logo
ಕನ್ನಡ ಸುದ್ದಿ  /  ಮನರಂಜನೆ  /  ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್‌ ತೂಗುದೀಪ್‌ ಬಳ್ಳಾರಿ ವಿಮ್ಸ್‌ ಆಸ್ಪತ್ರೆ ಶಿಫ್ಟ್‌; ದಾಸನ ದರ್ಶನಕ್ಕೆ ಕಾದು ಕುಳಿತ ಅಭಿಮಾನಿಗಳು

ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್‌ ತೂಗುದೀಪ್‌ ಬಳ್ಳಾರಿ ವಿಮ್ಸ್‌ ಆಸ್ಪತ್ರೆ ಶಿಫ್ಟ್‌; ದಾಸನ ದರ್ಶನಕ್ಕೆ ಕಾದು ಕುಳಿತ ಅಭಿಮಾನಿಗಳು

Rakshitha Sowmya HT Kannada

Oct 23, 2024 06:29 AM IST

google News

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪ್‌ ಅವರನ್ನು ತಪಾಸಣೆಗೆ ವಿಮ್ಸ್‌ ಆಸ್ಪತ್ರೆಗೆ ಕರೆತರುತ್ತಿರುವ ಪೊಲೀಸರು

  • ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪ್‌ ಬೆನ್ನುನೋವನಿಂದ ಬಳಲುತ್ತಿದ್ದ ಮಂಗಳವಾರ ರಾತ್ರಿ ಪೊಲೀಸರು ನಟನನ್ನು ವಿಮ್ಸ್‌ ಆಸ್ಪತ್ರೆಗೆ ಕರೆತಂದಿದ್ದಾರೆ. ವಿಮ್ಸ್‌ ನ್ಯೂರೋ ಸರ್ಜನ್‌ ಡಾ ವಿಶ್ವನಾಥ್‌, ದರ್ಶನ್‌ಗೆ ತಪಾಸಣೆ ಮಾಡಿದ್ದಾರೆ. ನಂತರ ದರ್ಶನ್‌ ಅವರನ್ನು ಜೈಲಿಗೆ ವಾಪಸ್‌ ಕರೆ ತರಲಾಗಿದೆ.

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪ್‌ ಅವರನ್ನು ತಪಾಸಣೆಗೆ ವಿಮ್ಸ್‌ ಆಸ್ಪತ್ರೆಗೆ ಕರೆತರುತ್ತಿರುವ ಪೊಲೀಸರು
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪ್‌ ಅವರನ್ನು ತಪಾಸಣೆಗೆ ವಿಮ್ಸ್‌ ಆಸ್ಪತ್ರೆಗೆ ಕರೆತರುತ್ತಿರುವ ಪೊಲೀಸರು (PC: ANI)

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಜೈಲು ಸೇರಿದ್ದಾರೆ. ಸುಮಾರು 4 ತಿಂಗಳಿಂದ ದರ್ಶನ್‌ ಜೈಲಿನಲ್ಲಿರುವ ದರ್ಶನ್‌ಗೆ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದು ಮಂಗಳವಾರ ರಾತ್ರಿ ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ವಿಮ್ಸ್‌ ಆಸ್ಪತ್ರೆಗೆ ಕರೆತರಲಾಗಿದೆ.

ಅಕ್ಟೋಬರ್‌ 28ಕ್ಕೆ ಜಾಮೀನು ಅರ್ಜಿ ವಿಚಾರಣೆ

ಆರಂಭದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ದರ್ಶನ್‌ ಅವರನ್ನು ಇತ್ತೀಚೆಗೆ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು. ಕೊಲೆ ಆರೋಪದಲ್ಲಿ ಜೈಲು ಸೇರಿದಾಗಿನಿಂದ ದರ್ಶನ್‌ ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ದರ್ಶನ್‌ಗೆ ಬೇಲ್‌ ದೊರೆತಿಲ್ಲ. ಬಹುಶ: ದೀಪಾವಳಿ ವೇಳೆಗೆ ದರ್ಶನ್‌ಗೆ ಬೇಲ್‌ ದೊರೆಯಬಹುದಾ ಎಂಬ ನಿರೀಕ್ಷೆಯಿಂದ ದರ್ಶನ್‌ ಕುಟುಂಬದವರು, ಅಭಿಮಾನಿಗಳು ಕಾಯುತ್ತಿದ್ದಾರೆ. ದರ್ಶನ್‌ ಬೇಲ್‌ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್‌ 28ಕ್ಕೆ ಮುಂದೂಡಿದ್ದು, ಅಂದು ಜಾಮೀನು ದೊರೆಯಲಿದ್ಯಾ ಅಥವಾ ಮತ್ತೆ ಜೈಲಿನಲ್ಲೇ ಉಳಿಯಲಿದ್ದಾರಾ ಅನ್ನೋದು ತಿಳಿಯಲಿದೆ. ಈ ನಡುವೆ ದರ್ಶನ್‌, ಬೆನ್ನು ನೋವಿನಿಂದ ಬಳಲುತ್ತಿದ್ದು ನಿನ್ನ ರಾತ್ರಿ ಪೊಲೀಸರು ವಿಮ್ಸ್‌ ಆಸ್ಪತ್ರೆಯಲ್ಲಿ ದರ್ಶನ್‌ಗೆ ತಪಾಸಣೆ ಮಾಡಿಸಿದ್ದಾರೆ.

ಎಂಆರ್‌ಐ ಸ್ಕ್ಯಾನ್‌ ಮಾಡಿದ ವೈದ್ಯರು

ಕೆಲವು ದಿನಗಳಿಂದ ನಟ ದರ್ಶನ್‌ ಬೆನ್ನುನೋವಿನಿಂದ ಬಳಲುತ್ತಿದ್ದಾರೆ, ಇದೇ ಕಾರಣವನ್ನು ಮುಂದಿಟ್ಟುಕೊಂಡು ಬೇಲ್‌ಗಾಗಿ ನಟನ ಪರ ವಕೀಲರು ವಾದ ಮಂಡಿಸಿದ್ದರು. ಅದರೆ ಕೋರ್ಟ್‌, ದರ್ಶನ್‌ಗೆ ಬೇಲ್‌ ನೀಡಿರಲಿಲ್ಲ. ಬೆನ್ನು ನೋವು ಹೆಚ್ಚಾದ ಕಾರಣ ಮಂಗಳವಾರ ರಾತ್ರಿ ಪೊಲೀಸರು ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ಕರೆತಂದಿದ್ದಾರೆ. ವೈದ್ಯರು ದರ್ಶನ್‌ಗೆ ಎಂಆರ್‌ಐ ಸ್ಕ್ಯಾನಿಂಗ್‌ ಮಾಡಿದ್ದಾರೆ. ವಿಮ್ಸ್‌ ನ್ಯೂರೋ ಸರ್ಜನ್‌ ಡಾ ವಿಶ್ವನಾಥ್‌, ದರ್ಶನ್‌ಗೆ ತಪಾಸಣೆ ಮಾಡಿದ್ದಾರೆ. ನಂತರ ದರ್ಶನ್‌ ಅವರನ್ನು ಜೈಲಿಗೆ ವಾಪಸ್‌ ಕರೆ ತರಲಾಗಿದೆ. ಇನ್ನು ದರ್ಶನ್‌, ಆಸ್ಪತ್ರೆಗೆ ಬರುತ್ತಿದ್ದಂತೆ ಅಭಿಮಾನಿಗಳು ಜೈ ಡಿಬಾಸ್‌ ಎಂದು ಕೂಗಿ ಮೆಚ್ಚಿನ ನಟನನ್ನು ಮಾತನಾಡಿಸಲು ಪ್ರಯತ್ನಿಸಿದರು. ವ್ಯಾನ್‌ನಿಂದ ಇಳಿದ ದರ್ಶನ್‌ ಅಭಿಮಾನಿಗಳತ್ತ ತಿರುಗಿ ಒಂದು ಸ್ಮೈಲ್‌ ಕೊಟ್ಟು ಒಳನಡೆದರು.

ಜೂನ್‌ 11 ರಂದು ಅರೆಸ್ಟ್‌ ಆಗಿದ್ದ ದರ್ಶನ್‌ ತೂಗುದೀಪ್‌

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಇದೇ ವರ್ಷ ಜೂನ್‌ 11ರಂದು ಅರೆಸ್ಟ್‌ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಕೆಲವು ದಿನಗಳ ಹಿಂದೆ ದರ್ಶನ್‌ ಹಾಗೂ ಸಂಗಡಿಗರು ಜೈಲಿನ ಆವರಣದಲ್ಲಿ ಚೇರ್‌ನಲ್ಲಿ ಕುಳಿತು, ಹರಟೆ ಹೊಡೆಯುತ್ತಾ ಸಿಗರೇಟ್‌ ಸೇದುತ್ತಿದ್ದ ಫೋಟೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್‌ ಅಧಿಕಾರಿಗಳು ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದ್ದರು. ಪವಿತ್ರಾಗೌಡ ಹಾಗೂ ಪ್ರಕರಣದ ಇತರ ಆರೋಪಿಗಳನ್ನು ಕೂಡಾ ರಾಜ್ಯದ ಇತರ ಜೈಲುಗಳಿಗೆ ಕಳಿಸಲಾಗಿತ್ತು. ಕೆಲವು ದಿನಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್‌ಗೆ ವೈದ್ಯರು ಎಂಆರ್‌ಐ ಸ್ಕ್ಯಾನ್‌ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು. ಇದಕ್ಕೆ ದರ್ಶನ್‌ ಒಪ್ಪಿರಲಿಲ್ಲ. ಅದರೆ ಬೆನ್ನುನೋವು ಉಲ್ಬಣಗೊಂಡ ಕಾರಣ ಮಂಗಳವಾರ ರಾತ್ರಿ ಅವರನ್ನು ವಿಮ್ಸ್‌ ಆಸ್ಪತ್ರೆಗೆ ತಪಾಸಣೆಗೆ ಕರೆತರಲಾಗಿತ್ತು. ನಂತರ ಮತ್ತೆ ದರ್ಶನ್‌ ಅವರನ್ನು ವಾಪಸ್‌ ಕರೆದೊಯ್ಯಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ