logo
ಕನ್ನಡ ಸುದ್ದಿ  /  ಮನರಂಜನೆ  /  Aditi Prabhudeva: ಅದಿತಿ ಪ್ರಭುದೇವ ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ‘ಅಲೆಕ್ಸಾ’ ಆಗಮನಕ್ಕೆ ದಿನಾಂಕ ನಿಗದಿ

Aditi Prabhudeva: ಅದಿತಿ ಪ್ರಭುದೇವ ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ‘ಅಲೆಕ್ಸಾ’ ಆಗಮನಕ್ಕೆ ದಿನಾಂಕ ನಿಗದಿ

Dec 29, 2023 08:17 PM IST

google News

Aditi Prabhudeva: ಅದಿತಿ ಪ್ರಭುದೇವ ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ‘ಅಲೆಕ್ಸಾ’ ಆಗಮನಕ್ಕೆ ದಿನಾಂಕ ನಿಗದಿ

    • ಅದಿತಿ ಪ್ರಭುದೇವ ಮೊದಲ ಸಲ ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ಅಲೆಕ್ಸಾ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಪವನ್‌ ತೇಜ್‌ ಜತೆಗಿನ ಈ ಸಿನಿಮಾ ಜನವರಿ ಕೊನೇ ವಾರದಲ್ಲಿ ತೆರೆಗೆ ಬರಲಿದೆ. 
Aditi Prabhudeva: ಅದಿತಿ ಪ್ರಭುದೇವ ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ‘ಅಲೆಕ್ಸಾ’ ಆಗಮನಕ್ಕೆ ದಿನಾಂಕ ನಿಗದಿ
Aditi Prabhudeva: ಅದಿತಿ ಪ್ರಭುದೇವ ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ‘ಅಲೆಕ್ಸಾ’ ಆಗಮನಕ್ಕೆ ದಿನಾಂಕ ನಿಗದಿ

Alexa Kannada Movie: ಅದಿತಿ ಪ್ರಭುದೇವ ಹಾಗೂ ಪವನ್ ತೇಜ್ ನಾಯಕ ನಾಯಕಿಯಾಗಿ‌ ನಟಿಸಿರುವ ಅಲೆಕ್ಸಾ ಸಿನಿಮಾ ಇದೀಗ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಕಳೆದ ತಿಂಗಳಷ್ಟೇ ಟ್ರೇಲರ್‌ ಬಿಡುಗಡೆ ಮಾಡಿಕೊಂಡು ಕುತೂಹಲ ಮೂಡಿಸಿದ್ದ ಈ ಸಿನಿಮಾ, ರಿಲೀಸ್‌ ದಿನಾಂಕವನ್ನು ಘೋಷಣೆ ಮಾಡಿದೆ. 2024ರ ಜನವರಿ 26 ರಂದೇ ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಆಗಲಿದೆ.

ವಿ.ಚಂದ್ರು ನಿರ್ಮಾಣದ, ಜೀವ ನಿರ್ದೇಶನದ ಅಲೆಕ್ಸಾ ಚಿತ್ರ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆ. ಈ ಮೊದಲು ಅಲೆಕ್ಸಾ ಚಿತ್ರವನ್ನು ಡಿಸೆಂಬರ್ 29 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಕಾಟೇರ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ನಮ್ಮ ಚಿತ್ರದ ಬಿಡುಗಡೆಯನ್ನು ಜನವರಿ 26ಕ್ಕೆ ಮುಂದೂಡಿರುವುದಾಗಿ ನಿರ್ದೇಶಕ ಜೀವ ತಿಳಿಸಿದ್ದಾರೆ.

"ನಾನು ಈ ಚಿತ್ರದಲ್ಲಿ ಇನ್ವೆಸ್ಟಿಕೇಶನ್ ಪೊಲೀಸ್ ಆಫೀಸರ್. ಅಲೆಕ್ಸಾ ನನ್ನ ಪಾತ್ರದ ಹೆಸರು. ನನಗೆ ನಿಜಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ನಿರ್ದೇಶಕರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದ ತಕ್ಷಣ ಒಪ್ಪಿಕೊಂಡೆ. ಈ ಚಿತ್ರದಲ್ಲಿ ನಾನು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದೇನೆ. ಸಾಹಸ ದೃಶ್ಯ ಹೇಳಿಕೊಟ್ಟ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಧನ್ಯವಾದ" ಎಂದು ಟ್ರೇಲರ್‌ ಬಿಡುಗಡೆ ಸಂದರ್ಭದಲ್ಲಿ ಚಿತ್ರದ ನಾಯಕಿ ಅದಿತಿ ಪ್ರಭುದೇವ ಹೇಳಿಕೊಂಡಿದ್ದರು.

ಅದಿತಿ ಪ್ರಭುದೇವ ವಿಶೇಷ ತನಿಖಾಧಿಕಾರಿಯಾಗಿ ನಟಿಸಿದ್ದಾರೆ. ಪವನ್ ತೇಜ್ ನಾಯಕನಾಗಿ ಅಭಿನಯಿಸಿದ್ದಾರೆ‌. ನಾಗಿಣಿ ಧಾರಾವಾಹಿ ಖ್ಯಾತಿಯ ನಾಗಾರ್ಜುನ್, ಮೇಘಾಶ್ರೀ, ಹನುಮಂತೇಗೌಡ, ಚಂದ್ರಕಲಾ ಮೋಹನ್, ಮಿಮಿಕ್ರಿ ಗೋಪಿ, ಮೈಸೂರು ಮಲ್ಲೇಶ್ ಹಾಗೂ ಮನಮೋಹನ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿ. ಚಂದ್ರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದು, ಎ.ಪಿ.ಒ ಸಂಗೀತ ನೀಡಿದ್ದಾರೆ. ಸಾಯಿಸತೀಶ್ ಛಾಯಾಗ್ರಹಣ, ಉಮೇಶ್ ಸಂಕಲನ, ಚಂದ್ರು, ರಾಮು, ಕಲೈ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ಮಾಸ್ ಮಾದ, ವಿಕ್ರಮ್ ಮೋರ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ