿಯನ್ ಡಾಲರ್‌ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಲನಚಿತ್ರವು 1.338 ಬಿಲಿಯನ್ ಡಾಲರ್‌ಗಳ ಸಂಗ್ರಹದೊಂದಿಗೆ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ.

ಶಾನ್‌ ಲೆವಿ ನಿರ್ದೇಶನದ ಚಿತ್ರ

ಈ ಚಿತ್ರದಲ್ಲಿ ಡೆಡ್‌ಪೂಲ್ ಆಗಿ ರಯಾನ್ ರೆನಾಲ್ಡ್ಸ್ ಮತ್ತು ವೊಲ್ವೆರಿನ್ ಪಾತ್ರದಲ್ಲಿ ಹಗ್ ಜಾಕ್‌ಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಮ್ಮಾ ಕೊರಿನ್ನೆ, ಮೊರೆನಾ ಬ್ಯಾಕರಿನ್, ರಾಬ್ ಡೆಲಾನಿ, ಲೆಸ್ಲಿ ಉಗ್ಗಮ್ಸ್, ಕರಣ್ ಸೋನಿ, ಮ್ಯಾಥ್ಯೂ ಮ್ಯಾಕ್‌ಫಾಡೆನ್ ಮತ್ತು ಇತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರವನ್ನು ಮಾರ್ವೆಲ್ ಸ್ಟುಡಿಯೋಸ್ ಮತ್ತು 21 ಲ್ಯಾಪ್ಸ್ ಎಂಟರ್‌ಟೈನ್‌ಮೆಂಟ್ ಜಂಟಿಯಾಗಿ ನಿರ್ಮಿಸಿದ್ದು ಶಾನ್ ಲೆವಿ ನಿರ್ದೇಶಿಸಿದ್ದಾರೆ.

ಐಎಂಡಿಬಿಯಲ್ಲಿ 7.8 ರೇಟಿಂಗ್ ದೊರೆತಿರುವ ಸಿನಿಮಾ

ಡೆಡ್‌ಪೂಲ್‌ ಅಂಡ್‌ ವೋಲ್ವರಿನ್‌ ಚಿತ್ರಕ್ಕೆ ಐಎಂಡಿಬಿಯಲ್ಲಿ 7.8 ರೇಟಿಂಗ್ ದೊರೆತಿದೆ. ಸಿನಿಮಾ, ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಿ ಮೂರೂವರೆ ತಿಂಗಳ ನಂತರ ನವೆಂಬರ್ 12 ರ ಮಧ್ಯರಾತ್ರಿಯಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇಂಗ್ಲೀಷ್ ಭಾಷೆಯ ಜೊತೆಗೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ. ಸೂಪರ್ ಹೀರೋ ಚಿತ್ರಗಳ ವರ್ಗಕ್ಕೆ ಸೇರಿರುವ ಡೆಡ್‌ಪೂಲ್ ಮತ್ತು ವೊಲ್ವೆರಿನ್ ಸಿನಿಮಾದಲ್ಲಿ ವೈಜ್ಞಾನಿಕ ಕಾದಂಬರಿ, ಫ್ಯಾಂಟಸಿ, ಆಕ್ಷನ್, ಹಾಸ್ಯ ಮತ್ತು ಆಕ್ಷನ್‌ ಅಂಶಗಳಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ