Ramachari Serial: ಅಣ್ಣಾಜಿ ಮನೆಗೆ ಎಂಟ್ರಿ ಕೊಟ್ಟ ರಾಮಾಚಾರಿ ಅಜ್ಜಿ; ಮುಖ ಮುಖ ನೋಡಿಕೊಂಡು ದಂಗಾಗಿ ನಿಂತ ಮನೆಮಂದಿ
Nov 20, 2024 11:42 AM IST
ಅಣ್ಣಾಜಿ ಮನೆಗೆ ಎಂಟ್ರಿ ಕೊಟ್ಟ ರಾಮಾಚಾರಿ ಅಜ್ಜಿ
- ರಾಮಾಚಾರಿ ಧಾರಾವಾಹಿಯಲ್ಲಿ ದಿನೇ ದಿನೇ ತಿರುವು ಕಾಣಿಸಿಕೊಳ್ಳುತ್ತಿದ್ದು ಕೊನೆಗದು ವೀಕ್ಷಕರಿಗೆ ತಮಾಷೆ ಎನಿಸುವಂತಾಗಿದೆ. ಇಂದು ರಾಮಾಚಾರಿ ಅಜ್ಜಿ ಕೂಡ ಅಣ್ಣಾಜಿ ಮನೆಯೆ ಎಂಟ್ರಿ ಕೊಟ್ಟಿದ್ದಾರೆ.
ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ಇಡೀ ಕುಟುಂಬವೇ ಈಗ ಅಣ್ಣಾಜಿ ಮನೆಯಲ್ಲಿ ನೆಲೆಸಿದಂತಾಗಿದೆ. ಧಾರಾವಾಹಿ ಹೋಗಿ ಕಾಮಿಡಿ ಶೋ ಮಾಡಿಬಿಟ್ರಲ್ಲ ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ. ಏನೇನೋ ಟ್ವಿಸ್ಟ್ ಗಳು ಬರ್ತಾ ಬರ್ತಾ ವಿಚಿತ್ರ ಆಗ್ತಾ ಇದೆ ಎಂದು ಹೇಳುತ್ತಿದ್ದಾರೆ. ಒಂದು ಮನೆಯಿಂದ ಹುಡುಗಿಯನ್ನು ಕರೆದುಕೊಂಡು ಹೋಗಲು ಇಷ್ಟೊಂದು ಜನ ಬೇಕಾ? ಎಂದು ಕೇಳುವಂತಾಗಿದೆ. ಯಾಕೆಂದರೆ ಜಾನಕಿ, ಮುರಾರಿ, ಚಾರು, ರಾಮಾಚಾರಿ, ಶೃತಿ ಮತ್ತೀಗ ಅಜ್ಜಿ. ಇಷ್ಟೊಂದು ಜನ ಈಗ ಅಣ್ಣಾಜಿ ಮನೆಯಲ್ಲಿ ಇದ್ದಾರೆ. ಅಣ್ಣಾಜಿ ಮನೆಯೆಂದರೆ ಅದೊಂದು ತೀರಾ ದುಷ್ಟರಿರುವ ಮನೆ ಎಂದು ಬಿಂಬಿಸಲಾಗಿತ್ತು.
ಆದರೆ ಈಗ ಅಷ್ಟೊಂದು ಕಠಿಣ ಪರಿಸ್ಥಿತಿ ಇದ್ದರೂ ಆ ಮನೆಯೊಳಗಡೆ ಇಷ್ಟೊಂದು ಜನ ಹೋಗುತ್ತಿದ್ದಾರೆ ಎಂದು ವೀಕ್ಷಕರಿಗೆ ಪ್ರಶ್ನೆ ಮೂಡುತ್ತಿದೆ. ರಾಮಾಚಾರಿ ಹಾಗೂ ಮುರಾರಿ ಸ್ತ್ರೀ ವೇಷ ಹಾಕಿಕೊಂಡು ಆ ಮನೆಯಲ್ಲಿ ಇರುತ್ತಾರೆ. ಇನ್ನು ಶೃತಿ ಸಹಾಯ ಬೇಕು ಎಂದು ಅವರು ಕಾಲ್ ಮಾಡಿ ಅವಳನ್ನು ಕರೆಸಿಕೊಂಡಿರುತ್ತಾರೆ. ಆದರೆ ಅವಳೊಟ್ಟಿಗೆ ಅಜ್ಜಿ ಕೂಡ ಬಂದಿರುತ್ತಾರೆ. ಅಜ್ಜಿ ಬಂದಿರುವುದನ್ನು ನೋಡಿ ಜಾನಕಿಗೆ ಶಾಕ್ ಆಗುತ್ತದೆ.
ಚಾರು ಕಂಗಾಲು
ಅಜ್ಜಿ ಬಂದವರೇ ಬಡ ಬಡ ಎಂದು ಮಾತನಾಡಲು ಆರಂಭಿಸುತ್ತಾರೆ. ಯಾಕಪ್ಪ ಇವರು ಈ ಸಮಯದಲ್ಲಿ ಇಲ್ಲಿಗೆ ಬಂದ್ರು ಎಂದು ಎಲ್ಲರೂ ಆಲೋಚಿಸುತ್ತಾ ನಿಂತಿರುತ್ತಾರೆ. ಶೃತಿ ಹೇಗೋ ಎಲ್ಲವನ್ನೂ ನಿಭಾಯಿಸಲು ಪ್ರಯತ್ನ ಮಾಡುತ್ತಿದ್ದರೆ ಅಜ್ಜಿ ಮಾತ್ರ ಮಾತಾಡುವುದನ್ನು ನಿಲ್ಲಿಸುತ್ತಲೇ ಇಲ್ಲ. ರಾಮಾಚಾರಿ, ಚಾರು ಇಬ್ಬರೂ ಮನಸಿನಲ್ಲೇ ಬೈದುಕೊಳ್ಳುತ್ತಾರೆ. ಇನ್ನು ಮುರಾರಿಗೂ ಆಶ್ಚರ್ಯ ಆಗಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ