logo
ಕನ್ನಡ ಸುದ್ದಿ  /  ಮನರಂಜನೆ  /  ಕಂಗುವಾ ಸಿನಿಮಾ ನವೆಂಬರ್ 14ಕ್ಕೆ ರಿಲೀಸ್ ಆಗುತ್ತಾ ಇಲ್ವಾ; ರಿಲಯನ್ಸ್ ಹೂಡಿದ್ದ ದಾವೆ ಏನಾಯಿತು - ಇಲ್ಲಿದೆ ಆ ವಿವರ

ಕಂಗುವಾ ಸಿನಿಮಾ ನವೆಂಬರ್ 14ಕ್ಕೆ ರಿಲೀಸ್ ಆಗುತ್ತಾ ಇಲ್ವಾ; ರಿಲಯನ್ಸ್ ಹೂಡಿದ್ದ ದಾವೆ ಏನಾಯಿತು - ಇಲ್ಲಿದೆ ಆ ವಿವರ

Umesh Kumar S HT Kannada

Nov 11, 2024 10:48 AM IST

google News

ಕಂಗುವಾ ಸಿನಿಮಾ ನವೆಂಬರ್ 14ಕ್ಕೆ ರಿಲೀಸ್ ಆಗುತ್ತಾ ಇಲ್ವಾ; ರಿಲಯನ್ಸ್ ಹೂಡಿದ್ದ ದಾವೆ ಏನಾಯಿತು ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

  • ಕಂಗುವಾ ಸಿನಿಮಾ ನವೆಂಬರ್ 14ಕ್ಕೆ ಬಿಡುಗಡೆಯಾಗುತ್ತಿದ್ದು, ಅದಕ್ಕೆ ತಡೆ ನೀಡಬೇಕು ಎಂದು ರಿಲಯನ್ಸ್‌ ಮದ್ರಾಸ್‌ ಹೈಕೋರ್ಟ್‌ನಲ್ಲಿ ದಾವೆ ಗಮನಸೆಳೆದಿತ್ತು. ಈಗ ಕಂಗುವಾ ಸಿನಿಮಾ ನವೆಂಬರ್ 14ಕ್ಕೆ ರಿಲೀಸ್ ಆಗುತ್ತಾ ಇಲ್ವಾ ಎಂಬ ಕಳವಳಕ್ಕೂ ಕಾರಣವಾಯಿತು. ಈ ದಾವೆ ಏನು, ಕೋರ್ಟ್‌ ಏನು ಹೇಳಿತು ಎಂಬುದರ ವಿವರ ಇಲ್ಲಿದೆ.

ಕಂಗುವಾ ಸಿನಿಮಾ ನವೆಂಬರ್ 14ಕ್ಕೆ ರಿಲೀಸ್ ಆಗುತ್ತಾ ಇಲ್ವಾ; ರಿಲಯನ್ಸ್ ಹೂಡಿದ್ದ ದಾವೆ ಏನಾಯಿತು ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಕಂಗುವಾ ಸಿನಿಮಾ ನವೆಂಬರ್ 14ಕ್ಕೆ ರಿಲೀಸ್ ಆಗುತ್ತಾ ಇಲ್ವಾ; ರಿಲಯನ್ಸ್ ಹೂಡಿದ್ದ ದಾವೆ ಏನಾಯಿತು ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಚೆನ್ನೈ: ನಟ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಂಗುವಾ ನವೆಂಬರ್ 14ಕ್ಕೆ ಬಿಡುಗಡೆಗೆ ಸಿದ್ಧವಾಗಿರುವಾಗಲೇ, ಬಿಡುಗಡೆ ಮಾಡದಂತೆ ತಡೆ ನೀಡಬೇಕು ಕೋರಿ ರಿಲಯನ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌ ಇತ್ಯರ್ಥಗೊಳಿಸಿದೆ. ಇದರೊಂದಿಗೆ ಕಂಗುವಾ ಬಿಡುಗಡೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಈ ಸಿನಿಮಾ ಪ್ರಪಂಚದಾದ್ಯಂತ ತಮಿಳು, ಮಲಯಾಳಂ, ತೆಲುಗು, ಕನ್ನಡ, ಹಿಂದಿ, ಇಂಗ್ಲಿಷ್, ಫ್ರೆಂಚ್ ಮತ್ತು ಸ್ಪ್ಯಾನಿಷ್ ಸೇರಿ ಎಂಟು ಭಾಷೆಗಳಲ್ಲಿ 11,000 ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರಕ್ಕೆ 350 ಕೋಟಿ ರೂಪಾಯಯಿ ಖರ್ಚು ಮಾಡಲಾಗಿದೆ ಎಂದು ತಂಡ ಹೇಳಿಕೊಂಡಿದೆ. ಇದು ಈ ವರ್ಷ ತೆರೆ ಕಾಣುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ಬಿಡುಗಡೆಗೆ ತಡೆಯೊಡ್ಡಬೇಕು ಎಂದು ರಿಲಯನ್ಸ್ ಕೋರ್ಟ್‌ ಮೆಟ್ಟಿಲೇರಿದ್ದು ಯಾಕೆ ಎಂಬುದನ್ನು ತಿಳಿಯೋಣ.

ಕಂಗುವಾ ಬಿಡುಗಡೆಗೆ ತಡೆಕೋರಿ ರಿಲಯನ್ಸ್ ಕೋರ್ಟ್ ಮೆಟ್ಟಿಲೇರಿದ್ದೇಕೆ

ಕಂಗುವಾ ಸಿನಿಮಾ ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್ ಮುಖ್ಯಸ್ಥ, ಚಿತ್ರದ ನಿರ್ಮಾಪಕ ಜ್ಞಾನವೇಲ್ ರಾಜಾ ಅವರು ರಿಲಯನ್ಸ್ ಕಂಪನಿಯಿಂದ ತೆಗೆದುಕೊಂಡ ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣ ಮುಂದಿಟ್ಟು ಕಂಗುವಾ ಬಿಡುಗಡೆಗೆ ತಡೆಕೋರಿ ರಿಲಯನ್ಸ್ ದಾವೆ ಹೂಡಿತ್ತು. ಇದರ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ ಪೀಠ, ದಾವೆಯನ್ನು ವಜಾಗೊಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ದಾವೆಯ ಮಾಹಿತಿ ಪ್ರಕಾರ, ಜ್ಞಾನವೇಲ್ ರಾಜಾ ಅವರು 99.22 ಕೋಟಿ ರೂಪಾಯಿಯನ್ನು ಟೆಡ್ಡಿ 2, ಎಕ್ಸ್ ಮೀಟ್ಸ್ ವೈ, ತಂಗಳಾನ್‌ ಸಿನಿಮಾಕ್ಕಾಗಿ ಸಾಲ ಪಡೆದಿದ್ದರು. ಈ ಪೈಕಿ 45 ಕೋಟಿ ರೂಪಾಯಿಯನ್ನು ಮರುಪಾವತಿ ಮಾಡಿದ್ದು, 55 ಕೋಟಿ ರೂಪಾಯಿ ಉಳಿಸಿಕೊಂಡಿರುವುದಾಗಿ ರಿಲಯನ್ಸ್ ಆರೋಪಿಸಿದೆ. ಈ ಬಾಕಿ ಮೊತ್ತ ಪೂರ್ತಿ ಪಾವತಿಸುವ ತನಕ ತಂಗಳಾನ್‌ ಒಟಿಟಿ ರಿಲೀಸ್ ಮತ್ತು ಕಂಗುವಾ ಸಿನಿಮಾ ಬಿಡುಗಡೆಯನ್ನು ತಡೆಯಬೇಕು ಎಂದು ರಿಲಯನ್ಸ್ ಆಗ್ರಹಿಸಿತ್ತು.

ಸ್ಟುಡಿಯೋ ಗ್ರೀನ್ ಪರವಾಗಿ ಮ್ಯಾಂಗೋ ಮಾಸ್ ಮೀಡಿಯಾ 18 ಕೋಟಿ ರೂಪಾಯಿ ಪಾವತಿ ಮಾಡಿರುವುದಾಗಿ ನವೆಂಬರ್ 8ರ ವಿಚಾರಣೆ ಸಂದರ್ಭದಲ್ಲಿ ರಿಲಯನ್ಸ್ ಕಂಪನಿಯ ಪ್ರತಿನಿಧಿಗಳು ಕೋರ್ಟ್‌ಗೆ ತಿಳಿಸಿದ್ದರು. ಆದ್ದರಿಂದ ತಂಗಳಾನ್‌ ಚಿತ್ರದ ಒಟಿಟಿ ಬಿಡುಗಡೆಗೆ ಅಡ್ಡಿ ಇಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದರು. ಉಳಿದ ಹಣವನ್ನೂ ಸಂಜೆಯೊಳಗೆ ಪಾವತಿಸುವುದಾಗಿ ಸ್ಟುಡಿಯೋ ಗ್ರೀನ್ ಒಪ್ಪಿಕೊಂಡ ಕಾರಣ ದಿನದ ಮಟ್ಟಿಗೆ ವಿಚಾರಣೆಯನ್ನು ಮುಂದೂಡಲಾಗಿತ್ತು.

ಮಾತಿನ ಪ್ರಕಾರ ಸ್ಟುಡಿಯೋ ಗ್ರೀನ್ ಉಳಿದ ಮೊತ್ತವನ್ನು ಪಾವತಿಸಿದ್ದು, ಕೋರ್ಟ್‌ಗೂ ಈ ವಿಚಾರದಲ್ಲಿ ಅಫಿಡವಿಟ್‌ ಸಲ್ಲಿಸಿದೆ. ಹೀಗಾಗಿ, ಕೋರ್ಟ್‌ ದಾವೆ ಇತ್ಯರ್ಥವಾಗಿವುದಾಗಿ ಘೋ‍ಷಿಸಿತು. ಕಂಗುವಾ ಸಿನಿಮಾ ಬಿಡುಗಡೆಗೆ ಅಡ್ಡಿ ಇಲ್ಲ ಎಂದು ಹೇಳಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ