logo
ಕನ್ನಡ ಸುದ್ದಿ  /  Entertainment  /  Ponniyin Selvan 2 Trailer Bollywood Was Never Able To Utilise Her The Way Mani Ratnam Does Says Netizens

Ponniyin Selvan 2: ‘ಛೇ.. ಈ ರೀತಿ ಐಶ್ವರ್ಯಾ ರೈರನ್ನು ನೀವು ಬಳಸಿಕೊಳ್ಳಲೇ ಇಲ್ಲ!’; ‘ಪೊನ್ನಿಯನ್‌ ಸೇಲ್ವನ್‌’ ಟ್ರೇಲರ್‌ ನೋಡಿದವರ ಮಾತಿದು

HT Kannada Desk HT Kannada

Mar 31, 2023 08:25 AM IST

‘ಛೇ.. ಈ ರೀತಿ ಐಶ್ವರ್ಯಾ ರೈ ಅವರನ್ನು ನೀವು ಬಳಸಿಕೊಳ್ಳಲೇ ಇಲ್ಲ!’; ‘ಪೊನ್ನಿಯನ್‌ ಸೇಲ್ವನ್‌’ ಟ್ರೇಲರ್‌ ನೋಡಿದವರ ಮಾತಿದು..

  • ಪೊನ್ನಿಯನ್‌ ಸೇಲ್ವನ್‌ ಟ್ರೇಲರ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿದ್ದು ನಟಿ ಐಶ್ವರ್ಯಾ ರೈ ಬಚ್ಚನ್.‌ ನಂದಿನಿ ಎಂಬ ಪಾತ್ರದಲ್ಲಿ ಮಿಂಚು ಹರಿಸಿದ್ದಾರವರು. ಇದನ್ನು ನೋಡಿದ ನೆಟ್ಟಿಗರು ಬಾಲಿವುಡ್‌ ಚಿತ್ರರಂಗವನ್ನು ಟೀಕಿಸಿದ್ದಾರೆ.

‘ಛೇ.. ಈ ರೀತಿ ಐಶ್ವರ್ಯಾ ರೈ ಅವರನ್ನು ನೀವು ಬಳಸಿಕೊಳ್ಳಲೇ ಇಲ್ಲ!’; ‘ಪೊನ್ನಿಯನ್‌ ಸೇಲ್ವನ್‌’ ಟ್ರೇಲರ್‌ ನೋಡಿದವರ ಮಾತಿದು..
‘ಛೇ.. ಈ ರೀತಿ ಐಶ್ವರ್ಯಾ ರೈ ಅವರನ್ನು ನೀವು ಬಳಸಿಕೊಳ್ಳಲೇ ಇಲ್ಲ!’; ‘ಪೊನ್ನಿಯನ್‌ ಸೇಲ್ವನ್‌’ ಟ್ರೇಲರ್‌ ನೋಡಿದವರ ಮಾತಿದು..

Aishwrya Rai: ಸೌತ್‌ನ ಖ್ಯಾತ ನಿರ್ದೇಶಕ ಮಣಿರತ್ನಂ ಕನಸಿನ ಕೂಸು ಐತಿಹಾಸಿಕ ದೃಶ್ಯಕಾವ್ಯ ‘ಪೊನ್ನಿಯನ್‌ ಸೇಲ್ವನ್‌ 2’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಚೆನ್ನೈನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಟ್ರೇಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ಜರುಗಿತ್ತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉಳಗನಾಯಗನ್ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು. ಟ್ರೇಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಬಿಡುಗಡೆಯಾದ ಟ್ರೇಲರ್‌ ಕಣ್ತುಂಬಿಕೊಂಡ ನೆಟ್ಟಿಗರೂ ಸಹ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಅದರಲ್ಲೂ ಐಶ್ವರ್ಯಾ ರೈ ಲುಕ್‌ಗೆ ಮಾರುಹೋದವರೇ ಹೆಚ್ಚು!

ಟ್ರೆಂಡಿಂಗ್​ ಸುದ್ದಿ

‘ವಿವಾಹಿತ ಪುರುಷನ ಜತೆ ಗೌಪ್ಯ ಮದುವೆ ಆಗಿದ್ದಕ್ಕೆ ಮಕ್ಕಳೇ ಬೇಡ ಎಂದು ನಿರ್ಧರಿಸಿದೆ!’ ‘ಅಣ್ಣಯ್ಯ’ ಚಿತ್ರದ ಅರುಣಾ ಇರಾನಿ ಕಥೆ -ವ್ಯಥೆ

‘ಒಂದು ವೇಳೆ ಪ್ರಜ್ವಲ್‌ ರೇವಣ್ಣ ಮುಸ್ಲಿಂ ಆಗಿದ್ರೆ, ಸುಮ್ನೆ ಬಿಡ್ತಿದ್ರಾ?’ ಧರ್ಮ ಎಳೆದು ತಂದ ನಟಿ ಸ್ವರಾ ಭಾಸ್ಕರ್‌

‘ಅವ್ನ ಜತೆಗೇನು ಮಾತು, ಅವ್ರನ್ನ ಅಣ್ಣ ಅಂತ ಕರೀ, ಈ ಅನುಮಾನವೇ ಆ ವ್ಯಕ್ತಿ ಜತೆಗಿನ ಬ್ರೇಕಪ್‌ಗೆ ಕಾರಣವಾಯ್ತು’; ತನಿಷಾ ಕುಪ್ಪಂಡ

ಪುನೀತ್‌ ರಾಜ್‌ಕುಮಾರ್‌ ಮೊದಲ ಕೋವಿಡ್‌ ಲಸಿಕೆ ಪಡೆದದ್ದು ಯಾವಾಗ? ಅಪ್ಪು ಸಾವಿಗೂ ಮೊದಲ ಲಸಿಕೆಗೂ ಇಷ್ಟು ತಿಂಗಳ ಅಂತರ

ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧರಿಸಿ ನಿರ್ದೇಶಕ ಮಣಿರತ್ನಂ ಎರಡು ಭಾಗದಲ್ಲಿ ಚಿತ್ರ ತಯಾರಿಸಿದ್ದರು. ಕಳೆದ ವರ್ಷ ರಿಲೀಸ್ ಆಗಿದ್ದ ಮೊದಲ ಭಾಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಪೊನ್ನಿಯಿನ್ ಸೆಲ್ವನ್ 500 ಕೋಟಿ ಬಾಚಿ ಬಾಕ್ಸ್‌ ಆಫೀಸ್ ಶೇಕ್ ಮಾಡಿತ್ತು. ಲೈಕಾ ಪ್ರೊಡಕ್ಷನ್ ಜೊತೆಗೂಡಿ ಮಣಿರತ್ನಂ ನಿರ್ಮಿಸಿ ನಿರ್ದೇಶಿಸಿರುವ ಪೊನ್ನಿಯಿನ್ ಸೆಲ್ವನ್-2 ಸೀಕ್ವೆಲ್ ಟ್ರೇಲರ್ ರಿಲೀಸ್ ಆಗಿದ್ದು, ನಿರೀಕ್ಷೆ ನೂರ್ಮಡಿಗೊಳಿಸಿದೆ.

ಬಾಲಿವುಡ್‌ಗೆ ಬೆಂಡೆತ್ತಿದ ನೆಟ್ಟಿಗ..

ಇಡೀ ಟ್ರೇಲರ್‌ನಲ್ಲಿ ಚೋಳ ಸಾಮ್ರಾಜ್ಯದ ಮಹಾ ಕಥೆಯೇ ತೆರೆದುಕೊಳ್ಳುತ್ತದೆ. ಚೋಳರ ಪರಾಕ್ರಮ ಒಂದೆಡೆ ಸಾಗಿದರೆ, ಅದೇ ಚೋಳ ಸಾಮ್ರಾಜ್ಯವನ್ನು ನಿರ್ನಾಮ ಮಾಡಬೇಕೆಂಬ ಒಳಸಂಚು ಸಹ ಟ್ರೇಲರ್‌ನಲ್ಲಿದೆ. ಎಲ್ಲರ ನಟನೆಯ ಜತೆಗೆ ಅತ್ಯಾಕರ್ಷಕವಾಗಿ ಕಾಣಿಸಿದ್ದು ನಟಿ ಐಶ್ವರ್ಯಾ ರೈ ಬಚ್ಚನ್.‌ ನಂದಿನಿ ಎಂಬ ಪಾತ್ರದಲ್ಲಿ ಮಿಂಚು ಹರಿಸಿದ್ದಾರವರು. ಇದನ್ನು ನೋಡಿದ ನೆಟ್ಟಿಗ ಬಾಲಿವುಡ್‌ ಚಿತ್ರರಂಗವನ್ನು ಟೀಕಿಸಿದ್ದಾರೆ.

"ನೀವು (ಬಾಲಿವುಡ್) ಐಶ್ವರ್ಯಾ ರೈ ಅವರನ್ನು ಯಾವತ್ತೂ ಈ ರೀತಿ ಬಳಸಿಕೊಳ್ಳಲೇ ಇಲ್ಲ. ಅದು ಮಣಿರತ್ನಂ ಒಬ್ಬರಿಂದ ಮಾತ್ರ ಸಾಧ್ಯ. ನಂದಿನಿಯಾಗಿ ಕೆಂಡದಂತೆ ಕಾಣಿಸಿದ್ದಾರವರು" ಎಂದು ಟ್ರೇಲರ್‌ ನೋಡಿದವರು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ನೀವು ಸೌತ್‌ ಸಿನಿಮಾರಂಗದಲ್ಲಿಯೇ ಮುಂದುವರಿಯಿರಿ ಎಂದೂ ಸಲಹೆ ನೀಡಿದ್ದಾರೆ.

ಗದ್ದುಗೆಗಾಗಿ ಹೋರಾಟ..

ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟ, ಪಾಂಡ್ಯ ರಾಜರ ಕುತಂತ್ರ, ಚೋಳ ಸಾಮ್ರಾಜ್ಯ ನಾಶಪಡಿಸಲು ನಂದಿನಿ ಮಾಡುವ ಶಪಥ, ಕರಿಕಾಲನ್ ವೀರಾವೇಶದ ಹೋರಾಟ, ನಂದಿನಿ ಕರಿಕಾಲನ್ ಮುಖಾಮುಖಿಯಾಗುವ ಸನ್ನಿವೇಶ.. ಅದ್ಧೂರಿ ಮೇಕಿಂಗ್, ಬೃಹತ್ ಸೆಟ್‌ಗಳು ಟ್ರೇಲರ್‌ನಲ್ಲಿ ಝಗಮಗಿಸಿವೆ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಪೊನ್ನಿಯಿನ್ ಸೆಲ್ವನ್-2 ಟ್ರೇಲರ್ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಡೆದುಕೊಂಡಿದೆ. ಆಸ್ಕರ್ ವಿಜೇತ ಎ ಆರ್ ರೆಹಮಾನ್ ಸಂಗೀತ ಸಿನಿಮಾಕ್ಕಿದೆ.

ಏ. 28ಕ್ಕೆ ಸಿನಿಮಾ ರಿಲೀಸ್‌

ಟ್ರೇಲರ್ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಮಣಿರತ್ನಂ ತಂಡ ಕಟ್ಟಿಕೊಂಡು ಹೊರರಾಜ್ಯಗಳಲ್ಲಿಯೂ ಪ್ರಮೋಷನ್ ಶುರು ಮಾಡಲು ಸಜ್ಜಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಪೊನ್ನಿಯಿನ್ ಸೆಲ್ವನ್-2 ಏಪ್ರಿಲ್ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರುತ್ತಿದೆ. ಐಶ್ವರ್ಯ ರೈ, ತ್ರಿಷಾ, ಕಾರ್ತಿ, ವಿಕ್ರಂ, ಪ್ರಕಾಶ್ ರೈ, ಶರತ್ ಕುಮಾರ್, ಜಯಂರವಿ, ಐಶ್ವರ್ಯ ಲಕ್ಷ್ಮೀ, ಶೋಭಿತಾ ಧುಲಿಪಾಲ, ಪ್ರಭು ಸೇರಿದಂತೆ ದೊಡ್ಡ ಕ್ಯಾನ್ವಸ್ ಚಿತ್ರದಲ್ಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು