RC 15 Title Fixed: ಬರ್ತ್‌ಡೇ ಸಂಭ್ರಮದಲ್ಲಿ ರಾಮ್‌ಚರಣ್... ಎಸ್. ಶಂಕರ್ ಜೊತೆಗಿನ ಚಿತ್ರಕ್ಕೆ ಟೈಟಲ್ ಫಿಕ್ಸ್
Mar 27, 2023 12:50 PM IST
ರಾಮ್ ಚರಣ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್
ರಾಮ್ ಚರಣ್ ಹುಟ್ಟುಹಬ್ಬದ ದಿನವೇ ಅವರ ಹೊಸ ಚಿತ್ರದ ಟೈಟಲ್ ಅನೌನ್ಸ್ ಆಗಿದೆ. ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಚುನಾವಣಾ ಅಧಿಕಾರಿಯಾಗಿ ನಟಿಸುತ್ತಿದ್ದು ಚಿತ್ರತಂಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಮೋಷನ್ ಪೋಸ್ಟರ್ ಹಂಚಿಕೊಂಡಿದೆ.
ಟಾಲಿವುಡ್ ನಟ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 38ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಚೆರ್ರಿ ಹುಟ್ಟುಹಬ್ಬದ ವಿಶೇಷವಾಗಿ ಅವರ ಹೊಸ ಚಿತ್ರದ ಟೈಟಲ್ ಫಿಕ್ಸ್ ಆಗಿದೆ.
ರಾಮ್ ಚರಣ್ ಸದ್ಯಕ್ಕೆ 15ನೇ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ರಾಮ್‌ಚರಣ್ ಜೊತೆಗೆ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಂಡಿಯನ್, ಕಾದಲ್, ಅನ್ನಿಯನ್, ಎಂದಿರನ್ ಸಿನಿಮಾ ನಿರ್ದೇಶಕ ಎಸ್. ಶಂಕರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಾಮ್ ಚರಣ್ ಹುಟ್ಟುಹಬ್ಬದ ದಿನವೇ ಅವರ ಹೊಸ ಚಿತ್ರದ ಟೈಟಲ್ ಅನೌನ್ಸ್ ಆಗಿದೆ. ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಚುನಾವಣಾ ಅಧಿಕಾರಿಯಾಗಿ ನಟಿಸುತ್ತಿದ್ದು 'ಗೇಮ್ ಚೇಂಜರ್' ಎಂಬ ಟೈಟಲನ್ನು ಫೈನಲ್ ಮಾಡಲಾಗಿದೆ. ಚಿತ್ರತಂಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಮೋಷನ್ ಪೋಸ್ಟರ್ ಹಂಚಿಕೊಂಡಿದೆ.
ಇದಕ್ಕೂ ಮುನ್ನ ಈ ಚಿತ್ರಕ್ಕೆ 'ಸರ್ಕಾರೋಡು' ಅಥವಾ 'ಸಿಇಓ' ಎಂಬ ಹೆಸರು ಮಾಡಲಾಗುವುದು ಎನ್ನಲಾಗಿತ್ತು. ಆದರೆ ಇದೀಗ 'ಗೇಮ್ ಚೇಂಜರ್' ಎಂಬ ಹೆಸರನ್ನು ಫೈನಲ್ ಮಾಡಲಾಗಿದೆ. ಶ್ರೀ ವೆಂಕಟೇಶ್ವರ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಟಾಲಿವುಡ್ ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ತಮನ್ ಎಸ್ ಸಂಗೀತ ನಿರ್ದೇಶಿಸುತ್ತಿದ್ದಾರೆ. ಅಂಜಲಿ, ಜಯರಾಮ್, ಸುನಿಲ್, ಶ್ರೀಕಾಂತ್, ಸಮುದ್ರಖನಿ, ನವೀನ್ ಚಂದ್ರ, ನಾಸರ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.
ರಾಮ್ ಚರಣ್ ಬರ್ತ್‌ಡೇ ಅಂಗವಾಗಿ ಹಳೆಯ ಸಿನಿಮಾ ರೀ ರಿಲೀಸ್
ಸಾಮಾನ್ಯವಾಗಿ ಹುಟ್ಟುಹಬ್ಬ, ಹಬ್ಬ ಹಾಗೂ ವಿಶೇಷ ದಿನಗಳಂದು ಸ್ಟಾರ್ ನಟರ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತವೆ. ಆದರೆ ಈ ಹುಟ್ಟುಹಬ್ಬಕ್ಕೆ 13 ವರ್ಷಗಳ ಹಿಂದೆ ತೆರೆ ಕಂಡು ಫ್ಲಾಪ್ ಆಗಿದ್ದ ರಾಮ್ ಚರಣ್ ಅಭಿನಯದ 'ಆರೆಂಜ್' ಸಿನಿಮಾ ವಿಶೇಷ ಪ್ರದರ್ಶನವನ್ನು 25 ಹಾಗೂ 26ರಂದು ಏರ್ಪಡಿಸಲಾಗಿತ್ತು. ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಮ್ ಚರಣ್ ನಟಿಸಿದ್ದ 'ಆರೆಂಜ್' ಚಿತ್ರ 2010ರಲ್ಲಿ ತೆರೆ ಕಂಡಿತ್ತು. ವಿಶೇಷ ಎಂದರೆ ಈ ಚಿತ್ರವನ್ನು ರಾಮ್ ಚರಣ್ ಚಿಕ್ಕಪ್ಪ ನಾಗಬಾಬು ನಿರ್ಮಿಸಿದ್ದರು. 'ಬೊಮ್ಮರಿಲ್ಲು' ಖ್ಯಾತಿಯ ಭಾಸ್ಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಆದರೆ ದುರದೃಷ್ಟವಶಾತ್ ಸಿನಿಮಾ ಕಥೆ ಚೆನ್ನಾಗಿದ್ದರೂ ಸಿನಿಮಾ ಮಾತ್ರ ಸೋಲು ಕಂಡಿತು. ಬಾಕ್ಸ್ ಆಫೀಸಿನಲ್ಲಿ ಹಾಕಿದ ಬಂಡವಾಳವನ್ನು ಗಳಿಸಿಲು ಕೂಢಾ ವಿಫಲವಾಯ್ತು. ಈ ಸಿನಿಮಾ ಮಾಡಿದ ನಂತರ ಸಾಲದಲ್ಲಿ ಮುಳುಗಿದ್ದ ನಾಗಬಾಬು ನಂತರ ಹೇಗೋ ಸುಧಾರಿಸಿಕೊಂಡರು. ಇದೀಗ 'ಆರ್‌ಆರ್‌ಆರ್' ಚಿತ್ರದ ಇಮೇಜ್, ರಾಮ್ ಚರಣ್ ಹಳೆಯ ಫ್ಲಾಪ್ ಸಿನಿಮಾ ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಸಂಗ್ರಹವಾದ ಹಣ ಜನಸೇನಾ ಪಕ್ಷಕ್ಕೆ
'ಆರೆಂಜ್' ರೀ ರಿಲೀಸ್‌ನಿಂದ ಸಂಗ್ರಹವಾಗುವ ಹಣವನ್ನು ನಾಗಬಾಬು ತಮ್ಮ ಸಹೋದರ ಪವನ್ ಕಲ್ಯಾಣ್ ಸ್ಥಾಪಿಸಿರುವ ಜನಸೇನಾ ಪಕ್ಷದ ಸಂಘಟನೆಗೆ ನೆರವಾಗಲು ನೀಡುತ್ತಾರಂತೆ. ಅಂಜನಾ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ನಾಗಬಾಬು 'ಆರೆಂಜ್' ಚಿತ್ರವನ್ನು ನಿರ್ಮಿಸಿದ್ದರು. ಹ್ಯಾರಿಸ್ ಜಯರಾಜ್ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದರು. ಚಿತ್ರದಲ್ಲಿ ರಾಮ್ ಚರಣ್‌ಗೆ ಜೆನಿಲಿಯಾ ಡಿಸೋಜಾ ನಾಯಕಿಯಾಗಿ ನಟಿಸಿದ್ದರು. ಉಳಿದಂತೆ ಈ ಚಿತ್ರದಲ್ಲಿ ಪ್ರಭು, ಪ್ರಕಾಶ್ ರಾಜ್, ಬ್ರಹ್ಮಾನಂದಂ, ಪವಿತ್ರಾ ಲೋಕೇಶ್, ವೆನ್ನಿಲಾ ಕಿಶೋರ್ ಹಾಗೂ ಇನ್ನಿತರರು ನಟಿಸಿದ್ದರು.