logo
ಕನ್ನಡ ಸುದ್ದಿ  /  ಮನರಂಜನೆ  /  Chandan Shetty: ಹೊಸ ವರ್ಷಕ್ಕೆ ‘ವಾಟ್ ಟು ಡು ಮಾಮ?’ ಹಾಡು ಹಿಡಿದು ತಂದ ಚಂದನ್ ಶೆಟ್ಟಿ

Chandan Shetty: ಹೊಸ ವರ್ಷಕ್ಕೆ ‘ವಾಟ್ ಟು ಡು ಮಾಮ?’ ಹಾಡು ಹಿಡಿದು ತಂದ ಚಂದನ್ ಶೆಟ್ಟಿ

Dec 23, 2023 04:30 PM IST

google News

Chandan Shetty: ಹೊಸವರ್ಷಕ್ಕೆ ‘ವಾಟ್ ಟು ಡು ಮಾಮ?’ ಹಾಡು ಹಿಡಿದು ತಂದ ಚಂದನ್ ಶೆಟ್ಟಿ

    • ಗಾಯಕ, ಸಂಗೀತ ನಿರ್ದೇಶಕ, ನಟ ಚಂದನ್‌ ಶೆಟ್ಟಿ ಇದೀಗ ವಾಟ್‌ ಟು ಡು ಮಾಮ ಎನ್ನುತ್ತಿದ್ದಾರೆ. ಅಂದರೆ,  ವಾಟ್‌ ಟು ಡು ಮಾಮ ಹೆಸರಿನಲ್ಲಿ ಹೊಸದೊಂದು ಆಲ್ಬಂ ಹಾಡಿನ ಮೂಲಕ ಹೊಸ ವರ್ಷವನ್ನು ಸೆಲೆಬ್ರೇಟ್‌ ಮಾಡಲು ಆಗಮಿಸಿದ್ದಾರೆ. 
Chandan Shetty: ಹೊಸವರ್ಷಕ್ಕೆ ‘ವಾಟ್ ಟು ಡು ಮಾಮ?’ ಹಾಡು ಹಿಡಿದು ತಂದ ಚಂದನ್ ಶೆಟ್ಟಿ
Chandan Shetty: ಹೊಸವರ್ಷಕ್ಕೆ ‘ವಾಟ್ ಟು ಡು ಮಾಮ?’ ಹಾಡು ಹಿಡಿದು ತಂದ ಚಂದನ್ ಶೆಟ್ಟಿ

Chandan Shetty: ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ನಿರ್ದೇಶಕರಾಗಿ, ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೀಗ ಹೊಸ ವರ್ಷದ ಹೊಸ್ತಿಲಲ್ಲಿದ್ದೇವೆ. ಈ ನಿಮಿತ್ತ ಪ್ರತಿ ವರ್ಷ ಒಂದಿಲ್ಲೊಂದು ಹಾಡಿನ ಮೂಲಕ ಅವರ ಆಗಮನವಾಗುತ್ತಿರುತ್ತದೆ. ಈ ಬಾರಿಯೂ ಅಂಥದ್ದೇ ಟಪ್ಪಾಂಗುಚಿ ಹಾಡಿನೊಂದಿಗೆ ಎಂಟ್ರಿಕೊಟ್ಟಿದ್ದಾರೆ. WHAT TO DO MAMA? ಎಂಬ ಅಪ್ಪಟ ದೇಸಿ ಶೈಲಿಯ ಟಪ್ಪಾಂಗುಚಿ ಹಾಡನ್ನು ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ವರ್ಷದ ಕೊನೆಗೆ ಬಿಡುಗಡೆ ಮಾಡಿದ್ದಾರೆ.

ಈ ಹಾಡು ಹದಿಹರೆಯದ ಹುಡುಗರಿಗೆ ಹೇಳಿ ಮಾಡಿಸಿದ ಹಾಡು. ಹುಡುಗರ ಪ್ರಾಬ್ಲಮ್‌ಗಳನ್ನು ಬಿಂಬಿಸುವ ಹಾಡಿದು. ಪ್ರಾಬ್ಲಮ್ ಪ್ರಾಬ್ಲಮ್ ಪ್ರಾಬ್ಲಮ್ ವಾಟ್ ಟು ಡು ಮಾಮ? ಎಂದೇ ಹಾಡು ಆರಂಭವಾಗುತ್ತದೆ. ಇಷ್ಟು ದಿನ ಬಿಡುಗಡೆಯಾಗಿರುವ ಚಂದನ್ ಶೆಟ್ಟಿ ಅವರ ರ್ಯಾಪ್ ಸಾಂಗ್ಸ್ ಹೆಚ್ಚಾಗಿ ಪಬ್ ಗಳ ಮೇಲೆ ಕೇಂದ್ರಿಕೃತವಾಗಿತ್ತಿತ್ತು. ಆದರೆ ಈ ಹಾಡು ಪಕ್ಕಾ ಲೋಕಲ್ ಸ್ಟೈಲ್ ನಲ್ಲಿ ಮೂಡಿಬಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಬಾರ್ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.

ಈ ಹಾಡಿನಲ್ಲಿ ಪಕ್ಕಾ ಲೋಕಲ್ ಹುಡುಗನಾಗಿ ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟ ರಂಗಾಯಣ ರಘು ಚಂದನ್ ಶೆಟ್ಟಿ ಅವರ ಸೋದರಮಾವನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿಯ ಕಲಾವಿದರಾದ ರಾಘವೇಂದ್ರ, ಆರ್ ಜೆ ವಿಕ್ಕಿ, ಹುಲಿ ಕಾರ್ತಿಕ್, ನಿತಿನ್ ಅಮಿನ್, ಶಿಡ್ ಶ್ಯಾಡೋ ಶಿವ, ಎನ್ ಸಿ ಅಯ್ಯಪ್ಪ ಮುಂತಾದವರು ಈ ಅದ್ದೂರಿ ರ್ಯಾಪ್ ಸಾಂಗ್ ನಲ್ಲಿ ನಟಿಸಿದ್ದಾರೆ.

ಇಷ್ಟು ದಿನ ಚಂದನ್ ಶೆಟ್ಟಿ ಅವರ ಸುಪ್ರಸಿದ್ದ ರ್ಯಾಪ್ ಹಾಡುಗಳನ್ನು ಬೇರೆಬೇರೆ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ಅವರೆ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ವಿಜಯ್ ಈಶ್ವರ್ ಅವರ ಜೊತೆಗೂಡಿ ಹಾಡನ್ನು ಬರೆದಿದ್ದಾರೆ.

ರಿಯಾಲಿಟಿ ಶೋನಲ್ಲಿ ಜನಪ್ರಿಯರಾಗಿರುವ ಮುರುಗ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಉದಯಲೀಲ ಛಾಯಾಗ್ರಹಣ, ಸತೀಶ್ ಚಂದ್ರ ಸಂಕಲನ ಹಾಗೂ ದಿವಾಕರ್ ಅವರ ಕಲಾ ನಿರ್ದೇಶನ ಈ ಹಾಡಿಗಿದೆ. ಈ ಹಾಡಿಗೆ ಚಂದನ್ ಶೆಟ್ಟಿ ಅವರೇ ಸಂಗೀತ ಸಂಯೋಜಿಸಿ, ಹಾಡಿದ್ದಲ್ಲದೆ, ನಿರ್ದೇಶನವನ್ನೂ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ