logo
ಕನ್ನಡ ಸುದ್ದಿ  /  ಮನರಂಜನೆ  /  Mahesh Babu: ಟಾಲಿವುಡ್‌ ನಟ ಮಹೇಶ್‌ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ!; 30 ಅಡಿ ಗೋಡೆ ಹಾರಿ ಸಿಕ್ಕಿಬಿದ್ದ ಖದೀಮ

Mahesh Babu: ಟಾಲಿವುಡ್‌ ನಟ ಮಹೇಶ್‌ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ!; 30 ಅಡಿ ಗೋಡೆ ಹಾರಿ ಸಿಕ್ಕಿಬಿದ್ದ ಖದೀಮ

HT Kannada Desk HT Kannada

Oct 01, 2022 12:38 PM IST

ಟಾಲಿವುಡ್‌ ನಟ ಮಹೇಶ್‌ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ!; 30 ಅಡಿ ಗೋಡೆ ಹಾರಿ ಸಿಕ್ಕಿಬಿದ್ದ ಖದೀಮ

    • ಟಾಲಿವುಡ್ ನಟ ಮಹೇಶ್ ಬಾಬು ಅವರ ಹೈದರಾಬಾದ್‌ನಲ್ಲಿನ ಜೂಬಿಲಿ ಹಿಲ್ಸ್‌ ರಸ್ತೆಯಲ್ಲಿರುವ ಮನೆಯಲ್ಲಿ ಕಳ್ಳತನ ಯತ್ನ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಟಾಲಿವುಡ್‌ ನಟ ಮಹೇಶ್‌ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ!; 30 ಅಡಿ ಗೋಡೆ ಹಾರಿ ಸಿಕ್ಕಿಬಿದ್ದ ಖದೀಮ
ಟಾಲಿವುಡ್‌ ನಟ ಮಹೇಶ್‌ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ!; 30 ಅಡಿ ಗೋಡೆ ಹಾರಿ ಸಿಕ್ಕಿಬಿದ್ದ ಖದೀಮ

ಹೈದರಾಬಾದ್: ಟಾಲಿವುಡ್ ನಟ ಮಹೇಶ್ ಬಾಬು ಅವರ ಹೈದರಾಬಾದ್‌ನಲ್ಲಿನ ಜೂಬಿಲಿ ಹಿಲ್ಸ್‌ ರಸ್ತೆಯಲ್ಲಿರುವ ಮನೆಯಲ್ಲಿ ಕಳ್ಳತನ ಯತ್ನ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಮದುವೆ ಆಮಂತ್ರಣ ಬಂತು; ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ

Casting Couch: ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ; ಅಶ್ಲೀಲ ಸಂದೇಶ ಕಳುಹಿಸಿ ಅಡಿಷನ್‌ಗೆ ಆಹ್ವಾನ

ಮೊಟ್ಟೆ ಉಡುಗೆ ತೊಟ್ಟ ನಟಿ ಉರ್ಫಿ ಜಾವೇದ್‌; ಮೊಟ್ಟೆಗಳ ಮೇಲೆ ಕಣ್ಣು ನೆಟ್ಟ ನೆಟ್ಟಿಗರು ಹೇಳಿದ್ದೇ ಬೇರೆ

Manjummel Boys: ಮಂಜುಮ್ಮೆಲ್ ಬಾಯ್ಸ್‌ನ ಈ 2 ಸೀನ್‌ಗಳ ಕುರಿತು ನಡೆಯುತ್ತಿದೆ ಬಿಸಿಬಿಸಿ ಚರ್ಚೆ, ಅದ್ಭುತ ಅಂದ್ರು ಒಟಿಟಿ ಪ್ರೇಕ್ಷಕರು

ನಾಲ್ಕು ದಿನಗಳ ಹಿಂದೆ ಅಂದರೆ ಮಂಗಳವಾರ ತಡರಾತ್ರಿ ಕಳ್ಳನೊಬ್ಬ ನೇರವಾಗಿ ನಟನ ಮನೆ ಬಳಿ ಬಂದು, 30 ಅಡಿ ಎತ್ತರದ ಗೋಡೆ ಏರಿದ್ದಾನೆ. ಬಳಿಕ ಮನೆ ಬಳಿ ಇಳಿಯುವಾಗ ನೆಲಕ್ಕೆ ಬಿದ್ದಿದ್ದಾನೆ. ಹಾಗೇ ಬೀಳುತ್ತಿದ್ದಂತೆ ಜೋರಾಗಿ ಕಿರುಚಿದ್ದಾನೆ.

ಕಿರುಚಿದ ತಕ್ಷಣ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹಿಡಿದು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಕಳ್ಳತನಕ್ಕೆ ಯತ್ನಿಸಿದವನನ್ನು ಒಡಿಶಾ ಮೂಲದವನೆಂದು ಹೇಳಲಾಗಿದ್ದು, ಕಳ್ಳನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಂದಹಾಗೆ, ಮಹೇಶ್‌ ಬಾಬು ಅವರ ತಾಯಿ ಇಂದಿರಾ ದೇವಿ ಸಾವಿಗೂ ಮುನ್ನ ಈ ಘಟನೆ ನಡೆದಿದೆ. 28ರಂದು ಇಂದಿರಾದೇವಿ ಸಾವನ್ನಪ್ಪಿದರೆ, ಅದಕ್ಕೂ ಹಿಂದಿನ ದಿನವಾದ 27ರ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಈ ಘಟನೆ ನಡೆದಾಗ ಮಹೇಶ್‌ ಬಾಬು ಮತ್ತವರ ಕುಟುಂಬ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ.

ನಟ ಮಹೇಶ್‌ ಬಾಬು ಅವರ ತಾಯಿ ಇಂದಿರಾ ದೇವಿ ನಿಧನದ ಹಿನ್ನೆಲೆಯಲ್ಲಿ. ಅವರ ಸಾವಿಗೆ ಟಾಲಿವುಡ್‌ ಚಿತ್ರರಂಗ ಕಂಬನಿ ಮಿಡಿದಿತ್ತು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು