Pushpa 2 First Review: ಪುಷ್ಪ 2 ಫಸ್ಟ್ ರಿವ್ಯೂ ಪ್ರಕಟ, ಮಧ್ಯಂತರ ಅಮೋಘ, ಕ್ಲೈಮ್ಯಾಕ್ಸ್ ಅದ್ಭುತ; ಅಲ್ಲುಗೆ ಮತ್ತೊಂದು ಪ್ರಶಸ್ತಿ ಖಾತ್ರಿ
Dec 04, 2024 01:13 PM IST
ಪುಷ್ಪ 2 ಫಸ್ಟ್ ರಿವ್ಯೂ
- Pushpa 2 First Review: ಪುಷ್ಪ 2 ಚಿತ್ರದ ಮೊದಲ ವಿಮರ್ಶೆ ಹೊರಬಿದ್ದಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಪುಷ್ಪ ಸೀಕ್ವೆಲ್ ಮೂಲಕ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿಯನ್ನು ಅಲ್ಲು ಅರ್ಜುನ್ ಪಡೆಯೋದು ಖಾತ್ರಿ. ಅದರಲ್ಲೂ ಇಂಟರ್‌ವಲ್ ಮತ್ತು ಕ್ಲೈಮ್ಯಾಕ್ಸ್ ಲೆವೆಲ್ ಬೇರೆ ಇದೆ ಎಂದು ಮೊದಲ ವಿಮರ್ಶೆಯಲ್ಲಿ ಹೇಳಲಾಗಿದೆ.
Pushpa 2 First Review: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಗುರುವಾರ (ಡಿಸೆಂಬರ್ 5) ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಬುಧವಾರ (ಡಿಸೆಂಬರ್ 4) ರಾತ್ರಿ 9.30ರಿಂದ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಶೇಷ ಪ್ರದರ್ಶನಗಳು ನಡೆಯುತ್ತವೆ. ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿರುವಾಗಲೇ ಪುಷ್ಪ 2 ಚಿತ್ರದ ಮೊದಲ ವಿಮರ್ಶೆ ಬಂದಿದೆ. ಚಿತ್ರ ವಿಮರ್ಶಕ ಮತ್ತು ಸಾಗರೋತ್ತರ ಸೆನ್ಸಾರ್ ಮಂಡಳಿ ಸದಸ್ಯ ಉಮರ್ ಸಂಧು ಅವರು ಈ ಚಿತ್ರದ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ಈ ವಿಮರ್ಶೆ ವೈರಲ್ ಆಗಿದೆ.
ಪುಷ್ಪಾ 2 ಮೊದಲ ವಿಮರ್ಶೆ
ಈಗಾಗಲೇ ಪುಷ್ಪ 2 ದಿ ರೂಲ್ ಸಿನಿಮಾ ನೋಡಿರುವ ಉಮರ್ ಸಂಧು ತಮ್ಮ ವಿಮರ್ಶೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾ "ಬ್ಲಾಕ್ ಬಸ್ಟರ್ ಪೈಸಾ ವಸೂಲ್ ಎಂಟರ್‌ಟೈನರ್" ಆಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ಮಧ್ಯಂತರ ಮತ್ತು ಕ್ಲೈಮ್ಯಾಕ್ಸ್ ಪ್ರಮುಖ ಹೈಲೈಟ್.. ಅಲ್ಲು ಅರ್ಜುನ್ ಅವರಿಗೆ ಮತ್ತೊಂದು ರಾಷ್ಟ್ರಪ್ರಶಸ್ತಿ ಗ್ಯಾರಂಟಿ ಎಂದು ತನ್ನ ಮೊದಲ ವಿಮರ್ಶೆಯಲ್ಲಿ ಇವರು ಊಹಿಸಿರುವುದು ಗಮನಾರ್ಹ. ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಜಿಲ್ ಅವರ ಅಭಿನಯವನ್ನು ಉಮೇರ್ ಸಹ ಪ್ರಶಂಸಿಸಿದ್ದಾರೆ.
"ಇದೊಂದು ಪೈಸಾ ವಸೂಲ್, ಎಂಟರ್‌ಟೈನರ್ ಆಗಿದ್ದು ಎಲ್ಲಾ ವರ್ಗದವರು ಮತ್ತು ಜನಸಾಮಾನ್ಯರು ಇಷ್ಟಪಡುತ್ತಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುವುದು ಖಚಿತ. ಇದು ಈ ವರ್ಷದ ಅತಿದೊಡ್ಡ ಹಿಟ್ ಚಿತ್ರವಾಗಲಿದೆ" ಎಂದು ಉಮರ್ ತನ್ನ ಫಸ್ಟ್ ರಿವ್ಯೂನಲ್ಲಿ ಹೇಳಿದ್ದಾರೆ.
ಅಲ್ಲು ಅರ್ಜುನ್‌ಗೆ ಮತ್ತೊಂದು ರಾಷ್ಟ್ರ ಪ್ರಶಸ್ತಿ
ಪುಷ್ಪ 2 ಚಿತ್ರದಲ್ಲಿನ ನಟರ ಅಭಿನಯದ ಬಗ್ಗೆಯೂ ಉಮರ್ ಸಂಧು ಮಾತನಾಡಿದ್ದಾರೆ.ಅಲ್ಲು ಅರ್ಜುನ್‌ಗೆ ಮತ್ತೊಂದು ರಾಷ್ಟ್ರ ಪ್ರಶಸ್ತಿ ಖಚಿತ ಎಂದು ಅವರು ಹೇಳಿದ್ದಾರೆ. "ಅಲ್ಲು ಅರ್ಜುನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ತಮ್ಮ ಮಾಸ್ ಅವತಾರದಿಂದ ಎಲ್ಲರನ್ನು ಆಕರ್ಷಿಸುತ್ತಾರೆ. ಅವರ ನಟನೆ ಅದ್ಭುತವಾಗಿದೆ. ಕಾಮಿಡಿ ಟೈಮಿಂಗ್ ಚೆನ್ನಾಗಿದೆ. ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಅವರಿಗೆ ದೊರಕಬಹುದು" ಎಂದು ಅವರು ಹೇಳಿದ್ದಾರೆ. ಪುಷ್ಪ 1 ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ತೆಲುಗು ನಟ ಎಂಬ ಹಿರಿಮೆಗೆ ಇವರು ಪಾತ್ರರಾಗಿದ್ದಾರೆ.
ರಶ್ಮಿಕಾ ಮಂದಣ್ಣ ಕೂಡ ಚೆನ್ನಾಗಿ ನಟಿಸಿದ್ದಾರೆ ಎಂದು ಅವರು ಹೇಳಿದ್ದಾರೆ. "ಈ ಸಿನಿಮಾದಲ್ಲಿ ಫಹಾದ್ ಫಾಜಿಲ್ ಅಭಿನಯವೂ ಮತ್ತೊಂದು ಲೆವೆಲ್‌ನಲ್ಲಿದೆ" ಎಂದು ಅವರು ಹೇಳಿದ್ದಾರೆ. "ಪುಷ್ಪ ಮೊದಲ ಭಾಗದ ಕೊನೆಯಲ್ಲಿ ಬರುವ ಈ ಮಲಯಾಳಂ ನಟ ಈ ಸೀಕ್ವೆಲ್ ನಲ್ಲಿ ಪೂರ್ಣವಾಗಿ ಕಾಣಿಸಿಕೊಳ್ಳಲಿದ್ದಾರೆ. "ಈ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಎದ್ದು ಕಾಣುತ್ತದೆ. ಇಂಟರ್ವಲ್ ಬ್ಲಾಕ್ ಮನಸ್ಸಿಗೆ ಮುದ ನೀಡುತ್ತದೆ. ಇದು ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ನೋಡದ ವಿಭಿನ್ನ ರೀತಿಯ ಮಸಾಲಾ ಚಿತ್ರ" ಎಂದು ಅವರು ತನ್ನ ಫಸ್ಟ್ ರಿವ್ಯೂನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮೂರು ವರ್ಷಗಳಿಂದ ಪುಷ್ಪ 2 ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾದ ಕುರಿತು ಭಾರೀ ಹೈಪ್ ಇದೆ. ಅಡ್ವಾನ್ಸ್ ಬುಕ್ಕಿಂಗ್ ಟಿಕೆಟ್ ಪಡೆಯಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಅಡ್ವಾನ್ಸಡ್ ಬುಕ್ಕಿಂಗ್ ಆಧಾರದಲ್ಲಿ ಹೇಳುವುದಾದರೆ ಮೊದಲ ದಿನವೇ ಚಿತ್ರ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಲಿದ್ದು, ಮೊದಲ ವಾರಾಂತ್ಯದಲ್ಲಿ 200 ಕೋಟಿ ರೂ. ಗಳಿಕೆ ಮಾಡಲಿದೆ. ಈಗಾಗಲೇ ಬುಕಿಂಗ್‌ನಲ್ಲಿ ಬಾಹುಬಲಿ 2, ಕೆಜಿಎಫ್ 2, ಕಲ್ಕಿ 2898 ಎಡಿ ಮತ್ತು ಆರ್‌ಆರ್‌ಆರ್‌ನಂತಹ ಚಲನಚಿತ್ರಗಳ ದಾಖಲೆಗಳನ್ನು ಮುರಿದಿದೆ. ಬೆಂಗಳೂರಿನಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ಪುಷ್ಪ 2 ಸಿನಿಮಾ ಪ್ರದರ್ಶನ ಕಾಣುತ್ತಿದೆ.