logo
ಕನ್ನಡ ಸುದ್ದಿ  /  ಮನರಂಜನೆ  /   Meena Second Marriage Rumor: ಎರಡನೇ ಮದುವೆಯಾಗ್ತಿದ್ದಾರಾ ಮೀನಾ...ಅವರು ಒಪ್ಪಿಕೊಂಡಿದ್ದಾದ್ರೂ ಯಾರನ್ನ..?

Meena second Marriage Rumor: ಎರಡನೇ ಮದುವೆಯಾಗ್ತಿದ್ದಾರಾ ಮೀನಾ...ಅವರು ಒಪ್ಪಿಕೊಂಡಿದ್ದಾದ್ರೂ ಯಾರನ್ನ..?

HT Kannada Desk HT Kannada

Nov 30, 2022 11:26 AM IST

google News

ಬಹುಭಾಷಾ ನಟಿ ಮೀನಾ

    • ಮೀನಾ ತಮ್ಮ ಕುಟುಂಬದ ಆತ್ಮೀಯ ವ್ಯಕ್ತಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಮೀನಾ ಆಗಲೀ, ಆಕೆಯ ಕುಟುಂಬದವರಾಗಲೀ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿಲ್ಲ.
ಬಹುಭಾಷಾ ನಟಿ ಮೀನಾ
ಬಹುಭಾಷಾ ನಟಿ ಮೀನಾ (PC: Meena Fans page)

ದಕ್ಷಿಣ ಭಾರತದ ಬಹುತೇಕ ಎಲ್ಲಾ ಟಾಪ್ ಹೀರೋಗಳ ಜೊತೆ ಎಲ್ಲಾ ಭಾಷೆಗಳಲ್ಲೂ ನಟಿಸಿ ಹೆಸರು ಮಾಡಿರುವ ನಾಯಕಿಯರಲ್ಲಿ ಮೀನಾ ಕೂಡಾ ಒಬ್ಬರು. ಕಳೆದ ಜೂನ್‌ನಲ್ಲಿ ಮೀನಾ ಬದುಕಲ್ಲಿ ದೊಡ್ಡ ದುರಂತ ನಡೆದಿದ್ದು ಸಿನಿಪ್ರಿಯರಿಗೆ ತಿಳಿದ ವಿಚಾರ. ಮೀನಾ ಪತಿ ವಿದ್ಯಾ ಸಾಗರ್, ಅನಾರೋಗ್ಯದಿಂದ ನಿಧನರಾದರು. ವಿದ್ಯಾಸಾಗರ್‌ ನಿಧನಕ್ಕೆ ಸಿನಿ ಸೆಲೆಬ್ರಿಟಿಗಳು, ಅಭಿಮಾನಿಗಳು ಸಂತಾಪ ಸೂಚಿಸಿದ್ದರು.

ಮೀನಾ ಇನ್ನೂ ಪತಿ ಅಗಲಿದ ದು:ಖದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮೊದಲಿನಂತೆ ಶೂಟಿಂಗ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ, ಮೀನಾ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿ ವೈರಲ್ ಆಗುತ್ತಿದೆ. ಮೀನಾ ಎರಡನೇ ಮದುವೆಯಾಗಲು ಹೊರಟಿದ್ದಾರೆ ಎಂಬ ಸುದ್ದಿ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ, ದಕ್ಷಿಣ ಭಾರತಾದ್ಯಂತ ಹರಿದಾಡುತ್ತಿದೆ. ಮೀನಾಗೆ ಎರಡನೇ ಮದುವೆ ಆಗಲು ಇಷ್ಟವಿಲ್ಲದಿದ್ದರೂ, ಆದರೆ ಮಗಳು ನೈನಿಕಾ, ಪೋಷಕರು ಹಾಗೂ ಆತ್ಮೀಯರ ಒತ್ತಡಕ್ಕೆ ಮಣಿದು ಎರಡನೇ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಒಂದು ವೇಳೆ ಮೀನಾ ಎರಡನೇ ಮದುವೆಯಾಗಲು ಒಪ್ಪಿರುವುದೇ ಆದಲ್ಲಿ, ಆ ವ್ಯಕ್ತಿ ಯಾರು ಎಂಬ ಪ್ರಶ್ನೆ ಎದುರಾಗಿದೆ. ಮೀನಾ ತಮ್ಮ ಕುಟುಂಬದ ಆತ್ಮೀಯ ವ್ಯಕ್ತಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಮೀನಾ ಆಗಲೀ, ಆಕೆಯ ಕುಟುಂಬದವರಾಗಲೀ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಮೀನಾ ಸದ್ಯಕ್ಕೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಶೀಘ್ರದಲ್ಲೇ ಅವರು 'ದೃಶ್ಯಂ 3' ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಮೀನಾ ಬಗ್ಗೆ ಅಂತೆ ಕಂತೆ ಸುದ್ದಿಗಳು ಕೇಳಿಬರುತ್ತಿರುವುದು ಇದೇ ಮೊದಲಲ್ಲ. ವಿದ್ಯಾಸಾಗರ್‌ ನಿಧನರಾದ ನಂತರ ಆಸ್ತಿ ವಿಚಾರದ ಬಗ್ಗೆ ಕೆಲವೊಂದು ಊಹಾಪೋಹಗಳು ಹರಿದಾಡಿದ್ದವು. ಮೀನಾ ಪತಿ 250 ಕೋಟಿ ರೂಪಾಯಿ ಆಸ್ತಿಯ ಒಡೆಯ ಆಗಿದ್ದರೂ ಮೀನಾ ಹೆಸರಿಗೆ ಕಿಂಚಿತ್ತು ಆಸ್ತಿಯನ್ನೂ ಬರೆದಿಲ್ಲ ಎಂಬ ಮಾತು ಕೇಳಿಬಂದಿತ್ತು. ವಿದ್ಯಾಸಾಗರ್, ತಮ್ಮ ಎಲ್ಲಾ ಆಸ್ತಿಯನ್ನು ಮಗಳು ನೈನಿಕಾ ಹೆಸರಿಗೆ ಮಾಡಿದ್ದಾರೆ. ಮೀನಾ ಹೆಸರಿಗೆ ಒಂದು ಆಸ್ತಿಯೂ ಇಲ್ಲ ಎನ್ನಲಾಗಿದ್ದು, ವಿಲ್ ಬಗ್ಗೆ ಮೀನಾ ಆಘಾತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು. ನೈನಿಕಾಗೆ 18 ವರ್ಷ ತುಂಬಿದಾಗ ಅಥವಾ ಆಕೆಗೆ ಮದುವೆಯಾದಾಗ, ಆಕೆಯ ಪತಿ ಅಥವಾ ಆಕೆ ಇಷ್ಟಪಡುವವರು ಆಸ್ತಿಯ ಉತ್ತರಾಧಿಕಾರಿಯನ್ನಾಗಿ ನೇಮಿಸಬಹುದು ಎಂದು ವಿಲ್​​​ನಲ್ಲಿ ಬರೆಯಲಾಗಿದೆಯಂತೆ. ಮೀನಾ ವಿರೋಧಿಗಳು ಹೀಗೆಲ್ಲಾ ಸುದ್ದಿ ಹಬ್ಬಿಸುತ್ತಿದ್ದಾರೋ, ಅಥವಾ ಆ ಸುದ್ದಿ ನಿಜವಾ ಏನು ಎಂಬುದು ಮಾತ್ರ ತಿಳಿಯಲಿಲ್ಲ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಕೇಳಿ ಮೀನಾ, ದಯವಿಟ್ಟು ನಮ್ಮ ಪ್ರೈವೆಸಿಗೆ ಧಕ್ಕೆ ತರಬೇಡಿ ಎಂದು ಮನವಿ ಮಾಡಿದ್ದರು.

ವಿದ್ಯಾಸಾಗರ್‌ ಕೆಲವು ವರ್ಷಗಳಿಂದಲೇ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರು. ಅದಕ್ಕೆ ಸಂಬಂಧಿಸಿದಂತೆ ನಿಯಮಿತ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ, ಕೋವಿಡ್‌ ಸೋಂಕು ತಗುಲಿದ್ದರಿಂದ ಶ್ವಾಸಕೋಶ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತ್ತು. ಕೆಲವು ದಿನಗಳ ಹಿಂದೆ ಶ್ವಾಸಕೋಶ ಕಸಿ ಮಾಡುವ ಬಗ್ಗೆಯೂ ವೈದ್ಯರು ಮುಂದಾಗಿದ್ದರು. ಶ್ವಾಸಕೋಶ ಕಸಿಗೆ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ವ್ಯಕ್ತಿಯ ಶ್ವಾಸಕೋಶವೇ ಬೇಕಿತ್ತು. ಆದರೆ, ಆ ರೀತಿಯ ದಾನಿ ಸಿಗದ ಹಿನ್ನೆಲೆಯಲ್ಲಿ ಔಷಧಿ ಮೂಲಕ ಗುಣಪಡಿಸಲು ಮುಂದಾದರೂ ಚಿಕಿತ್ಸೆ ಫಲಿಸಲಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ