logo
ಕನ್ನಡ ಸುದ್ದಿ  /  ಮನರಂಜನೆ  /  ‘ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದೇ ಸೂಕ್ತ!’ ಚೇತನ್‌ ಅಹಿಂಸಾ ಹೇಳಿಕೆಗೆ ವ್ಯಾಪಕ ಟೀಕೆ

‘ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದೇ ಸೂಕ್ತ!’ ಚೇತನ್‌ ಅಹಿಂಸಾ ಹೇಳಿಕೆಗೆ ವ್ಯಾಪಕ ಟೀಕೆ

Dec 15, 2023 03:19 PM IST

‘ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದೇ ಸೂಕ್ತ!’ ಚೇತನ್‌ ಅಹಿಂಸಾ ಹೇಳಿಕೆಗೆ ವ್ಯಾಪಕ ಟೀಕೆ

    • ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಟಿಪ್ಪು ಸುಲ್ತಾನ್‌ ಅವರ ಹೆಸರಿಡುವುದು ಸೂಕ್ತ ಎಂದಿದ್ದಾರೆ. 
‘ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದೇ ಸೂಕ್ತ!’ ಚೇತನ್‌ ಅಹಿಂಸಾ ಹೇಳಿಕೆಗೆ ವ್ಯಾಪಕ ಟೀಕೆ
‘ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದೇ ಸೂಕ್ತ!’ ಚೇತನ್‌ ಅಹಿಂಸಾ ಹೇಳಿಕೆಗೆ ವ್ಯಾಪಕ ಟೀಕೆ

Chetan Ahimsa on Mysuru Airport: ಸ್ಯಾಂಡಲ್‌ವುಡ್‌ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ (Chetan Ahimsa) ತಮ್ಮ ಹೇಳಿಕೆ, ಅನಿಸಿಕೆ ಅಭಿಪ್ರಾಯಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಯಾವ ಮುಲಾಜಿಲ್ಲದೆ ಅನಿಸಿದ್ದನ್ನು ನೇರವಾಗಿ ಪೋಸ್ಟ್‌ ಮಾಡುತ್ತಿರುತ್ತಾರೆ. ಇದರಿಂದ ಆಗಾಗ ಟೀಕೆಗೆ ಗುರಿಯಾದ ಉದಾಹರಣೆಗಳೂ ಇವೆ. ಇದೀಗ ಮೈಸೂರು ವಿಮಾನ ನಿಲ್ದಾಣಕ್ಕೆ (Mysuru Airport) ಹೆಸರಿಡುವ ವಿಚಾರದ ಬಗ್ಗೆ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Jyothi Rai: ಹೆಸರು ಕೆಡಿಸುವ ಹುನ್ನಾರ, ಇದು ಪ್ರೀ ಪ್ಲಾನ್‌; ಖಾಸಗಿ ವಿಡಿಯೋ ಲೀಕ್‌ ಬಗ್ಗೆ ಜ್ಯೋತಿ ರೈಗೆ ಸಿಕ್ಕಿತ್ತು ಮುನ್ಸೂಚನೆ!

ದಕ್ಷಿಣ ಭಾರತದವ್ರು ಆಫ್ರಿಕನ್ನರಂತೆ ಕಾಣ್ತಾರೆ ಅನ್ನೋ ಸ್ಯಾಮ್‌ ಪಿತ್ರೋಡಾ ಹೇಳಿಕೆಗೆ ಗುನ್ನ ಕೊಟ್ಟ ಕನ್ನಡ ನಟಿ ಪ್ರಣೀತಾ ಸುಭಾಷ್‌

ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತಿನೋ ಅನಿಸ್ತಿತ್ತು; ಬಿಗ್‌ಬಾಸ್‌ ನೀತು ವನಜಾಕ್ಷಿ

Bhagyalakshmi Serial:ರುಚಿಯಾದ ಒತ್ತು ಶ್ಯಾವಿಗೆ,ಮಾವಿನ ಸೀಕರಣೆ ಮಾಡಿಕೊಟ್ಟು ಹೋಟೆಲ್‌ನಲ್ಲಿ ಕೆಲಸ ಪಡೆದ ಕುಸುಮಾ; ಭಾಗ್ಯಲಕ್ಷ್ಮಿ ಧಾರಾವಾಹಿ

ಸೋಷಿಯಲ್‌ ಮೀಡಿಯಾದಲ್ಲಿ ಮೈಸೂರು ವಿಮಾನ ನಿಲ್ದಾಣದ ಹೆಸರಿನ ಕುರಿತು ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ತಮ್ಮ ನಿಲುವನ್ನು ಚೇತನ್‌ ಸ್ಪಷ್ಟಪಡಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ಹೆಸರಿಡುವುದು ಸೂಕ್ತ ಎಂದಿದ್ದಾರೆ. ಏಕೆ ಟಿಪ್ಪು ಹೆಸರು ಸೂಕ್ತ ಎಂಬುದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಟಿಪ್ಪು ಓರ್ವ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ ಎಂದಿದ್ದಾರೆ. ಹೀಗಿದೆ ಚೇತನ್‌ ಅವರ ಮಾತು.

ಚೇತನ್‌ ಅಹಿಂಸಾ ಹೇಳಿದ್ದೇನು?

"ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕಾ? ಸರ್ಕಾರಿ ಕಟ್ಟಡಗಳಿಗೆ ಯೋಧರಿಗಿಂತ ಹೆಚ್ಚಾಗಿ ಅಹಿಂಸೆಯ ಐಕಾನ್ಗಳ ಹೆಸರನ್ನು ಇಡಬೇಕೆಂದು ನಾನು ಭಾವಿಸುತ್ತೇನೆ; ಆದಾಗ್ಯೂ, ಟಿಪ್ಪುವಿನ ಜನ್ಮಸ್ಥಳವಾದ ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯೋಧ ಕೆಂಪೇಗೌಡರ ಹೆಸರನ್ನು ಇಡಲಾಗಿದೆ. ಆ ನಿದರ್ಶನದ ಪ್ರಕಾರ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದರಲ್ಲಿ ತಪ್ಪೇನಿಲ್ಲ" ಎಂದು ಮೊದಲ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇಬ್ಬರು ಯೋಧರ ಕಥೆ

1. ಕೆಂಪೇಗೌಡ -- ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದಾಗಿ ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ

2. ಟಿಪ್ಪು ಸುಲ್ತಾನ್ -- ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ, ಅವರ ಜನ್ಮವು ಮುಸ್ಲಿಮರಾಗಿ ಅವರ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ

ದುರದೃಷ್ಟವಶಾತ್, ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ನೆಟ್ಟಿಗರಿಂದ ವ್ಯಾಪಕ ವಿರೋಧ

- ಹೇ ಮೂರ್ಖ. ಟಿಪ್ಪು ಒಬ್ಬ ಆಕ್ರಮಣಕಾರ. ಬೆಂಗಳೂರಿಗೆ ಕೆಂಪೇಗೌಡರೇ ಕಾರಣ. ನೀವು ಭಾರತದಿಂದ ಕಳೆದುಹೋಗುತ್ತೀರಿ ಮತ್ತು ಭಾರತ ಮತ್ತು ಭಾರತೀಯರಿಗೆ ತೊಂದರೆ ನೀಡಬೇಡಿ. ಇದು ನಿಮ್ಮ ಸ್ಥಳವಲ್ಲ.

- ಚೇತನ ತಲೆ‌ಕೆಟ್ಟಿದ್ರೆ ಹೇಳು ಅಸ್ಪತ್ರೆಗೆ ಅಡ್ಮಿಟ್ ಮಾಡ್ತೀವಿ ಇದೇ ರೀತಿ ಅಡ್ತಾ ಇದ್ರೆ ಒಕ್ಕಲಿಗರು ಯಾರು ಏನು ಅಂತ ತೋರಿಸಬೇಕಾಗುತ್ತೆ ಕೆಂಪೇಗೌಡ್ರು ಇತಿಹಾಸ ಅರಿಯದೇ ಏನೇನೋ ಹುಚ್ಚನ ರೀತಿ ಮಾತನಾಡುದ್ರೆ ಹುಚ್ಚು ಬಿಡಿಸೋದು ನಮಗೆ ಗೊತ್ತಿದೆ...

- ಲೋ ಚೇತನ ಟಿಪ್ಪು ಏನು 70 ವರ್ಷ ಆಳ್ವಿಕೆ ಮಾಡಿ ಜನ ಉದ್ದಾರ ಮಾಡಿರೋ ತರ ಹೇಳ್ತೀಯ. ಮೊದಲು ಕೆಂಪೇಗೌಡರ ಇತಿಹಾಸ ಓದು,ಅವರು ಮಾಡಿರುವ ಸಮಾಜಮುಖಿ ಕೆಲಸ ನೋಡು. ಟಿಪ್ಪು ಮಾತಂದ ಹಿಂದೂ ದೇವಸ್ತಾನ ಒಡೆದು ಮಸೀದಿ ನಿರ್ಮಾಣ ಮಾಡಿ, ಹಿಂದೂಗಳ ಹತ್ಯಾಕಾಂಡ ಮಾಡಿದ್ದಾನೆ.ಅವನು ನಿನಗೆ ಮಹಾನ್ ವ್ಯಕ್ತಿ ಅಲ್ವಾ, ಮೊದಲು ನೀನು ನಮ್ಮ ದೇಶದ ಪ್ರಜೆಯೇ ಅಲ್ಲ. ದಯವಿಟ್ಟು ದೇಶ ಬಿಟ್ಟು ತೊಲಗು.

- ವಿಶಾಲ ಕೆಳದಿಸಾಮ್ರಾಜ್ಯ ವೀರಶೈವ ಲಿಂಗಾಯತ ಸಮುದಾಯ ಸರ್ವನಾಶ ಮಾಡಿದ ಹೈದರಾಲಿ ಕುಲೋತ್ಪನ್ನ ಚಿತ್ರದುರ್ಗ ಮದಕರಿನಾಯಕನ ಏಳುಸುತ್ತಿನ ಕೋಟೆ ಸರ್ವನಾಶ ಮಾಡಿದ ನಂತರ ಆತನ ಸಾಧನೆಗೆ ಮನಸೋತು ರಾಜಗುರು ಸ್ಥಾನ ಮಾನ ನೀಡುವ ಮದಕರಿನಾಯಕನ ಸರ್ವನಾಶ ಮಾಡಿದ ವ್ಯಕ್ತಿತ್ವ ಗೌರವ ನೀಡುವ ಉದ್ದೇಶದಿಂದ ಚಿತ್ರದುರ್ಗ ಮುರುಘ ಮಠಾಧೀಶರ ಕೃಪಾಕಟಾಕ್ಷದಿಂದ ಟಿಪ್ಪುವಿನ ವಿಗ್ರಹ ನಿರ್ಮಾಣ ಮಾಡಿ ಜಾತ್ಯತೀತ ಪದ್ಧತಿಯಿಂದ ಸ್ವಧರ್ಮ ಅವಹೇಳನ ಪರಮತಿಯರ ತಪ್ಪನ್ನ ಮುಚ್ಚಿಕೊಳ್ಳುವ ನಿಯತ್ತಿನ ಜಾತ್ಯತೀತ ಗೃಹ ಅಲ್ಪಸಂಖ್ಯಾತ ಗ್ರಾಹಕರ ಆಕರ್ಷಿಸುವ ತಲೆಹಿಡಕ ತಾಯಿಗಂಡಂದಿರ ವೃತ್ತಿಪರ ದಲ್ಲಾಳಿ ಸರಿಸಮನಾದ ಮನೋಭಾವದಿಂದ ಬದುಕುತ್ತಿರುವ ವಿಶಾಲ ಮನೋಭಾವ ಶ್ಲಾಘನೀಯ ಕಾರ್ಯ.

- ಮೈಸೂರಿಗೆ ನಾಲ್ವಡಿ ಕೃಷ್ಣ ರಾಜ ಒಡೆಯರು ಕೊಡುಗೆ ಅಪಾರ ಆದರಿಂದ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಸೂಕ್ತ. ಬೆಂಗಳೂರಿಗೆ ಕೆಂಪೇಗೌಡರ ಕೊಡುಗೆ ಅಪಾರ ಆದರಿಂದ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಿದ್ದಾರೆ . ಇನ್ನು ಟಿಪ್ಪು ಸುಲ್ತಾನ್ ಕೊಡುಗೆ ಮೈಸೂರಿಗೆ ಏನು...? ಅವನ ಹೆಸರನ್ನು ಮೈಸೂರು ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಹೆಸರಿಡಲು ಸೂಕ್ತವಲ್ಲ.

- ದೇವನಹಳ್ಳಿ ಗೆ ಟಿಪ್ಪು ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಸೂಕ್ತವಾಗಿತ್ತು, ರಾಜಕಾರಣಿಗಳ ಜಾತಿ ಪ್ರತಿಷ್ಠೆ ದೇವನಹಳ್ಳಿ ನಿಲ್ದಾಣವನ್ನು ಕೆಂಪೇಗೌಡ ಹೆಸರು ಅಂಟಿಸಿತು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು