logo
ಕನ್ನಡ ಸುದ್ದಿ  /  Entertainment  /  Puneeta Prava Dress Code And Other Details

Puneeth Parva Details: 'ಪುನೀತ ಪರ್ವ' ಕಾರ್ಯಕ್ರಮಕ್ಕೆ ಡ್ರೆಸ್‌ ಕೋಡ್‌...ಕಾರ್ಯಕ್ರಮದ ಮತ್ತಷ್ಟು ಮಾಹಿತಿ ಇಲ್ಲಿದೆ

HT Kannada Desk HT Kannada

Oct 17, 2022 09:42 AM IST

ಅಕ್ಟೋಬರ್‌ 21 ರಂದು ನಡೆಯಲಿದೆ ಪುನೀತ ಪರ್ವ ಕಾರ್ಯಕ್ರಮ

    • ಪುನೀತ ಪರ್ವ ಕಾರ್ಯಕ್ರಮ ನಡೆಯುವ ಸ್ಥಳ, ಸಮಯ, ಡ್ರೆಸ್‌ ಕೋಡ್‌ ಹಾಗೂ ಇನ್ನಿತರ ಮಾಹಿತಿಯನ್ನು ಕೂಡಾ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುನೀತ ಪರ್ವ ಕಾರ್ಯಕ್ರಮ ಅಕ್ಟೋಬರ್‌ 21 ಶುಕ್ರವಾರದಂದು ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಹಾಗೇ ಈ ಕಾರ್ಯಕ್ರಮಕ್ಕೆ ಬರುವವರು ಬಿಳಿ ಬಣ್ಣದ ಡ್ರೆಸ್‌ ಧರಿಸಿ ಬರಲು ಮನವಿ ಮಾಡಲಾಗಿದೆ.
ಅಕ್ಟೋಬರ್‌ 21 ರಂದು ನಡೆಯಲಿದೆ ಪುನೀತ ಪರ್ವ ಕಾರ್ಯಕ್ರಮ
ಅಕ್ಟೋಬರ್‌ 21 ರಂದು ನಡೆಯಲಿದೆ ಪುನೀತ ಪರ್ವ ಕಾರ್ಯಕ್ರಮ (PC: Puneeth Rajkumar Facebook)

ಅಕ್ಟೋಬರ್‌ 29, ಪುನೀತ್‌ ರಾಜ್‌ಕುಮಾರ್‌ ಮೊದಲ ವರ್ಷದ ಪುಣ್ಯಸ್ಮರಣೆ, ಇದರ ಅಂಗವಾಗಿ ಹಿಂದಿನ ದಿನವೇ, ಅಂದರೆ ಅಕ್ಟೊಬರ್‌ 28 ರಂದು ಪುನೀತ್‌ ಅವರ ಕನಸಿನ ಪ್ರಾಜೆಕ್ಟ್‌ 'ಗಂಧದ ಗುಡಿ' ತೆರೆಗೆ ಬರುತ್ತಿದೆ. ಹಾಗೇ ಅಕ್ಟೋಬರ್‌ 21 ರಂದು ಪ್ರೀ ರಿಲೀಸ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮದುವೆಗೆ ಒಪ್ಪಿಗೆ ಸಿಕ್ಕರೂ, ರಾಮ್‌ ಜತೆ ಮಕ್ಕಳು ಮಾಡಿಕೊಳ್ಳಲ್ವಂತೆ ಸ್ವಾರ್ಥಿ ಸೀತಾ! ಸೀತಮ್ಮ ನಿಂದ್ಯಾಕೋ ಓವರ್‌ ಆಯ್ತಮ್ಮ ಎಂದ ವೀಕ್ಷಕ

‘ಆಕೆ ಹಸಿದಾಗ ಅವಳ ಬಾಯಿಗೆ ಅನ್ನ ಹಾಕಿ, ಅದನ್ನಲ್ಲ!’ ಪ್ರಜ್ವಲ್‌ ರೇವಣ್ಣ ಕೇಸ್‌ ಬೆನ್ನಲ್ಲೇ ನಟಿಯ ಶಾಕಿಂಗ್‌ ಪೋಸ್ಟ್‌

Kantara Chapter 1: ಕುಂದಾಪುರದಲ್ಲಿ ಕಾಂತಾರ ಸಡಗರ; 600 ಕಾರ್ಪೆಂಟರ್‌ಗಳಿಂದ 40 ಸಾವಿರ ಚದರಡಿಯ ಶೂಟಿಂಗ್‌ ಸೆಟ್‌ ನಿರ್ಮಾಣ

ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋನಲ್ಲಿ ಹುಲಿದರ್ಶನ; ಈ ಹುಲಿ ವೇಷಧಾರಿ ಯಾರು ಎಂದು ಗುರುತಿಸಿ, ಸುಳಿವು- ಮಾನಸಳ ಗಂಡ

ಪುನೀತ ಪರ್ವ ಹೆಸರಿನಲ್ಲಿ ನಡೆಯುತ್ತಿರುವ 'ಗಂಧದ ಗುಡಿ' ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಈಗಾಗಲೇ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ನವೆಂಬರ್‌ 1 ರಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಈ ವಿವಿಧ ಕಾರ್ಯಕ್ರಮಗಳ ಅಂಗವಾಗಿ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು 'ಗಂಧದಗುಡಿ ಹಬ್ಬ' ದ ಹೆಸರಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇನ್ನು ಪುನೀತ ಪರ್ವ ಕಾರ್ಯಕ್ರಮ ನಡೆಯುವ ಸ್ಥಳ, ಸಮಯ, ಡ್ರೆಸ್‌ ಕೋಡ್‌ ಹಾಗೂ ಇನ್ನಿತರ ಮಾಹಿತಿಯನ್ನು ಕೂಡಾ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುನೀತ ಪರ್ವ ಕಾರ್ಯಕ್ರಮ ಅಕ್ಟೋಬರ್‌ 21 ಶುಕ್ರವಾರದಂದು ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಹಾಗೇ ಈ ಕಾರ್ಯಕ್ರಮಕ್ಕೆ ಬರುವವರು ಬಿಳಿ ಬಣ್ಣದ ಡ್ರೆಸ್‌ ಧರಿಸಿ ಬರಲು ಮನವಿ ಮಾಡಲಾಗಿದೆ.

'ಗಂಧದಗುಡಿ ಹಬ್ಬ' ಕಾರ್ಯಕ್ರಮಗಳ ವಿವರ

ಅಕ್ಟೋಬರ್‌ 26

ವಿಶ್ವದಾಖಲೆ ಮಟ್ಟದಲ್ಲಿ ಡಾ. ಪುನೀತ್‌ ರಾಜ್‌ಕುಮಾರ್‌ ಅವರ 75 ಕಟೌಟ್‌ಗಳನ್ನು ನಿಲ್ಲಿಸಲಾಗುವುದು.

ಅಕ್ಟೋಬರ್‌ 27

ಮಧ್ಯಾಹ್ನ 1.00 ಗಂಟೆಗೆ 75 ಕಟೌಟ್‌ಗಳಿಗೆ ಭಾರೀ ಹೂವಿನ ಹಾರ ಹಾಕುವ ಕಾರ್ಯಕ್ಕೆ ಚಾಲನೆ. ಅದೇ ದಿನ ಸಂಜೆ 7.00ಕ್ಕೆ ಸ್ಮಾರಕದ ಸುತ್ತ ಸುಮಾರು 1 ಕಿಲೋ ಮೀಟರ್‌ ವ್ಯಾಪ್ತಿವರೆಗೂ ಲೈಟಿಂಗ್‌ ಅಳವಡಿಕೆ

ಅಕ್ಟೋಬರ್‌ 28

'ಗಂಧದಗುಡಿ' ಸಿನಿಮಾ ಬಿಡುಗಡೆ ಅಂಗವಾಗಿ ಕೆ.ಜಿ. ರಸ್ತೆಯ ಪ್ರಮುಖ ಚಿತ್ರಮಂದಿರ ಹಾಗೂ ಮಾಗಡಿ ರಸ್ತೆಯ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ

ಅಕ್ಟೋಬರ್‌ 29

ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಒಂದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸ್ಮಾರಕಕ್ಕೆ ಭೇಟಿ ನೀಡುವ ಅಭಿಮಾನಿಗಳಿಗೆ ಬೆಳಗ್ಗೆ 8 ರಿಂದ ಸಂಜೆ 6ವರೆಗೂ ಅನ್ನಸಂತರ್ಪಣೆ ಕಾರ್ಯಕ್ರಮ.

ವಿಶೇಷ ಆಮಂತ್ರಣ ಪತ್ರಿಕೆ

ಅಪ್ಪು ಅವರ ಕನಸು 'ಗಂಧದ ಗುಡಿ'ಯ ಮೂಲಕ ನನಸಾಗಿದೆ. ಅವರು ನಮ್ಮೊಂದಿಗೆ ಇಲ್ಲದಿದ್ದರೂ, ಆ ಕನಸನ್ನು ಎಲ್ಲರೆದುರು ತೆರೆದಿಡಲು ಪತ್ನಿ ಅಶ್ವಿನಿ ಮುಂದಾಗಿದ್ದಾರೆ. ಅದರಂತೆ ಅತ್ಯಾಕರ್ಷಕವಾದ ಆಮಂತ್ರಣ ಪತಿಕೆಯನ್ನು ಸಿದ್ಧಪಡಿಸಿದ್ದಾರೆ. ಕಟ್ಟಿಗೆಯಿಂದ ಮಾಡಿದ ಪೆಟ್ಟಿಗೆಯಲ್ಲಿ ಪುನೀತ್‌ ಅವರ ಕಿರು ಪ್ರತಿಮೆಯನ್ನು ಇರಿಸಲಾಗಿದೆ. ಗಂಧದ ಕಟ್ಟಿಗೆಯ ತುಂಡಿನ ಮೇಲೆ ಅಪ್ಪು ಅವರ ಹಸ್ತಾಕ್ಷರವೂ ಇದೆ.

ಪುನೀತ್‌ ಅವರ ಸಿನಿಮಾಗಳು ಹೇಗೆ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದ್ದವೋ ಅದೇ ಮಾದರಿಯಲ್ಲಿ ಈ ಸಾಕ್ಷ್ಯಚಿತ್ರವನ್ನು ಪಿಆರ್‌ಕೆ ಸಂಸ್ಥೆ ತೆರೆಗೆ ತರುತ್ತಿದೆ. ಅದರಂತೆ ತೆರೆ ಮರೆಯಲ್ಲಿ ಬಿಡುಗಡೆಯ ಸಿದ್ಧತೆಗಳೂ ಜೋರಾಗಿದ್ದು, ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಇನ್ನೂ ಹಲವು ಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ಈ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ಅಮಿತಾಬ್‌ ಬಚ್ಚನ್‌ ಮತ್ತು ರಜನಿಕಾಂತ್‌ ಕೂಡಾ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು